ಮೊಬೈಲ್ ನೆಟ್ವರ್ಕ್ ಗೆ ಪರದಾಡುತ್ತಿರುವ ರೋಗಿ ಸಂಬಂಧಿಗಳು-ಇಷ್ಟು ದೊಡ್ಡ ಆಸ್ಪತ್ರೆ ಕ್ಯಾಂಪಸ್ ನಲ್ಲಿ ಮೊಬೈಲ್ ಟವರ್ ಇಲ್ಲ ಎನ್ನಲಾಗುತ್ತಿರುವುದೇ ದುರಾದೃಷ್ಟಕರ.
ಬೆಂಗಳೂರು: ಹೇಳಿಕೊಳ್ಳೊಕ್ಕೆ ದೊಡ್ಡ ಹಾಗೂ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆ..ಆದರೆ ರೋಗಿಗಳಿಗೆ ಏನಾದ್ರೂ ಆರೋಗ್ಯ ಸಮಸ್ಯೆಯಾದಲ್ಲಿ,ಏರುಪೇರುಗಳಾದ್ದಲ್ಲಿ ಅದನ್ನು ಸಂಬಂಧಿಗಳಿಗೆ ಸಂವಹನಿಸಲು ಪರದಾಡುವಂತ ಸ್ತಿತಿ ಇದೆ ಎಂದ್ರೆ ಅದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ..ಇದನ್ನು ಕೇಳಿದ್ರೆ ನಿಮ್ಗೆ ಆಶ್ವರ್ಯ ಆಗಬಹುದು..ಹಾಗೆಯೇ ಹೌದಾ..! ಎಂದು ಉಬ್ಬೇರಿಸಿ ಕೇಳಬಹುದು..ಆದ್ರೆ ಇದು ಸತ್ಯ… ಸತ್ಯ..ವಿಕ್ಟೋರಿಯಾ ಕ್ಯಾಂಪಸ್ ನಲ್ಲಿರುವ ಆರೋಗ್ಯ ಕೇಂದ್ರಗಳ ಒಳಗೆ ಮೊಬೈಲ್ ನೆಟ್ವರ್ಕ್ ಗೆ ರೋಗಿಗಳ ಸಂಬಂದಿಗಳು ಪರದಾಡಬೇಕಾದಂಥ ಸ್ಥಿತಿ ಇದೆ ಎನ್ನುವುದು ನಂಬಲಿಕ್ಕೆ ಅಸಾಧ್ಯವೆನಿಸಿದರೂ ನಿಜ.

“ಆಸ್ಪತ್ರೆಯಲ್ಲಿ ಒಳ್ಳೆಯ ರೀತಿಯ ಚಿಕಿತ್ಸೆ ಸಿಗುತ್ತದೆ ಸರ್..ವೈದ್ಯರು ಒಳ್ಳೆಯವರಿದ್ದಾರೆ.ಆದರೆ ನಮಗೆ ತುಂಬಾ ಸಮಸ್ಯೆ ಎನಿಸುವುದು ಮೊಬೈಲ್ ದ್ದು.ನಮ್ಮ ಸಂಬಂಧಿಕರಿಗೆ ರೋಗಿಗೆ ಸಂಬಂಧಪಟ್ಟಂತೆ ಏನಾದ್ರೂ ವಿಚಾರ ತಿಳಿಸಬೇಕೆಂದ್ರೆ ಆಸ್ಪತ್ರೆಯೊಳಗೆ ನೆಟ್ವರ್ಕ್ ಸಿಗೊಲ್ಲ. ನೆಟ್ ವರ್ಕ್ ಇರೋ ಪ್ರದೇಶ ಹುಡುಕಿಕೊಂಡು ಹೋಗ್ಬೇಕು.ಎಲ್ಲಾ ಸಮಯದಲ್ಲೂ ಪೇಷೆಂಟ್ಸ್ ಬಿಟ್ಟು ಹೊರಗೆ ಹೋಗಲಿಕ್ಕೆ ಆಗುತ್ತಾ..? ನಾವು ಮಾತನಾಡಿಕೊಂಡು ಬರೋದ್ರೊಳಗೆ ಪೇಷೆಂಟ್ ಗೆ ಏನಾದ್ರು ಆಗಿಬಿಟ್ರೆ ಅದಕ್ಕೆ ಹೊಣೆ ಯಾರು ಸರ್.. ಅದಷ್ಟೇ ಅಲ್ಲ, ಪೇಷೆಂಟ್ ಬಿಟ್ಟು ಮೊಬೈಲ್ ನೆಟ್ವರ್ಕ್ ಹುಡುಕಿಕೊಂಡು ಹೋದಾಗ ಕಳ್ಳತನ ಆಗಿರುವ ಉದಾಹರಣೆಗಳಿವೆ. ಯಾರ ಗ್ಯಾರಂಟಿ ಮೇಲೆ ನಮ್ಮ ಪೇಷೆಂಟ್ಸ್ ಬಿಟ್ಟು ಹೋಗಲಿಕ್ಕೆ ಆಗುತ್ತೆ ಸರ್..ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿವೆ, ಮೊಬೈಲ್ ನೆಟ್ವರ್ಕ್ ಗೆ ಒಂದು ಅವಕಾಶ ಮಾಡಿಕೊಟ್ಟರೆ ತುಂಬಾ ಉಪಯೋಗ ಆಗುತ್ತದೆ.ನಾವು ಆಸ್ಪತ್ರೆಯವರಲ್ಲಿ ಕೇಳಿಕೊಳ್ಳೋದು ಅಷ್ಟನ್ನೇ..” – ರೋಗಿ ಸಂಬಂಧಿ

ವಿಕ್ಟೋರಿಯಾ ಬೆಂಗಳೂರಿನ ಅತ್ಯಂತ ಹಳೆಯ ಹಾಗೂ ಪ್ರಸಿದ್ದ ಆಸ್ಪತ್ರೆ.ಇದರ ಕ್ಯಾಂಪಸ್ ನಲ್ಲಿ ಹಲವು ವಿಭಾಗಗಳ ಆಸ್ಪತ್ರೆಗಳಿವೆ.ಪ್ರೈವೇಟ್ ಆಸ್ಪತ್ರೆಗಳು ಎಷ್ಟೇ ಉತ್ತಮ ಸೇವೆ ಕೊಟ್ಟರೂ ದಿನನಿತ್ಯ ಸಾವಿರಾರು ರೋಗಿಗಳು ವಿಕ್ಟೋರಿಯಾ ನಂಬಿ ಬರ್ತಾರೆ.ಕೆಲವು ಕೆಟ್ಟ ವಿಷಯಗಳನ್ನು ಬಿಟ್ಟರೆ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಸಿಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಸರ್ಕಾರ ಹಾಗೂ ಆರೋಗ್ಯ ಇಲಾಖೆ ಒಂದಷ್ಟು ಅವ್ಯವಸ್ಥೆ-ಅಕ್ರಮಕ್ಕೆ ಆಪರೇಷನ್ ಮಾಡಿದ್ದಲ್ಲಿ ವಿಕ್ಟೋರಿಯಾ ಇನ್ನಷ್ಟು ಎತ್ತರಕ್ಕೆ ಬೆಳೆಯೋದರಲ್ಲಿ ಅನುಮಾನವೇ ಇಲ್ಲ.

“ಸರ್..ನಮಗು ಮೊಬೈಲ್ ನೆಟ್ವರ್ಕ್ ಸಮಸ್ಯೆ ಇರುವ ಬಗ್ಗೆ ರೋಗಿಗಳ ಸಂಬಂದಿಕರು ದೂರುತ್ತಲೇ ಇರುತ್ತಾರೆ.ಅವರಿಗಲ್ಲ ನಮಗೇನೆ ಕೆಲವೊಮ್ಮೆ ಸಿಕ್ಕಾಪಟ್ಟೆ ಸಮಸ್ಯೆ ಆಗುತ್ತದೆ.ಆದರೆ ಏನ್ ಮಾಡೋದು ಇಂಥದ್ದೊಂದು ದೊಡ್ಡ ಆಸ್ಪತ್ರೆಯಲ್ಲಿ ಒಂದು ಮೊಬೈಲ್ ಟವರ್ ಇಲ್ವಲಾ ಎಂದು ನಮಗೇ ನಾಚಿಕೆ ಆಗುತ್ತದೆ.ದೊಡ್ಡವರನ್ನು ಕೇಳಿದ್ರೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ,ಶೀಘ್ರವೇ ಆಗಬಹುದು ಎಂಬ ಭರವಸೆ ಮಾತನ್ನಾಡುತ್ತಾರಷ್ಟೆ..ನಮಗೂ ರೋಗಿಗಳ ಸಂಬಂಧಿಕರು ಅರ್ಜೆಂಟಾಗಿ ಏನಾದರೊಂದು ಕಾಲ್ ಮಾಡಬೇಕಾದ್ರೆ ನೆಟ್ವರ್ಕ್ ಸಿಗಬಹುದಾದ ಆಸ್ಪತ್ರೆ ಮುಂಭಾಗದ ಸ್ಥಳಕ್ಕೆ ಓಡಿ ಹೋಗುವುದನ್ನು ನೋಡಿದರೆ ಬೇಸರವಾಗುತ್ತದೆ. ಎಮರ್ಜೆನ್ಸಿ ಇದ್ದಾಗ ಇದು ಸಿಕ್ಕಾಪಟ್ಟೆ ಕಿರಿಕಿರಿ ಉಂಟುಮಾಡುತ್ತದೆ.ದೊಡ್ಡವರೆನಿಸಿಕೊಂಡವರು ಇದಕ್ಕೆ ಹೆಚ್ಚಿನ ಒತ್ತು ಕೊಡಬೇಕೆನ್ನುವುದು ನಮ್ಮ ಪ್ರಾರ್ಥನೆ” —- ಹೆಸರು ಹೇಳಲಿಚ್ಚಿಸದ ಹಿರಿಯ ವೈದ್ಯರು.
ಹೀಗೆಲ್ಲಾ ಇರುವ ಆಸ್ಪತ್ರೆಯನ್ನು ಮೊಬೈಲ್ ನೆಟ್ವರ್ಕ್ ಪ್ರಾಬ್ಲಂ ನಿರಂತರವಾಗಿ ಕಾಡುತ್ತಿದೆ ಎನ್ನುವುದೆ ದುರಂತದ ವಿಚಾರ.ರೋಗಿಗಳಿಗೆ ಚಿಕಿತ್ಸೆ ನೀಡುವ ವಿಷಯದಲ್ಲಿಬರಹುದು, ಅಥವಾ ಅವರ ಆರೋಗ್ಯದ ಲ್ಲಿನ ಅಪ್ಡೇಟ್ಸ್ ಗಳನ್ನು ಸಂಬಂಧಿಕರಿಗೆ ತಿಳಿಸುವ ವಿಚಾರದಲ್ಲಿ ಇರಬಹುದು ಮಾಹಿತಿಯನ್ನು ಸರಿಯಾಗಿ ಸಂವಹನಿಸಲು ಆಗುತ್ತಲೇ ಇಲ್ಲವಂತೆ.ಏನೇ ಮಾತನಾಡಬೇಕಿದ್ರೂ, ಆಸ್ಪತ್ರೆ ಹೊರಗೆ ಬಂದು ಸಾಕಷ್ಟು ದೂರ ಬಂದಿಯೇ ಹೇಳಬೇಕಾದ ಪರಿಸ್ಥಿತಿಯಿದೆ. ನೆಟ್ವರ್ಕ್ ಗಾಗಿ ಜನ ಪರದಾಡುವ ಸ್ತಿತಿ ಕಂಡರೆ ಬೇಸರವಾಗುತ್ತದೆ.ಏನೆಲ್ಲಾ ಖರ್ಚು ಮಾಡುವ ಸರ್ಕಾರಕ್ಕೆ, ಆಸ್ಪತ್ರೆ ಕ್ಯಾಂಪಸ್ ನ್ನು ಕಾಡುತ್ತಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸಲಿಕ್ಕೆ ಆಗುತ್ತಿಲ್ಲವೆ ಎನ್ನುವ ಬೇಸರ ಮೂಡುತ್ತೆ.

“ಆಸ್ಪತ್ರೆಗಳ ಒಳಗೆ ಮೊಬೈಲ್ ನೆಟ್ವರ್ಕ್ ನ ಸಮಸ್ಯೆ ಇರುವುದು ನಮ್ಮ ಗಮನಕ್ಕೂ ಬಂದಿದೆ.ಮೊಬೈಲ್ ನಲ್ಲಿ ಮಾತನಾಡುವುದು ಕೆಲವೊಮ್ಮೆ ಸಮಸ್ಯೆ ಸೃಷ್ಟಿಸುತ್ತದೆ. ಆದರೂ ರೋಗಿಗಳು ಹಾಗೂ ಅವರ ಸಂಬಂಧಿಕರ ಸಂವಹನದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ .ಇಲಾಖೆ ಜತೆ ಈ ಬಗ್ಗೆ ಕಮ್ಯುನಿಕೇಷನ್ ನಲ್ಲಿದ್ದೇವೆ. ಸಕಾರಾತ್ಮಕವಾದ ಪ್ರತಿಕ್ರಿಯೆ ಕೂಡ ಬಂದಿದೆ.ಕೆಲವೆ ದಿನಗಳಲ್ಲಿ ಮೊಬೈಲ್ ಟವರ್ ಅಳವಡಿಸುವ ಕೆಲಸ ಮಾಡಲಾಗುತ್ತದೆ. ಮೊಬೈಲ್ ಟವರ್ ಅಳವಡಿಸಿದ ಮೇಲೆ ಅದರ ವಿಕಿರಣಗಳಿಂದಲೂ ರೋಗಿ್ಗಳ ಆರೋಗ್ಯಕ್ಕೆ ಸಮಸ್ಯೆ ಉಂಟಾಗುತ್ತೆ ಎಂದು ಆಪಾದನೆ ಮಾಡುವವರು ಹೆಚ್ಚಾಗಬಹುದು.ಎಲ್ಲಾ ಸಾಧಕ ಬಾಧಕಗಳನ್ನು ಅವಲೋಕಿಸಿ ನೆಟ್ವರ್ಕ್ ಸಮಸ್ಯೆ ಬಗೆಹರಿಸಲಾಗುವುದು.”- ವಿಕ್ಟೋರಿಯಾ ಆಸ್ಪತ್ರೆ ಆಡಳಿತ ವಿಭಾಗದ ಅಧಿಕಾರಿ
ತುಂಬಾ ಎಮರ್ಜೆನ್ಸಿ ಇದ್ದಾಗಲಂತೂ ರೋಗಿಗಳ ಸಂಬಂಧಿಕರು ಸಿಕ್ಕಾಪಟ್ಟೆ ಕಷ್ಟಪಡುವಂತ ಸ್ತಿತಿ ಇರುತ್ತದಂತೆ.ನೆಟ್ವರ್ಕ್ ಸಿಗುವ ಸ್ಥಳಗಳಿಗೆ ಪರದಾಡುವುದನ್ನು ಕಂಡು ಅನೇಕರು ಸಹಾಯ ಮಾಡುತ್ತಾರಂತೆ.ಅಲ್ಲಿ ಕೆಲಸ ಮಾಡುವ ವೈದ್ಯರಿಗೇನೆ ಇದು ಬೇಸರ ತರಿಸುವುದುಂಟಂತೆ.ಏನೇನಕ್ಕೆಲ್ಲಾ ಹಣ ಖರ್ಚು ಮಾಡುವ ಸರ್ಕಾರ ಮತ್ತು ಆರೋಗ್ಯ ಇಲಾಖೆ ಆಸ್ಪತ್ರೆ ಕ್ಯಾಂಪಸ್ ನಲ್ಲಿ ಮೊಬೈಲ್ ಟವರ್ ನಿರ್ಮಿಸಿಬಿಟ್ರೆ ಎಲ್ಲಾ ಸಮಸ್ಯೆಗು ಪರಿಹಾರ ಸಿಕ್ಕಿ ಬಿಡುತ್ತದೆ.ಆದರೆ ಆ ನಿಟ್ಟಿನಲ್ಲಿ ಪ್ರಯತ್ನಗಳಾಗಿಯೇ ಇಲ್ಲವೆಂದೇನಲ್ಲ..ಪ್ರಯತ್ನಗಳು ಗಂಭೀರ ಸ್ವರೂಪದಲ್ಲಿ ಆಗಿಲ್ಲ ಎನ್ನುವುದಷ್ಟೇ ಬೇಸರದಾಯಕ.
ವಿಕ್ಟೋರಿಯಾ ಕ್ಯಾಂಪಸ್ ನಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲೂ ಇದೇ ಸಮಸ್ಯೆ ಕಾಡುತ್ತಿದೆಯಂತೆ.ಮೊಬೈಲ್ ನೆಟ್ವರ್ಕ್ ಇಲ್ಲದೆ ರೋಗಿಗಳ ಸಂಬಂಧಿಕರು ಪಡುವ ಕಷ್ಟ ಒಂದೆರೆಡಲ್ಲವಂತೆ.ನೆಟ್ವರ್ಕ್ ಇರುವ ಪ್ರದೇಶ ಹುಡುಕಿಕೊಂಡು ಬರಬೇಕಾಗ್ತಿದೆಯಂತೆ.ಪೇಷೆಂಟ್ ಗಳನ್ನು ಬಿಟ್ಟು ಬರುವುದು ಸುರಕ್ಷಿತವಲ್ಲ.ಇಂಥಾ ಸನ್ನಿವೇಶದಲ್ಲಿ ಆಸ್ಪತ್ರೆ ಒಳಗೇನೆ ಮೊಬೈಲ್ ಸಂಪರ್ಕ ಸಿಗುವಂತ ವ್ಯವಸ್ಥೆ ಮಾಡುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆಯಷ್ಟೆ.