advertise here

Search

bBMP ಅಂಗಳದಲ್ಲಿ 24 ಕೋಟಿ ಹಗರಣದ ಸದ್ದು-ಅಕ್ರಮ ಸಾಬೀತಾದ್ರೆ ಜೈಲ್  ಫಿಕ್ಸ್..!


ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಮತ್ತೊಂದು ಬೃಹತ್ ಹಗರಣ ಸುದ್ದಿ ಮಾಡಿದೆ.ಬಿಬಿಎಂಪಿ ದಾಸರಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ 25 ಕೋಟಿ ಮೊತ್ತದ  ಬೃಹತ್ ಹಗರಣದ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಕೆಲಸವನ್ನೇ ಮಾಡದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದ ಆಪಾದನೆ ದಾಸರಹಳ್ಳಿ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಯದುಕೃಷ್ಣ ವಿರುದ್ಧ ಕೇಳಿಬಂದಿತ್ತು.ಹಾಗೆಯೇ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಮೂವರು ಕಾಂಟ್ರ್ಯಾಕ್ಟರ್ಸ್  ಬಿಲ್ ಪಾವತಿಸಿಕೊಂಡಿದ್ದರೆನ್ನುವ  ಆರೋಪ ಮಾಡಲಾಗಿತ್ತು.ಈ ಹಿನ್ನಲೆಯಲ್ಲಿ ವಲಯ ಆಯುಕ್ತರು 25 ಕೋಟಿ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ದಾಸರಹಳ್ಳಿ ವಲಯದಲ್ಲಿ ನಡೆದಿದ್ದ 25 ಕೋಟಿ ಅಕ್ರಮದ ವಿರುದ್ದ ತನಿಖೆಗೆ ಆದೇಶಿಸಲಾಗಿದೆ.ಈ ಆದೇಶದಿಂದ ದಾಸರಹಳ್ಳಿ ವಲಯದ ಕಾರ್ಯಪಾಲಕ ಅಭಿಯಂತರ ಯದುಕೃಷ್ಣಗೆ ಸಂಕಷ್ಟ ಎದುರಾಗಿದೆ. ಹಾಗೆಯೆ  ಕಾಂಟ್ರ್ಯಾಕ್ಟರ್ಸ್ ಗಳಾದ ಅಭಿಜಿತ್, ತೇಜೇಗೌಡ ಮತ್ತು ನಾರಾಯಣ ಗೌಡ ಅವರಿಗೂ ಸಮಸ್ಯೆ ಸೃಷ್ಟಿಯಾಗಿದೆ. ಅಂದ್ಹಾಗೆ ಈ ಬಗ್ಗೆ ದಾಸರಹಳ್ಳಿ ಮಾಜಿ ಶಾಸಕ ಹಾಗು ಕಾಂಗ್ರೆಸ್ ಮುಖಂಡ ಮಂಜುನಾಥ್ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು.

ಅಭಿಜಿತ್, ತೇಜೇಗೌಡ, ನಾರಾಯಣಗೌಡ  ಎನ್ನುವ ಗುತ್ತಿಗೆದಾರರು ದಾಸರಹಳ್ಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಯದುಕೃಷ್ಣ ಜತೆ  ಸೇರಿ ಕೊಂಡು 25 ಕೋಟಿ ಮೊತ್ತದ ಕಾಮಗಾರಿಯ ಬಿಲ್ ಗಳಲ್ಲಿ ಲೂಟಿ ಮಾಡಿದ್ದಾರೆನ್ನುವ ಹಿನ್ನಲೆಯಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು.

ALSO READ :  ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ

ರಾಜ್ಯ ಸರ್ಕಾರ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆ ಆಗಿರುವ 110 ಹಳ್ಳಿಗಳ ಅಭಿವೃದ್ಧಿಗೆ 25 ಕೋಟಿ ವಿಶೇಷ ಅನುದಾನವನ್ನು ಎರಡು ವರ್ಷದ ಹಿಂದೆ ಮಂಜೂರು ಮಾಡಿತ್ತು. ಹಳ್ಳಿಗಳಲ್ಲಿ ಮೂಲಸೌಕರ್ಯ ಅಂದರೆ ರಸ್ತೆ ಒಳಚರಂಡಿ ನಿರ್ಮಿಸಲು ಬಳಸಬೇಕೆನ್ನುವ ಸ್ಪಷ್ಟ ಆದೇಶ ಮಾಡಲಾಗಿತ್ತು.ಆದರೆ ಗುತ್ತಿಗೆದಾರಾದ ಅಭಿಜಿತ್, ತೇಜು ಗೌಡ, ನಾರಾಯಣಗೌಡ ಅವರು, ಇಂಜಿನಿಯರ್ ಯದುಕೃಷ್ಣ ಜತೆ ಸೇರಿಕೊಂಡು ಕಾಮಗಾರಿ ನಡೆಸದೆಯೇ ಬಿಲ್ ಪಡೆದಿರುತ್ತಾರೆ ಎನ್ನುವ ಅಂಶ ದೂರಿನಲ್ಲಿ ಉಲ್ಲೇಖವಾಗಿತ್ತು.

ಬಿಬಿಎಂಪಿ ಮುಖ್ಯ ಆಯುಕ್ತರು ಅನುಮೋದನೆ  ನೀಡುವ ಮೊದಲೇ ವರ್ಕರ್ ನೀಡಲಾಗಿತ್ತು.ಪಿಎಂಸಿ ಅನುಮೋದನೆ ಮೊದಲೇ ಮುಖ್ಯ ಕಂಟ್ರಾಕ್ಟರ್ ಗೆ ವರ್ಕರ್ ಆರ್ಡರ್ ನೀಡಲಾಗಿತ್ತು.110 ಹಳ್ಳಿಗಳ ಬದಲು ಹಾಲಿ ಇರುವ ಬಿಬಿಎಂಪಿ ಜಾಗದಲ್ಲಿ ರಸ್ತೆ ಮತ್ತು ಒಳಚರಂಡಿ ಮಾಡಿದ್ದ ಮಹಾನುಭಾವರು ಕೇವಲ ಒಂದು ತಿಂಗಳ ಅವಧಿಯಲ್ಲಿ 10 ಕೋಟಿ ಕೆಲಸ ಮುಗಿದಿದೆ ಎಂದು ಬಿಲ್ ಬರೆದಿದ್ದರಂತೆ.ಎಲ್ಲೂ ಕೆಲಸವೇ ಮಾಡದೆ ನಕಲಿ ಬಿಲ್ ಸೃಷ್ಟಿ ಮಾಡಲಾಗಿದೆ ಎಂದುಲೋಕಾಯುಕ್ತದಲ್ಲಿ ದೂರು ದಾಖಲಾಗಿಸಲಾಗಿತ್ತು.

ಈ ಬಗ್ಗೆ ಮಾದ್ಯಮಗಳು ವರದಿನ ಮಾಡಿದ್ದ ಬೆನ್ನಲ್ಲೇ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸ್ಪಷ್ಟವಾಗಿರುವುದರಿಂದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.ತನಿಖೆಯಲ್ಲಿ ಇ.ಇ. ಯದುಕೃಷ್ಣ ಹಾಗೂಕಾಂಟ್ರ್ಯಾಕ್ಟರ್ಸ್ ಗಳಾದ  ಅಭಿಜಿತ್, ತೇಜೇಗೌಡ ಮತ್ತು ನಾರಾಯಣ ಗೌಡ ಸೇರಿ ಕೆಲಸವೇ ಮಾಡದೆ 25 ಕೋಟಿ ಕೆಲಸಕ್ಕೆ ನಕಲಿ ಬಿಲ್ ಸೃಷ್ಟಿಸಿರುವ ಆರೋಪಕ್ಕೆ ಸಾಕ್ಷ್ಯಗಳು ಸಿಕ್ಕಿದ್ದೇ ಆದಲ್ಲಿ ಎಲ್ಲಾ ನಾಲ್ವರು ಜೈಲು ಸೇರುವ ಸಾಧ್ಯತೆಯಂತೂ ದಟ್ಟವಾಗಿದೆ.


Political News

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

Scroll to Top