ತಿಂಗಳೆಲ್ಲಾ ದುಡಿದ್ರೂ ಸುದ್ದಿಮನೆ ಮಿತ್ರರಿಗೇಕಿಲ್ಲ “ಸಂಪೂರ್ಣ” ಸಂಬಳ..!?

ಇದು… ಕನ್ನಡ ಸುದ್ದಿ ಚಾನೆಲ್‌ ಗಳ ಸಾಲಿಗೆ ಮತ್ತೊಂದಾಗಿ ಸೇರ್ಪಡೆಯಾಗುವ ಸಾಧ್ಯತೆ ಸೃಷ್ಟಿಸಿದ್ದ ಡಿಜಿಟಲ್‌ ಚಾನೆಲ್‌ ವೊಂದರ ಬೆಳವಣಿಗೆ ದೃಷ್ಟಿಯಿಂದ  ನಿಜಕ್ಕೂ ಒಳ್ಳೆಯ  ಸುದ್ದಿಯಲ್ಲ.. ಏಕೆಂದರೆ ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ, ಅಲ್ಲಿ ದುಡಿಯುತ್ತಿರುವ ಕೆಲವು ಮಾದ್ಯಮ ಸಿಬ್ಬಂದಿಗೆ ವೇತನವನ್ನೇ ನೀಡಿಲ್ಲ ಎನ್ನುವ ಮಾಹಿತಿ  ಸುದ್ದಿಜಗತ್ತಿನಲ್ಲಿ ಪಸರ್‌ ಆಗಿದೆ. ಆರ್ಥಿಕವಾಗಿ ಆ ಡಿಜಿಟಲ್‌ ಚಾನೆಲ್‌ ನ ಸ್ತಿತಿ ಚೆನ್ನಾಗಿದ್ದರೂ ಸಿಬ್ಬಂದಿಯನ್ನು ಮಾತ್ರ ಸಂಬಳ ಕೊಡದೆ ಸತಾಯಿಸಲಾಗುತ್ತಿದೆಯಂತೆ. ಒಂದಷ್ಟು ಜನರಿಗೆ ಸಂಬಳ ಕೊಟ್ಟು ಇನ್ನೊಂದಷ್ಟು ಸಿಬ್ಬಂದಿ ವೇತನವನ್ನು ತಡೆಹಿಡಿದಿಟ್ಟುಕೊಳ್ಳಲಾಗಿದೆಯಂತೆ. … Read more

ನಾಳೆ ಪತ್ರಕರ್ತ ಪುಟ್ಟಪ್ಪ ಸಾರಥ್ಯದ “ಪೊಲಿಟಿಕಲ್-360” ಲಾಂಚ್

ಮೈಸೂರಿನ ಪತ್ರಕರ್ತ ಮಿತ್ರ ಪುಟ್ಟಪ್ಪ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾನೆ.ಮೊದಲು ಆತನಿಗೊಂದು ಆಲ್ ದಿ ಬೆಸ್ಟ್…ಅಂದ್ಹಾಗೆ ಪೊಲಿಟಿಕಲ್ 360 ಎನ್ನುವ ಡಿಜಿಟಲ್ ಫ್ಲಾಟ್ ಫಾರ್ಮ್ ನ್ನೇ ಚಾನೆಲ್ ಮಾಡ್ಲಿಕ್ಕೆ ಹೋಗಿ ತನ್ನದಲ್ಲದ ತಪ್ಪಿಗೆ ವಿರೋಧ-ವಿವಾದ ಎಲ್ಲವನ್ನು ಮೈಮೇಲೆ ಎಳೆದುಕೊಂಡು, ಬೈಗುಳ-ಹಿಡಿಶಾಪ ಪಡೆದುಕೊಂಡು ಕೆಲಕಾಲ ಅಜ್ನಾತವಾಸಕ್ಕೆ ತೆರಳಿದ್ದ ಪುಟ್ಟಪ್ಪ ಅದು ಕಲಿಸಿಕೊಟ್ಟ ಜೀವನಾನುಭವದಿಂದ ಸಾಕಷ್ಟು ಮಾಗಿ ಇದೀಗ ಮೈ ಕೊಡವಿ ಎದ್ದುನಿಂತಿದ್ದಾನೆ.ಈ ಬಾರಿ ಗೆಲ್ಲಲೇಬೇಕೆನ್ನುವ ಮಹತ್ವಾಕಾಂಕ್ಷೆ-ಛಲ-ಆತ್ಮವಿಶ್ವಾಸ-ಉಮೇದು-ಇರಾದೆ-ಕನಸು ಎಲ್ಲವನ್ನು ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.ಅದು ನಾಳೆಯೇ( 08-05-2026) ಉಡ್ಡಯನಗೊಳ್ಳಲಿದೆ..ಅಂದ್ಹಾಗೆ ಆತನ … Read more

WHY SENIOR J‌OURNALIST LAXMAN HOOGAR QUIT JOURNALISM/ “ಪತ್ರಿಕೋದ್ಯಮ”ದ ಗಟ್ಟಿ ದ್ವನಿ “ಲಕ್ಷ್ಮಣ್ ಹೂಗಾರ್” ಮೌನಿಯಾಗಿದ್ದೇಕೆ..? ಇಲ್ಲಿವೆ ಅವರೇ ನೀಡುವ ಕಾರಣ..!

ಲಕ್ಷ್ಮಣ್ ಹೂಗಾರ್.. …ಕನ್ನಡ ಪತ್ರಿಕೋದ್ಯಮ ಇವತ್ತಿಗೂ ಮಿಸ್ ಮಾಡಿಕೊಳ್ಳುತ್ತಿರುವ ಹೆಸರಿದು.. ಬಹುತೇಕ ಪತ್ರಕರ್ತರು ಅಗತ್ಯಕ್ಕೋ-ಅನಿವಾರ್ಯಕ್ಕೋ ಪರಿಸ್ಥಿತಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಇಂದಿನ ಪ್ರಕ್ಷುದ್ಧ ಪರಿಸ್ತಿತಿಯಲ್ಲಿ ಲಕ್ಷ್ಮಣ್ ಹೂಗಾರ್ ಎನ್ನುವಂತ ಪತ್ರಕರ್ತನ ಅನುಪಸ್ತಿತಿ ತೀವ್ರವಾಗಿ ಕಾಡದೆ ಇರೊಲ್ಲ…ಇತ್ತೀಚೆಗೆ ಸಾಮಾಜಿಕ ಜಾಲತಾಣ ಗಳಲ್ಲಿ  ಲಕ್ಷ್ಮಣ್ ಹೂಗಾರ್ ಅವರ ಕಣ್ಮರೆ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.ಅಷ್ಟೊಂದು ಆಕ್ಟೀವ್ ಆಗಿದ್ದ ಲಕ್ಷ್ಮಣ್  ಎಲ್ಲಿ ಹೋದರು..? ಎಲ್ಲಿದ್ದಾರೆ..? ಏನಾದರು..?ಏನ್ ಮಾಡುತ್ತಿದ್ದಾರೆ..?ಪತ್ರಿಕೋದ್ಯಮದ ಸಂಗ-ಸಹವಾಸ-ಸಾಂಗತ್ಯವನ್ನೇ ಬಿಟ್ರಾ..? ಪರ್ಯಾಯವನ್ನೇನಾದ್ರೂ ಹುಡುಕಿಕೊಂಡಿದ್ದಾರಾ..? ಪತ್ರಿಕೋದ್ಯಮಕ್ಕಿಂತ ಅವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರದಲ್ಲೇ ನೆಮ್ಮದಿಯಾಗಿದ್ದಾರಾ..? ಎನ್ನುವ … Read more

ಏಪ್ರಿಲ್,18ಕ್ಕೆ “ವಿಸ್ತಾರ” ರೀ ಲಾಂಚ್…ಶೀಘ್ರವೇ “ಫ್ರೀಡಂ” ಲೋಕಾರ್ಪಣೆ

ಭವಿಷ್ಯದ ಪರಿಣಾಮಗಳೇನೇ ಇರಲಿ,ಕನ್ನಡ ಮಾದ್ಯಮ ಲೋಕ ಎರಡು ಬೆಳವಣಿಗೆಗಳಿಗೆ ಸಾಕ್ಷಿ ಆಗುತ್ತಿದೆ.  ಒಂದು ಕೆಲ ವರ್ಷಗಳಿಂದೆ ಅಬ್ಬರದಲ್ಲಿ ಆರಂಭವಾದಷ್ಟೇ ವೇಗದಲ್ಲಿ ಬಾಗಿಲು ಮುಚ್ಚಿಕೊಂಡ ವಿಸ್ತಾರ ನ್ಯೂಸ್ ಚಾನೆಲ್ ಏಳು ಬೀಳುಗಳ ತರುವಾಯ ರೀ ಲಾಂಚ್ ಆಗುತ್ತಿರುವುದು ಮೊದಲ ಸಂಗತಿಯಾದರೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಮೂಡಿಬರುತ್ತಿದ್ದ ಫ್ರೀಡಂ ನ್ಯೂಸ್ ಚಾನೆಲ್ ಆಗಿ ಲೋಕಾರ್ಪಣೆಗೊಳ್ಳಲು ಅಣಿಯಾಗುತ್ತಿದೆ. ಕನ್ನಡ ಫ್ಲ್ಯಾಶ್ ನ್ಯೂಸೇ ,ವಿಸ್ತಾರ ನ್ಯೂಸ್ ಚಾನೆಲ್ ಬಗ್ಗೆ ಈ ಹಿಂದೆನೇ ಸಾಕಷ್ಟು ಬರೆದಿತ್ತು.ವಿಸ್ತಾರದ ಭವಿಷ್ಯ ಡೋಲಾಯಮಾನವಾದ ಸನ್ನಿವೇಶದಲ್ಲೇ ಎಚ್ಚರಿಸುವ ಕೆಲಸ … Read more

ಎಂತೆಂಥವರ ನಡುವೆ ಇಂಥವರು ನೆನಪಾಗೊಲ್ವಾ..!?

ಇವತ್ತು ಬೀದರ್‌ ನಲ್ಲಿ ನಡೆದ ಪತ್ರಿಕಾ ಸಮ್ಮೇಳನದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಪ್ರಶಸ್ತಿಗೆ  ನಿಜವಾಗ್ಲೂ ಯೋಗ್ಯವಾದ-ಸಮರ್ಥವಾದವರಿಗೆ ನಮ್ಮದೊಂದು ಪ್ರಾಮಾಣಿಕವಾದ ಮನಸಿನ ಅಭಿನಂದನೆ..ಪ್ರಶಸ್ತಿಗೆ ಅರ್ಹರೇ ಅಲ್ಲದ ಒಂದಷ್ಟು ಜನರಿಗೂ ಪ್ರಶಸ್ತಿ ಪ್ರಧಾನ ಮಾಡಲಾಗಿದೆ ಎನ್ನುವ ಒಂದಷ್ಟು ಪತ್ರಕರ್ತರ ಆರೋಪಗಳ ಸನ್ನಿವೇಶದಲ್ಲೇ  ಯಾಕೋ ಆ ಇಬ್ಬರು ಪತ್ರಕರ್ತರು ತುಂಬಾ ನೆನಪಾದರು.ನಮ್ಮ ನಡುವೆ ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಸಾಕ್ಷಿಪ್ರಜ್ಞೆಯಂತೆ ಇರುವ ಎಷ್ಟೋ ಪತ್ರಕರ್ತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಯಾ ಎನ್ನುವ ನೋವು ಕೂಡ ಕಾಡಿತು.( ಸಧ್ಯದಲ್ಲಿ ಆ ಇಬ್ಬರು ಸಕ್ರೀಯ ಪತ್ರಿಕೋದ್ಯಮದಲ್ಲಿ ಇಲ್ಲವಾದರೂ … Read more

“ರಿಪಬ್ಲಿಕ್‌ ಕನ್ನಡ”ಕ್ಕೆ ಹಿರಿಯ ಪತ್ರಕರ್ತ ಶಿವಶಂಕರ್ ಎಂಟ್ರಿ.. ಗರಿಗೆದರಿದ “ಮರುಹುಟ್ಟಿ”ನ ನಿರೀಕ್ಷೆ..

ನಾವಿಕನಿಲ್ಲದ ದೋಣಿಯಂತಾಗಿದ್ದ ರಿಪಬ್ಲಿಕ್‌ ಕನ್ನಡ(republic tv)ಕ್ಕೆ ಸಮರ್ಥ ಸಾರಥಿ ಸಿಕ್ಕಿದ್ದಾರೆಂದು ಅನ್ನಿಸುತ್ತೆ.ಟಿವಿ೯ ಕನ್ನಡ ಚಾನೆಲ್‌ ಸ್ಥಾಪಕರಲ್ಲೊಬ್ಬರಾಗಿದ್ದ ಹಿರಿಯ ಪತ್ರಕರ್ತ ಶಿವಶಂಕರ್‌( senior journalist shivashankar) ರಿಪಬ್ಲಿಕ್‌ ಕನ್ನಡದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದಾರೆ.ನಿನ್ನೆ ಅಂದರೆ ಏಪ್ರಿಲ್‌ ೨ ರಂದು ಅಧಿಕಾರ ವಹಿಸಿಕೊಂಡಿರುವ ಶಿವಶಂಕರ್‌ ಮೇಲೆ ಮೊಣಭಾರದ ಜವಾಬ್ದಾರಿಗಳಿವೆ…ಆತ್ಮಸ್ಥೈರ್ಯಕ್ಕೆ ಸವಾಲೆಸೆಯುವ ಮಟ್ಟಿಗಿನ ಗಂಭೀರ ಸವಾಲುಗಳಿರುವುದಂತೂ ಸತ್ಯ..ಏಕೆಂದರೆ ಶೂನ್ಯದಿಂದ ಚಾನೆಲ್‌ ನ್ನು ಕಟ್ಟಿ ಬೆಳೆಸಬೇಕಾದ ಸ್ಥಿತಿಯಲ್ಲಿದೆ ರಿಪಬ್ಲಿಕ್‌ ಕನ್ನಡದ ಸಧ್ಯದ ಸ್ಥಿತಿ.ಹಾಗಾಗಿ ಶಿವಶಂಕರ್‌ ಅವರ ಪಯಣ ಅಂದುಕೊಂಡಷ್ಟು ಸಲೀಸಾಗಿಯಂತೂ ಇಲ್ಲ. ಶಿವಶಂಕರ್‌ ಕನ್ನಡ … Read more

“ಕ್ಯಾಮೆರಾಮನ್‌” ಗಳ ಸಾವೆಂದರೆ ಅಷ್ಟೊಂದು “ನಿಕೃಷ್ಟ”ನಾ..?! ಕನಿಷ್ಟ ಸೌಜನ್ಯಕ್ಕೂ “ಸಂತಾಪ-ಸಹಾನುಭೂತಿ” ಬೇಡ್ವಾ..!?

the death of cameramen

ಕನ್ನಡದ ನ್ಯೂಸ್‌ ಚಾನೆಲ್‌ ಗಳಲ್ಲಿ ಕೆಲಸ ಮಾಡುವ ರಿಪೋರ್ಟರ್‌ ಗಳಿಗೆ ಇರೋ ಬೆಲೆಯಲ್ಲಿ ಅರ್ಧದಷ್ಟು ಬೇಡ..ಕಾಲು ಪರ್ಸೆಂಟ್‌ ನಷ್ಟು ಬೆಲೆಯೂ ಕ್ಯಾಮೆರಾಮನ್‌ ಗಳಿಗಿಲ್ಲ ಎನ್ನೋದು ಕಟು ವಾಸ್ತವ.

‘ಹೈಕಮಾಂಡ್ ನಿರ್ಧಾರವೇ ಅಂತಿಮ’: ನಾಯಕತ್ವದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಫುಲ್ ಸ್ಟಾಪ್!

cm siddaramaiah on leadership

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ನಾಯಕತ್ವದ ಬಗ್ಗೆ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ರಾಜತಾಂತ್ರಿಕವಾಗಿ ಉತ್ತರಿಸಿದ್ದಾರೆ.

ಈಡನ್ ಗಾರ್ಡನ್ಸ್‌ನಲ್ಲಿ ಸ್ಯಾಮ್ಸನ್ ಅಬ್ಬರ: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ!

t20 world cup 2026

ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ನಿರ್ಣಾಯಕ ಸೂಪರ್ 8 ಪಂದ್ಯದಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿದೆ.

ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

vidhana soudha media ban

ಪತ್ರಿಕಾ ಸ್ವಾತಂತ್ರ್ಯ( ಅಭಿವ್ಯಕ್ತಿ ಸ್ವಾತಂತ್ರ್ಯ)ವನ್ನು ಹತ್ತಿಕ್ಕುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಯಾವ ರೀತಿಯ ವಿರೋಧ ವ್ಯಕ್ತವಾಗಬೇಕಿತ್ತೋ,?