advertise here

Search

EXCLUSIVE…ARNAB, “KARNATAKA WANTS TO kNOW” ಏನಾಗಲಿದೆ ಕರ್ನಾಟಕದಲ್ಲಿ “ರಿಪಬ್ಲಿಕ್ ಕನ್ನಡ”  ಭವಿಷ್ಯ..!?


ಕರ್ನಾಟಕದಲ್ಲಿ ತಲೆಕೆಳಗಾಯ್ತಾ, ಆರಕ್ಕೇರದ,ಮೂರಕ್ಕೆ ಇಳಿಯದ ಅರ್ನಾಬ್ ಕನಸಿನ “ರಿಪಬ್ಲಿಕ್ ಕನ್ನಡ”(republic kannada) ಚಾನೆಲ್ ನ   ಲೆಕ್ಕಾಚಾರ..!

ಬೆಂಗಳೂರು:ಮಾದ್ಯಮ ಕ್ಷೇತ್ರದ ದೈತ್ಯ-ದಿಗ್ಗಜ ಅರ್ನಾಬ್ ಗೋಸ್ವಾಮಿ(arnab goswami) ತುಂಬಾ ಮಹಾತ್ವಾಕಾಂಕ್ಷೆ-ಕನಸು-ನಿರೀಕ್ಷೆಯಲ್ಲಿ ಕಟ್ಟಿದ ರಿಪಬ್ಲಿಕ್ ನ್ಯೂಸ್ ಚಾನೆಲ್(republic news channel) ಅವರ ಲೆಕ್ಕಾಚಾರಗಳಂತೆ ನಡೆಯುತ್ತಿದೆ.ಅದರಿಂದ ಅರ್ನಾಬ್ ಸಂತುಷ್ಟರಾಗಿದ್ದಾರೆ ಕೂಡ.ಆದರೆ ಕರ್ನಾಟಕ(karnataka)ದಲ್ಲೇಕೋ ಮಾತ್ರ ಅವರ ಲೆಕ್ಕಾಚಾರ-ಗಣಿತ-ಗುಣಿತ ಯಾವುದೂ ವರ್ಕೌಟ್ ಆದಂತೆ ಕಾಣ್ತಿಲ್ಲ.ಯಾವ ಭರವಸೆ-ನಿರಿಕ್ಷೆ ಇಟ್ಟುಕೊಂಡು ಕೋಟ್ಯಾಂತರ ಸುರಿದು ರಿಪಬ್ಲಿಕ್ ಸುದ್ದಿ ಸಾಮ್ರಾಜ್ಯ ವಿಸ್ತರಿಸ ಬೇಕೆಂದುಕೊಂಡಿದ್ರೋ ಅದ್ಯಾವುದು ಅಂದುಕೊಂಡಂತೆ ಆಗುತ್ತಿಲ್ಲ ಎನ್ನುವ ಸ್ಪೋಟಕ-ಅಘಾತಕಾರಿ ಸುದ್ದಿ ಹೊರಬಿದ್ದಿದೆ. ರಿಪಬ್ಲಿಕ್ ಕನ್ನಡ (republic kannada)ಟೀಮ್ ನ ಪ್ರಯತ್ನ-ಫರ್ಫಾರ್ಮೆನ್ಸ್ ಯಾವುದೂ ಅರ್ನಾಬ್ ಗೋಸ್ವಾಮಿ ಅವರನ್ನು ಸಂತುಷ್ಟಗೊಳಿಸುವ ಮಾತು ಒತ್ತಟ್ಟಿಗಿರಲಿ ನಿರೀಕ್ಷೆಯ ಮಾನದಂಡವನ್ನು ಅಪ್ ಟು ದಿ ಮಾರ್ಕ್ ಎನ್ನುವಷ್ಟಾದ್ರೂ ತಲುಪಿಲ್ಲ ಎನ್ನಲಾ್ಗಿದೆ.ತನ್ನ ಪ್ರಯೋಗಗಳಿಗೆ  ಕರ್ನಾಟಕದಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದಿರುವುದರಿಂದ ಸಹಜವಾಗಿಯೇ ಬೇಸತ್ತಿರುವ-ಅಸಮಾಧಾನಗೊಂಡಿರುವ ಅರ್ನಾಬ್ ಗೋಸ್ವಾಮಿ ಮಹತ್ವದ ನಿರ್ದಾರವೊಂದನ್ನು ಕೈಗೊಳ್ಳಲು ಹೊರಟಿದ್ದಾರೆನ್ನುವ ಸುದ್ದಿ ರಿಪಬ್ಲಿಕ್ ಕನ್ನಡದ ಸುದ್ದಿ ಮನೆಯಿಂದಲೇ ಕೇಳಿಬಂದಿದೆ.ಆದರೆ ಅದು ಏನು ಎನ್ನುವುದು ಮಾತ್ರ ಗುಟ್ಟಾಗುಳಿದಿದೆ.

ಅರ್ನಾಬ್ ಗೋಸ್ವಾಮಿ…ನೇಷನ್ ವಾಂಟ್ಸ್ ಟು ನೌ(nation wants to know)… ಎಂದು ಅಬ್ಬರಿಸುತ್ತಾ ಮಾದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಬಲಪಂಥೀಯ.ಬಿಜೆಪಿಯೇತರರನ್ನು ಕಂಡರೆ ಕೆಂಡದಂಥ ಕೋಪ-ಏಕಪಕ್ಷೀಯವಾಗಿ ಸುದ್ದಿ ಮಾಡುತ್ತಾರೆ…ಪ್ಯಾನೆಲ್ ನಲ್ಲಿ ಕೂತರೆ ತಾನ್ ಮಾತ್ರ ಬುದ್ದಿವಂತ ಉಳಿದವರೆಲ್ಲಾ ದಡ್ಡರು ಎಂಬ ಧೋರಣೆ…ಹೀಗೆ ಅವರ ಬಗ್ಗೆ ಏನೇ ಆಪಾದನೆ-ದೂರು ಗಳಿದ್ದರೂ ಅವರೊಬ್ಬ ಅತ್ಯಂತ ಪ್ರತಿಭಾನ್ವಿತ-ಮಾಹಿತಿಯ ಆಗರ.ನ್ಯೂಸ್ ವಿಚಾರಕ್ಕೆ ಬಂದರೆ ಎಂಥವರನ್ನು ಬಗ್ಗು ಬಡಿಯಬಲ್ಲ ಅದ್ವಿತೀಯ. ದೈತ್ಯ ಎನ್ನುವುದರಲ್ಲಿ ಅನುಮಾನವೇ ಬೇಡ. ನಾವು ಪತ್ರಿಕೋದ್ಯಮ ದಲ್ಲಿರುವ ಕೆಲವೇ ಕೆಲವು ಅನುಭವಿ ಗಳನ್ನು  ಮಾದ್ಯಮದ ಪರಿಭಾಷೆಯಲ್ಲಿ ತುಂಬಾ ಪ್ರೀತಿ –ಗೌರವದಿಂದ ದೈತ್ಯ- ರಾಕ್ಷಸ  ಎಂದು ಸಂಬೋಧಿಸುತ್ತೇವೆ( ಆತ ಕೆಲಸ ಅಥವಾ ಸುದ್ದಿ ಅಂಥಾ ಬಂದ್ರೆ  ರಾಕ್ಷಸ ಬಿಡಪ್ಪಾ ಎನ್ನುವಂತೆ) ಅರ್ನಾಬ್ ಕೂಡ ಆ ಸಾಲಿನಲ್ಲಿ ನಿಲ್ಲಬಲ್ಲಂಥ ಮಾದ್ಯಮ ಕ್ಷೇತ್ರದ ದಿಗ್ಗಜ..

ಸುದ್ದಿ ಜಗತ್ತನ್ನು ತನ್ನ ಕೈ ಬೆರಳುಗಳ ಸನ್ನೆಯಲ್ಲಿ ಹಿಡಿದಿಟ್ಟುಕೊಂಡಿರುವ, ಸುದ್ದಿಗೆ ಯಾವ ಆಯಾಮ ಕೊಟ್ಟರೆ ಅದು ಜನಪರವಾಗುತ್ತೆ..ವೀಕ್ಷಣೆಗೆ ಯೋಗ್ಯವಾಗುತ್ತೆ. ಜನರನ್ನು ಯಾವ ಸುದ್ದಿಯನ್ನು ಅಪ್ಯಾಯಮಾನವಾಗಿ ಸ್ವೀಕರಿಸ್ತಾರೆ..ಯಾವುದನ್ನು ಸಾರಾಸಗಟಾಗಿ ತಿರಸ್ಕರಿಸ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ತಿಳಿದುಕೊಂಡಿರುವ ಅಸಾಧಾರಣ ಪತ್ರಕರ್ತ ಅರ್ನಾಬ್. ಈ ಕಾರಣಕ್ಕೆ ಒಬ್ಬ ವರದಿಗಾರನಾಗಿ  ತನ್ನನ್ನು ಗುರುತಿಸಿಕೊಳ್ಳಲು ಪಟ್ಟಷ್ಟು ಕಷ್ಟ..ತಗುಲಿದ ಸಮಯ ಒಬ್ಬ ಸುದ್ದಿಸಂಸ್ಥೆಯ ಮಾಲೀಕನಾಗಿ ಬೆಳೆಯೊಕ್ಕೆ ಬೇಕಾಗಲೇ ಇಲ್ಲ.ತನ್ನದೇ ಕನಸಿನ ರಿಪಬ್ಲಿಕ್  ಮಾದ್ಯಮ ಸಂಸ್ಥೆಯನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕಟ್ಟಿ-ಬೆಳೆಸಿದ ಖ್ಯಾತಿ ಅರ್ನಾಬ್ ಅವರದು.ಕಟ್ಟೊಕ್ಕೆ ಹಿಡಿದಷ್ಟು ಕಡಿಮೆ ಸಮಯದಲ್ಲೇ ದೇಶಾದ್ಯಂತ ಮನೆಮಾತಾದವರು.ಯಾವುದಾದ್ರೂ ಒಂದು ಸುದ್ದಿ ಸಂಸ್ಥೆ ಅತ್ಯಂತ ಕಡಿಮೆ ಅವಧಿಯಲ್ಲಿ ಕಾರ್ಯಾರಂಭ ಮಾಡಿ ದೇಶದಲ್ಲಿ ಹೆಚ್ಚು ಜನರನ್ನು ತಲುಪುವ ಮಟ್ಟಕ್ಕೆ ಬೆಳೆದ ನಿದರ್ಶನ ಇತ್ತೀಚಿನ ವರ್ಷಗಳಲ್ಲಿ ಇದ್ದರೆ ಅದು ರಿಪಬ್ಲಿಕ್ ಗೆ ಸಲ್ಲುತ್ತದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯು ಇಲ್ಲ..ಯಾವುದೇ ಕ್ಲೀಷೆಯೂ ಇಲ್ಲ.

ಆದರೆ…ಆದರೆ  ಹೆಚ್ಚು ನಿರೀಕ್ಷೆ-ಕನಸು  ಇಟ್ಟುಕೊಂಡು ಕರ್ನಾಟಕದಲ್ಲಿ ವಿಸ್ತರಿಸಿದ ರಿಪಬ್ಲಿಕ್ ಸಾಮ್ರಾಜ್ಯದ ಸ್ತಿತಿ ಏನಾ್ಗಿದೆ..ನಿಜಕ್ಕೂ ಹೇಳುವುದಾದ್ರೆ ರಿಪಬ್ಲಿಕ್ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ. ಅರ್ನಾಬ್ ನಿರೀಕ್ಷೆಗೆ ತಕ್ಕಂತೆ ಚಾನೆಲ್ ಕೆಲಸ ಮಾಡುತ್ತಿಲ್ಲವಂತೆ.ಅರಚಾಡುವುದು..ಕಿರುಚಾಡುವುದನ್ನೇ ಬಂಡವಾಳ ಮಾಡಿಕೊಂಡ್ರೆ ಜನ ಮೆಚ್ಚಿ ಬಿಡ್ತಾರೆ.. ಮುಳ್ಳು ಕಿತ್ತು ಹೋಗುವಷ್ಟರ ರೇಂಜ್ನಲ್ಲಿ ಟಿಆರ್ ಪಿ ಗಗನಮುಖಿಯಾಗುತ್ತದೆ ಎಂಬ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದೆ.ಇದರಿಂದ ತೀರಾನೇ ವಿಚಲಿತರಾಗಿರುವ-ಅಸಮಾಧಾನಗೊಂಡಿರುವ-ಭ್ರಮನಿರಸನಕ್ಕೊಳಗಾಗಿರುವ ಅರ್ನಾಬ್(  ಕೇಳಿದ್ದಕ್ಕಿಂತ ಹೆಚ್ಚು ಸಂಬಳ ಕೊಟ್ಟು, ಸಿಬ್ಬಂದಿ ನಿಯೋಜಿಸಿಕೊಂಡು ಅವರಿಗಾಗಿ ಪ್ರತಿ ತಿಂಗಳು ಹತ್ತಿರತ್ತಿರ ಕೋಟ್ಯಾಂತರ ಕಳೆದುಕೊಂಡ್ರೂ ಟಿಆರ್ ಪಿ ನೂ ಏರುತ್ತಿಲ್ಲ.ಕರ್ನಾಟಕದಲ್ಲು ಮನೆ ಮಾತಾಗುತ್ತಿಲ್ಲ ಎಂದರೆ ಯಾರ್ ತಾನೇ ಸಹಿಸಿಕೊಳ್ತಾರೆ ಹೇಳಿ..)  ಕನ್ನಡದಲ್ಲಿ ರಿಪಬ್ಲಿಕ್ ನ್ನು ಮುಂದುವರೆಸುವುದಾ..? ಬೇಡ್ವಾ.. ಎನ್ನುವ ಚಿಂತನೆ ನಡೆಸುತ್ತಿದ್ದಾರೆನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಜಯಪ್ರಕಾಶ್ ಶೆಟ್ಟಿ,,ಸ್ಮಿತಾ ರಂಗನಾಥ್…ಶ್ರೀಲಕ್ಷ್ಮಿ,ನಾಗೇಂದ್ರ ಬಾಬು… ಅವರಂಥ ಮಹಾನ್ ಘಟಾನುಘಟಿಗಳ ಬಲಿಷ್ಠ ತಂಡವನ್ನು ಬೆನ್ನಿಗೆ ಕಟ್ಟಿಕೊಂಡು  ಚಾನೆಲ್ ಲಾಂಚ್ ಮಾಡಿದ ಅರ್ನಾಬ್ ಕರ್ನಾಟಕದ ಸುದ್ದಿ ಜಗತ್ತಿನ ನಾಡಿಮಿಡಿತವನ್ನು ಚೆನ್ನಾಗಿಯೆ ಅರಿತಿರುವ ನಿರಂಜನ್ ಅವರನ್ನು ಉಸ್ತುವಾರಿಯಾಗಿ ನಿಯೋಜಿಸಿ ತಮ್ಮ ನ್ಯೂಸ್ ಶೆಡ್ಯೂಲ್ ನಲ್ಲಿ ಬ್ಯುಸಿಯಾಗಿಬಿಟ್ಟರು ಅರ್ನಾಬ್. ನಿರಂಜನ್ ಒಂದಷ್ಟು ತಿಂಗಳು ಉತ್ಸುಕತೆಯಿಂದಲೇ ಚಾನೆಲ್ ಮುನ್ನಡೆಸಿ ಕರ್ನಾಟಕದ ಮನೆಮನೆಗಳಿಗೆ ತಲುಪಿಸುವ ಕೆಲಸವನ್ನೇನೋ ಮಾಡಿದ್ರು.ಆದರೆ ರಿಪಬ್ಲಿಕ್ ನ್ಯೂಸ್ ನ ಸ್ಟೈಲ್ ಶೀಟ್ ವೀಕ್ಷಕರಿಗೆ ಒಪ್ಪಿಗೆನೇ ಆಗ್ಲಿಲ್ಲ. ನ್ಯೂಸ್ ಓದುವುದೆಂದರೆ ಕೇವಲ ಏರುದ್ವನಿಯಲ್ಲಿ ಅಬ್ಬರಿಸುವುದು, ತಮ್ಮ ನರನಾಡಿಗಳಲ್ಲಿರುವ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಕೂಗುವುದು ಎನ್ನುವ ಆಂಕರ್ಸ್ ಗಳ ಕೂಗುಮಾರಿತನಕ್ಕೆ ಕರ್ನಾಟಕದ ಪ್ರಜ್ನಾವಂತ ನ್ಯೂಸ್ ಸೆನ್ಸ್ ಉಳ್ಳ ವೀಕ್ಷಕ ಸೊಪ್ಪಾಕಲೇ ಇಲ್ಲ..ಇದ್ಯಾವ್ಲಾ ಬಡ್ಡೈತವು..ಬರೀ ಅರುಚ್ತಾವೆ. ಸುದ್ದಿ ಏನು ಅನ್ನುವುದನ್ನೇ ಹೇಳ್ತಿಲ್ಲ..ಪಬ್ಲಿಕ್ ಟಿವಿ ರಂಗನಾಥುನ್ನ ನೋಡ್ ಕಲಿರಿ..ಸುವರ್ಣ ನ್ಯೂಸ್ ನ  ಅಜಿತ್ ಹನುಮಕ್ಕನವರ್ ನ್ಯೂಸ್ ಓದೋ..ಹೇಳುವ ಸ್ಟೈಲ್ ನೋಡಿನ ಕಲಿರಿ  ಎಂದು ಬೈಯ್ಯುತ್ತಲೇ  ಚಾನೆಲ್ ಚೇಂಜ್ ಮಾಡ್ಲಿಕ್ಕೆ ಶುರುಮಾಡಿಬಿಟ್ರು. ಕಷ್ಟಪಟ್ಟು ಕೆಲಸ ಮಾಡಿ  ನ್ಯೂಸ್ ಕಲೆಕ್ಟ್ ಮಾಡುವ  ರಿಪೋರ್ಟರ್ಸ್ ಗಳನ್ನೇ ಫೀಲ್ಡ್ ನಲ್ಲಿ ಸೈಡ್ ಲೈನ್ ಮಾಡಿ ಮಿಂಚ್ತಿದ್ದ ಆಂಕರ್ಸ್ ಗಳು ಕನ್ನಡ ನ್ಯೂಸ್ ಚಾನೆಲ್ ಗಳಲ್ಲಿರುವ ನ್ಯೂಸ್ ಸ್ಟೈಲ್ ಶೀಟ್ ನ್ನೇ ಬದಲಿಸಲು ಪ್ರಯತ್ನಿಸಿದ್ರು..ಆದ್ರೆ ದುರಂತ ಎಂದ್ರೆ ಅದು ಸಕ್ಸೆಸ್ ಆಗಲಿಲ್ಲ..ಬೇರೆ ರಾಜ್ಯಗಳಲ್ಲಿ ಅರ್ನಾಬ್ ಅವರ ಈ ಪ್ರಯತ್ನ ಫಲ ಕೊಟ್ಟಿರ್ಬೋದು..ಆದ್ರೆ ಕರ್ನಾಟಕದಲ್ಲಿ ಇದಕ್ಕೆ ವೀಕ್ಷಕ ಸೊಪ್ಪಾಕಲಿಲ್ಲ ಎನ್ನುವುದು ಕೂಡ ವಾಸ್ತವ..

ALSO READ :  ಸಂಚಾರಿ ನಿಯಮ ಉಲ್ಲಂಘಿಸಿದ ಚಾಲಕನಿಗೆ 3 ಮೀ. ಉದ್ದದ ದಂಡ ವಿಧಿಸಿದ ಪೊಲೀಸರು!

ಪ್ರತಿವಾರವೂ ಬಾರ್ಕ್ ಪ್ರಕಟಿಸುವ ಟಿಆರ್ ಪಿ(tele rating point) ಪಟ್ಟಿಯಲ್ಲಿ ರಿಪಬ್ಲಿಕ್ ನ ಸ್ತಿತಿ ಸ್ಥಾನಮಾನ ಏನಿರುತ್ತೆ ಎನ್ನುವುದರ ಮೇಲೆಯೇ ಅದರ  ಫರ್ಫ್ಮಾಮೆನ್ಸನ್ನು ಡಿಸೈಡ್ ಮಾಡಬಹುದಾಗಿದೆ. ಅರ್ನಾಬ್ ಅವರ ನಿರೀಕ್ಷೆ ಹಾಗೂ ಲೆಕ್ಕಾಚಾರ ಇದ್ದಿದ್ದು ಕನಿಷ್ಟ 2-3 ಸ್ಥಾನಗಳಲ್ಲಿ ತನ್ನ ಚಾನೆಲ್ ನ ಅಸ್ತಿತ್ವ ಇರಬೇಕೆನ್ನುವುದು.ಅದೇ ಭರವಸೆಯನ್ನು ಜಯಪ್ರಕಾಶ್ ಶೆಟ್ಟಿ ಅವರ ಟೀಮ್ ಕೂಡ ಕೊಟ್ಟಿತ್ತಂತೆ.ಆದರೆ ಅಂಥಾ ನಿರೀಕ್ಷೆ-ಆಶಾವಾದ ಇಟ್ಟುಕೊಳ್ಳುವಷ್ಟರ ಮಟ್ಟಿಗಿನ ಪ್ರದರ್ಶನವೂ ತಂಡದಿಂದ ಬರಲಿಲ್ಲ ಎನ್ನುವುದನ್ನು ಪ್ರತಿದಿನವೂ ಚಾನೆಲ್ ನ ಸ್ತಿತಿಗತಿ-ಪ್ರದರ್ಶನದ ಗುಣಮಟ್ಟ ಅದ್ಯಯನ ಮಾಡುವ ತಂಡವೇ ಅನೇಕ ಬಾರಿ ಹೇಳಿತ್ತಂತೆ.ಆಗಲೇ ಜಯಪ್ರಕಾಶ್ ಶೆಟ್ಟಿ ಅವರ ತಂಡ ಎಚ್ಚೆತ್ತುಕೊಂಡು ಇತರೆ ಚಾನೆಲ್ ಗಳಿಗೆ ಪೈಪೋಟಿ ಕೊಡುವ ಮಟ್ಟದಲ್ಲಿ ರಿಪಬ್ಲಿಕ್ ನ್ನು ಹೇಗೆ ಬೆಳೆಸಬೇಕು..ಇದಕ್ಕಾಗಿ ಕಂಟೆಂಟ್-ನ್ಯೂಸ್ ಪ್ರಸಂಟೇಷನ್ ಹೇಗಿರಬೇಕೆನ್ನುವುದನ್ನು ಕೂತು ಚರ್ಚಿಸಿ ನಿರ್ದರಿಸಬೇಕಿತ್ತೇನೋ.? ಹಾಗೆ ಮಾಡಿದಿದ್ದರೆ, ಬಹುಷಃ ಕರ್ನಾಟಕದಲ್ಲಿ ಇವತ್ತಿಗೆ, ರಿಪಬ್ಲಿಕ್ ಕನ್ನಡವನ್ನು ಉಳಿಸಿಕೊಳ್ಳಬೇಕೋ ಬಿಡಬೇಕೋ ಎಂದು ಆಲೋಚಿಸಬೇಕಾದ ಮಟ್ಟಕ್ಕೆ ಅರ್ನಾಬ್ ಅವರ ಮನಸ್ತಿತಿಯನ್ನು ತರುತ್ತಿರಲಿಲ್ಲ ಎನ್ನಿಸುತ್ತೆ.

ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿಯಲ್ಲಿರುವ ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ ಚಾನೆಲ್ ನ ಪರಿಸ್ತಿತಿ ಗೊಂದಲಮಯವಾಗಿದೆಯಂತೆ.ಅಂದರೆ ಚಾನೆಲ್ ನ್ನು ಮುನ್ನಡೆಸಿಕೊಂಡು ಹೋಗಬೇಕೋ ಬೇಡವೋ ಎನ್ನುವ ಅನಿಶ್ಚಿತತೆ ಮ್ಯಾನೇಜ್ಮೆಂಟ್ ನಲ್ಲಿದೆಯಂತೆ.(ಹಾಗೆಂದು ಚಾನೆಲ್ ನಡೆಸಿಕೊಂಡು ಹೋಗಲು ಬೇಕಿರುವಂತ  ಆರ್ಥಿಕ ಸಂಪನ್ಮೂಲ ಸಂಸ್ಥೆಯಲ್ಲಿ ಇಲ್ಲ ಎಂದೇನಲ್ಲ.ಅಂಥಾ ಯಾವುದೇ ಸಮಸ್ಯೆ ಮಾಲೀಕ ಅರ್ನಾಬ್ ಅವರಿಗಿಲ್ಲ.ಅವರಾಗಲಿ ಅವರ ಸಂಸ್ಥೆಯಾಗಲಿ ಆರ್ಥಿಕವಾಗಿ ಸಾಕಷ್ಟು ಸದೃಢರಾಗಿದ್ದಾರೆ.) ಚಾನೆಲ್ ನಲ್ಲಿರುವವರ ಫರ್ಫಾಮೆನ್ಸ್ ಕಳಪೆಯಾಗಿದೆ ಎನ್ನುವ ಕಾರಣಕ್ಕೆ ಅರ್ನಾಬ್ ಅವರಿಗೆ ಬೇಸರವಿದೆಯೇ ಹೊರತು, ಅದಕ್ಕಾಗಿ ಚಾನೆಲ್ ನ್ನೇ  ಮುಚ್ಚುವ ಆಲೋಚನೆ ಬಿಲ್ ಕುಲ್ ಇಲ್ವಂತೆ.ಆದರೆ ಈ ಟೀಮ್ ನ್ನು ಇಟ್ಕೊಂಡು ಚಾನೆಲ್ ಮುನ್ನಡೆಸಲಿಕ್ಕಂತೂ ಸಾಧ್ಯವೇ ಇಲ್ಲ ಎನ್ನುವ ಮಾಹಿತಿಯನ್ನು  ಇಲ್ಲಿನ ಚಾನೆಲ್ ನ ಸ್ಥಿತಿಗತಿ ಅಧ್ಯಯನ ಮಾಡುತ್ತಿರುವ ಅರ್ನಾಬ್ ಅವರಿಗೆ ತಲುಪಿಸಿರುವುದರಿಂದ  ಟೀಮ್ ನಲ್ಲಿ ಸಾಕಷ್ಟು ಬದಲಾವಣೆಗಳಾಗಬಹುದೆನ್ನಲಾಗುತ್ತಿದೆ.

ಸಂಸ್ಥೆ ನಿರೀಕ್ಷಿಸುವ ಮಟ್ಟದಲ್ಲಿ ಕೆಲಸ ಮಾಡದಿರುವವರನ್ನು ಈಗಾಗಲೇ ಟಾರ್ಗೆಟ್ ಮಾಡಲಾಗಿದೆ ಯಂತೆ.ಅವರ ಫರ್ಫಾಮೆನ್ಸ್ ಆಧರಿಸಿ ಅನೇಕರಿಗೆ ನಿಮ್ಮ ಕಾರ್ಯವೈಖರಿಯ ಮಟ್ಟವನ್ನು ಸುಧಾರಿಸಿಕೊಂಡ್ರೆ ಒಳ್ಳೇದು..ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಮುನ್ನೆಚ್ಚರಿಕೆ ಕೊಡಲಾಗ್ತಿದೆಯಂತೆ. ಈ ಹಿನ್ನಲೆಯಲ್ಲಿ ಈಗಾಗಲೇ ಅನೇಕ ಘಟಾನುಘಟಿಗಳು ಕೆಲಸ ಬಿಟ್ಟಿದ್ದಾರೆ. ಇದರ ಜತೆಗೆ ದಿನಕ್ಕೆ 10-12 ಗಂಟೆಯಷ್ಟು ಕೆಲಸ ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕದಿರಲು ನಿರ್ದರಿಸಿರುವ ಇನ್ನೊಂದಷ್ಟು ಮಾದ್ಯಮಮಿತ್ರರು ಟಾರ್ಗೆಟ್-ಟೆನ್ಷನ್ ಕಾರಣವೊಡ್ಡಿ ಕೆಲಸಕ್ಕೆ ಗುಡ್ ಬೈ ಹೇಳೊಕ್ಕೆ ಮುಂದಾಗಿದ್ದಾರೆ.ಹೊಸದಾಗಿ ಕೆಲಸಕ್ಕೆ ಸೇರುವವರ ಸಂಬಳಕ್ಕೂ ನಮಗೂ ಅಜಗಜಾಂತರದ ಪ್ರಮಾಣದಲ್ಲಿ ಸಂಬಳ ಕೊಡಲಾಗುತ್ತಿದೆ ಎನ್ನುವ ಕಾರಣಕ್ಕೆ  ಹಳೆಯ ದಿಗ್ವಿಜಯ್ ಟೀಮ್ ನಲ್ಲಿದ್ದವರು ಬೇಸರದಿಂದ ಹೊರ ನಡೆಯೊಕ್ಕೆ ನಿರ್ದರಿಸಿದ್ದಾರಂತೆ. ಲೋ ಫರ್ಫಾಮೆನ್ಸ್ ಕಾರಣಕ್ಕೆ ಎಷ್ಟು  ಜನರನ್ನು ಕೆಲಸದಿಂದ ತೆಗೆಯಲಾಗಿದೆ.ಎಷ್ಟು ಸಿಬ್ಬಂದಿ ಸ್ವ ಇಚ್ಚೆಯಿಂದ ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆನ್ನುವ ಒಂದಷ್ಟು ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಬಳಿಯಿದೆ.

ಸಧ್ಯಕ್ಕಂತೂ ರಿಪಬ್ಲಿಕ್ ಕನ್ನಡ ಚಾನೆಲ್ ನ ಸ್ಥಿತಿ ಏನಾಗಬಹುದು..ಬಿಡಬಹುದು ಎನ್ನುವ ಗೊಂದಲದ ವಾತಾವರಣವಿದೆ. ಚಾನೆಲ್ ಮುಚ್ಚಲೇಬೇಕೆನ್ನುವ ಯಾವುದೇ ಇರಾದೆ ಅರ್ನಾಬ್ ಅವರಿಗೆ ಇಲ್ಲವಾದ್ರೂ ತನ್ನ ಲೆಕ್ಕಾಚಾರಕ್ಕೆ ಪ್ರತಿಶತಃವಾದ್ರೂ ಸ್ಪಂದಿಸಬಲ್ಲಂಥ ಕೆಲಸಗಾರರ ತಂಡದ ನಿರೀಕ್ಷೆಯಲ್ಲಿರುವು ದಂತೂ ಸತ್ಯ.ಚಾನೆಲ್ ನ್ನು ಮುಂದುವರೆಸಿಕೊಂಡು ಹೋಗುವ ನಿರ್ದಾರ ಮಾಡಿದ್ರೂ ಈಗಿರುವ ತಂಡ ದ ಜತೆ ಮಾತ್ರ ಅಸಾಧ್ಯ ಎನ್ನುವಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಹಳೆಯ ತಂಡದಲ್ಲಿ ಯಾರನ್ನು ತೆಗೆಯಬೇಕು.ಯಾರನ್ನು ಉಳಿಸಿಕೊಳ್ಳಬೇಕೆನ್ನುವ ಚಿಂತನ-ಮಂಥನ ನಡೆಯುತ್ತಿದೆಯಂತೆ. ಅತೀ ಹೆಚ್ಚು ಸಂಬಳ ಪಡೆಯುತ್ತಿರುವ ಸಿಬ್ಬಂದಿನೇ ಮೊದಲ ಟಾರ್ಗೆಟ್ ಆದ್ರೂ ಆಶ್ಚರ್ಯಪಡಬೇಕಿಲ್ಲ. ಆದರೆ ದೊಡ್ಡವರು ಮಾಡಿದ ತಪ್ಪುಗಳ ಕಾರಣಕ್ಕೆ ಚಾನೆಲ್ ನಲ್ಲಿ ನಿಷ್ಟೆ-ಪ್ರಾಮಾಣಿಕತೆ-ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಮಾಯಕ ಮಾದ್ಯಮಮಿತ್ರರು ಬಲಿಪಶುಗಳಾಗಿ ಕೆಲಸ ಕಳೆದುಕೊಂಡು ಬೀದಿಗೆ ಬರಬಾರದು ಅಷ್ಟೆ..

ಇದೆಲ್ಲವನ್ನು ಗಮನಿಸಿದಾಗ ರಿಪಬ್ಲಿಕ್ ಕನ್ನಡದ  ವಿಚಾರದಲ್ಲಿ ಆಗಬಹುದಾದ ಎರಡು ವಿಕಲ್ಪಗಳು  ಇಷ್ಟೇ..1-ಚಾನೆಲ್ ಮುಂದುವರೆದ್ರೂ ಈಗಿರುವ ಸಾಕಷ್ಟು ಮುಖಗಳು ಇರೊಲ್ವಂತೆ. 2-ಹೊಸ ರೂಪ-ವಿನ್ಯಾಸ-ಶೈಲಿಯಲ್ಲಿ ಚಾನೆಲ್ ಮೂಡಿಬರಲಿದೆಯಂತೆ. ಹಾಗಾಗಿ ಕರ್ನಾಟಕ ವಾಂಟ್ಸ್ ಟು ನೌ..ಇದೆಲ್ಲಾ ಸಾಧ್ಯನಾ..? ಸಾಧ್ಯವಾದ್ರೆ ಯಾವಾಗ..?!


Political News

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

Scroll to Top