ಬೆಂಗಳೂರಿನಲ್ಲಿ ಮಳೆಯಾದರೆ ಜನರು ಪರದಾಡುತ್ತಿದ್ದರೆ, ಬಿಬಿಎಂಪಿ ಅಧಿಕಾರಿಗಳು ಖುಷಿಯಿಂದ ತೇಲಾಡುತ್ತಿರುತ್ತಾರೆ. ಇದಕ್ಕೆ ಕಾರಣ ಸರಕಾರದಿಂದ ಬರುವ ಹಣ ಹೊಡೆಯಬಹುದಲ್ವಾ ಅಂತ!
ಹೌದು, ಬೆಂಗಳೂರಿನಲ್ಲಿ ಸಣ್ಣ ಮಳೆಯಾದರೂ ಸಮಸ್ಯೆಗಳು ಕಂಡು ಬರುತ್ತವೆ. ಚರಂಡಿಗಳು ತುಂಬಿ ಹರಿದು ರಸ್ತೆಯೆಲ್ಲಾ ಜಲಾವೃತಗೊಳ್ಳುತ್ತವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗುತ್ತದೆ. ಆದರೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಸಿಬ್ಬಂದಿ ಏನೋ ಕೆಲಸ ಮಾಡುತ್ತಿರುವಂತೆ ಗಡಿಬಿಡಿಯಲ್ಲಿ ಓಡಾಡುತ್ತಿರುತ್ತಾರೆ. ಆದರೆ ಯಾವ ಕೆಲಸವೂ ಮಾಡುವುದಿಲ್ಲ. ಅದರಲ್ಲೂ ಶಾಶ್ವತ ಪರಿಹಾರವಂತೂ ಕಾಣುವುದಿಲ್ಲ. ಇದರಿಂದ ಬೆಂಗಳೂರಿನ ಸಮಸ್ಯೆ ಬಗೆಹರಿಯುವುದೇ ಇಲ್ಲ.
ಬೆಂಗಳೂರಿನ ಸಮಸ್ಯೆಗೆ ಕಾರಣ ಮಳೆ ನಿರ್ವಹಣೆ ಹೆಸರಲ್ಲಿ ಬಿಬಿಎಂಪಿ ಆಡಳಿತ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯುತ್ತಿರುವುದು.
ಮಳೆ ನೀರು ಹರಿದು ಹೋಗಲು ರಾಜಕಾಲುವೆಗಳ ದುರಸ್ತಿ ಹಾಗೂ ನಿರ್ವಹಣೆ ಹೆಸರಿನಲ್ಲಿ ಬಿಬಿಎಂಪಿ ಆಡಳಿತ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಕಳೆದ 5 ವರ್ಷಗಳಲ್ಲಿ 5000 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಲೆಕ್ಕ ತೋರಿಸಿದೆ.
ವೃಷಭಾವತಿ, ಚೆಲ್ಲಘಟ್ಟ, ಹೆಬ್ಬಾಳ ಮತ್ತು ಕೋರಮಂಗಲ ವ್ಯಾಪ್ತಿಯಲ್ಲಿ ಅಭಿವೃದ್ಧಿ-ಡಿಸಿಲ್ಟಿಂಗ್ ಗಾಗಿ ಖರ್ಚು ಮಾಡಿದ ಲೆಕ್ಕವನ್ನು ಬಿಬಿಎಂಪಿ ನೀಡಿದೆ. ಆದರೆ ಇಲ್ಲಿ ಲೆಕ್ಕ ತೋರಿದಷ್ಟು ಪ್ರಮಾಣದಲ್ಲಿ ಕಾಮಗಾರಿಯೇ ಆಗಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದು, ಇದೊಂದು ಬ್ರಹ್ಮಾಂಡ ಭ್ರಷ್ಟಾಚಾರ ಎಂದು ಆರೋಪಿಸುತ್ತಿದ್ದಾರೆ.
ಬಿಬಿಎಂಪಿ ಕಳೆದ 5 ವರ್ಷದಲ್ಲಿ ಮಳೆ ನೀರು ನಿರ್ವಹಣೆಗೆ ಮಾಡಿದ ವೆಚ್ಚದ ವಿವರ ಹೀಗಿದೆ.
2016-17 ನಲ್ಲಿ 800 ಕೋಟಿ ರೂ.
2017-18 ರಲ್ಲಿ 300 ಕೋಟಿ ರೂ.
2018 ರಲ್ಲಿ 117 ಕೋಟಿ ರೂ.
2019-20 ನಲ್ಲಿ 212 ಕಿ.ಮೀ. ಅಭಿವೃದ್ಧಿಗಾಗಿ 1217 ಕೋಟಿ,
184 km ಡಿಸಿಲ್ಟಿಂಗ್ ಗೆ 1100 ಕೋಟಿ ರೂ.
k-100 ಯೋಜನೆಗೆ 170 ಕೋಟಿ ರೂ.
K-100 ವ್ಯಾಲಿ ನಿರ್ವಹಣೆಗೆ 38 ಕೋಟಿ ರೂ.
9 ವರ್ಷಗಳಲ್ಲಿ ಒಟ್ಟು 3615 ಕೋಟಿ ರೂ. ಖರ್ಚು
2007- 2016 ಸಾಲಿನಲ್ಲಿ jnurm ಯೋಜನೆ ಅಡಿಯಲ್ಲಿ ಸಾವಿರಾರು ಕೋಟಿ ಖರ್ಚು ಮಾಡಲಾಗಿದ್ದು, ಅಂದಾಜು 5000 ಕೋಟಿ ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.