advertise here

Search

“ನ್ಯೂಸ್‌ 18” ಕನ್ನಡದ ಹೊಡೆತಕ್ಕೆ “ಪತರು”ಗುಟ್ಟಿದ “ಟಿವಿ-9” ಕನ್ನಡ..


ಇದು ಒಂದು ಚಾನೆಲ್‌ ಗೆ ಸಂಭ್ರಮವಾದ್ರೆ..ಇನ್ನೊಂದು ಚಾನೆಲ್‌ ಗೆ ಎಚ್ಚರಿಕೆಯ ಕರೆಗಂಟೆ ಎನ್ನಬಹುದೇನೋ..?ತನ್ನ ಮನೆ ಕೋಳಿ ಕೂಗಿ ದರೇನೆ ಬೆಳಗಾಗುವುದು ಎನ್ನುವ ಗಾಧೆ ಮಾತಿನಂತೆ ತಾನ್‌ ಏನ್‌ ಸುದ್ದಿ ಕೊಟ್ರೂ ಜನ ನೋಡ್ತಾರೆ..ನಂಬ್ತಾರೆ..ಎಂಬ ಅತಿಯಾದ ಆತ್ಮವಿಶ್ವಾಸ ದಲ್ಲಿದ್ದ ಕನ್ನಡದ ನಂಬರ್‌ ಒನ್‌ ನ್ಯೂಸ್‌ ಚಾನೆಲ್‌ ಟಿವಿ 9 ಕನ್ನಡಕ್ಕೆ ಮರ್ಮಾಘಾತವೇ ಆಗ್ಹೋಗಿದೆ ಅನ್ನಿಸುತ್ತೆ..ಹಾಗೊಂದು ಮುಟ್ಟಿ ನೋಡಿಕೊಳ್ಳುವಂಥ ಪೆಟ್ಟು ನೀಡಿರುವುದು ನ್ಯೂಸ್‌ 18 ಕನ್ನಡ. ಹಾಗಾಗಿ ನ್ಯೂಸ್‌ 18 ಕನ್ನಡದ ಕಚೇರಿಯಲ್ಲಿ ಹಬ್ಬದ ಸನ್ನಿವೇಶ ಮನೆ ಮಾಡಿದ್ರೆ, ಟಿವಿ9 ಕುಟುಂಬದಲ್ಲಿ ಸೂತಕದ ಛಾಯೆ-ಅಪಮಾನ-ಮುಜುಗರದ ವಾತಾವರಣ ಮೂಡಿದಂತಿದೆ.

ಕನ್ನಡದ ನಂಬರ್‌ ಒನ್‌ ಚಾನೆಲ್‌ ಟಿವಿ9 ಕನ್ನಡವನ್ನು ಹಿಂದಿಕ್ಕುವ ಮೂಲಕ ಮೈಲಿಗಲ್ಲಿನ ಸಾಧನೆ ಮಾಡಿದ ನ್ಯೂಸ್‌ 18 ಕನ್ನಡದ ತಂಡಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ತಂಡದ  ಅಭಿನಂದನೆಗಳು.(ಹಿಂದೊಮ್ಮೆಯೂ ಟಿವಿ-9ನ್ನು ಹಿಂದಿಕ್ಕಿದ ಸಂಭ್ರಮಾಚರಣೆಯೂ ನ್ಯೂಸ್‌ 18 ಕನ್ನಡದಲ್ಲಿ ನಡೆದಿತ್ತು.ಆದರೆ ಅದನ್ನು ಒಪ್ಪಲು ಸ್ವತಃ ಅಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರೇ ಸಿದ್ದವಿರಲಿಲ್ಲ. ಹಾಗಾಗಿ ಆ ಆಚರಣೆಗೆ  ಅರ್ಥವೂ ದೊರೆತಿರಲಿಲ್ಲ. ಹೆಚ್ಚು ಒತ್ತು ಕೂಡ ನೀಡಿರಲಿಲ್ಲ).ಅದೆಲ್ಲಾ ಹಳೆಯ ಮಾತು, ಆದರೆ ಪರಿಸ್ತಿತಿ ಹಿಂದಿ ನಂತಿಲ್ಲ..ಈ  ಬಾರಿ ಇದಕ್ಕೆ ಕಾರಣವೂ ಇದೆ.. ಉದ್ದೇಶವೂ ಇದೆ.ಹಿನ್ನೆಲೆಯೂ ಇದೆ..ಏಕೆಂದರೆ ಒಂದು ತಂಡದ ಪ್ರಯತ್ನ-ಪರಿಶ್ರಮ ಈ ಸಾಧನೆ ಹಿಂದಿರುವುದು ದಟ್ಟವಾಗಿದೆ. ಹಾಗಾಗಿಯೇ ಈ ಬಾರಿಯ ಮೈಲಿಗಲ್ಲಿನ ಸಾಧನೆಗೆ ಸೆಕ್ಯೂರಿಟಿ ಯಿಂದಿಡಿದು. ಹೌಸ್‌ ಕೀಪಿಂಗ್‌ ವರೆಗೂ ಡ್ರೈವರ್‌ ನಿಂದ ಹಿಡಿದು ರಿಪೋರ್ಟರ್‌ ಕ್ಯಾಮೆರಾಮನ್‌ ಅವರ ಪರಿಶ್ರಮ ಕಾರಣವಾಗಿರುವುದು ಸ್ಪಷ್ಟ..ಹಾಗಾಗಿನೇ ನ್ಯೂಸ್‌ 18 ತಂಡಕ್ಕೆ ಮತ್ತೊಮ್ಮೆ ಶುಭಾಷಯ..ಯಶಸ್ಸಿನ ಅಭಿಯಾನ ಹೀಗೆಯೇ ಮುಂದುವರೆಯಲಿ ಎನ್ನುವ ಶುಭ ಹಾರೈಕೆ ಜತೆಗೆ ಈ ಯಶಸ್ಸಿನ ಅಮಲಿನಲ್ಲಿ ಮೈ ಮರೆಯದಿರಿ ಎನ್ನುವ ಎಚ್ಚರಿಕೆಯನ್ನೂ ಕನ್ನಡ ಫ್ಲ್ಯಾಶ್‌ ನ್ಯೂಸ್‌ ತಂಡ ಹೇಳೊಕ್ಕೆ ಬಯಸುತ್ತದೆ.

ವೀಕ್ಷಕರ ಸಂಖ್ಯೆಯನ್ನು ಆಧರಿಸಿ ನೀಡಲಾಗುವ ಟಿಆರ್‌ ಪಿ( ಟೆಲಿ ರೇಟಿಂಗ್‌ ಪಾಯಿಂಟ್)ನೇ  ನ್ಯೂಸ್‌ ಚಾನೆಲ್‌ ಗಳ ಮಟ್ಟಿಗೆ ಜನಪ್ರಿಯತೆಯ ಮಾನದಂಡ.ಅದರ ಆಧಾರದಲ್ಲಿ ಈ ವಾರ ಟಿವಿ9 ತನ್ನ ಸ್ಥಾನವನ್ನು ನ್ಯೂಸ್‌ 18 ಕನ್ನಡಕ್ಕೆ ಬಿಟ್ಟುಕೊಟ್ಟಿದೆ.ಬಿಟ್ಟುಕೊಟ್ಟಿದೆ ಎನ್ನುವುದಕ್ಕಿಂತ ತನ್ನ ಕಳಪೆ ಫರ್ಫಾಮೆನ್ಸ್‌ ನಿಂದ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದರೆ ಸರಿಯಾಗಬಹುದೇನೋ..? ತಾನು ಕೊಟ್ಟಿದ್ದನ್ನೇ ಜನ ನಂಬಿಕೆಯಿಂದ ನೋಡುತ್ತಾರೆ.ನಂಬುತ್ತಾರೆ.ನಮ್ಮನ್ನು ಬಿಟ್ಟು ಬೇರೆ ಯಾರನ್ನು ನೋಡುವುದಿಲ್ಲ ಎನ್ನುವ ಭ್ರಮೆಯ ಪೊರೆಯನ್ನು ನ್ಯೂಸ್‌ 18 ಸಾಧನೆಯೇ, ಕಳಚಿ ಸತ್ಯದರ್ಶನ ಮಾಡಿಸಿದೆ.ವೀಕ್ಷಕರಿಗೆ ಆಯ್ಕೆಯ ಪರ್ಯಾಯಗಳಿವೆ.ಸುದ್ದಿಯನ್ನು ವಿಶ್ವಾಸಾರ್ಹತೆ-ಆಕರ್ಷಣೀಯ ಹಾಗೂ ಪರಿಣಾಮಕಾರಿಯಾಗಿ ಯಾರೇ ಕೊಟ್ಟರೂ ಅದನ್ನು ಪ್ರೀತಿಯಿಂದ ವೀಕ್ಷಿಸುತ್ತಾರೆ ಎನ್ನುವುದನ್ನು ಈ ಸಾಧನೆ ಜಗಜ್ಜಾಹೀರುಗೊಳಿಸಿದೆ.ತನ್ನ ಕೋಳಿ ಕೂಗಿದರೇನೇ ಸುದ್ದಿ ಜಗತ್ತಿನಲ್ಲಿ ಬೆಳಗಾಗುವುದು ಎಂಬ ಅತಿಯಾದ ಆತ್ಮವಿಶ್ವಾಸವೇ ಟಿವಿ-9ಗೆ ಮುಳುವಾಗಿದ್ದನ್ನು ಈ ಸಾಧನೆ ಸಾರಿ ಹೇಳಿದೆ .

ALSO READ :  ಆಸ್ಟ್ರೇಲಿಯಾ ಸರಣಿಗೆ ಭಾರತ ಎ ತಂಡ ಪ್ರಕಟ: ಋತುರಾಜ್ ಗೆ ನಾಯಕ ಪಟ್ಟ!

ಇದನ್ನು ನ್ಯೂಸ್‌ 18 ಕನ್ನಡದ ಸಾಧನೆ ಎನ್ನುವುದರ ಜತೆಗೇನೆ ಟಿವಿ9 ಕನ್ನಡದ ವಿಶ್ವಾಸಾರ್ಹತೆ ಕುಸಿತದ ಸೂಚನೆ ಎಂತಲೂ ವಿಶ್ಲೇಷಿಸಬಹುದೇನೋ..? ಸುದ್ದಿಯನ್ನು ನೀಡುವ ವೇಗ-ಶೈಲಿಯಲ್ಲಿ ನ್ಯೂಸ್‌ 18 ಕನ್ನಡದ  ಮುಂದೆ ಟಿವಿ9 ಮಂಕಾಗಿರುವುದನ್ನು ತೋರಿಸುವಂತಿದೆ.ಎಲ್ಲಕ್ಕಿಂತ ಹೆಚ್ಚಾಗಿ ಇವತ್ತಿನ ಕಾಲಘಟ್ಟಕ್ಕೆ ಇತರೆ ಚಾನೆಲ್‌ ಗಳ ಪೈಪೋಟಿ ಎದುರಿಸ್ಲಿಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳೋದನ್ನು ಬಿಟ್ಟು ಅತಿಯಾದ ಆತ್ಮವಿಶ್ವಾಸದಲ್ಲಿ ಮೈಮರೆತರೆ ಏನಾಗುತ್ತದೆ ಎನ್ನುವುದಕ್ಕೆ ವೀಕ್ಷಕ ಸರಿಯಾದ ಪಾಠವನ್ನೇ ಮುಟ್ಟಿಕೊಂಡು ನೋಡುವಂತೆ ಕಲಿಸಿದ್ದಾನೆನ್ನುವುದರಲ್ಲಿ ಯಾವುದೇ ಅತಿಶಯವಿಲ್ಲ.

ಇದೆಲ್ಲಕ್ಕೂ ಕಾರಣವೇನು..? …ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಕೆಲವು ಬ್ರಹಸ್ಪತಿ-ಮಹಾನ್‌ ಬುದ್ದಿವಂತರು-ಪ್ರಖಳಾಂತ ಪಂಡಿತರೆನಿಸಿಕೊಂಡವರ ಅತಿಯಾದ ಆತ್ಮವಿಶ್ವಾಸ..ಭ್ರಮಾಧೀನ ಮನಸ್ಥಿತಿ,ತಲೆಗಷ್ಟೇ ಅಲ್ಲ ಮೈಮನಸುಗಳಿಗೂ  ಏರಿದ ಯಶಸ್ಸಿನ ಅಮಲು,ತಮ್ಮನ್ನು ಮೆಟ್ಟಿನಿಲ್ಲೋರು ಯಾರಿದ್ದಾರೆನ್ನುವ ನಿರ್ಲಕ್ಷ್ಯ-ತಾತ್ಸಾರ, ಗಟ್ಟಿತನ ಕಳೆದುಕೊಂಡ ಸುದ್ದಿಯ ಗುಣಮಟ್ಟ, ತೀಕ್ಷ್ಣತೆ-ಪ್ರಖರತೆ-ಗಂಭೀರತೆ ಕಳೆದುಕೊಂಡ ಸುದ್ದಿ ಪ್ರಸಾರದ  ನೀರಸ ವೈಖರಿಗಳೇ ಟಿವಿ-9 ಕನ್ನಡದ ಹಿನ್ನಡೆ-ವೈಫಲ್ಯಕ್ಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ತಾವು ಹಾಕಿದ್ದೇ ಸುದ್ದಿ..ಪ್ರಸಾರ ಮಾಡಿದ್ದೇ ಸುದ್ದಿ..ಅದನ್ನೇ ಜನ ನೋಡಬೇಕೆನ್ನುವ ಮನಸ್ತಿತಿಯವರೇ ಸುದ್ದಿ ಮನೆಯಲ್ಲಿ ಬಹುತೇಕ ತುಂಬೋಗಿ ರುವುದರಿಂದಲೇ ಸುದ್ದಿ ಪ್ರಸಾರದ ಗುಣಮಟ್ಟದ ಬಗ್ಗೆಯಾಗಲಿ,ಅದು ವೀಕ್ಷಕರನ್ನು ಪರಿಣಾಮಕಾರಿ ಯಾಗಿ ತಲುಪುತ್ತಿದೆಯಾ ಎಂಬುದನ್ನು ಖಾತರಿ ಪಡಿಸಿಕೊಳ್ಳುವ ಬಗ್ಗೆಯಾಗಲಿ ತಲೆಕಡಿಸಿಕೊಳ್ಳು ವವರಿಲ್ಲದಂತಾಗಿದೆಯಂತೆ.ಇದೇ ಜನಪ್ರಿಯತೆಯ ಪತನಕ್ಕೆ ಕಾರಣವಾಯಿತೆನ್ನುವುದನ್ನು ಅಲ್ಲಿಯೇ ಕೆಲಸ ಮಾಡುತ್ತಿರುವ ಕೆಲವರು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ತಿಳಿಸಿದ್ದಾರೆ.

ಇವತ್ತಿಗೂ ಟಿವಿ9 ಕನ್ನಡ ಚಾನೆಲ್‌ ನಂಬರ್‌ ಒನ್ನೇ..ಟಿಆರ್‌ ಪಿ ಎನ್ನುವ ಹಾವು ಏಣಿಯಾಟದಲ್ಲಿ ಒಂದು ವಾರ ನ್ಯೂಸ್‌ 18 ಕನ್ನಡ ಟಿಆರ್‌ ಪಿಯಲ್ಲಿ ಟಾಪ್‌ ಬರಬಹದು..ಆದರೆ ಆಗಿರುವ ಸಮಸ್ಯೆಯನ್ನು ಅಲ್ಲಿಯೇ ಸರಿಪಡಿಸುವ ಚಾಣಕ್ಯತನ-ಚಾಕಚಕ್ಯತೆಗಳೆರೆಡೂ  ಟಿವಿ9 ತಂಡಕ್ಕೆ ಇದೆ. ಈ ತಂಡ ಮನಸು ಮಾಡಿದ್ರೆ ಕರ್ನಾಟಕ ಸುದ್ದಿ ಮಾದ್ಯಮ ಕ್ಷೇತ್ರದಲ್ಲಿ ಅಸಾಧ್ಯ ವೆನ್ನೋ ದೇ ಇಲ್ಲದಂತಿದೆ.ಆದರೆ ನನ್ನ ಕೋಳಿ  ಕೂಗಿದರೇನೇ ಬೆಳಗಾಗಬೇಕೆನ್ನುವ ಕೆಲವರ ಹಠ-ಸ್ವಾರ್ಥದಿಂದಾಗಿಯೇ ಹೀನಾಯ ಪ್ರದರ್ಶನ ನೋಡುವಂತಾಗಿದ್ದು ದೌರ್ಭಾಗ್ಯಪೂರ್ಣವೇ ಸರಿ.

ವೃತ್ತಿಪರತೆಯದೇ ದೊಡ್ಡ ಕೊರತೆ: ಇಂದು ಟಿವಿ9 ನ್ನು ನ್ಯೂಸ್‌ 18 ಕನ್ನಡ ಹಿಂದಿಕ್ಕಿ ಮುನ್ನುಗ್ಗುತ್ತದೆ ಎಂದ್ರೆ ಅದು ನ್ಯೂಸ್‌ 18 ಕನ್ನಡದ ಗರಿಮೆ ಎನ್ನೋದು ಎಷ್ಟು ಸತ್ಯವೋ, ಟಿವಿ9ನ ವೃತ್ತಿಪರತೆಯ ಕೊರತೆ ಎನ್ನೋದು ಕೂಡ ಅಷ್ಟೇ ವಾಸ್ತವ.ಟಿವಿ9 ನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದವರಿಗೆ ಅದರ ಅರಿವಾಗುತ್ತದೆ. 2006 ಆರಂಭಗೊಂಡ ದಿನಗಳಲ್ಲಿ ಬದ್ಧತೆಯಿಂದ ಕೆಲಸ ಮಾಡುವ ತಂಡ ಹಾಕಿಕೊಟ್ಟ ಭದ್ರ ತಳಹದಿ ಮೇಲೆ ಟಿವಿ9 ನಿಂತಿದೆಯೇ ಬಿಟ್ಟರೆ ಇವತ್ತಿನವರ ಕೊಡುಗೆಯೇನೂ ಇಲ್ಲ ಎನ್ನುವುದು ಕೂಡ ಸತ್ಯ.ಏಕಂದ್ರೆ ಇವತ್ತು ಸುದ್ದಿಯ ವೇಗದ ನಡುವೆ ಇತರೆ  ಚಾನೆಲ್‌ ಗಳು ಪೈಪೋಟಿಗೆ ಬಿದ್ದು ಕೆಲಸ ಮಾಡುತ್ತಿದ್ದರೆ ಟಿವಿ9 ತುಂಬಾ ಹಿಂದುಳಿದಿದೆ.ಏಕಂದ್ರೆ ಅದಕ್ಕಿಂತ ಮುನ್ನವೇ ಬೇರೆ ಚಾನೆಲ್‌ ಗಳು ಸ್ಪೋಟಕ ಸುದ್ದಿಗಳನ್ನು ಬ್ರೇಕ್‌ ಮಾಡಿರುತ್ತವೆ.ಎಲ್ಲರಲ್ಲೂ ಸುದ್ದಿ ಪ್ರಸಾರ ಮಾಡಿದ ಅದೆಷ್ಟೋ ನಿಮಿಷಗಳ ನಂತರ ಒಂದಷ್ಟು ಅಂಶಗಳನ್ನು ಸೇರಿಸಿ ಸುದ್ದಿ ನೀಡಿ ಖುಷಿ ಪಟ್ಟುಕೊಳ್ಳಲಾಗ್ತಿದೆ ಅಷ್ಟೆ..?

ಅವತ್ತಿಂದ ನಂಬರ್‌ ಒನ್‌ ಆಗಿದೆ ಎನ್ನುವ ಏಕೈಕ ಕಾರಣಕ್ಕೆ ವೀಕ್ಷಕರು ಟಿವಿ9 ನೋಡುತ್ತಿದ್ದಾರೆಯೇ ಹೊರತು,ಅದರಲ್ಲೇನೋ ವಿಶೇಷವಿದೆ ಎನ್ನುವ ಕಾರಣಕ್ಕಲ್ಲ ಎನ್ನುವುದನ್ನುಟಿವಿ9 ನ್ನು ವೃತ್ತಿಪರತೆಯಿಂದ ವಂಚಿತಗೊಳಿಸಿದ ಆಯಕಟ್ಟಿನ ಹುದ್ದೆಯಲ್ಲಿರುವ ಕೆಲವು ಬ್ರಹಸ್ಪತಿಗಳು ಅರ್ಥ ಮಾಡಿಕೊಳ್ಳಬೇಕಿದೆ.ಎಚ್ಚೆತ್ತುಕೊಂಡು ಲೋಷ ದೋಷಗಳನ್ನು ಸರಿಪಡಿಸಿಕೊಳ್ಳಬೇಕಿದೆ .ಇಲ್ಲ ನಾವು ಮಾಡಿದ್ದೇ ಮಾಡೋದು ಎನ್ನುವ ನಿರ್ಲಕ್ಷ್ಯದ ಮನಸ್ತಿತಿಯಲ್ಲೇ ಮುಂದುವರೆದರೆ ಇತರೆಲ್ಲಾ ಚಾನೆಲ್‌ ಗಳು ಟಿವಿ9ನ್ನು ಹಿಂದಿಕ್ಕಿ ಮುನ್ನುಗ್ಗುವುದು ಕಷ್ಟವೇನಲ್ಲ.. ನ್ಯೂಸ್‌ 18 ಕನ್ನಡದ ಬೆಳವಣಿಗೆಯನ್ನು ಮ್ಯಾನೇಜ್ಮೆಂಟ್‌ ಅರ್ಥ ಮಾಡಿಕೊಂಡು ಬ್ರಹಸ್ಪತಿಗಳೆನಿಸಿಕೊಂಡವ್ರ ಕಿವಿ ಹಿಂಡುವ ಕೆಲಸ ಮಾಡಬೇಕಿದೆ.ಅದು ಆಗುತ್ತಾ..ಅದೇ ಮಿಲಿಯನ್‌ ಡಾಲರ್‌  ಪ್ರಶ್ನೆ.


Political News

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

Scroll to Top