advertise here

Search

ಎಂತೆಂಥವರ ನಡುವೆ ಇಂಥವರು ನೆನಪಾಗೊಲ್ವಾ..!?


ಇವತ್ತು ಬೀದರ್‌ ನಲ್ಲಿ ನಡೆದ ಪತ್ರಿಕಾ ಸಮ್ಮೇಳನದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಪ್ರಶಸ್ತಿಗೆ  ನಿಜವಾಗ್ಲೂ ಯೋಗ್ಯವಾದ-ಸಮರ್ಥವಾದವರಿಗೆ ನಮ್ಮದೊಂದು ಪ್ರಾಮಾಣಿಕವಾದ ಮನಸಿನ ಅಭಿನಂದನೆ..ಪ್ರಶಸ್ತಿಗೆ ಅರ್ಹರೇ ಅಲ್ಲದ ಒಂದಷ್ಟು ಜನರಿಗೂ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎನ್ನುವ ಒಂದಷ್ಟು ಪತ್ರಕರ್ತರ ಆರೋಪಗಳ ಸನ್ನಿವೇಶದಲ್ಲೇ  ಯಾಕೋ ಆ ಇಬ್ಬರು ಪತ್ರಕರ್ತರು ತುಂಬಾ ನೆನಪಾದರು.ನಮ್ಮ ನಡುವೆ ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಸಾಕ್ಷಿಪ್ರಜ್ಞೆಯಂತೆ ಇರುವ ಎಷ್ಟೋ ಪತ್ರಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಯಾ ಎನ್ನುವ ನೋವು ಕೂಡ ಕಾಡಿತು.( ಸಧ್ಯದಲ್ಲಿ ಆ ಇಬ್ಬರು ಸಕ್ರೀಯ ಪತ್ರಿಕೋದ್ಯಮದಲ್ಲಿ ಇಲ್ಲವಾದರೂ ಅವರ ಸೇವೆ ಸ್ಮರಿಸಬೇಕಿರುವುದು ನ್ಯಾಯೋಚಿತ ಎನಿಸುತ್ತದೆ)

ಈ ಪೈಕಿ ಒಬ್ಬರು ಮಹಿಳಾ ಪತ್ರಕರ್ತೆ ಜ್ಯೋತಿ ಇರ್ವತ್ತೂರು..ಇನ್ನೊಬ್ಬರು ಹಿರಿಯ ಸಿನೆಮಾ ಪತ್ರಕರ್ತ ಮಹೇಶ್‌ ದೇವ್‌ ಶೆಟ್ಟಿ. ಕೆಲವೊಮ್ಮೆ ಕನ್ನಡ ಪತ್ರಿಕೋದ್ಯಮ ಇಷ್ಟೊಂದು ಮರೆಗುಳಿ-ಕೃತಘ್ನ-ನಿಷ್ಕರುಣಿ ಆಗಬಾರದಿತ್ತು ಎನ್ನಿಸುತ್ತೆ.ಕನ್ನಡ ಪತ್ರಿಕೋದ್ಯಮದಲ್ಲಿ ಇವತ್ತು ಬೆಳೆಯೊಕ್ಕೆ-ಗುರುತಿಸಿಕೊಳ್ಳೊಕ್ಕೆ ಇರುವ ಮಾನದಂಡ ಗಳೇ ಬದಲಾಗಿ ಹೋಗಿರುವ ಸನ್ನಿವೇಶದಲ್ಲಿ ನಿಷ್ಟೆ-ದಕ್ಷತೆ-ಪ್ರಾಮಾಣಿಕತೆಗೆ ಬೆಲೆಯೂ ಇಲ್ಲ…ನೆಲೆಯೂ ಇಲ್ಲವಾಗಿದೆ ಬಿಡಿ. ಇಂತದ್ದೊಂದು ವಿಷಾದದ ಹಾಗೂ ದುಃಖಕರ ಸನ್ನಿವೇಶ ದಲ್ಲಿ ಆ ಇಬ್ಬರು ನೆನಪಾಗೊಕ್ಕೆ ಕಾರಣವೂ ಇದೆ..ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮ ದಕ್ಷತೆ, ಪ್ರಾಮಾಣಿ ಕತೆ ಹಾಗೂ ನಿಷ್ಟೂರ ನಡೆಗೆ ಹೆಸರಾಗಿದ್ದ ಈ ಇಬ್ಬರು ಇವತ್ತಿಗೆ ಬಹುತೇಕ ನೇಪಥ್ಯಕ್ಕೆ  ಸರಿದೋಗಿ ಬಿಟ್ಟಿದ್ದಾರೆ ಅನ್ನಿಸುತ್ತೆ.. ಅಂಥವರನ್ನು ನೆನಪಿಸಿಕೊಳ್ಳಬೇಕಾದ ಕೆಲಸವನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಮಾಡ್ತಿದೆ.

ಇವತ್ತು ಭಾನುವಾರ ಮದ್ಯಾಹ್ನ ನನ್ನ ಸ್ನೇಹಿತರೊಬ್ಬರು ಕರೆ ಮಾಡಿ ಜ್ಯೋತಿ ಇರ್ವತ್ತೂರು ಅವರ ಬಗ್ಗೆ ವಿಚಾರಿಸಿದ್ರು.ಆ ಕ್ಷಣದವರೆಗೂ ನನ್ನ ಒಬ್ಬನದೇ ಅಲ್ಲ ಬಹುತೇಕ ಪತ್ರಕರ್ತರ ನೆನಪಿನಿಂದಲೇ ಅಳಿಸಿ ಹೋಗಿರಬಹುದಾದ ಜ್ಯೋತಿ ಅವರ ನೆನಪು ಥಟ್ಟನೇ ಸುಳಿಯಲಾರಂಭಿಸ್ತು.ಹೌದಲ್ವಾ.ಆ ಹೆಸರೇ ಮರೆತು ಹೋಗಿಬಿಟ್ಟಿತ್ತಲ್ಲ ಎಂದೆನಿಸ್ತು.ಏಕೆಂದರೆ ಜ್ಯೋತಿ ಇರ್ವತ್ತೂರು ಸಾಮಾನ್ಯ ಪತ್ರಕರ್ತೆ ಅಲ್ಲ.ಪತ್ರಿಕೋದ್ಯಮದ ಬಗ್ಗೆ ಗಂಧಗಾಳಿ ಗೊತ್ತಿಲ್ಲದ ಇವತ್ತಿನ ತಲೆಮಾರಿನವರಿಗೆ ಆ ಹೆಸರು ಗೊತ್ತಿಲ್ಲದೆ ಇರಬಹುದು.ಆದರೆ ಸೈದ್ಧಾಂತಿಕ ಪತ್ರಿಕೋದ್ಯಮ ಎಂದು ಬಂದರೆ ಜ್ಯೋತಿ ಅವರನ್ನು ನೆನಪು ಮಾಡಿಕೊಳ್ಳಲೇಬೇಕಾಗುತ್ತದೆ.ಹಳೆಯ ಈಟಿವಿಯಲ್ಲಿ ರಾಜಕೀಯ ವರದಿಗಾರ್ತಿಯಾಗಿ ಅವರು ಮಾಡಿದ ಕೆಲಸ ಆಗಿನ ಕಾಲಕ್ಕೆ ಬಹುದೊಡ್ಡದು.ಅವರ ಸ್ಥಾನದಲ್ಲಿ ಬೇರೆ ಯಾರೇ ಇದ್ದಿದ್ದರೂ ಅದನ್ನು ದುರುಪಯೋಗಪಡಿಸಿಕೊಂಡು ಏನೇನೋ ಗಳಿಸಿಕೊಂಡುಬಿಡ್ತಿದ್ದರೇನೋ..? ಆದರೆ ಜ್ಯೋತಿ ಹಾಗೆ ಮಾಡಲೇ ಇಲ್ಲ.ತಾನು ನಂಬಿದ ಸಿದ್ದಾಂತ-ಆದರ್ಶವನ್ನು ಹಾಗೆ ಉಳಿಸಿಕೊಂಡು ಬಂದರು.ಅವರಿಗಿದ್ದ ರಾಜಕೀಯ ವ್ಯಕ್ತಿಗಳ ಸಂಪರ್ಕವನ್ನು ಹಣ-ಆಸ್ತಿ ಸಂಪಾದನೆಗೆ ಬಳಸಿಕೊಳ್ಳಬಹುದಿತ್ತೇನೋ..ಆದರೆ ಆ ಗೋಜಿಗೆ ಹೋಗದೆ ಹಾಗೆಯೇ ಉಳಿದುಬಿಟ್ಟರು.

ಅಲ್ಲಿಂದ ನಂತರ ಸಮಯ, ಪ್ರಜಾ ಟಿವಿಗೆ ತೆರಳಿ ಅಲ್ಲಿಯೂ ತಮ್ಮ ವೃತ್ತಿನಿಷ್ಟ ಪತ್ರಿಕೋದ್ಯಮವನ್ನೇ ಮುಂದುವರೆಸಿದ್ರು.ಅವರಿಗಿದ್ದ ಜನಪರ, ಜೀವಪರ  ಕಾಳಜಿಯನ್ನು ಪ್ರತಿ ಹಂತಗಳಲ್ಲೂ ಪ್ರದರ್ಶಿಸುತ್ತಾ ಹೋದರು.ಆದರೆ ಅವರಿಗೆ ಸಿಗಬೇಕಾದ ಮನ್ನಣೆ-ಗೌರವ ಅಲ್ಲಿ ಸಿಗಲೇ ಇಲ್ಲ.ಈ ಹಂತದಲ್ಲಿರುವಾಗಲೇ ಜ್ಯೋತಿ ದೊಡ್ಡ ಯಡವಟ್ಟು ಮಾಡಿಕೊಂಡ್ರು ಅನ್ನಿಸುತ್ತೆ.ಆಗ ತಾನೇ ಪ್ರಾರಂಭವಾಗುತ್ತಿದ್ದ ಫೋಕಸ್‌ ಎನ್ನುವ ಚಾನೆಲ್‌ ಗೆ ಮಹಿಳಾ ಸಂಪಾದಕಿಯಾಗಿ ಹೋಗಿಬಿಟ್ರು.ಆ ಚಾನೆಲ್‌ ಅಂದುಕೊಂಡಂತೆ ನಡೆದಿದ್ರೆ ಸಮಸ್ಯೆ ಇರುತ್ತಿರಲಿಲ್ಲವೇನೋ..ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗೋದ್ವು.ಆರಂಭವಾದ ಕೆಲ ದಿನಗಳಲ್ಲೇ ಬಾಗಿಲು ಹಾಕಿಕೊಂಡ್‌ ಬಿಡ್ತು.ಬಹಳ  ನಿರೀಕ್ಷೆ ಇಟ್ಟುಕೊಂಡು ಸೇರಿದ್ದ ಚಾನೆಲ್‌ ಆ ರೀತಿ ಮುಚ್ಚಲ್ಪಟ್ಟಿದ್ದರಿಂದ ಮಾನಸಿಕವಾಗಿ ವಿಚಲಿತವಾಗಿಬಿಟ್ರು ಜ್ಯೋತಿ..ಮಾದ್ಯಮಗಳ ಬಗ್ಗೆ ಇದ್ದ ನಂಬಿಕೆಯೇ ಕಳೆದುಹೋಗಿಬಿಡ್ತು.ಆ ನಂತರ ಮಾದ್ಯಮದಿಂದ ಸಂಪೂರ್ಣ ಅಂತರ ಕಾಯ್ದುಕೊಂಡು ಬಿಟ್ರು.ಸಕ್ರೀಯ ಪತ್ರಿಕೋದ್ಯಮದಿಂದ ದೂರವಾದ ಅವರು ಅನೇಕ ವರ್ಷಗಳಿಂದಲೂಈ ತಾವಾಯ್ತು..ತಮ್ಮ ವೈಯುಕ್ತಿಕ ಬದುಕಾಯ್ತು ಎಂದು ನಿರ್ಲಿಪ್ತವಾಗಿಬಿಟ್ಟಿದ್ದಾರೆ.ಪತ್ರಿಕೋದ್ಯಮ ಕೂಡ ಅವರ ಅನುಭವ ಬಳಸಿಕೊಳ್ಳುವ ಕೆಲಸ ಮಾಡಲೇ ಇಲ್ಲ.ಇವತ್ತಿಗೆ ಜ್ಯೋತಿ ಇರ್ವತ್ತೂರು ಎನ್ನುವ ಆ ಹೆಸರು ಮರೆತು ಹೋದಲ್ಪಟ್ಟವರ ಸಾಲಿಗೆ ಸೇರ್ಪಡೆಯಾಗಿಬಿಟ್ಟಿದೆ.ಇದನ್ನು ದುರಂತ ಎನ್ನದೆ ಏನನ್ನಬೇಕು ಹೇಳಿ.

ಜ್ಯೋತಿ ಅವರಂತೆಯೇ ಇನ್ನೊಂದು ಹೆಸರು  ಹಿರಿಯ ಸಿನಿಮಾ ಪತ್ರಕರ್ತ ಮಹೇಶ್‌ ದೇವ್‌ ಶೆಟ್ಟಿ.ಸಿನೆಮಾ ಪತ್ರಿಕೋದ್ಯಮದ ಮಟ್ಟಿಗೆ ಮಹೇಶ್‌ ಅವರ ಹೆಸರು ಹಾಗೂ ಅನುಭವ  ತುಂಬಾ ದೊಡ್ಡದು.ಅವರ ಹೆಸರನ್ನು ಕೇಳದವರೇ ಇಲ್ಲ ಬಿಡಿ.ಅಷ್ಟೊಂದು ಹೆಸರು ಸಂಪಾದಿಸಿದ್ದ ಅವರನ್ನು ಪತ್ರಿಕೋದ್ಯಮ ಬಳಸಿಕೊಂಡ ರೀತಿ ಅಮಾನವೀಯವಾದದ್ದು.ಕೆಲಸ ಮಾಡಿದ ಚಾನೆಲ್‌ ಗಳ ಟಿಆರ್‌ ಪಿಯನ್ನು ವರ್ಷಗಳವರೆಗೂ ಒಂದೇ ಹದದಲ್ಲಿ ಉಳಿಸಿಕೊಂಡು ಬಂದಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ.ಆದರೆ ಅಂಥಾ ಚಾನೆಲ್‌ ಗಳೇ  ತುಂಬಾ ನಿಷ್ಟೂರವಾಗಿ ಅವರನ್ನು ಹೊರಗೆ ಕಳುಹಿಸಿಬಿಟ್ಟಿದ್ದನ್ನು ಮಹೇಶ್‌ ಇವತ್ತಿಗೂ ದುಃಖದಿಂದ ನೆನೆಯುತ್ತಾರೆ. ಕೆಲಸ ಬಿಟ್ಟರೆ ಬೇರೆ ಯಾವುದೇ ರಾಜಕೀಯ ಗೊತ್ತಿಲ್ಲದಂತೆ ಬದುಕಿದವರು ಮಹೇಶ್.ಹಾಗಾಗಿನೇ ಕೆಲಸದಿಂದ ಉಪಜೀವನ ಕಟ್ಟಿಕೊಳ್ಳುವ ಪ್ರಮೇಯ ಬರಲಿಲ್ಲ ಎನ್ನಿಸುತ್ತೆ.ಅವರ ಕಾಲಘಟ್ಟಕ್ಕಿಂತ ನಂತರ ಬಂದ ಅದೆಷ್ಟೋ ಸಿನಿ ಪತ್ರಕರ್ತರ ಜೀವನ ಇವತ್ತು ಕೋಟಿಗಳಲ್ಲಿ ತೂಗುತ್ತದೆ ಬಿಡಿ..ಆದರೆ ಅದಕ್ಕೆ ಹೊಟ್ಟೆ ಉರಿ ಪಟ್ಟುಕೊಂಡವರೂ ಅಲ್ಲ ಇವರು.ಅದು ಅವರವರ ತಾಕತ್ತು ಬಿಡಿ ಸಾರ್‌ ಎನ್ನುತ್ತಾರೆ.

ALSO READ :  M.S.ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗೆ ಸಂಕಷ್ಟ..!?ಆಸ್ತಿ ತೆರಿಗೆ ನೈಜತೆ ಮರೆಮಾಚಿದ್ದು ಸತ್ಯನಾ…?

ಸಿನಿ ಪತ್ರಿಕೋದ್ಯಮದಲ್ಲಿ ಅದ್ವಿತೀಯ ಹೆಸರಾದ ಮಹೇಶ್‌ ದೇವ್‌ ಶೆಟ್ಟಿ ಅವರು ಇವತ್ತು ಜೀವನ ನಿರ್ವಹಣೆ ಮಾಡಲಿಕ್ಕೂ ಕಷ್ಟಪಡಬೇಕಾದ ಸ್ಥಿತಿಯಲ್ಲಿದ್ದಾರೆ.ಸಿನಿಮಾ ವರದಿಗಾರಿಕೆ ಬಿಟ್ಟರೆ ಬೇರೇನೂ ಅವರಿಗೆ ಬರೊಲ್ಲ.ಕೆಲಸ ಕೊಡೋರು ಅವರಿಗಿಲ್ಲ.ಹಾಗಾಗಿ ಕೊನೇ ಆಟ ಎನ್ನುವ ಯೂ ಟ್ಯೂಬ್‌ ಚಾನೆಲ್‌ ಆರಂಭಿಸಿದ್ದಾರೆ.ಮೊದಲ ಪ್ರಯತ್ನದಲ್ಲೇ ರಶ್ಮಿಕಾ ಮಂದಣ್ಣ ಅವರಿಗೆ ಸಂಬಂಧಪಟ್ಟ ಆಡಿಯೋವೊಂದನ್ನು ಪ್ರಸಾರ ಮಾಡಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿಬಿಟ್ಟರು.ಖುದ್ದು ರಶ್ಮಿಕಾ ಅವರ ಕುಟುಂದಬವರೇ ಕರೆ ಮಾಡಿ ಮನವಿ ಮಾಡಿಕೊಂಡ ಕಾರಣಕ್ಕೆ ಮನುಷ್ಯತ್ವದಿಂದ ಆ ಆಡಿಯೋವನ್ನು ಡಿಲೀಟ್‌ ಮಾಡಿ ಹೃದಯವಂತಿಕೆ ಮೆರೆದರು.ಬಹುಷಃ ಆ ಆಡಿಯೋ ಬೇರೆ ಯಾರಿಗೆ ಸಿಕ್ಕಿದ್ದರೂ ಅದನ್ನು ಜೀವನೋಪಾಯಕ್ಕೆ ಬಳಸಿಕೊಂಡು ಬೇಕಾದುದ್ದನ್ನು ಮಾಡುತ್ತಿದ್ದರೇನೋ..? ಆದರೆ ಅಂಥಾ ವ್ಯಸನಗಳಿಂದ ಸದಾ ತಮ್ಮನ್ನು ದೂರವಿಟ್ಟುಕೊಂಡಿರುವ ಮಹೇಶ್‌ ಅವರು ಆರ್ಥಿಕ ತೊಂದರೆ ಕಾರಣಕ್ಕೆ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.ತಮಗಿರುವ ಸಮಸ್ಯೆಯನ್ನು ಸಿನಿ ರಂಗದಲ್ಲಿ ಪರಿಚಿತರಿರುವವರ ಬಳಿ ಹೇಳಿಕೊಂಡರೆ ಸಹಾಯ ಸಿಗಬಹುದೆನ್ನುವುದು ಗೊತ್ತಿದ್ದರೂ ಕೈ ಚಾಚದಷ್ಟು ಸ್ವಾಭಿಮಾನಿ ಅವರು..ಹಾಗಾಗಿ ಹಣ ಸಿಕ್ಕ ನಂತರ ಕೆಲಸ ಮುಂದುವರೆಸುತ್ತೇನೆ..ಅಲ್ಲಿವರೆಗೆ ಸಂಘರ್ಷ ಅನಿವಾರ್ಯ ಎನ್ನುತ್ತಾರೆ.

ಮಹೇಶ್‌ ದೇವಶೆಟ್ಟಿ ಓರ್ವ ಅತ್ಯದ್ಭುತ ಬರಹಗಾರ..ಅವರ ಮೆದುಳಿನ ಮೂಸೆಯಲ್ಲಿ ಅಡಗಿರುವ ವಿಚಾರಗಳು ಸುದ್ದಿಯಾಗಿ ಹೊರಬಂದು ಸೃಷ್ಟಿಸಿರುವ ಕ್ರಾಂತಿ ಒಂದೊಂದಲ್ಲ.ವಿಜಯ ಕರ್ನಾಟಕದಲ್ಲಿ ರಜನಿಕಾಂತ್‌ ಅವರ ಬಗ್ಗೆ ಬರೆದ ಸರಣಿ ಸುದ್ದಿಗಳು ಖುದ್ದು ರಜನಿ ಅವರನ್ನೇ ಪ್ರಭಾವಿಸಿದ್ದವಂತೆ. ಡಾ.ರಾಜ್‌ ಕುಟುಂಬದ ಬಗ್ಗೆ ಸತ್ಯ ಮಾತನಾಡೋದೇ ಅಪರಾಧ ಎನ್ನುವಂತಿದ್ದ ಮಡಿವಂತಿಕೆಯ ಎಲ್ಲೆಯನ್ನು ತಮ್ಮ ಬರಹದ ಮೂಲಕ ಮೀರಿ ಹೊಸ ಸಂಚಲನ ಮೂಡಿಸಿದ್ದು ಕೂಡ ಇದೇ ಮಹೇಶ್‌ ದೇವ್‌ ಶೆಟ್ಟಿ.ಹಾಗೆಯೇ ಚಿತ್ರರಂಗದ ಅಸಲಿಯತ್ತು..ಅಕ್ರಮಗಳು..ತೆರೆಮರೆಯ ರಹಸ್ಯಗಳೆಲ್ಲವನ್ನು ಇನ್ವೆಸ್ಟಿಗೇಷನ್‌ ಮೂಲಕ ತೆಗೆದು ಪ್ರಕಟಿಸಿದ್ದು ಕಡಿಮೆ ಮಾತೇನಲ್ಲ.ಇವತ್ತಿಗೂ ಚಿತ್ರರಂಗದಲ್ಲಿರುವ ದೊಡ್ಡ ದೊಡ್ಡ ಸ್ಟಾರ್‌ ಗಳಿಗೂ ಮಹೇಶ್‌ ಹೆಸರು ಚಿರಪರಿಚಿತ.ಆದರೆ ರಾಜಿ ಮನಸ್ಥಿತಿ ಇಲ್ಲದ ಕಾರಣಕ್ಕೆ ಆತ ಒಬ್ಬ ಸಿಡುಕನಪ್ಪಾ.. ಯಾವಾಗ್ಲೂ ಮುಖ ಗಂಟಿಕ್ಕಿ ಕೊಂಡಿರುತ್ತಾನೆ ಎಂದು ಅಂತರ ಕಾಯ್ದುಕೊಳ್ಳಲಾರಂಭಿಸಿದ್ದಾರೆ.ಇದು ಮಹೇಶ್‌ ಅವರಿಗೆ ನೋವುಂಟು ಮಾಡಿರುವುದು ಕೂಡ ಸತ್ಯ.ತಮ್ಮ ಕೊನೇ ಆಟ ಯೂ ಟ್ಯೂಬ್‌ ಆರಂಭಿಸ್ಲಿಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾದರೂ ಯಾರೊಬ್ಬರ ಬಳಿಯೂ ಅವರು ಹಣ ಕೇಳಿಲ್ಲದಿರುವುದಕ್ಕೆ ಕಾರಣವೂ ಅದೇ.

ಕನ್ನಡ ಪತ್ರಿಕೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಇವರುಗಳನ್ನು ಯಾವ ಪತ್ರಿಕಾ ಸಂಘ-ಸಂಘಟನೆಗಳು ಗುರುತಿಸೊಲ್ಲ ಎನ್ನುವುದೇ ದೊಡ್ಡ ದುರಂತ…  ಬಹುತೇಕ ಸ‍ಂಘ-ಸಂಘಟನೆಗಳಲ್ಲಿರುವ ಕೆಲವರಿಗೆ ಬಹುಪರಾಖ್‌ ಹಾಕುವ ಭಟ್ಟಂಗಿಗಳಿಗೆ, ಜಾತಿ ರಾಜಕೀಯ ಮಾಡುವವರಿಗೆ, ಪ್ರಶಸ್ತಿ ನೀಡುವ ಕೆಟ್ಟ ಸಂಪ್ರದಾಯ ಮುಂದುವರೆದುಕೊಂಡು ಬಂದಿರುವ ಸನ್ನಿವೇಶದಲ್ಲಿ(ಪತ್ರಕರ್ತರನ್ನು  ಪ್ರಶಸ್ತಿಗಳಿಗೆ ಆಯ್ಕೆ ಮಾಡುವ ವೇಳೆ ಅನುಸರಿಸಲಾಗುತ್ತಿದೆ ಎನ್ನಲಾಗಿರುವ ಮಾನದಂಡದ ಬಗ್ಗೆಯೇ ಪತ್ರಕರ್ತರಲ್ಲಿ ದೊಡ್ಡ ಮಟ್ಟದ ಆಕ್ಷೇಪ-ಆಕ್ರೋಶ-ಅಸಮಾಧಾನ ಇರುವುದು ಕೂಡ ಸತ್ಯ.) ಜ್ಯೋತಿ ಇರ್ವತ್ತೂರು.. ಮಹೇಶ ದೇವ್‌ ಶೆಟ್ಟಿ ಹಾಗೂ ಇನ್ನು ಅನೇಕರು  ನೆನಪಾಗದೆ ಇರುವುದು ಪತ್ರಿಕೋದ್ಯಮದ ನೈಜ ದುರಂತ ಅಲ್ಲದೇ  ಇನ್ನೇನು..!?


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top