advertise here

Search

ಕಗ್ಗಲೀಪುರದಲ್ಲಿ ವಿಕೃತಿಯ ಪರಮಾವಧಿ – ಬರ್ತಡೆ ಪಾರ್ಟಿಗೆ ಬಂದವನ ಮೇಲೆ ಮೃಗೀಯ ಹಲ್ಲೆ!

kaggalipura thattaguppe youth assault

ರಾಮನಗರ: ಸ್ನೇಹಿತರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋದ ಯುವಕನ ಮೇಲೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮೃಗೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಟ್ಟಗುಪ್ಪೆ ಗ್ರಾಮದ ಕೆರೆ ಬಳಿ ನಡೆದ ಈ ಭೀಕರ ಕೃತ್ಯವು ಮನುಷ್ಯತ್ವವೇ ನಾಚುವಂತಿದೆ.

ಪುನೀತ್ ಎಂಬ ಯುವಕನು ತನ್ನ ಪರಿಚಯಸ್ಥರ ಬರ್ತಡೆ ಪಾರ್ಟಿಗೆಂದು ತಟ್ಟಗುಪ್ಪೆ ಕೆರೆ ಬಳಿ ಬಂದಿದ್ದನು. ಈ ವೇಳೆ ಅಲ್ಲಿಗೆ ಬಂದ ಕ್ರಿಮಿನಲ್ ಹಿನ್ನೆಲೆಯುಳ್ಳ ಗಜೇಂದ್ರ ಹಾಗೂ ಸುಮಂತ್ ಎಂಬುವವರು ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಪುನೀತ್ ಮೇಲೆರಗಿದ್ದಾರೆ. ಹಲ್ಲೆಗೊಳಗಾದ ಪುನೀತ್ ಪ್ರಾಣ ಉಳಿಸಿಕೊಳ್ಳಲು ಕೈ ಮುಗಿದು ಬೇಡಿಕೊಂಡರೂ, ಕಾಲು ಹಿಡಿದು ಕ್ಷಮೆಯಾಚಿಸಿದರೂ ಈ ಕಿರಾತಕರು ಮಾತ್ರ ಬಿಡಲಿಲ್ಲ.

ವಿಕೃತಿಯ ಪರಮಾವಧಿ:

ಆರೋಪಿಗಳಾದ ಗಜೇಂದ್ರ ಮತ್ತು ಸುಮಂತ್ ಅವರು ಪುನೀತ್‌ನನ್ನು ಕಾಲಿನಿಂದ ಒದ್ದು, ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಈ ವಿಕೃತ ಮನಸ್ಸಿನವರು, ಹೊಡೆತದಿಂದ ರಕ್ತ ಸುರಿಯುತ್ತಿದ್ದರೂ ಪುನೀತ್ ತಲೆಯ ಮೇಲೆ ಮದ್ಯ ಸುರಿದು ವಿಕೃತವಾಗಿ ಸಂಭ್ರಮಿಸಿದ್ದಾರೆ. ಈ ಮೃಗೀಯ ವರ್ತನೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ALSO READ :  ಮುದ್ದು ಬಂಗಾರು ಕಿಸ್ ಮಿ ಅಂತ ಲೇಡಿ ರೌಡಿಶೀಟರ್ ಹಿಂದೆ ಬಿದ್ದ ಪೊಲೀಸ್ ಇನ್ಸ್'ಪೆಕ್ಟರ್..!

ದಾಖಲಾದ ಕೊಲೆ ಯತ್ನ ಪ್ರಕರಣ:

ಈ ಹಿಂದೆ ಸುಮಂತ್ ಮೇಲೆ ಪುನೀತ್ ಹಲ್ಲೆ ಮಾಡಿದ್ದನು ಎಂಬ ಕಾರಣಕ್ಕೆ, ಅದೇ ಸೇಡನ್ನು ತೀರಿಸಿಕೊಳ್ಳಲು ಗಜೇಂದ್ರನನ್ನು ಕರೆಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಕಗ್ಗಲೀಪುರ ಪೊಲೀಸರು, ಗಜೇಂದ್ರ ಹಾಗೂ ಸುಮಂತ್ ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | ಧರ್ಮಸ್ಥಳ ಪ್ರಕರಣ: ಮರುತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ನಾಗರಿಕ ಸಮಾಜದಲ್ಲಿ ಇಂತಹ ವಿಕೃತ ಘಟನೆಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು, ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top