advertise here

Search

ಶಾಸಕ ಪ್ರದೀಪ್ ಈಶ್ವರ್ ‘ಪರಿಶ್ರಮ’ದ ಮತ್ತೊಂದು ಬಂಡವಾಳ ಬಯಲು..!


ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದೇವೆ ಎಂದು ಬೀಗುತ್ತಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾಲೀಕತ್ವದ ‘ಪರಿಶ್ರಮ ನೀಟ್ ಮತ್ತು ಜೆಇಇ ಅಕಾಡೆಮಿ’ಯ ಮತ್ತೊಂದು ಕರಾಳ ಮುಖ ಈಗ ಬಯಲಾಗಿದೆ. ಸರ್ಕಾರದ ‘ಸ್ಯಾಟ್ಸ್’ (SATS) ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮೂಲಕ ಕೋಟ್ಯಂತರ ರೂಪಾಯಿಗಳ ಶೈಕ್ಷಣಿಕ ದಂಧೆ ನಡೆಸುತ್ತಿರುವುದು ದಾಖಲೆ ಸಮೇತ ಬಹಿರಂಗವಾಗಿದೆ.

ಏನಿದು ‘ಸ್ಯಾಟ್ಸ್’ (SATS) ಹಗರಣ? ನೋಡೊಣ ಬನ್ನಿ..

ವಿದ್ಯಾರ್ಥಿಗಳ ಪ್ರಗತಿ ಮತ್ತು ಹಾಜರಾತಿಯನ್ನು ಪತ್ತೆಹಚ್ಚಲು ಶಿಕ್ಷಣ ಇಲಾಖೆಯು ‘ಸ್ಟೂಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್’ (SATS) ಬಳಸುತ್ತದೆ. ನಿಯಮದ ಪ್ರಕಾರ, ಪ್ರತಿ ಸೆಕ್ಷನ್‌ನಲ್ಲಿ ಕೇವಲ 80 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಆದರೆ, ಪರಿಶ್ರಮ ಅಕಾಡೆಮಿಯು ಈ ನಿಯಮವನ್ನು ಗಾಳಿಗೆ ತೂರಿ ಬೃಹತ್ ವಂಚನೆ ಎಸಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಅನುಮತಿ ಮೀರಿ ದಾಖಲಾತಿ: ದಾಖಲೆಗಳ ಪ್ರಕಾರ ಅಕಾಡೆಮಿಗೆ ಕೇವಲ 3 ರಿಂದ 4 ಸೆಕ್ಷನ್‌ಗಳನ್ನು ನಡೆಸಲು ಮಾತ್ರ ಅವಕಾಶ ನೀಡಲಾಗಿದೆ (ಅಂದರೆ ಸುಮಾರು 320 ವಿದ್ಯಾರ್ಥಿಗಳು). ಆದರೆ, ಅಕಾಡೆಮಿಯಲ್ಲಿ ವಾಸ್ತವವಾಗಿ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಲೆಕ್ಕಕ್ಕೆ ಸಿಗದ 430 ವಿದ್ಯಾರ್ಥಿಗಳು: ಸುಮಾರು 430 ವಿದ್ಯಾರ್ಥಿಗಳ ಮಾಹಿತಿಯನ್ನು ಸ್ಯಾಟ್ಸ್ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡದೆ, ಅವರ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ.

ಕೋಟ್ಯಂತರ ರೂಪಾಯಿ ಲೂಟಿ: ಪ್ರತಿ ವಿದ್ಯಾರ್ಥಿಯಿಂದ ₹4 ರಿಂದ ₹4.5 ಲಕ್ಷ ರೂಪಾಯಿ ಶುಲ್ಕ ಪಡೆಯುವ ಅಕಾಡೆಮಿಯು, ಈ ಹೆಚ್ಚುವರಿ ವಿದ್ಯಾರ್ಥಿಗಳಿಂದಲೇ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿದೆ ಎಂಬ ಆರೋಪ ಪಾಠಶಾಲೆ ಮಾಡಿರುವ ದೂರಿನಲ್ಲಿದೆ.

ಅಧಿಕಾರಿಗಳ ‘ಕೈ’ವಾಡ: ಡಿಡಿಪಿಯು ಮನೋಹರ್ ಕೊಳ್ಳರೇ ಕಿಂಗ್‌ಪಿನ್?

ಈ ಬೃಹತ್ ಹಗರಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ.

ಮನೋಹರ್ ಕೊಳ್ಳ (DDPU, ಬೆಂಗಳೂರು ದಕ್ಷಿಣ ಜಿಲ್ಲೆ): ಇವರೇ ಈ ಹಗರಣದ ಮುಖ್ಯಸ್ಥ ಎಂಬ ಆರೋಪವಿದ್ದು, ಇಲಾಖೆಯ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆನ್ನಲಾಗಿದೆ. ಇವರ ಜೊತೆಗೆ ಸಹಾಯಕ ನಿರ್ದೇಶಕರು: ಗಿರೀಶ್ ತನೋಪಿ, ಶಫಿ ಅಹಮದ್ ಮತ್ತು ತರುಣ್ ಅವರು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ALSO READ :  ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ರೌಡಿಸಂ ತಾಂಡವ: ನೀರು ಕುಡಿಯುವ ವಿಚಾರಕ್ಕೆ ವಿದ್ಯಾರ್ಥಿ ಮೇಲೆ 'ಗ್ಯಾಂಗ್' ಅಟ್ಯಾಕ್!

ಸ್ಯಾಟ್ಸ್ ಸಿಸ್ಟಮ್ ಲಾಕ್ ಆಗಿದ್ದರೂ ಅಧಿಕಾರಿಗಳು ಅದನ್ನು ಅನ್‌ಲಾಕ್ ಮಾಡಿ ಅಕ್ರಮವಾಗಿ ಅಡ್ಮಿಷನ್ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ರಾತ್ರೋರಾತ್ರಿ ಸ್ಯಾಟ್ಸ್ ಅಂಕಿ-ಅಂಶಗಳನ್ನು ತಿದ್ದಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಾಸಕ ಪ್ರದೀಪ್ ಈಶ್ವರ್ ಮತ್ತು ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ

“ತಾವು ಪ್ರಾಮಾಣಿಕ ತೆರಿಗೆದಾರ” ಎಂದು ಮಾಧ್ಯಮಗಳ ಮುಂದೆ ಹೇಳಿಕೊಳ್ಳುವ ಶಾಸಕ ಪ್ರದೀಪ್ ಈಶ್ವರ್ ಅವರು, ಸ್ಯಾಟ್ಸ್‌ನಲ್ಲಿ ಕಡಿಮೆ ವಿದ್ಯಾರ್ಥಿಗಳ ಲೆಕ್ಕ ತೋರಿಸಿ ಸರ್ಕಾರಕ್ಕೆ ಸಲ್ಲಿಸಬೇಕಾದ ಹಣವನ್ನು ವಂಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮತ್ತೊಂದೆಡೆ, ಈ ಅಕ್ರಮವನ್ನು ತನಿಖೆ ಮಾಡಲು ಮುಂದಾಗಿರುವ ಪ್ರಾಮಾಣಿಕ ಅಧಿಕಾರಿಗಳಾದ ಪಿಯು ಮಂಡಳಿ ನಿರ್ದೇಶಕ ಭರತ್ ಮತ್ತು ಪ್ರಧಾನ ಕಾರ್ಯದರ್ಶಿ ರಿತೇಶ್ ಮಹೇಶ್ ಅವರ ಮೇಲೆ ಸಚಿವ ಮಧು ಬಂಗಾರಪ್ಪ ಅವರು ಒತ್ತಡ ಹಾಕುತ್ತಿದ್ದಾರೆ ಎಂಬ ವದಂತಿಗಳು ಇಲಾಖೆಯ ಒಳಗೆ ಚರ್ಚೆಯಾಗುತ್ತಿವೆ. ಇದರಿಂದಾಗಿ ಸ್ವಪಕ್ಷದ ಶಾಸಕರನ್ನ ಸಚಿವರು ಬಚಾವ್‌ ಮಾಡಲು ಹೀಗೆಲ್ಲಾ ಮಾಡುತಿದ್ದಾರೆ ಎನ್ನಲಾಗುತ್ತಿದೆ. ಹೀಗೆನಾದರು ಮಾಡಿದ್ದೆ ಆದಲ್ಲಿ ಸಚಿವರೂ ಕೂಡಾ ತಲೆದಂಡ ಹೊರಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂಬಂತಾಗಿದೆ.

ಇದನ್ನೂ ಓದಿ | ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

‘ಪಾಠಶಾಲೆ’ ಸಂಸ್ಥೆಯ ಸಮರ

ಈ ಅಕ್ರಮದ ವಿರುದ್ಧ ‘ಪಾಠಶಾಲೆ’ ಎಂಬ ಸಂಸ್ಥೆಯು ದಾಖಲೆ ಸಮೇತ ಪದವಿ ಪೂರ್ವ ಶಿಕ್ಷಣ ಮಂಡಳಿಗೆ ದೂರನ್ನು ಸಲ್ಲಿಸಿದೆ. ಅಕಾಡೆಮಿಯು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದಾಗಿ ನೀಡುತ್ತಿರುವ ಭರವಸೆಗಳು ಕೇವಲ ಸುಳ್ಳು, ಇದು ಸಂಸ್ಥೆಯು ಕೇವಲ ನೂರಾರು ಕೋಟಿ ರೂಪಾಯಿಗಳ ಶೈಕ್ಷಣಿಕ ದಂಧೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ದೂರಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು ಮತ್ತು ಭ್ರಷ್ಟ ಅಧಿಕಾರಿಗಳು ಹಾಗೂ ಅಕಾಡೆಮಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರಾದ ಗಂಗಾಧರ್ ಅವರು ಒತ್ತಾಯಿಸಿದ್ದಾರೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top