advertise here

Search

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?


ಸುವರ್ಣ ನ್ಯೂಸ್(SUVARNA KANNADA NEWS CHANNEL), ಕನ್ನಡದ ಪ್ರತಿಷ್ಟಿತ ನ್ಯೂಸ್ ಚಾನೆಲ್( KANNADA NEWS CHANNELS) ಗಳಲ್ಲೊಂದು.ಆದರೆ ಎಷ್ಟೇ ಶ್ರಮ ಪಟ್ಟರೂ,ಏನೆಲ್ಲಾ ಸಾಹಸ ಮಾಡಿದ್ರೂ,..ಸುದ್ದಿ ಕ್ಷೇತ್ರದಲ್ಲಿ ಘಟಾನುಘಟಿಗಳೆನಿಸಿಕೊಳ್ಳುವ ಪತ್ರಕರ್ತರಿದ್ದರೂ ನಂಬರ್ ಒನ್ ಸ್ಥಾನ ಇಂದಿಗೂ ಅದಕ್ಕೆ  ಗಗನಕುಸುಮ.

ಮಾದ್ಯಮ ಲೋಕದ ದಿಗ್ಗಜ ರಾಜೀವ್ ಚಂದ್ರಶೇಖರ್( RAJIV CHANDRASHEKAR) ಮಾಲೀಕತ್ವದ  ಏಷ್ಯಾ ನೆಟ್ (ASIANET NETWORK) ನೆಟ್ವರ್ಕ್ ಚಾನೆಲ್ ಸುಧಾರಣೆ, ಬೆಳವಣಿಗೆಗೆ ಕೋಟಿಗಳನ್ನು ಸುರಿದ್ರೂ ಟಿಆರ್ ಪಿ ( TRP-TELE RATING POINT)ವಿಷಯದಲ್ಲಿ ಟಿವಿ-9(TV9 KANNADA), ಪಬ್ಲಿಕ್ ಟಿವಿ( PUBLIC TV) ಹತ್ತಿರವೂ ಸುಳಿಯೊಕ್ಕೆ ಸಾಧ್ಯವಾಗಿಲ್ಲ ಎನ್ನುವುದು ವಿಪರ್ಯಾಸವೇ ಸರಿ. ನಿಮಗೆ ನೆನಪಿರಲಿ ಅಂಥಾ ಹೇಳ್ತೇವೆ ಕೇಳಿ,ಬಹುಷಃ ಕನ್ನಡದ ನ್ಯೂಸ್ ಚಾನೆಲ್ ಗಳ ಇತಿಹಾಸದಲ್ಲಿ ಯಾವೊಂದು ಚಾನೆಲ್ ಮಾಡಿರದಷ್ಟು.. ಮಾಡುತ್ತಿರುವಷ್ಟು. ಮಾಡಲಿಕ್ಕಾಗದಷ್ಟು  ಬದಲಾವಣೆ ಏನಾದ್ರೂ ಒಂದು ಚಾನೆಲ್ ನಲ್ಲಿ ನಡೆದಿದೆ ಎಂದ್ರೆ ಅದು ಒನ್ ಅಂಡ್ ಒನ್ಲಿ ಸುವರ್ಣ ನ್ಯೂಸ್ ಚಾನೆಲ್ ಮಾತ್ರ,…

ಹೋಗ್ಲಿ ಲುಕ್ ಮತ್ತು ವಿನ್ಯಾಸದಲ್ಲಿ ಬದಲಾದ ಮೇಲೆಯಾದ್ರೂ ಅದರ ಲಕ್ ಚೇಂಜ್ ಆಯ್ತಾ ಎಂದ್ರೆ ಅದು ಇಲ್ಲಾ..? ಹಾಗಾಗಿನೇ  ಸುವರ್ಣ ಚಾನೆಲ್ ಗೆ ಆರಕ್ಕೇರದ ಮೂರಕ್ಕಿಳಿಯದ ಚಾನೆಲ್ ಎನ್ನುವ  ಮಾತಿದೆ..( ಈ ಮಾತನ್ನು  ಆ  ಚಾನೆಲ್ ನಲ್ಲಿ ಕೆಲಸ ಮಾಡುವ ಮಾದ್ಯಮಮಿತ್ರರು ಕುಹಕಕ್ಕಾಗಲಿ..ವಿಡಂಬನೆಗಾಗಲಿ ಹೇಳುತ್ತಿದ್ದೇವೆ ಎಂದು ಅನ್ಯಥಾ ಭಾವಿಸಬಾರದು).

ಅಜಿತ್ ಹನುಮಕ್ಕನವರ್ ( AJITH HANUMAKKANAVAR) ಅವರಂಥಾ ಸಮರ್ಥ ಸಂಪಾದಕರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಚಾನೆಲ್ ಈಗಾಗ್ಲೇ ಒಂದಷ್ಟು ವರ್ಷಗಳನ್ನು ಪೂರೈಸಿದೆ.ಟಾಪ್ 3 ಚಾನೆಲ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕ್ರೈಮ್,ಪಾಲಿಟಿಕ್ಸ್ ( CRIME, POLITICS)ನಲ್ಲಿ ಉಳಿದೆಲ್ಲಾ ಚಾನೆಲ್ ಗಳಿಗಿಂತಲೂ ಮುನ್ನವೇ ಇಲ್ಲಿ ಸಾಕಷ್ಟು ಸ್ಪೋಟಕ ಸುದ್ದಿಗಳು ಬ್ರೇಕ್ ಆಗ್ತವೆ.ಅವರೇ ಘೋಷಿಸಿಕೊಂಡಂತೆ ಎಕ್ಸ್ ಕ್ಲ್ಯೂಸಿವ್( EXCLUSIVE) ಸುದ್ದಿಗಳ ಹೆಡ್ ಕ್ವಾರ್ಟರ್ಸ್ ಎಂದೂ ಕರೆಯಿಸಿಕೊಂಡಿದೆ.ಸುದ್ದಿಯಾಳಕ್ಕೆ ಇಳಿದು ಬೇರೆಯವರಿಗೆ ಸಿಗಲಿಕ್ಕೆ ಸಾಧ್ಯವಿರಬಹುದಾದ ಸುದ್ದಿಗಳನ್ನು ಕಾಂಟ್ರಿಬ್ಯೂಟ್ ಮಾಡುವ ಅನುಭವಿ ವರದಿಗಾರರ ಪಡೆಯೂ ಇದೆ.ಆ ವಿಚಾರದಲ್ಲಿ ಯಾವುದೇ ತಕರಾರಿಲ್ಲ.ಆದರೆ ಚಾನೆಲ್ ನ್ನು ಟಾಪ್1- ಅಥವಾ ಟಾಪ್-2  ಸ್ಥಾನಕ್ಕೆ ಕೊಂ ಡೊಯ್ಯುವ ಪ್ರಯತ್ನದಲ್ಲಿ ವಿಫಲವಾಗಿರುವುದು ಮ್ಯಾನೇಜ್ಮೆಂಟನ್ನು ನಿರಂತರವಾಗಿ ಬೇಸರ ಹಾಗೂ ಚಿಂತೆಗೀಡುಮಾಡಿದೆ ಎನ್ನುವುದು ಕೂಡ ಒಪ್ಪಲೇಬೇಕಾದ ಸತ್ಯ..ಇದನ್ನು ಸ್ವತಃ ಸಂಪಾದಕ ಅಜಿತ್ ಹನುಮಕ್ಕನವರ್ ಕೂಡ ಒಪ್ಪಲೇಬೇಕು..

ಅದೇಕೋ ಚಾನೆಲ್ ನಲ್ಲಿ ಇತ್ತೀಚಿನ ಕೆಲ ತಿಂಗಳಿಂದ ಸಿಕ್ಕಾಪಟ್ಟೆ ಬೆಳವಣಿಗೆ-ಬದಲಾವಣೆ ನಡೆಯುತ್ತಲೇ ಇವೆ.ಅವು ಸುದ್ದಿಮನೆಯಲ್ಲಿ ಪ್ರಾಮಾಣಿಕವಾಗಿ  ನಿಷ್ಟೆಯಿಂದ ಕೆಲಸ ಮಾಡುತ್ತಿರುವವರಿಗೆ ಪೂರಕ ಎನಿಸುವಂತದ್ದಾಗಿದಿದ್ದರೆ ಯಾವುದೇ ಸಮಸ್ಯಾತ್ಮಕ ಎನಿಸುತ್ತಿರಲಿಲ್ಲವೇನೋ..? ಆದರೆ ಅದು ಬಹುತೇಕ ಸಿಬ್ಬಂದಿಗೆ  ಕಿರಿಕಿರಿ-ಗೊಂದಲ-ಅತಂತ್ರಗೊಳಿಸುವ ಮಟ್ಟದ ಬೆಳವಣಿಗೆಗಳೆನ್ನುವುದು ಗಮನಿಸಬೇಕಾದ ಸಂಗತಿ. ಸ್ಥಾನ-ಹುದ್ದೆ-ಜವಾಬ್ದಾರಿಗಳ ದಿಢೀರ್ ಪಲ್ಲಟ ನಡೆಯುತ್ತಿರುವುದು ಅಲ್ಲಿರುವ ಬಹುತೇಕರನ್ನು ತೀರಾನೇ ಡಿಸ್ಟರ್ಬ್ ಮಾಡಿದೆ ಎನ್ನುವ ಮಟ್ಟದ ಚರ್ಚೆಗಳು ಚಾನೆಲ್ ನೊಳಗೇ ನಡೆಯುತ್ತಿವೆಯಂತೆ.

ಸಂಪಾದಕರಾದ ಅಜಿತ್ ಹನುಮಕ್ಕನವರ್ ಕಾರ್ಯಶೈಲಿಯೇ ಮ್ಯಾನೇಜ್ಮೆಂಟ್ ಗೆ ತೃಪ್ತಿ-ಸಮಾಧಾನಕರ ಎನಿಸಿಲ್ಲ ಎನ್ನುವ ಸ್ಪೋಟಕ ಸುದ್ದಿ ಕೇಳಿಬರುತ್ತಿದೆ.ಸಂಪಾದಕರಾಗಿ ಯಾವುದೇ ಇಸಂ-ಪಂಥ-ಬಣಗಳಿಗೆ ಸೀಮಿತಗೊಳಿಸಿಕೊಳ್ಳಬಾರದಿದ್ದರೂ ಅನೇಕ “ಧಾರ್ಮಿಕ” ಹಾಗೂ ರಾಜಕೀಯ ವಿಚಾರಗಳಲ್ಲಿ ಒಂದು ವರ್ಗದ ಪರ ವಕ್ತಾರನಂತೆ ನಿಂತು ಕೆಲಸ ಮಾಡಿದ್ದಾರೆನ್ನುವ ಮಾಹಿತಿ ಬೇರ್ಯಾರು ಅಲ್ಲ,ಅದೇ ಚಾನೆಲ್ ನಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಅನೆಕರಿಂದ ಮ್ಯಾನೇಜ್ಮೆಂಟ್ ಗೆ ತಲುಪಿದೆಯಂತೆ. ಇದರಿಂದ ನಖಶಿಖಾಂತ ಉರಿದು ಹೋಗಿರುವ ಚಾನೆಲ್ ನ ಕೇರಳಾದ ಆಡಳಿತ  ಮಂಡಳಿ ಅಜಿತ್ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಿನ ನಿರ್ದಾರವೊಂದನ್ನು ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದೆ ಎನ್ನುವ ವರ್ತಮಾನವಿದೆ ಎನ್ನಲಾಗುತ್ತಿದೆ.ಆ ನಿರ್ದಾರ ಅಜಿತ್ ಹನುಮಕ್ಕನವರ್ ಅವರ ಪತ್ರಿಕೋದ್ಯಮ ವೃತ್ತಿಯ ಭವಿಷ್ಯವನ್ನೇ ನಿರ್ದರಿಸಬಲ್ಲದು ಎನ್ನುತ್ತಿರುವುದು ಮತ್ತಷ್ಟು ಕುತೂಹಲ-ಶಂಕೆ ಮೂಡಿಸಿದೆ.

ಚಾನೆಲ್ ನಲ್ಲಿ ಪ್ರಸಾರವಾಗುವ ಪ್ರತಿ ಸುದ್ದಿಯ ವಿಚಾರಗಳು ತನ್ನ ಗಮನಕ್ಕೆ ಬರಲೇಬೇಕೆಂದು  ಮ್ಯಾನೇಜ್ಮೆಂಟ್ ನಿರೀಕ್ಷಿಸೋದು ಸಹಜ..ಅದು ಸಂಪಾದಕೀಯದ ಬದ್ಧತೆ ಹಾಗು ಹೊಣೆಗಾರಿಕೆಯೂ ಹೌದು.ಆದರೆ ಕೆಲವೊಂದು ನಿರ್ಣಾಯಕ ಎನ್ನುವಂತ ಸನ್ನಿವೇಶಗಳಲ್ಲಿ ಸಂಪಾದಕೀಯತನಗನ್ನಿಸಿದ ಸ್ಟ್ಯಾಂಡ್ ತೆಗೆದುಕೊಂಡಿದೆ ಎನ್ನುವುದು ಮ್ಯಾನೇಜ್ಮೆಂಟ್ ನ ಆಪಾದನೆಯಂತೆ.ಇದು ಚಾನೆಲ್ ನ ಪ್ರತಿಷ್ಟೆ-ಗೌರವಕ್ಕೆ ಧಕ್ಕೆ ತಂದಿದೆಯಂತೆ.ಇದರ ಬಗ್ಗೆ ಮ್ಯಾನೇಜ್ಮೆಂಟ್ ನ ಸಿದ್ದಾಂತ ಹಾಗು ಬದ್ಧತೆಯನ್ನೇ ಪ್ರಶ್ನೆ ಮಾಡಿ ಮಾತನಾಡುವಂತಾಗಿದೆಯಂತೆ.ಹಾಗಾಗಿನೇ ಇಷ್ಟು ವರ್ಷ ಆಗಿದ್ದು ಸಾಕು.ಅದರಿಂದ ಚಾನೆಲ್ ಗೆ ಆದ ಪ್ರಯೋಜನವೂ ಸಾಕು..ನೀವು ಮಾಡಿದ ಮಹಾಉಪಕಾರವೂ ಸಾಕು..ಇನ್ಮುಂದೆ ಚಾನೆಲ್ ನ್ನು ನಾವು ನಡೆಸ್ತೇವೆ..ಪ್ರತಿಯೊಂದು ನಿರ್ದಾರಗಳು ನಿಮ್ಮದಲ್ಲ..ನಮ್ಮದಾಗಲಿವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆನ್ನಲಾಗ್ತಿದೆ. ಕೇರಳಾದಲ್ಲಿ ಯಾವುದೇ ಚಾನೆಲ್ ಗಳು ಇರಲಿ..ಬರಲಿ.ಇಂದಿಗೂ ಏಷಿಯಾ ನೆಟ್ ನಂಬರ್ ಒನ್ ಚಾನೆಲ್ ಆಗಿ ತನ್ನ ಸ್ಥಾನ-ಪ್ರತಿಷ್ಟೆ-ವಿಶ್ವಾಸಾರ್ಹತೆಯನ್ನು ಅಬಾಧಿತಗೊಳಿಸಲಿಕ್ಕೆ ಮುಖ್ಯ ಕಾರಣವೇ ನಿಷ್ಪಕ್ಷಪಾತತನ..ಅದನ್ನು ಕರ್ನಾಟಕದಲ್ಲಿ ಹಾಳು ಮಾಡಲಾಗ್ತಿದೆ..ಅದಕ್ಕೆ ಕಡಿವಾಣ ಹಾಕದಿದ್ರೆ ಸಂಪೂರ್ಣ ಮುಳುಗಿ ಹೋಗ್ತೇವೆನ್ನುವ ಆತಂಕ ಕಾಡುತ್ತಿರುವುದರಿಂದಲೇ ಒಂದು ಸಮಗ್ರ-ಅಮೂಲಾಗ್ರ ಬದಲಾವಣೆಗೆ  ಕೈ ಹಾಕಲು ಮುಂದಾಗಿದೆಯಂತೆ..ಮ್ಯಾನೇಜ್ಮೆಂಟ್ ನ ಈ ನಿರ್ದಾರವೇ ಇದೀಗ ಸುವರ್ಣ ಚಾನೆಲ್ ನ ಸುದ್ದಿಮನೆಯಲ್ಲಿ ಕುತೂಹಲ-ಆತಂಕ ಎರಡನ್ನೂ ಸೃಷ್ಟಿಸಿದೆಯಂತೆ.

ALSO READ :  ಬಿಜೆಪಿ ಆಡಳಿತದಲ್ಲಿ 619 ಕೋಮುಗಲಭೆಯ ಕೇಸ್ ವಾಪಸ್: ಕಾಂಗ್ರೆಸ್ ಆರೋಪ

ಚಾನೆಲ್ ನ ಕೇರಳಾ ಮ್ಯಾನೇಜ್ಮೆಂಟ್ ಸುವರ್ಣ ಚಾನೆಲ್ ನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ನಿರ್ದರಿಸಿಯೇ ಬಿಟ್ಟಿದೆಯಂತೆ.ಕೆಲವರು ತಮ್ಮ ಸ್ವಾರ್ಥಕ್ಕಾಗಿ ಚಾನೆಲ್ ಗುಡ್ ವಿಲ್ ಹಾಳು ಮಾಡುವಂತ ಕೆಲಸ ಮಾಡಿರುವುದನ್ನು ಮ್ಯಾನೇಜ್ಮೆಂಟ್ ಗಮನಿಸಿದೆಯಂತೆ. ಅನೇಕ ವರ್ಷಗಳಿಂದಲೂ ಒಂದೇ ಕಡೆ ಗೂಟಾ ಹೊಡೆದುಕೊಂಡಿರುವವರ ಸ್ಥಾನ ಪಲ್ಲಟಕ್ಕೆ ನಿರ್ದರಿಸಿದೆಯಂತೆ. ಚಾನೆಲ್ ನಲ್ಲಿ ಸೃಷ್ಟಿಯಾಗಿರುವ ಗುಂಪುಗಾರಿಕೆ-ಪ್ರಾದೇಶಿಕತೆ-ಜಾತೀಯತೆಗೆ ಕೆಂಡಾಮಂಡಲವಾಗಿದೆಯಂತೆ. ಇಂಥಾ ವ್ಯವಸ್ಥೆಗಳಿಂದಲೇ ಚಾನೆಲ್  ಹಾಗೂ ಸಿಬ್ಬಂದಿಯಲ್ಲಿ ಪ್ರೊಫೆಷಿನಲಿಸಂ ನಾಶವಾಗ್ತಿದೆ ಎಂದು ಗುಡುಗಿರುವ ಮ್ಯಾನೇಜ್ಮೆಂಟ್ ಅಜಿತ್  ಹನುಮಕ್ಕನವರ್ ಹಾಗೂ ಆಯಕಟ್ಟಿನ ಹುದ್ದೆಯಲ್ಲಿರುವವರ ಅಧಿಕಾರ ಕಡಿತ ಮಾಡಬೇಕೆಂಬ ಪ್ಲ್ಯಾನ್ ರೂಪಿಸಿಕೊಂಡಿದೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ.

ಚಾನೆಲ್ ನಲ್ಲಿ ಏನಾಗಬಹುದು..ಯಾರ್ಯಾರ ಸ್ಥಾನ ಪಲ್ಲಟವಾಗಬಹುದು:ಪ್ರಶ್ನೆ ಕಾಡುತ್ತಿರುವುದೇ ಇಲ್ಲಿ.ಬದಲಾವಣೆ ಆಗಲೇಬೇಕೆಂದು ತೀರ್ಮಾನಿಸಿದಂತಿರುವ ಮ್ಯಾನೇಜ್ಮೆಂಟ್ ಬೆಂಗಳೂರು ಕಚೇರಿಯನ್ನು ಲಾಸ್ಟ್ ಟಾರ್ಗೆಟ್ ಮಾಡಿಕೊಂಡಿದೆಯಂತೆ.ಮೊದಲು ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದೆಯಂತೆ.ಹತ್ತುಹದಿನೈದು ವರ್ಷಗಳಿಂದಲೂ ಇದ್ದ ಕಡೆಯೇ ಬೇರು ಬಿಟ್ಟಿರುವ ವರದಿಗಾರರಿಂದ ಚಾನೆಲ್ ಗೆ ಹೇಳಿಕೊಳ್ಳುವಂಥ ಸ್ಪೋಟಕ ಸುದ್ದಿಗಳು ಬರುತ್ತಿಲ್ಲ ಎನ್ನುವ ದೂರಿನ ಹಿನ್ನಲೆಯಲ್ಲಿ ಆರಂಭದಲ್ಲಿ ಪ್ರಾಯೋಗಿಕವಾಗಿ 6-8 ಜಿಲ್ಲೆಗಳ ವರದಿಗಾರರನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಬದಲಿಸಲು ಮುಂದಾಗಿದೆಯಂತೆ.ಈ ಬಗ್ಗೆ ಈಗಾಗಲೇ ವರದಿಗಾರರಿಗೆ ಮಾಹಿತಿಯು ರವಾನೆಯಾಗಿದೆಯಂತೆ.ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಅನಿವಾರ್ಯವಾಗಿ ತೆರಳಲು ನಿರ್ದರಿಸಿದ್ದಾರಂತೆ. ಯಾರು ಒಪ್ಪಲು ಸಿದ್ದವಿಲ್ಲವೋ ಅವರಿಗೆ ಗೇಟ್ ಪಾಸ್ ಕೊಡುವ ಪ್ಲ್ಯಾನ್ ಮ್ಯಾನೇಜ್ಮೆಂಟ್ ನದ್ದು ಎನ್ನುವ ಮಾತಿದೆ.ನಂತರ 1 ಎಂಬಿ ಹಾಗೂ 2 ಎಂಬಿ ಸೆಂಟರ್ ಗಳ ವರದಿಗಾರರನ್ನು ಬದಲಿಸುವ ನಿಟ್ಟಿನಲ್ಲಿಯೂ ಆಲೋಚನೆ ನಡೆಯುತ್ತಿದೆಯಂತೆ. ಈ ಟಾಸ್ಕ್ ನಲ್ಲಿ ಎಷ್ಟ್ ಜನ ಇರುತ್ತಾರೋ..ಹೊರ ಹೋಗುತ್ತಾರೋ ಎನ್ನುವುದು ಗೊತ್ತಾಗುತ್ತಿಲ್ಲ.ಆದರೆ ಜಿಲ್ಲಾ ವರದಿಗಾರರ ವಿಚಾರದಲ್ಲಿ ಮ್ಯಾನೇಜ್ಮೆಂಟ್ ಇಂತದ್ದೊಂದು ನಿರ್ದಾರ ಕೈಗೊಂಡಿದೆ ಎನ್ನುವುದು  ಬಹುತೇಕ ಸತ್ಯ.

ಬೆಂಗಳೂರಿನ ಕಚೇರಿಯಲ್ಲಿ ಏನಾಗಲಿದೆ..? ಚಾನೆಲ್ ನ್ನು ಮ್ಯಾನೇಜ್ಮೆಂಟ್ ಬಹುತೇಕ ಕಂಟ್ರೋಲ್ ಗೆ ತೆಗೆದುಕೊಂಡು ಬದಲಾವಣೆಗೆ ಮುಂದಾಗಿದೆ ಎನ್ನುವುದು ಹೆಚ್ಚು ಆತಂಕ ಮೂಡಿಸಿರುವುದು ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡುವ ಮಾದ್ಯಮಮಿತ್ರರಿಗೆ. ಮ್ಯಾನೇಜ್ಮೆಂಟ್ ನ ಕೆಂಗಣ್ಣಿಗೆ ಯಾರ್ಯಾರು ಬೀಳಲಿದ್ದಾರೆ..ಯಾರು ಬಚಾವಾಗಲಿದ್ದಾರೆ ಎನ್ನುವ ,ಲೆಕ್ಕಾಚಾರ ಬೇರೆ ಶುರುವಾಗಿದೆ.ಕೆಲಸ ಮಾಡದೆ ಕೇವಲ ಬಕೆಟ್ ಇಟ್ಕೊಂಡು ದಿನ ದೂಡುತ್ತಿರುವ, ಟೈಮ್ ನೋಡಿಕೊಂಡು ಕೆಲಸ ಮಾಡುವ, ಚಾನೆಲ್ ಗೆ ಸುದ್ದಿ ಹಾಗೂ ಟಿ.ಆರ್ ಪಿ ವಿಷಯದಲ್ಲಿ ಏನೂ ಪ್ರಯೋಜನವಾಗದೆ ಇರುವ ಸಿಬ್ಬಂದಿಗೆ ಗೇಟ್ ಪಾಸ್ ಕೊಡಲು ನಿರ್ದರಿಸಲಾಗಿದೆ ಎನ್ನುವ ಮಾತುಗಳಿವೆ.ಆದರೆ ಪ್ರಾಮಾಣಿಕವಾಗಿ, ಕೊಟ್ಟ ಕೆಲಸವನ್ನು ಶೃದ್ಧೆ-ಬದ್ಧತೆಯಿಂದ ಕೆಲಸ ಮಾಡುತ್ತಿರುವ ಮಾದ್ಯಮಮಿತ್ರರಿಗೆ ಯಾವುದೇ ರೀತಿಯ ಸಮಸ್ಯೆಗಳಾಗುವುದಿಲ್ಲ ಎಂದೇಳಿದೆಯಂತೆ. ಮ್ಯಾನೇಜ್ಮೆಂಟ್ ನ ಈ ನಿರ್ದಾರ ಸಾಕಷ್ಟು ಜನರಿಗೆ ನುಂಗಲಾಗರದ ತುಪ್ಪವಾಗಿ ಪರಿಣಮಿಸಿದೆಯಂತೆ.


Political News

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

Scroll to Top