advertise here

Search

ಶಿಕ್ಷಣ ಇಲಾಖೆಯ 3 “ದಕ್ಷ” ಅಧಿಕಾರಿಗಳ ದಿಢೀರ್‌ ವರ್ಗಾವಣೆ ..!.


ದಕ್ಷರು,ಪ್ರಾಮಾಣಿಕರು.. ಶಿಕ್ಷಣ ಇಲಾಖೆಗೆ ಬೇಕಾಗಿಲ್ಲವೇ..? ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೇನೆ ಪ್ರಾಮಾಣಿಕರನ್ನು ಉಳಿಸಿಕೊಳ್ಳುವ ಮನಸ್ಸಿಲ್ಲವೇ..? ಅಕ್ರಮ-ಭ್ರಷ್ಟಾಚಾರ-ಸ್ವಜನಪಕ್ಷಪಾತ-ಹಗರಣಗಳಿಂದ ತುಂಬಿ ತುಳುಕುತ್ತಿರುವ ಇಲಾಖೆಯ ವ್ಯವಸ್ಥೆ ಸರಿ ಆಗಬೇಕೆನ್ನುವ ಮನಸ್ಸೇ ಸಚಿವರಿಗೆ ಇಲ್ಲವಾ..? ಇಷ್ಟೆಲ್ಲಾ ಅನುಮಾನ ಕಾಡೊಕ್ಕೆ ಕಾರಣ ಇಲಾಖೆಯಲ್ಲಿರುವ ಬೆರಳೆಣಿಕೆಯ ಅಧಿಕಾರಿಗಳ ದಿಢೀರ್‌ ವರ್ಗಾವಣೆ ವದಂತಿ. ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಶಿಕ್ಷಣ ಇಲಾಖೆಯ ವಿಶ್ವಸನೀಯ ಮೂಲಗಳು ನೀಡಿದ ಮಾಹಿತಿಯಂತೆ ಇಲಾಖೆಯಲ್ಲಿರುವ ದಕ್ಷ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ಅಂಕಿತ ಹಾಕಿದೆಯಂತೆ.

ಶಿಕ್ಷಣ ಇಲಾಖೆಯಲ್ಲಿ ಇವತ್ತಿಗೇನಾದ್ರೂ ಸ್ವಲ್ಪವಾದ್ರೂ ಪಾರದರ್ಶಕತೆ-ಪ್ರಾಮಾಣಿಕತೆ ಇದೆ ಎನ್ನುವುದಾದ್ರೆ ಅದಕ್ಕೆ ಅಲ್ಲಿರುವ ಕೆಲವೇ ಕೆಲವು ದಕ್ಷ ಅಧಿಕಾರಿಗಳೇ ಕಾರಣ.ಇದನ್ನು ಸ್ವತಃ ಮಧು ಬಂಗಾರಪ್ಪ ಕೂಡ ಒಪ್ಪಬೇಕಾಗ್ತದೆ.ಶಿಕ್ಷಣ ಇಲಾಖೆ ಸುಧಾರಿಸಲಾಗದಷ್ಟು ಎಕ್ಕುಟ್ಟಿ ಹೋಗಿರುವ ವೇಳೆ ಇಲಾಖೆಗೆ ಬಂದ ಅಧಿಕಾರಿಗಳ ಸೇವೆಯನ್ನು ಸಮರ್ಥವಾಗಿ ಬಳಸಬೇಕಿರುವುದು ಇಲಾಖೆಯ ಮುಖ್ಯಸ್ಥರೆನಿಸಿಕೊಂಡವರ ಬದ್ಧತೆ ಆಗಿರಬೇಕಿತ್ತು.ಆದರೆ ಅವರು ಉತ್ತಮ ಕೆಲಸ ಮಾಡೋದೇ ಮುಖ್ಯಸ್ಥರಿಗೇ ಬೇಡವಾಗಿದೆಯೇನೋ..? ಹಾಗಾಗಿ ಅಂಥಾ ದಕ್ಷ ಅಧಿಕಾರಿಗಳನ್ನು ಉಳಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಅವರು ಮಾಡಲಿಲ್ಲ..ಬಹುಷಃ ದಕ್ಷರಿದ್ದರೆ ಇಲಾಖೆಯಲ್ಲಿನ ವ್ಯವಸ್ಥೆ ಸುಧಾರಣೆ ಆಗುತ್ತದೆ..ಅಕ್ರಮಗಳಿಗೆ ಬ್ರೇಕ್‌ ಬೀಳುತ್ತೆ ಎನ್ನುವ ಕಾರಣದಿಂದಲೇನಾದ್ರೂ ಅವರ ವರ್ಗಾವಣೆ ಮಾಡಿಸಲಾಯ್ತಾ ಎನ್ನುವ ಪ್ರಶ್ನೆ ಕಾಡುತ್ತದೆ. ಇಂಥಾ ವಿಷಯದಲ್ಲಿ ಇಲಾಖೆ ಮುಖ್ಯಸ್ಥರಾಗಿ ಮಧು ಬಂಗಾರಪ್ಪ ಅವರ ಮೌನ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗ್ತಿದೆ.

ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡ್ತಿದ್ದ ರಶ್ಮಿ ಮಹೇಶ್‌ ಅವರನ್ನು ವರ್ಗ ಮಾಡಲಾಗಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಕರ್ನಾಟಕ ಕೆಡರ್‌ ನ ದಕ್ಷ-ಪ್ರಾಮಾಣಿಕ ಐಎಎಸ್‌ ಅಧಿಕಾರಿ ರಶ್ಮಿ ಮಹೇಶ್‌ ಕೆಲಸ ಮಾಡಿದ ಸ್ಥಳದಲ್ಲಿ ಸುಧಾರಣೆ ತಂದವರು.ಅಮೂಲಾಗ್ರ ಬದಲಾವಣೆಗೆ ಶ್ರಮಿಸಿದವರು.ಅಕ್ರಮ-ಭ್ರಷ್ಟಾಚಾರ-ಹಗರಣಗಳಿಗೆ ಬ್ರೇಕ್‌ ಹಾಕಿದವರು.ಯಾವುದೇ ವಿಷಯದಲ್ಲೂ ರಾಜಿ ಮಾಡಿಕೊಳ್ಳದ ಖಡಕ್‌ ಅಧಿಕಾರಿ ಎನ್ನುವ ಹೆಸರು ಪಡೆದವರು.ಈ ಕಾರಣಕ್ಕೆ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದವರು.ಇಂಥಾ ಅಧಿಕಾರಿಯನ್ನು ತಮ್ಮ ಇಲಾಖೆಯಲ್ಲಿಟ್ಟುಕೊಳ್ಳಲು ವಿರೋಧಿಸಿದವರೇ ಹೆಚ್ಚು.ಹಾಗಂತ ಅಧಿಕಾರಕ್ಕಾಗಿ-ಸ್ಥಾನಮಾನಕ್ಕಾಗಿ ಯಾವುದೇ ಲಾಭಿ ಮಾಡಿದವರಲ್ಲ ರಶ್ಮಿ ಮಹೇಶ್.‌ ಯಾರೊಂದಿಗೂ ರಾಜಿ ಮಾಡಿಕೊಳ್ಳಲಿಲ್ಲ..ತಮ್ಮ ಕಾರ್ಯವ್ಯಾಪ್ತಿಯಲ್ಲಿ ಎಷ್ಟಾಗುತ್ತದೋ ಅಷ್ಟರ ಮಟ್ಟಿಗೆ ಸುಧಾರಣೆ ತರೊಕ್ಕೆ ಕೆಲಸ ಮಾಡಿದವರು.ಶಿಕ್ಷಣ ಇಲಾಖೆಗೆ ಕಳೆದೊಂದು ವರ್ಷದಿಂದೆ ನಿಯೋಜನೆಗೊಂಡ ಮೇಲೆಯೂ ರಶ್ಮಿ ಮಹೇಶ್‌ ಗಮನಾರ್ಹ ಎನ್ನುವಂತ ಬದಲಾವಣೆ-ಸುಧಾರಣೆ ತಂದರೆನ್ನುವುದನ್ನು ಇಡೀ ಇಲಾಖೆಯೇ ಮಾತನಾಡಿಕೊಳ್ಳುತ್ತಿದೆ.ಇಂಥಾ ಅಧಿಕಾರಿ ಇನ್ನಷ್ಟು ದಿನ ಇಲಾಖೆಯಲ್ಲಿದ್ದರೆ ಅಮೂಲಾಗ್ರ ಬದಲಾವಣೆ ಬರೋದು ಪಕ್ಕಾ ಎಂದು ಮಾತನಾಡಿಕೊಳ್ಳುತ್ತಿರುವಾಗಲೇ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ಅಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ವಿಶ್ವಸನೀಯ ಮೂಲಗಳು ಹೇಳುವಂತೆ ರಶ್ಮಿ ಮಹೇಶ್‌ ಅವರನ್ನು ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆಗೊಳಿಸಿ ಕೇಂದ್ರ ಸೇವೆಗೆ ವರ್ಗ ಮಾಡಲಾಗಿದೆಯಂತೆ. ಪ್ರತಿಯೋರ್ವ ಐಎಎಸ್‌ ಕೇಂದ್ರ ಸೇವೆಯನ್ನು ಕಡ್ಡಾಯವಾಗಿ ಮಾಡಲೇ ಬೇಕೆನ್ನುವ ನಿಯಮದ ಭಾಗವಾಗಿ ಅವರನ್ನು ವರ್ಗ ಮಾಡಿದ್ದರೆ ಆಕ್ಷೇಪವಿರಲಿಲ್ಲ. ಆದರೆ ಅವರ ವರ್ಗಾವಣೆ ನಡೆದಿರುವುದರ ಹಿಂದಿನ ಉದ್ದೇಶವೇ ಬೇರೆ ಎನ್ನಲಾಗುತ್ತಿದೆ.ರಶ್ಮಿ ಮಹೇಶ್‌ ಅವರು ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ-ಅನ್ಯಾಯಗಳಿಗೆ ಬ್ರೇಕ್‌ ಹಾಕಲು ಯತ್ನಿಸುತ್ತಿರುವುದು ಸರ್ಕಾರಕ್ಕೇನೆ ಮುಜುಗರ ತಂದಿದೆಯಂತೆ.ಅವರನ್ನು ಇಟ್ಟುಕೊಂಡರೆ ನಮಗೆ ತೊಂದರೆ ಎನ್ನುವ ಕಾರಣಕ್ಕೆ ಅವರನ್ನು ವರ್ಗ ಮಾಡಲು ಕೆಲವರೇ ಸರ್ಕಾರದ ಮಟ್ಟದಲ್ಲಿ ಲಾಭಿ ಮಾಡಿದ್ದಾರೆನ್ನಲಾಗ್ತಿದೆ.ಸರ್ಕಾರ ಕೂಡ ಇದಕ್ಕೆ ತಲೆಕೆಡಿಸಿಕೊಳ್ಳದೆ ಅವರ ವರ್ಗಾವಣೆಗೆ ಹಸಿರುನಿಶಾನೆ ತೋರಿಸಿದೆಯಂತೆ. ಅಂದ್ಹಾಗೆ ಕೇಂದ್ರ ಸೇವೆಗೆ ರಶ್ಮಿ ಮಹೇಶ್ ಅವರನ್ನು ರವಾನಿಸಲಾಗ್ತಿದೆ ಎನ್ನುವುದು ಬಲ್ಲ ಮೂಲಗಳ ಮಾಹಿತಿ.

ALSO READ :  ಮಹಿಳೆಯರಿಗೆ "ಶಕ್ತಿ" ಪ್ರಯಾಣ ಇನ್ನೂ ಅನಾಯಾಸ.. "ಆಧಾರ್" ಓರಿಜಿನಲ್ಲೇ ಬೇಕೆಂತಿಲ್ಲ... ಮೊಬೈಲ್‌ ನಲ್ಲಿ‌ ತೋರಿಸಿದ್ರೂ ಪರ್ವಾಗಿಲ್ಲ..

ಪಿಯು ಬೋರ್ಡ್‌ ನ ನಿರ್ದೇಶಕ ಭರತ್‌ ವರ್ಗಾವಣೆ ಆಗುತ್ತಿರುವ ಮತ್ತೋರ್ವ ಖಡಕ್‌ ಐಎಎಸ್‌ ಎನ್ನಲಾಗ್ತಿದೆ.ಭರತ್‌ ಒಳ್ಳೆಯ ಹಾಗೂ ದಕ್ಷ ಅಧಿಕಾರಿ ಎನ್ನುವು ದರಲ್ಲಿ ಎರಡು ಮಾತಿಲ್ಲ.ಭ್ರಷ್ಟಾಚಾರ-ಅಕ್ರಮ ಎನ್ನೋದೇ ಅವರ ಟ್ರ್ಯಾಕ್‌ ರೆಕಾರ್ಡ್‌ ನಲ್ಲಿಲ್ಲ.ಕರ್ನಾಟಕದಲ್ಲಿ ಕೆಲಸ ಮಾಡಿದ ಸ್ಥಳದಲ್ಲೆಲ್ಲಾ ಒಳ್ಳೆಯ ಕೆಲಸ ಮಾಡಿದ ಅಧಿಕಾರಿ ಎನ್ನುವ ಹೆಸರು ಪಡೆದಿದ್ದಾರೆ. ಕಳೆದ ವರ್ಷ ಪಿಯು ಬೋರ್ಡ್‌ ಡೈರೆಕ್ಟರ್‌ ಆಗಿ ಬಂದ ಮೇಲೆ ಇಲಾಖೆಯಲ್ಲಿದ್ದ ಸಾಕಷ್ಟು ಅವ್ಯವಸ್ಥೆ ಸರಿಮಾಡಿದ್ದಾರೆ.ಅಕ್ರಮಗಳಿಗೆ ಬ್ರೇಕ್‌ ಹಾಕಿದ್ದಾರೆ.ಅನೇಕ ವರ್ಷಗಳಿಂದಲೂ ಮುಂದುವರೆಸಿಕೊಂಡು ಬಂದಿದ್ದ ಅವ್ಯವಸ್ಥೆ ಸರಿಪಡಿಸಿದ್ದಾರೆ.ಸರಿ ಮಾಡಿರುವುದು ಸ್ವಲ್ಪ..ಸರಿ ಮಾಡಬೇಕಿರುವುದು ಇನ್ನೂ ಇದೆ ಎಂದು ಹೇಳುತ್ತಿರುವಾಗಲೇ ಅವರನ್ನು ದಿಡೀರ್‌ ವರ್ಗಾವಣೆ ಮಾಡಲಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.ಯಾವ ಜಿಲ್ಲೆಗೆ ವರ್ಗ ಮಾಡಲಾಗ್ತಿದೆ ಎನ್ನುವುದು ಗೊತ್ತಾಗದಿದ್ದರೂ ವರ್ಗಾವಣೆ ಮಾಡಲಾಗಿದೆ ಎನ್ನುವುದಂತೂ ಪಕ್ಕಾ ಅಂತೆ.ರಶ್ಮಿ ಮಹೇಶ್‌ ಅವರ ವೇವ್ ಲೆಂತ್‌ ಗೆ ತಕ್ಕದಾಗಿ ಕೆಲಸ ಮಾಡ್ತಿದ್ದ ಭರತ್‌ ಅವರ ವರ್ಗಾವಣೆಯಿಂದ ಅದಕ್ಕಾಗಿ ಚಿತಾವಣೆ ನಡೆಸಿದವರು ಹಾಲು ಕುಡಿದಷ್ಟು ಸಂತುಷ್ಟರಾಗುತ್ತಿರಬಹುದು,ಆದ್ರೆ ಹಾಳೆದ್ದು ಹೋಗಿರುವ ವ್ಯವಸ್ಥೆ ಸರಿ ಆಗಬೇಕೆಂದು ಬಯಸುತ್ತಿದ್ದವರಿಗೆ ಭರತ್‌ ಅವರ ವರ್ಗಾವಣೆ ಶಾಕ್‌ ನೀಡಿದೆ ಎನ್ನುವುದಂತೂ ಸತ್ಯ.

ಇವರಿಬ್ಬರಂತೆ ಮಲ್ಲೇಶ್ವರಂ ನಲ್ಲಿರುವ ಪಿಯು ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊರ್ವ ದಕ್ಷ ಅಧಿಕಾರಿ ಮಂಜುಶ್ರೀ ಎನ್ನುವವರನ್ನು ಕೂಡ ವರ್ಗ ಮಾಡಲಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅತ್ಯಂತ ದಕ್ಷ ಅಧಿಕಾರಿ ಮಂಜುಶ್ರೀ.ಈ ವಿಭಾಗದಲ್ಲಿ ತುಂಬಿ ತುಳುಕುತ್ತಿದ್ದ ಅವ್ಯವಸ್ಥೆ-ಅಕ್ರಮವನ್ನು ಆದಷ್ಟು ಪ್ರಮಾಣದಲ್ಲಿ ಸರಿ ಮಾಡಿದ್ದರು.ಇದೇ ಅನೇಕರಿಗೆ ಇಷ್ಟವಾಗುತ್ತಿರಲಿಲ್ಲವಂತೆ.ದೊಡ್ಡವರ ಮಟ್ಟಿಗೆ ಇದರ ಬಗ್ಗೆ ದೂರುಗಳು ಹೋಗಿದ್ದವಂತೆ.ಪೂರ್ವಾಪರ ವಿಚಾರಿಸದೆ ಮೇಡಮ್‌ ಅವರನ್ನೇ ತರಾಟೆಗೆ ತೆಗೆದುಕೊಳ್ಳುವ ಕೆಲಸ ಮಾಡಲಾಗ್ತಿತ್ತಂತೆ.ಆದರೆ ಸರ್ಕಾರದ ಸಂಬಳಕ್ಕೆ ಕೆಲಸ ಮಾಡುವ ನಾನು ಸ್ವಾಭಿಮಾನ ಬಿಟ್ಟು ಕೆಲಸ ಮಾಡೊಲ್ಲ..ಆತ್ಮಸಾಕ್ಷಿಗೆ ವಿರು‍ದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದ್ಹೇಳುತ್ತಲೇ ತಮ್ಮ ದಕ್ಷತೆ-ಪ್ರಾಮಾಣಿಕತೆಯನ್ನು ಮುಂದುವರೆಸಿದ್ದರಂತೆ.ಆದರೆ ದುರಾದೃಷ್ಟ ಎನ್ನುವಂತೆ ಅವರನ್ನು ಕೂಡ ಉಳಿಸಿಕೊಳ್ಳುವ ಕೆಲಸ ಸಚಿವ ಮಧು ಬಂಗಾರಪ್ಪ ಅವರಿಂದಾಗಲಿಲ್ಲ ಎನ್ನುವುದೇ ದುರಾದೃಷ್ಟಕರ.

ಈ ಮೂವರು ಅಧಿಕಾರಿಗಳ ವರ್ಗಾವಣೆ ಬಹುತೇಕ ಪೂರ್ಣಗೊಂಡಿದ್ದು ಒಂದಷ್ಟು ತಾಂತ್ರಿಕ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆಯಂತೆ.ಅದೆಲ್ಲಾ ಪೂರ್ಣಗೊಂಡರೆ ಅಧೀಕೃತ ಆದೇಶ ಹೊರಬೀಳಬಹುದಂತೆ.ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಇದನ್ನು ಇಲಾಖೆ ಮೂಲಗಳೇ ದೃಢಪಡಿಸಿವೆ.ಈ ಮೂವರನ್ನು ವರ್ಗ ಮಾಡುವುದರ ಹಿಂದೆ ಯಾರ ಕೈವಾಡ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.ಅವರೆಲ್ಲಾ ಈ ಮೂವರು ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ವದಂತಿ ಬಗ್ಗೆ ಸಂಭ್ರಮಿಸುತ್ತಿರಬಹುದು..ಆದರೆ ಆ ಸಂಭ್ರಮವೇ ಶಾಶ್ವತವಾಗಿರುವುದಿಲ್ಲ ಎನ್ನುವುದು ಕೂಡ ಸತ್ಯ..ಆದರೆ ತುಂಬಾ ದುಃಖಕರವಾದ ಸಂಗತಿ ಎಂದರೆ ಇಂಥಾ ದಕ್ಷರನ್ನು ಮನಸು ಮಾಡಿದಿದ್ರೆ ಮಧು ಬಂಗಾರಪ್ಪ ಅವರಂಥ ಸಚಿವರು ಉಳಿಸಿಕೊಳ್ಳಬಹುದಿತ್ತು..ಆದರೆ ಅವರೇಕೆ ಈ ನಿಟ್ಟಿನಲ್ಲಿ ಮನಸು ಮಾಡಲಿಲ್ಲ ಎನ್ನುವುದೇ ಪ್ರಶ್ನೆ.ಇದನ್ನು ಗಮನಿಸಿದ್ರೆ ಎಲ್ಲರನ್ನೂ ಕಾಡುವ ಪ್ರಶ್ನೆ ಏನ್‌ ಗೊತ್ತಾ.. ಇಲಾಖೆ ಸುಧಾರಣೆ ಆಗಬೇಕೆನ್ನುವುದು ಮಧು ಬಂಗಾರಪ್ಪರಿಗೆ ಬೇಕಿಲ್ಲವೇ..? ಎನ್ನುವುದು…


Political News

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

ದಾವಣಗೆರೆ ದಕ್ಷಿಣದಲ್ಲಿ ಜಮೀರ್ ಗೈರುಹಾಜರಿ: ಸಮರ್ಥ್ ಶಾಮನೂರು ಗೆಲುವಿಗೆ ಮುಸ್ಲಿಂ ಮತಗಳೇ ಅಡ್ಡಿ?

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

ವಿಶ್ವ ರಾಜಕಾರಣದಲ್ಲಿ ಹೊಸ ಸಮೀಕರಣ: ಟ್ರಂಪ್-ಮೋದಿ ಕಾಲ್‌ನಲ್ಲಿ ಎಲಾನ್ ಮಸ್ಕ್ ಎಂಟ್ರಿ!

ನೇಪಾಳ:  ‘ಜೆನ್ ಜಿ’ ಪ್ರತಿಭಟನೆ ಹತ್ತಿಕ್ಕಿದ್ದ ಮಾಜಿ ಪ್ರಧಾನಿ ಓಲಿ ಸೆರೆ

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?

ಪೆಟ್ರೋಲ್-ಡೀಸೆಲ್ ಶಾಕ್ ನಡುವೆ ಕೇಂದ್ರದ ಮಾಸ್ಟರ್ ಪ್ಲಾನ್: ಅಬಕಾರಿ ಸುಂಕ ₹10 ಕಡಿತ

ಬೆಂಗಳೂರು ಕೇಂದ್ರ ಬಜೆಟ್ 2026: ಕಾಂಕ್ರೀಟ್ ಕಾಡಿಗೆ ‘ಮಾನವೀಯ’ ಸ್ಪರ್ಶ!

Scroll to Top