ಕಾಶ್ಮೀರ:ಪೆಹಲ್ಗಾಮ್(pehalgam) ನಲ್ಲಿ ಪಾಕಿ ಉಗ್ರರು(pakistan terrorist) ನಡೆಸಿದ ನರಮೇಧಕ್ಕೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ (operation sindhoora) ಕಾರ್ಯಾಚರಣೆ ಪಾಕಿಸ್ತಾನದ ಅಸಲಿಯತ್ತನ್ನು ಬಟಾಬಯಲು ಮಾಡಿದೆ.ಯುದ್ಧ ತಯಾರಿಯ ಝಲಕ್ ಕೊಟ್ಟು, ಅದೇ ಮಂಪರಿನಲ್ಲಿ ನಿದ್ರೆಗೆ ಜಾರಿದ್ದ ಪಾಕಿಸ್ತಾನವನ್ನು ಅವರ ನೆಲಕ್ಕೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿದ ಸೈನಿಕರ ವಿರಾವೇಶ ಅವಿಸ್ಮರಣೀಯ ದಾಖಲಾರ್ಹ ಸನ್ನಿವೇಶವಾಗಿ ಇತಿಹಾಸದ ಪುಟ ಸೇರಿದೆ.ಕಾರ್ಯಾಚರಣೆ ಮುಗಿಸುವ ಸೂಚನೆ ನೀಡದಿರುವ ಭಾರತದ ವೀರಾವೇಶ ಗಮನಿಸಿದ್ರೆ ಪಾಕಿಸ್ತಾನವನ್ನು ನಾಮಾವಶೇಷಗೊಳಿಸುವ ಸಾಧ್ಯತೆಗಳು ದಟ್ಟವಾಗುತ್ತಿವೆ.ಕಾರ್ಯಾಚರಣೆಯಲ್ಲಿ ಸಂಭವಿಸಿರಬಹುದಾದ ನಿಷ್ಪಾಪಿ-ಅಮಾಯಕ ನಾಗರಿಕರ ಸಾವುನೋವುಗಳಿಗೆ ವಿಷಾದ-ಸಂತಾಪ ಸೂಚಿಸಿರುವ ಭಾರತ, ಇನ್ಮುಂದೆ ಕನಸಿನಲ್ಲೂ ಭಾರತದ ತಂಟೆಗೆ ಬರಲು ಭಯಪಡುವಂತ ಅನುಭವದ ಪಾಠವನ್ನು ಪಾಕಿಸ್ತಾನಕ್ಕೆ ಕಲಿಸಲು ಮುಂದಾಗಿದೆ.ಇದು ಇವತ್ತಲ್ಲ ನಾಳೆ ಆಗಲೇಬೇಕಿತ್ತು.ಅದನ್ನು ಕಾರ್ಯಗತಗೊಳಿಸಿದ ಬೆಳವಣಿಗೆಯನ್ನು ಪ್ರತಿಯೋರ್ವ ಭಾರತೀಯ ಹೆಮ್ಮೆಯಿಂದ ಸ್ವಾಗತಿಸಬೇಕು.


ಪೆಹಲ್ಗಾಮ್ ದುರಂತ ಹಾಗೂ ಆನಂತರ ಭಾರತದ ಕ್ಷಿಪ್ರ ಕಾರ್ಯಾಚರಣೆ-ಪ್ರತಿಯಾಗಿ ಪಾಕಿಸ್ತಾನದ ಅಪ್ರಚೋದಿತ ದಾಳಿ ಸನ್ನಿವೇಶಗಳನ್ನು ಜಗತ್ತಿಗೆ ತೋರಿಸು ತ್ತಿರುವ ರಾಷ್ಟ್ರೀಯ ಹಾಗೂ ನಮ್ಮ ಕನ್ನಡ ಮಾದ್ಯಮಮಿತ್ರರ ಬಗ್ಗೆ ಸುದ್ದಿ ಮಾಡುತ್ತಿರುವಾಗಲೇ ತಟ್ಟನೇ ನೆನಪಾಗಿದ್ದು ಪುಲ್ವಾಮ ದುರಂತ ಹಾಗು ಮಾದ್ಯಮ ಮಿತ್ರನೊಬ್ಬನ ವರದಿಗಾರಿಕೆ.ಇದಕ್ಕೆ ಕಾರಣವೂ ಇದೆ.ಮುಂದೆ ಸಂಭವಿಸಲಿರುವ ಅಪಾಯದ ಒಂದು ಸಣ್ಣ ಮುನ್ಸೂಚನೆನೂ ಇಲ್ಲದೆ ವಾಹನದಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್(crpf) ನ 41 ಯೋಧರನ್ನು ಇದೇ ಪಾಕಿಸ್ತಾನದ ಉಗ್ರರು ಅಮಾನುಷ-ಬರ್ಭರವಾಗಿ ಸ್ಪೋಟಿಸಿದ್ದರು. ದುರಂತ ಸಂಭವಿಸಿದ ಆ ಸ್ಥಳಕ್ಕೆ ತೆರಳಿ ಅಪಾಯ ಗ್ರಸ್ಥ ಸ್ಥಳದಲ್ಲೇ 5 ದಿನಗಳ ಕಾಲ ತಂಗಿದ್ದು ಆತಂಕ- ದುಃಖ-ನೋವು-ಆಕ್ರೋಶ ಬೆರೆತ ಭಾವನೆಗಳಲ್ಲೇ ಅದರ ಪ್ರತ್ಯಕ್ಷ ವರದಿ ಮಾಡಿದ್ದ ನನ್ನ ಆ ಮಾದ್ಯಮ ಸ್ನೇಹಿತ.

ಯೆಸ್…ಹಿ ಹಿಸ್ ನನ್ ಅದರ್ ದೆನ್ ಹರೀಶ್ ಗಂಜಲಗೂಡು( harish ganjalagodu)..ಟಿವಿ9( tv 9 kannada news channel)ನ ದೆಹಲಿ ವರದಿಗಾರ.ಕಳೆದ 10 ವರ್ಷಕ್ಕಿಂತ ಹೆಚ್ಚು ಸಮಯ ದಿಂದಲೂ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡು ತ್ತಿದ್ದಾನೆ.ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಆತ ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ತನ್ನ ವರದಿಗಾರಿಕೆ ಅನುಭವ ಹಂಚಿಕೊಂಡಿದ್ದರ ಬಗ್ಗೆ ಹೇಳುವ ಮೊದಲು ಆತನ ಬಗ್ಗೆ ಒಂದು ಸಣ್ಣ ಕಿರು ಪರಿಚಯ ಮಾಡಿಕೊಡಲು ಯತ್ನಿಸುತ್ತೇನೆ.

ಪ್ರೀತಿಯ ಹರೀಶ್, ಮೂಲತಃ ನಮ್ಮ ಚಿಕ್ಕಮಗಳೂರಿನ ಹುಡುಗ.ಆತನ ಬೆಳವಣಿಗೆ ನಿಜಕ್ಕೂ ಹೆಮ್ಮೆ ಮೂಡಿಸುತ್ತೆ. ದೂರದ ಚಿಕ್ಕಮಗಳೂರಿನ ಒಂದು ಪುಟ್ಟ ಗ್ರಾಮದಿಂದ ಬೆಂಗಳೂರಿಗೆ ಬಂದು ಉದಯ ಟಿವಿಯಲ್ಲಿ ಕಾರ್ಯಾರಂಭ ಮಾಡಿ, ಕಸ್ತೂರಿಯಲ್ಲಿ ಕೆಲಸ ಮಾಡಿ,ಪ್ರಜಾ ಟಿವಿಗೆ ಬಂದ.ಚಾನೆಲ್ ನ ಮ್ಯಾನೇಜ್ಮೆಂಟ್ ದೆಹಲಿ ಪ್ರತಿನಿಧಿಯ ಅನ್ವೇಷಣೆಯಲ್ಲಿದ್ದಾಗ ನಾನ್ ಹೋಗ್ತೇನೆ ಸರ್ ಎಂದು ಧೈರ್ಯವಾಗಿ ಹೇಳಿದ ಕೆಲವೇ ದಿನಗಳಲ್ಲಿ ದೆಹಲಿಗೆ ಹಾರಿದ.ದೆಹಲಿ ಪತ್ರಕರ್ತರ ದರ್ಬಾರ್ ನಡುವೆಯೇ ತನ್ನ ಕೆಪಾಸಿಟಿ ಪ್ರೂವ್ ಮಾಡಿದ.ಅದರ ನಂತರ ಅಲ್ಲೇ ಒಂದು ಚಾನೆಲ್ ಬದಲಿಸಿದ.ಆದ್ರೆ ವೃತ್ತಿನಿಷ್ಟೆ ಬಿಡಲಿಲ್ಲ.ಅದೇ ಆತನನ್ನು ಟಿವಿ-9 ನಂಥ ನಂಬರ್ ಒನ್ ಚಾನೆಲ್ ವರದಿಗಾರನಾಗೋ ಮಟ್ಟಕ್ಕೆ ಬೆಳೆಸಿತು.ಸಿಕ್ಕ ಅವಕಾಶವನ್ನು ಹರೀಶ್ ಯಾವ್ ರೀತಿ ಬಳಸಿಕೊಂಡನೆಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂಥ ಹತ್ತಾರು ವರದಿ ಮಾಡಿ ಹೆಸರಾದ. ಎಷ್ಟೇ ಬೆಳೆದರೂ ಅಹಮಿಕೆಯನ್ನು ತನ್ನ ಬಳಿ ಸುಳಿಯಲಿಕ್ಕೂ ಬಿಡದಂತೆ ವ್ಯಕ್ತಿತ್ವ ಕಾಪಾಡಿಕೊಂಡಿದ್ದಾನೆ.ಅಹಮಿಕೆ-ದುರಂಹಕಾರ ಯಾವತ್ತೂ ನಿನ್ನ ಬಳಿ ಸುಳಿಯದಿರಲಿ..ಬೆಳೆದು ಬಂದ ಹಾದಿ..ನಿನ್ನನ್ನು ಬೆಳೆಸಿದ ಮೂಲ ಬೇರುಗಳನ್ನು ಯಾವತ್ತು ಮರೆಯಬೇಡ ಎನ್ನುವುದು ನಮ್ಮ ಕಳಕಳಿ.

ಮತ್ತೆ ಪುಲ್ವಾಮ ದಾಳಿ ( pulwama terror attack) ಹಾಗೂ ಮಾದ್ಯಮ ಮಿತ್ರ ಹರೀಶನ ದಿಟ್ಟ ವರದಿಗಾರಿಕೆ ವಿಚಾರಕ್ಕೆ ಬರುತ್ತೇನೆ. ಸಧ್ಯ ನಡೆಯುತ್ತಿರುವ ವಿದ್ಯಾಮಾನಗಳ ಸನ್ನಿವೇಶದಲ್ಲಿ ನೆನಪಾದ ಹರೀಶ್ ನನ್ನು ನೆನಪಿಸಿಕೊಂಡು ಕರೆ ಮಾಡಿದಾಗ ಮೊದಲು ಕೇಳಿದ್ದು ಕಾಶ್ಮೀರಕ್ಕೆ ಹೋಗಿಲಿಲ್ಲವಾ ಎಂದು..ನಮ್ಮ ಟಿವಿ-9 ಭಾರತ್ ವರ್ಷ ವರದಿಗಾರರೇ ಅಲ್ಲಿದ್ದಾರೆ.ಹಾಗಾಗಿ ಕನ್ನಡ ಹಾಗು ತೆಲುಗು ಚಾನೆಲ್ ಸಿಬ್ಬಂದಿ ಹೋಗಲಿಲ್ಲ ಗುರುಗಳೇ ಎಂದ.ಯುದ್ದ ಭೂಮಿಯಲ್ಲಿ ವರದಿಗಾರನ ಅನುಭವ ಹೇಗಿರುತ್ತೆ ಎಂದು ಕೇಳೊದಷ್ಟೇ ನಮ್ಮ ಉದ್ದೇಶವಾಗಿತ್ತು.ಆಗ ನೆನಪಾಗಿದ್ದು 2019 ರಲ್ಲಿ ನಡೆದಿದ್ದ ಪುಲ್ವಾಮ ಅಟ್ಯಾಕ್ ನಂತರದಲ್ಲಿ ಆತ ಮಾಡಿದ್ದ ಡೇರ್ ರಿಪೋರ್ಟಿಂಗ್.ನಿಮಗೆ ನೆನಪಿರಲಿ,ಪುಲ್ವಾಮ ಅಟ್ಯಾಕ್ ನಡೆದಾಗ ಘಟನಾ ಸ್ಥಳಕ್ಕೆ ತೆರಳಿ ಸುದ್ದಿ ಮಾಡಿದ, ಪ್ರಾಣದ ಹಂಗು ತೊರೆದು,ಕ್ಷಣ ಕ್ಷಣದ ಅಪ್ ಡೇಟ್ ನೀಡಿದ್ದ ಕನ್ನಡದ ಏಕೈಕ ಚಾನೆಲ್ ಎಂದ್ರೆ ಟಿವಿ-9 ಹಾಗೂ ಅದರ ವರದಿಗಾರ ಹರೀಶ್ ಗಂಜಲಗೂಡು ಮಾತ್ರ.

ಗುರುಗಳೇ, ಪುಲ್ವಾಮ ಅಟ್ಯಾಕ್ ಆದಾಗ ಸ್ಪಾಟ್ ಗೆ ತೆರಳಿ ನ್ಯೂಸ್ ಕವರೇಜ್ ಮಾಡಿದ ಏಕೈಕ ಚಾನೆಲ್ ಅಂದ್ರೆ ಅದು ಟಿವಿ-9 ಹಾಗೂ ಅದರ ರಿಪೋರ್ಟರ್ ಈ ಹರೀಶ್ ಗಂಜಲಗೂಡು ಎಂದು ಹೇಳಿಕೊಳ್ಳೊಕ್ಕೆ ಹೆಮ್ಮೆ ಆಗುತ್ತದೆ ಎನ್ನುತ್ತಲೇ ತನ್ನ ಆ ದಿನಗಳ ಅನುಭವವನ್ನು ವಿಸ್ತರಿಸುತ್ತಾ ಹೋದ.ಆತನ ಮಾತುಗಳ ಧಾಟಿಯಲ್ಲೇ ಹೇಳುವುದಾದ್ರೆ ಅವತ್ತು ನನ್ನ ಸ್ನೇಹಿತರೊಬ್ಬರ ಹುಟ್ಟುಹಬ್ಬ ಇತ್ತು ಸರ್..ಬೆಳಗ್ಗೆಯೆಲ್ಲಾ ಕೆಲಸ ಮಾಡಿ ದಣಿದಿದದ್ ನಾವು ರಿಲ್ಯಾಕ್ಸ್ ಮೂಡ್ ನಲ್ಲಿದ್ದೆವು.ಕೇಕ್ ಕಟ್ ಮಾಡಿ ಇನ್ನೆನು ತಿನ್ನಿಸಬೇಕೆಂದುಕೊಂಡಿದ್ದ ಸ್ನೇಹಿತ ಕೇಕ್ ನ್ನು ನನ್ನ ಬಾಯಲ್ಲಿ ಇಡುವಾಗಲೇ ಬೆಂಗಳೂರು ಆಫೀಸ್ ನ ಇನ್ ಪುಟ್ ನಿಂದ ಜಗದೀಶ್ ಬೆಳ್ಳಿಯಪ್ಪ ಕರೆ ಮಾಡಿ ನೀವು ಈ ಕೂಡಲೇ ಪುಲ್ವಾಮಗೆ ಹೋಗಬೇಕು.ತಕ್ಷಣಕ್ಕೆ ಹೊರಡಿ ಎಂದುಬಿಟ್ರು. ಹಿಂದಿ ಸಿನೆಮಾಗಳಲ್ಲಿ ಸೇನೆಯಲ್ಲಿರುವ ಹೀರೋ ಒಬ್ಬ ಮನೆಯ ಸಂಭ್ರಮದಲ್ಲಿರುವಾಗ, ಹಿರಿಯ ಅಧಿಕಾರಿಗಳು ಕರೆ ಮಾಡಿ ಯುದ್ದಕ್ಕೆ ಬನ್ನಿ ಎಂದು ಕರೆದಾಗ ಮನೆ-ಅಪ್ಪ ಅಮ್ಮ-ಹೆಂಡತಿ-ಮಕ್ಕಳನ್ನೆಲ್ಲಾ ಬಿಟ್ಟು ಗಂಟುಮೂಟೆ ಕಟ್ಟುವ ಸೀನ್ ಗಳು ಕಣ್ಮುಂದೆ ಪಾಸ್ ಆದ್ವು.ನನಗೂ ಅದೇ ಸ್ಥಿತಿ ಬರುತ್ತೆ ಎಂದೆನಿಸಿರಲಿಲ್ಲ.ಒಂದ್ ಕ್ಷಣ ಏನ್ ಹೇಳಬೇಕೋ ಗೊತ್ತಾಗದೆ ಸರ್ ಎಂದೆ ಅಷ್ಟೇ..ಗೆಟ್ ರೆಡಿ ಎಂದ್ಹೇಳಿ ಫೋನ್ ಕಟ್ ಮಾಡಿದ್ರಂತೆ ಬೆಳ್ಳಿಯಪ್ಪ.
ಪುಲ್ವಾಮದಲ್ಲಿ ನಡೆದ ಭಯಾನಕ ಟೆರರ್ ಅಟ್ಯಾಕ್ ಬಗ್ಗೆ ದೆಹಲಿಯಲ್ಲಿ ಕುಳಿತು ರಿಪೋರ್ಟ್ ಮಾಡಿದ್ದ ನನಗೆ ಘಟನಾಸ್ಥಳಕ್ಕೆ ತೆರಳಿ ಎಂದ್ರೆ ಹೇಗಾಗಬೇಡ..ಮರು ಮಾತನಾಡದೆ ಓ.ಕೆ ಎಂದಿದ್ದ ನನಗೆ ಆಮೇಲೆ ದಿಗಿಲು ಶುರುವಾಯ್ತು.ಹೇಗಪ್ಪಾ ಎಂದು ಆಲೋಚಿಸುವಾಗಲೇ ಇನ್ನೊಂದು ತಿಂಗಳಷ್ಟೇ ಬಾಕಿ ಇರುವ ಮದುವೆ-ಮದುವೆಯಾಗುವ ಹುಡುಗಿ, ನನ್ನನ್ನೇ ನಂಬಿರುವ ಅಪ್ಪ-ಅಮ್ಮ..ಸ್ನೇಹಿತರು-ಹಿತೈಷಿಗಳೆಲ್ಲಾ ಕಣ್ಮುಂದೆ ಸುಳಿದು ಹೋದ್ರು.ಹೋದರೆ ಅಂತದ್ದೊಂದು ಲೈಫ್ ಟೈಮ್ ಇವೆಂಟ್ ನ್ನು ಕವರ್ ಮಾಡಿದ ಕನ್ನಡದ ಏಕೈಕ ರಿಪೋರ್ಟರ್ ಎನ್ನುವ ಹೆಗ್ಗಳಿಕೆ ಬರುತ್ತೆ.ಅಪಾಯಗ್ರಸ್ಥ ಸ್ಥಳದಲ್ಲಿ ನಿಂತು ರಿಪೋರ್ಟ್ ಮಾಡಿದ ರೋಚಕ ಅನುಭವ ಸಿಗುತ್ತೆ.ಎಲ್ಲಕ್ಕಿಂತ ಹೆಚ್ಚಾಗಿ ನನ್ನಲ್ಲಿರುವ ಕೆಪಾಸಿಟಿ-ಸಾಮರ್ಥ್ಯವನ್ನು ಪ್ರೂವ್ ಮಾಡಿದಂತಾಗುತ್ತದೆ.ಹೋಗದಿದ್ರೆ ಮ್ಯಾನೇಜ್ಮೆಂಟ್ ದೃಷ್ಟಿಯಲ್ಲಿ ನಿಷ್ಟುರ ಕಟ್ಟಿಕೊಳ್ಳಬೇಕು. ಇವನ ಕೆಪಾಸಿಟಿ ಇಷ್ಟೇ ಬಿಡ್ರಿ..ಬೇರೆಯವರನ್ನು ಕಳುಹಿಸಿ ಆತನನ್ನು ಮನೆಗೆ ಕಳುಹಿಸಿ ಎಂದೇಳಿದ್ರೆ ಕೆಲಸ ಕಳೆದುಕೊಳ್ಳಬೇಕು.ವೃತ್ತಿ ಜೀವನದಲ್ಲಿ ಸಿಗುವಂಥ ಅಮೂಲ್ಯ-ಅಪರೂಪದ-ಐತಿಹಾಸಿಕ ಅವಕಾಶ ಕಳೆದುಕೊಂಡಂತಾಗುತ್ತದೆ ಎಂಬ ಆಲೋಚನೆಗಳು ತಲೆಗೆ ಬಂದ್ವು.


ಆತ್ಮೀಯರು-ಪ್ರೀತಿಪಾತ್ರರ ಬಳಿ ಮನಸಿನ ತುಮುಲ ಹೇಳಿಕೊಂಡೆ.ಅವರೇ ಗೋ ಹೆಡ್…ಎಂದು ಧೈರ್ಯ ಹೇಳಿದ್ರು.ನನಗೆ ಬೇಕಿದ್ದು ಕೂಡ ಅದೇ. ಡೆಲ್ಲಿಯಲ್ಲಿ ಇದ್ದು ಮಾಡೋದೇನಿದೆ..ಲೈಫ್ನಲ್ಲಿ ಒಂದು ರಿಸ್ಕಿ ಚಾನ್ಸ್ ತೆಗೆದುಕೊಂಡೇ ಬಿಡೋಣ ಎಂದ್ಹೇಳಿ ಡೆಲ್ಲಿ ಟು ಕಾಶ್ಮೀರದ ಫ್ಲೈಟ್ ಹತ್ತಿದೆ.ನನ್ನ ಜತೆ ಟಿವಿ-9 ತೆಲುಗು ಕ್ಯಾಮೆರಾಮನ್ ಪ್ರಭು, ರಮೇಶ್,ಮಹಾತ್ಮ ಕೂಡ ವಿಮಾನ ಹತ್ತಿದ್ರು. ಫ್ಲೈಟ್ ನಲ್ಲಿ ಕುಳಿತ ನನ್ನ ಎದೆ ಬಡಿತವನ್ನು ಪುಲ್ವಾಮ ಏರುಪೇರುಗೊಳಿಸಿತ್ತು.ಆದರೂ ಮಾಡಿದ್ದ ಧೈರ್ಯ ನನ್ನನ್ನು ಕೆಲವೇ ಘಂಟೆಗಳಲ್ಲಿ ಪುಲ್ವಾಮದಲ್ಲಿ ತಂದು ನಿಲ್ಲಿಸಿತ್ತು.ಪುಲ್ವಾಮದ ಘಟನಾಸ್ಥಳದಲ್ಲಿ ಕೊಡಬೇಕಿದ್ದ ಮೊದಲ ಲೈವ್ ನನ್ನನ್ನು ಅಕ್ಷರಶಃ ಡಿಸ್ವರ್ಬ್ ಮಾಡಿಬಿಡ್ತು. ಘಟನಾಸ್ಥಳದ ಹೃದಯವಿದ್ರಾವಕ ಸನ್ನಿವೇಶವೇ ಅಷ್ಟೊಂದು ಭಯಾನಕವಾಗಿತ್ತು ಸರ್ ಎಂದರು ಹರೀಶ್.
ಫೆಬ್ರವರಿ 14 ರಂದು ಜಮ್ಮು-ಶ್ರೀನಗರ( jammu-srinagara)ದ ರಾಷ್ಟ್ರೀಯ ಹೆದ್ದಾರಿ(national highwayಯ ಪುಲ್ವಾಮದಲ್ಲಿ ನಡೆದ ದಾಳಿಯ ಭೀಕರತೆ ಒಂದ್ ಕ್ಷಣ ನನ್ನನ್ನು ಮೂರ್ಚೆ ಹೋಗುವಂತೆ ಮಾಡಿಬಿಡ್ತು.ಘಟನೆ ನಡೆದ ಪ್ರದೇಶದ ಅರ್ದ ಕಿಲೋಮೀಟರ್ ವರೆಗೂ ದುರಂತದ ತೀವ್ರತೆ ಸಾರುವ ಪಳೆಯುಳಿಕೆಗಳಂತೆ ಯೋಧರ ದೇಹದ ಭಾಗಗಳು, ಅವರು ಧರಿಸಿದ್ದ ಯೂನಿಫಾರ್ಮ್ ತುಂಡುಗಳು ಕಾಣಿಸುತ್ತಿದ್ದವು.ಛಿದ್ರಛಿದ್ರಗೊಂಡ ವಾಹನಗಳು, ಸ್ಪೋಟಕ ಬಳಸಿದ್ದ ಸ್ಪೋಟಕಗಳ ತುಂಡುಗಳೆಲ್ಲಾ ಕಾಣಿಸುತ್ತಿದ್ದವು.ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿದ್ದು ಸ್ಪೋಟದಿಂದ ಗುರುತು ಸಿಗದ ರೇಂಜ್ನಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ನಮ್ಮ ವೀರಯೋಧರ ಶವಗಳ ಭಾಗಗಳು.ಆರದ ಬಿಸಿ ರಕ್ತದ ಕಮಟು ವಾಸನೆ..ಅವರ ಯೂನಿಫಾರ್ಮ್ ನ ಬ್ಯಾಡ್ಜ್-ಬೆಲ್ಟ್-ಪ್ಯಾಂಟ್ ಶರ್ಟ್ ಭಾಗಗಳು ಎಲ್ಲೆಲ್ಲೂ ಚೆದುರಿ ಹೋ್ಗಿದ್ವು.ಅದರ ಆಧಾರದ ಮೇಲೆ ಯೋಧರ ಕಳೇಬರವನ್ನು ಪತ್ತೆ ಮಾಡಿ ಒಟ್ಟುಗೂಡಿಸುವ ಕೆಲಸವನ್ನು ನಮ್ಮ ಸೇನೆ ಮಾಡುತ್ತಿತ್ತು. ಪ್ರೀತಿಪಾತ್ರರನ್ನು ಕಳೆದುಕೊಂಡ ಸಂಬಂಧಿಗಳ ಆಕ್ರಂಧನ ಮುಗಿಲು ಮುಟ್ಟಿತ್ತು.ಇದನ್ನೆಲ್ಲಾ ನೋಡುತ್ತಿದ್ದಾಗ ಉಗ್ರರ ಅಟ್ಟಹಾಸದ ಬಗ್ಗೆ ಹೃದಯ ಕುದಿಯುತ್ತಿತ್ತು

ಆ ಸಮಯದಲ್ಲಿ ನನಗೆ ಅನ್ನಿಸಿದ್ದು ಉಗ್ರರು ಇಷ್ಟೊಂದು ಅಮಾನುಷರಾಗಿರುತ್ತಾರಾ.. ಕ್ರೂರಿಯಾಗಿರುತ್ತಾರಾ..? ಸೈನಿಕರನ್ನು ಇಷ್ಟೊಂದು ಬರ್ಭರವಾಗಿ ಕೊಲ್ಲುವಂಥ ಪೈಶಾಚಿಕತೆ ಹುಟ್ಟೋದು ಎಲ್ಲಿಂದ…ಎಷ್ಟೇ ನಡ ಬಗ್ಗಿಸಿದ್ರೂ ಬುದ್ದಿ ಕಲಿಯದ ಪಾಕಿಸ್ತಾನ ಏಕೆ ಆಟಾಟೋಪ ಪ್ರದರ್ಶಿಸುತ್ತಿದೆ.ಇವರನ್ನೆಲ್ಲಾ ಕೊಂದು ಸಾಧಿಸಿದ್ದಾದ್ರೂ ಏನು..? ಪುಲ್ವಾಮ ದುರಂತದ ನೆಲದಲ್ಲಿ ಇಂತದೊಂದಿಷ್ಟು ಪ್ರಶ್ನೆಗಳು ಕಾಡಲಾರಂಭಿಸಿದ್ವು.ಉಗ್ರರ ಬಗ್ಗೆ ಮಡುಗಟ್ಟಿದ್ದ ಆಕ್ರೋಶವನ್ನು ಹಲ್ಲು ಕಚ್ಚಿ ಸಹಿಸಿಕೊಂಡು ಆ 5 ದಿನಗಳ ಕಾಲ ರಿಪೋರ್ಟಿಂಗ್ ಮಾಡಿದ್ರಂತೆ ಹರೀಶ್.ಮನುಷ್ಯತ್ವದ ಮೇಲೆ ನಡೆದ ಪೈಶಾಚಿಕ ದಾಳಿ ವರ್ಷಗಳವರೆಗೂ ತೀವ್ರವಾಗಿ ಕಾಡಿತ್ತಂತೆ.ಕುದಿಯುತ್ತಿದ್ದ ಆಕ್ರೋಶ ತಣ್ಣಗಾಗಿದ್ದು ಪಾಕ್ ಉಗ್ರರ ವಿರುದ್ದ ಭಾರತ ತೀರಿಸಿಕೊಂಡ ಪ್ರತಿಕಾರದ ನಂತರವಂತೆ.
ಸೇನಾ ನೆಲೆ ಪಕ್ಕದಲ್ಲೇ 5 ದಿನ ಉಳಿದುಕೊಂಡು ವರದಿ ಮಾಡಿದ್ದ ಹರೀಶ್ ಪಾಲಿಗೆ ಅದೊಂದು ಅವಿಸ್ಮರಣೀಯವೂ ಹೌದು..ಅಳಿಸಲಾಗದ ಕಹಿ ಘಟನೆಯೂ ಹೌದಂತೆ. ಇವತ್ತಿಗೂ ಭಯೋತ್ಪಾದಕ ದಾಳಿಗಳು ಎಲ್ಲೆ ನಡೆದ್ರೂ ಪುಲ್ವಾಮ ನೆನಪಾಗಿ ಕ್ಷಣ ಬೆಚ್ಚಿಬೀಳುತ್ತಾರಂತೆ. ಛಿದ್ರಗೊಂಡ ಸೈನಿಕರ ಶವಗಳು..ಅದರಿಂದ ಮೂಗಿಗೆ ಬಡಿಯುತ್ತಿದ್ದ ರಕ್ತದ ಕಮಟು..ದಿಕ್ಕಿಗೊಂದರಂತೆ ಬಿದ್ದಿದ್ದ ಸೈನಿಕರಿದ್ದ ವಾಹನಗಳ ಅವಶೇಷಗಳು..ತಮ್ಮವರ ಶವ ಗುರುತಿಸ್ಲಿಕ್ಕೆ ಅವರ ಯೂನಿಫಾರ್ಮ್ ನ ತುಂಡುಗಳನ್ನು ಹುಡುಕುತ್ತಿದ್ದ ಪ್ರೀತಿಪಾತ್ರರು..ಅವರ ಅರಣ್ಯರೋಧನೆ-ಮುಗಿಲು ಮುಟ್ಟುವ ಆಕ್ರಂಧನದ ದಾರುಣ ಚಿತ್ರಗಳೆಲ್ಲಾ ಕಣ್ಮುಂದೆ ಹಾದು ಹೋಗುತ್ತವಂತೆ.