advertise here

Search

ಪತ್ನಿಯಿಂದ ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಮೆಟ್ಟಿಲೇರಿದ ಪತಿ

bangalore

ಬೆಂಗಳೂರು:  ಸಾಮಾನ್ಯ ಪ್ರಕರಣಗಳಲ್ಲಿ ಪತ್ನಿಯರು ಪತಿಯ ವಿರುದ್ಧ ಕಿರುಕುಳದ ದೂರು ನೀಡುವುದನ್ನು ನಾವು ಕೇಳಿರುತ್ತೇವೆ. ಆದರೆ, ಬೆಂಗಳೂರಿನಲ್ಲಿ ಪತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆ-ಮಾವನ ವಿರುದ್ಧ ಗಂಭೀರವಾದ ಕಿರುಕುಳ, ಲೈಂಗಿಕ ವಿಕೃತಿ ಮತ್ತು ಮೋಸದ ಆರೋಪ ಹೊರಿಸಿ ಪೊಲೀಸರ ಮೊರೆ ಹೋಗಿರುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ನಾಗರಭಾವಿ ನಿವಾಸಿಯಾದ 37 ವರ್ಷದ ವ್ಯಕ್ತಿ, 31 ವರ್ಷದ ಶಿಲ್ಪಾ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆಯ ನಂತರ ದಂಪತಿಗಳು ಜಕ್ಕೂರು ಬಳಿಯ ವಿಲ್ಲಾವೊಂದರಲ್ಲಿ ವಾಸವಿದ್ದರು. ಆದರೆ, ಸುಂದರವಾಗಿರಬೇಕಿದ್ದ ದಾಂಪತ್ಯ ಜೀವನ ಕೆಲವೇ ದಿನಗಳಲ್ಲಿ ನರಕಸದೃಶವಾಯಿತು ಎಂದು ಪತಿ ಆರೋಪಿಸಿದ್ದಾರೆ.

ದೂರಿನಲ್ಲಿರುವ ಗಂಭೀರ ಆರೋಪಗಳು:

ಲೈಂಗಿಕ ಕಿರುಕುಳ ಮತ್ತು ವಿಕೃತಿ: ಪತ್ನಿಯು ತನಗೆ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿ, ಅದರಲ್ಲಿರುವಂತೆ ವರ್ತಿಸುವಂತೆ ಒತ್ತಾಯಿಸುತ್ತಿದ್ದಳು. ಅಷ್ಟೇ ಅಲ್ಲದೆ, ತನ್ನ ಸ್ನೇಹಿತೆಯ ಜೊತೆಗೂ ಲೈಂಗಿಕವಾಗಿ ತೊಡಗಿಸಿಕೊಳ್ಳುವಂತೆ ಪೀಡಿಸುತ್ತಿದ್ದಳು ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ಖಾಸಗಿ ಜೀವನದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಳು ಎಂದೂ ಅವರು ಹೇಳಿದ್ದಾರೆ.

ಹಣಕಾಸಿನ ಬಗ್ಗೆ ಹೀಯಾಳಿಕೆ: ಪತಿಯ ಆರ್ಥಿಕ ಪರಿಸ್ಥಿತಿಯನ್ನು ಪತ್ನಿ ಸದಾ ಹೀಯಾಳಿಸುತ್ತಿದ್ದಳು. “ನನ್ನ ಜೀವನಶೈಲಿಗೆ ತಕ್ಕಂತೆ ನಿನ್ನ ಬಳಿ ಹಣವಿಲ್ಲ” ಎಂದು ಚುಚ್ಚುತ್ತಿದ್ದಳು. ಶ್ರೀಮಂತ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದು ಮತ್ತು ಮದ್ಯಪಾನ ಮಾಡುವುದರಲ್ಲಿ ಆಕೆ ಮಗ್ನಳಾಗಿದ್ದಳು ಎಂದು ಆರೋಪಿಸಲಾಗಿದೆ.

ಇಷ್ಟೇ ಅಲ್ಲದೇ ಶಿಲ್ಪಾ ತನಗೆ ಮದುವೆಗೆ ಮುಂಚಿನ ಮತ್ತು ನಂತರದ ಹಳೆಯ ಪ್ರೇಮಿಗಳ ಜೊತೆಗಿನ ಅಕ್ರಮ ಸಂಬಂಧಗಳ ಬಗ್ಗೆ ಹೇಳಿ ಪತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಳು ಎನ್ನಲಾಗಿದೆ.

ಮನೆಯಿಂದ ಹೊರಹಾಕಿದ ಅತ್ತೆ-ಮಾವ:

ಪತಿಯ ಆರೋಪದಂತೆ, ಆತನ ಅತ್ತೆ ಆಶಾ ಮತ್ತು ಮಾವ ಮಾಧವ ಕೃಷ್ಣ ಅವರು ಸಂಸಾರದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದರು. “ನನ್ನ ಮಗಳಿಗೆ ನಿನಗಿಂತ ಶ್ರೀಮಂತ ಹುಡುಗ ಸಿಗುತ್ತಾನೆ, ನೀನು ಅವಳನ್ನು ಬಿಟ್ಟು ತೊಲಗು” ಎಂದು ಅತ್ತೆ ಪ್ರಚೋದಿಸುತ್ತಿದ್ದರೆ, ಮಾವನು ಬಾಡಿಗೆ ಗೂಂಡಾಗಳನ್ನು ಕಳುಹಿಸಿ ಬೆದರಿಕೆ ಹಾಕಿಸುತ್ತಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ.

ALSO READ :  ಸುದ್ದಿ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ  "ನ್ಯೂಸ್ ಫಸ್ಟ್" ನಲ್ಲಿ ಆಗುತ್ತಿರುವುದೇನು..?  ಹೀಗೆ ನಡೆಯಿತೆನ್ನುವುದು  "ಸತ್ಯ"ನಾ..?

ಸೆಪ್ಟೆಂಬರ್ 24, 2024 ರಂದು ಪತಿಯನ್ನು ಕೇವಲ ಒಂದು ಲ್ಯಾಪ್‌ಟಾಪ್ ಮತ್ತು ಯೂನಿಫಾರ್ಮ್‌ನೊಂದಿಗೆ ಮನೆಯಿಂದ ಬಲವಂತವಾಗಿ ಹೊರಹಾಕಲಾಯಿತು ಎನ್ನಲಾಗಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಲೂಟಿ?

ತನ್ನ ವಿಲ್ಲಾದಲ್ಲಿರುವ ಸುಮಾರು 1.87 ಲಕ್ಷ ರೂ. ನಗದು, ಅಪಾರ ಪ್ರಮಾಣದ ಚಿನ್ನಾಭರಣಗಳು (ಚೋಕರ್, ಚೈನ್, ಬ್ರೇಸ್ಲೆಟ್), ಬೆಳ್ಳಿ ತಟ್ಟೆಗಳು ಮತ್ತು ಪ್ರಮುಖ ಶೈಕ್ಷಣಿಕ ದಾಖಲೆಗಳನ್ನು ಪತ್ನಿ ಮತ್ತು ಆಕೆಯ ಕುಟುಂಬದವರು ಅಕ್ರಮವಾಗಿ ಇರಿಸಿಕೊಂಡಿದ್ದಾರೆ ಎಂದು ಪತಿ ದೂರಿದ್ದಾರೆ. ಅಷ್ಟೇ ಅಲ್ಲದೆ, ಲ್ಯಾಪ್‌ಟಾಪ್‌ನಲ್ಲಿದ್ದ ಮದುವೆಯ ಫೋಟೋ ಮತ್ತು ವೀಡಿಯೋಗಳನ್ನು ಡಿಲೀಟ್ ಮಾಡುವ ಮೂಲಕ ಮಾನಸಿಕವಾಗಿ ಮತ್ತಷ್ಟು ಕುಗ್ಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | ‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು fir ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆದರೆ, ಮೂಲಗಳ ಪ್ರಕಾರ ಪತ್ನಿ ಶಿಲ್ಪಾ ಕೂಡ ಪತಿಯ ವಿರುದ್ಧ ತಮಿಳುನಾಡಿನಲ್ಲಿ ಗಂಭೀರವಾದ ಪ್ರತಿ ದೂರು (Counter FIR) ದಾಖಲಿಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಈ ವಿಚ್ಛೇದನ ಮತ್ತು ಕಿರುಕುಳದ ಪ್ರಕರಣ ನ್ಯಾಯಾಲಯದಲ್ಲಿದ್ದು, ಪೊಲೀಸರು ಎರಡೂ ಕಡೆಯ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಬೆಂಗಳೂರಿನ ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top