advertise here

Search

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ “ಗೌಡ್ತಿ”ಯರು ಗರಂ: ಮಹಿಳಾ ಆಯೋಗಕ್ಕೆ ದೂರು


ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಚಾಲೆಂಜ್ ಮೇಲೆ ಚಾಲೆಂಜ್ ಎದುರಾಗುತ್ತಿದೆ.ಒಂದ್ ಮುಗೀತು ಎನ್ನುವಷ್ಟರಲ್ಲಿ ಮತ್ತೊಂದು ಟೆನ್ಷನ್ ಶುರುವಾಗ್ತಿದೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ತಗಡು ಎಂದು ಸಂಬೋಧಿಸಿದ್ದಕ್ಕೆ ಒಕ್ಕಲಿಗ ಸಮುದಾಯ ತಿರುಗಿಬಿದ್ದ ಘಟನೆ ಬೆನ್ನಲ್ಲೇ  ಇದೀಗ ಗೌಡ್ತಿಯರು ಮಹಿಳೆಯರ ಬಗ್ಗೆ ದರ್ಶನ್ ತೀರಾ ಲಘುವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿದ್ದಾರೆ.ದರ್ಶನ್ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕು ಎಂದು ಒತ್ತಾಯಿಸಿ  ಮಹಿಳಾ ಆಯೋಗಕ್ಕೆ  ದೂರು ಸಲ್ಲಿಕೆಯಾಗಿದೆ.

ನಟ ದರ್ಶನ್ ಗೆ ಮತ್ತೆ ಹೊಸ ಸಂಕಷ್ಟ ಎದುರಾಗಿದೆ.ಸುಮ್ಮನಿರದೆ ಇರುವೆ ಬಿಟ್ಟುಕೊಂಡರು ಎನ್ನುವಂತೆ ದರ್ಶನ್ ಪರಿಸ್ಥಿತಿಯಾಗಿದೆ.ಕಾಟೇರ  ಚಿತ್ರದ 50 ದಿನಗಳ ಸಕ್ಸೆಸ್ ಸೆಲಬ್ರೇಷನ್ ನಲ್ಲಿ ಸುಮ್ಮನೆ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದಿದ್ದರೆ ಸಾಕಿತ್ತು..ಅವರ ಬಾಯಿಂದ ಬಂದ  ಅ ಒಂದು ಪದ ಅನಗತ್ಯವಾದ ಕಾಂಟ್ರವರ್ಸಿಯಲ್ಲಿ ಸಿಕ್ಕಾಕಿಕೊಳ್ಳುವಂತೆ ಮಾಡಿದೆ.

ದರ್ಶನ್ ಪ್ರಜ್ನಾಪೂರ್ವಕವಾಗಿ ಹಾಗೆ ಮಾತನಾಡಿದ್ರೋ ಅಥವಾ ಮಾತಿನ ಭರಾಟೆಯಲ್ಲಿ ಅವರಿಂದ ಹಾಗೊಂದು ಮಾತು ಬಂತೋ ಗೊತ್ತಿಲ್ಲ.ಒಂದು ಕಾಲದಲ್ಲಿ ಅನ್ನ ಹಾಕಿದ ನಿರ್ಮಾಪಕ ಉಮಾಪತಿ ಅವರನ್ನು ತಗಡು ಎಂದುಬಿಟ್ಟರು.ಇದು ಇಂಥಾ ಕಾಂಟ್ರವರ್ಸಿಯೊಂದನ್ನು ಸೃಷ್ಟಿಸುತ್ತೆ ಎಂದು ಸ್ವತಃ ದರ್ಶನ್ ಗೂ ಗೊತ್ತಿರಲಿಕ್ಕಿಲ್ಲ ಎನ್ನಿಸುತ್ತೆ.ಅದು ವಿಕೋಪಕ್ಕೆ ತಿರುಗಿದೆ

ALSO READ :  ಕೆಂಗೇರಿ ಕೆರೆಪಾಲಾಗಿದ್ದ ಅಣ್ಣ-ತಂಗಿ ಶವ ಪತ್ತೆ: ಪೌರಕಾರ್ಮಿಕ ತಾಯಿಯ ಆಕ್ರಂದನ!

ಒಕ್ಕಲಿಗ ಸಮುದಾಯಕ್ಕೆ ಸೇರಿದ ಉಮಾಪತಿ ಅವರಿಗಾದ ಅವಮಾನ ಅದು  ಕೇವಲ ಅವರಿಗಷ್ಟೇ ಅಲ್ಲ, ಇಡೀ ಸಮುದಾಯಕ್ಕೆ ಆದ ಅಪಮಾನ ಎಂದು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸಮುದಾಯ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆಗೆ ಪ್ಲ್ಯಾನ್ ಮಾಡಿರುವುದು ಗೊತ್ತಿರುವ ವಿಚಾರವೇ.

ಅದರ ಬೆನ್ನಲ್ಲೇ ಗೌಡ್ತಿಯರ ಸಂಘಟನೆ ಜಯಶ್ರೀ ಎಂಬುವವರ ನೇತೃತ್ವದಲ್ಲಿ ದರ್ಶನ್ ಗೆ ಸಂಬಂಧಿಸಿದಂತೆ ನಡೆದ ಪ್ರಕರಣವೊಂದರಲ್ಲಿ  ಲಿಖಿತ ರೂಪದಲ್ಲಿ ದೂರು ನೀಡಿದೆ.ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವದಲ್ಲಿ ದರ್ಶನ್ ಮಾತಿನ ಲಹರಿಯಲ್ಲಿ, ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ರಂತೆ “ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ..” ಎಂದಿದ್ದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮೇಲ್ಕಂಡ ಕಾರ್ಯಕ್ರಮದಲ್ಲಿ ದರ್ಶನ್ ಈ ವಾಕ್ಯಗಳನ್ನು  ತಮ್ಮ ವೈಯಕ್ತಿಕ ಜೀವನದ ಕುರಿತು ಹೇಳಿದ್ದರಾದ್ರೂ ಅದು ಮಹಿಳಾ ಸಂಕುಲಕ್ಕೆ ಮಾಡಿದ ಅಪಮಾನ ಎಂದು ಭಾವಿಸಿರುವ ಗೌಡ್ತಿಯರು  ಮಹಿಳಾ ಆಯೋಗದ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.ಇದು ದರ್ಶನ್ ಗೆ ಇನ್ನ್ಯಾವ ಸಂಕಷ್ಟ ತಂದೊಡ್ಡಲಿದೆಯೋ ಕಾದು ನೋಡಬೇಕಿದೆ.


Political News

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Deepavali pollution Decrease! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ಮಾಲಿನ್ಯ ಆಗಿಲ್ವಂತೆ!?

Rajyotsava awards 2024: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ಹೇಮಾ ಚೌಧರಿ, ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಪ್ರಶಸ್ತಿಯ ಗರಿ

ದಸರಾ ನಂದಿಧ್ವಜದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ? ಜೀವನ್ಮರಣ ಹೋರಾಟದಲ್ಲಿ ಮಹದೇವಣ್ಣ

Scroll to Top