4 ದಿನ ಅವಿಶ್ರಾಂತವಾಗಿ ದುಡಿದ ಚಾಲಕನಿಗೆ ಮತ್ತೆ ಡ್ಯೂಟಿ ಮಾಡುವಂತೆ  ಮೇಲಾಧಿಕಾರಿ ಗಳಿಂದ ಬೆದರಿಕೆ:ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳ ದರ್ಪದ ವೀಡಿಯೋ ವೈರಲ್‌ 

ಬೆಂಗಳೂರು/ಚಾಮರಾಜನಗರ:ಇದು… ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಲ್ಲಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ ವಿನಯಪೂರ್ವಕ ಕಳಕಳಿ… ಸಚಿವರೇ ಇಲಾಖೆಯನ್ನು ಉದ್ದಾರ ಮಾಡೋಕ್ಕಿಂತ ಮುನ್ನ ತಾವು, ತಮ್ಮ ಇಲಾಖೆಯ ಕೆಲವು ಅಧಿಕಾರಿಗಳಿಗೆ ಮೊದಲು ಮನುಷ್ಯತ್ವದ ಪಾಠ ಕಲಿಸಿಕೊಡಿ..

-ಎಂಡಿ ಎನ್ನಿಸಿಕೊಂಡ ಐಎಎಸ್ ಗಳೇ ಎಸಿ ರೂಮಿನಲ್ಲಿ ಕೂತು ದರ್ಬಾರ್‌ ನಡೆಸುವುದನ್ನು ಬಿಟ್ಟು ಕೆಳ ಹಂತದ ಸಿಬ್ಬಂದಿ ಜತೆ ಅಧಿಕಾರಿಗಳು ನಾಗರಿಕರಾಗಿ ನಡೆದುಕೊಳ್ಳಬೇಕು ಎನ್ನುವುದನ್ನು ಅವರ ಕಿವಿಹಿಂಡಿ ಹೇಳಿಕೊಡಿ..

-ಕಾರ್ಮಿಕರ ಸಮಸ್ಯೆ-ಅಹವಾಲು ಕೇಳೊಕ್ಕಂತನೇ ಇರುವ ಕಾರ್ಮಿಕ ವಿಭಾಗದ ಅಧಿಕಾರಿಗಳೇ ಕಚೇರಿಯಲ್ಲಿ ಕುತ್ಕೊಂಡು ಕಾಲಹರಣ ಮಾಡೋದನ್ನು ಪಕ್ಕಕ್ಕಟ್ಟು ಮೊದಲು  ಕೆಳ ಹಂತದ ಸಿಬ್ಬಂದಿಯನ್ನು ದಂಡಿಸಿ ಬೆನ್ನುತಟ್ಟಿಕೊಳ್ಳುವ ಅಧಿಕಾರಿಗಳ ವರ್ತನೆ ಬದಲಿಸಿಕೊಳ್ಳುವಂತೆ ತಿಳಿ ಹೇಳಿ..

-ಇಲ್ಲದಿದ್ರೆ  ನೆನಪಿಡಿ…ಈಗಾಗಲೇ “ಅಪವಾದ-ಕಳಂಕ” ಹೊತ್ತಿರುವ ಸಾರಿಗೆ ಸಂಸ್ಥೆ ಕ್ರೌರ್ಯವೇ ತುಂಬು ತುಳುಕುತ್ತಿರುವ ಇಲಾಖೆ ಎನ್ನುವ ಕಳಂಕಕ್ಕೆ ಪಾತ್ರವಾಗುವ ದಿನಗಳೇನು ದೂರವಿಲ್ಲ..

ಇದೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಕೆಎಸ್ ಆರ್ ಟಿಸಿಯ ಡಿಪೋಗಳಲ್ಲಿ ಕೆಲಸ ಮಾಡುವ  ಕೆಲ  ಅಧಿಕಾರಿಗಳಿ ಗೆ ನಿಜಕ್ಕೂ ಮನುಷ್ಯತ್ವನೇ ಇಲ್ಲ ಎನಿಸುತ್ತದೆ. ಅವಿಶ್ರಾಂತವಾಗಿ ಕೆಲಸ ಮಾಡುವ ಡ್ರೈವರ್ಸ್-ಕಂಡಕ್ಟರ್ಸ್ ಗಳ ಆರೋಗ್ಯದ ಬಗ್ಗೆ ಅವರಿ ಗೆ ನಿಜಕ್ಕೂ ಕಾಳಜಿ ಇದೆಯಾ..? ನಿದ್ದೆಗೆಟ್ಟು ರಾತ್ರಿಯೆಲ್ಲಾ ಸ್ಟೇರಿಂಗ್ ನಲ್ಲಿ ಕೂತು ಕೆಲಸ ಮಾಡುವ ಡ್ರೈವರ್ಸ್ ಗಳಿಗೆ ಸ್ವಲ್ಪ ವೂ ವಿರಾಮ ಕೊಡದೆ ಮತ್ತೆ ಕೆಲಸಕ್ಕೆ ದೂಡುವ ಇವರಿಗೆ ಮನುಷ್ಯತ್ವ ನೇ ಇಲ್ವಾ..? ಸ್ವಲ್ಪವೂ ಬಿಡುವು ಕೊಡದೆ ಕೆಲಸ ಮಾಡಿಸುವುದರಿಂದ ಅವರ ಆರೋಗ್ಯ ಏನಾಗುತ್ತದೆ.? ಎನ್ನುವ ಸಣ್ಣ ಪರಿಕಲ್ಪನೆಯೂ ಅಧಿಕಾರಿಗಳಿಗೆ ಇಲ್ಲವಾಯ್ದೆ ಹೋಯ್ತಾ..?

ನಿಮಗೆ ನೆನಪಿರಲಿ, ಇದು ನಿತ್ಯವೂ ಕೆಎಸ್ ಆರ್ ಟಿಸಿ ಸೇರಿದಂತೆ ಎಲ್ಲಾ ನಿಗಮಗಳಲ್ಲಿ ನಡೆಯುತ್ತಲೇ ಇರುವ ಘಟನೆಗಳು.ಕೆಳ ಹಂತದ ಸಿಬ್ಬಂದಿಯನ್ನು ಗೋಳೋಯ್ದುಕೊಳ್ಳದಿದ್ದರೆ ಅಲ್ಲಿರುವ ಕೆಲವು ಅಧಿಕಾರಿಗಳಿಗೆ ತಿಂದ ಅನ್ನ ಅರಗುವುದಿಲ್ಲ ಎನ್ನಿ ಸುತ್ತದೆ.ಹಾಗಾಗಿ ಅವರನ್ನು ಪಶುಗಳಂತೆ ನಡೆಸಿಕೊಳ್ಳುವ ಕೆಟ್ಟ ಚಾಳಿಯನ್ನು ಮೈಗೂಡಿಸಿಕೊಂಡಿದ್ದಾರೆ. ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಈ ಬಗ್ಗೆ ನಿರಂತರವಾಗಿ ವರದಿ ಮಾಡಿ ಸ್ವಲ್ಪವಾದ್ರೂ ಬಡಿದೆಬ್ಬಿಸುವ ಕೆಲಸ ಮಾಡುತ್ತಿದೆ.

ಕನ್ನಡ ಫ್ಲ್ಯಾಶ್ ನ್ಯೂಸ್ ಮತ್ತೊಮ್ಮೆ  ಅಧಿಕಾರಶಾಹಿಯ ಕ್ರೌರ್ಯದ ಬಗ್ಗೆ ಬರೆಯೊಕ್ಕೆ ಕಾರಣವೂ ಇದೆ.ಈ ಘಟನೆ ನಡೆದಿರು ವುದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಂಜನಗೂಡು ಘಟಕ ವ್ಯಾಪ್ತಿಯಲ್ಲಿ ಎನ್ನಲಾಗ್ತಿದೆ.ಇದಕ್ಕೆ ಸಂಬಂಧಿಸಿದಂತೆ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಂಜನಗೂಡು ಘಟಕದ ಚಾಲಕ ಎನ್ನಲಾಗಿರುವ  ಶರಣಪ್ಪ ದೊಡ್ಡಮನಿ ಜಾತ್ರೆ ವಿಶೇಷ ಪ್ರಯುಕ್ತ 23/12/2023 ರಿಂದ 26/12/2023 ವರೆಗೂ ರಾತ್ರಿ ಹಗಲು ಎನ್ನದೆ ವಿಶ್ರಾಂತಿ ಪಡೆಯದೆ ಕಂಟಿನ್ಯೂ ಡ್ಯೂಟಿ ಮಾಡಿದ್ದರಂತೆ.ನೀವೇ ಊಹಿಸಿ ನಿದ್ರೆ-ಸ್ನಾನ-ಸರಿಯಾದ ಊಟ ಇಲ್ಲದೆ ಸತತ ನಾಲ್ಕು ದಿನ ಡ್ಯೂಟಿ ಮಾಡೋದೆಂದ್ರೆ ಅದೇನು ಸಲೀಸಾ..ಅದು ಕೂಡ ಆ ಬೆಟ್ಟಗುಡ್ಡ-ಏರಿಳಿತದ ರಸ್ತೆಯ ಮಾರ್ಗದಲ್ಲಿ.ಈ ನಾಲ್ಕು ದಿನದ ಡ್ಯೂಟಿ ಬಗ್ಗೆಯೂ ಆತ ಏನೂ ಚಕಾರವೆತ್ತದೆ ಕೆಲಸ ಮಾಡಿದ್ದಾನೆ.

“ಚಾಲಕ”ರಿಗೆ ನೆಮ್ಮದಿ ಕೊಡದಿದ್ರೂ ಅಧಿಕಾರಿಗಳೇ “ನಿದ್ದೆ-ವಿಶ್ರಾಂತಿ” ಕೊಡಿ..?!

ಸಂಸ್ಥೆ ನಿಯಮಾವಳಿಗಳ ಪ್ರಕಾರ ಕಾರ್ಮಿಕರು ದಿನಕ್ಕೆ ಎಂಟು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕು ಎಂಬ ನಿಯಮವಿದ್ದರೂ ಚಾಮರಾಜನಗರ ವಿಭಾಗದ ವಿಭಾಗೀಯ ತಾಂತ್ರಿಕ ಶಿಲ್ಪಿ, ಸೂರ್ಯಕಾಂತ ಮತ್ತು ಕೊಳ್ಳೇಗಾಲ ಘಟದ ಹಂಗಾಮಿ ಡಿಪೋ ಮ್ಯಾನೇಜರ್ ವೆಂಕಟರಾಮ್ ,ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರತ ಸಂಚಾರ ನಿಯಂತ್ರಕರೆಲ್ಲಾ ಸೇರಿದ ಶರಣಪ್ಪ ದೊಡ್ಡಮನಿ ಅವರನ್ನು ಬೈಯ್ದು, ಬಲವಂತ ವಾಗಿ ಕೆಲಸಕ್ಕೆ ಹಚ್ಚಲು ನೋಡಿರುವುದು,ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದು ವೀಡಿಯೋದಲ್ಲಿದೆ.

26/12/2023 ರಂದು ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರ ಎದುರಿನಲ್ಲೇ ಶರಣಪ್ಪ ಅವರನ್ನು ಎಲ್ಲರೂ ಸೇರಿಕೊಂಡು ಅವಮಾನಿಸಿದ್ದಾರೆ ಸಾರ್ವಜನಿಕ ಪ್ರಯಾಣಿಕರ ಎದುರಿನಲ್ಲೇ ಕಾರ್ಮಿಕ ಸಿಬ್ಬಂದಿಗಳ ಬಗ್ಗೆ ಒಂದಿಷ್ಟು ಗೌರವ ನೀಡದೆ ದುಡಿಯುವ ಶ್ರಮಿಕರ ವರ್ಗಕ್ಕೆ ಬಾಯಿಗೆ ಬಂದಂತೆ ಬೈಯ್ದಿರುವುದು ಅಧಿಕಾರದ ಮದವಲ್ಲದೇ ಇನ್ನೇನು..?

ತಾಂತ್ರಿಕ ಶಿಲ್ಪಿ, ಸೂರ್ಯಕಾಂತ ಮತ್ತು ಹಂಗಾಮಿ ಡಿಪೋ ಮ್ಯಾನೇಜರ್ ವೆಂಕಟರಾಮ್ ವಿರುದ್ಧ ಇಂಥಾ ಆಪಾದನೆ ಕೇಳಿಬರುತ್ತಿರುವುದು ಇದೇ ಮೊದಲೇನಲ್ವಂತೆ.ಅವರಿಗೆ ತಮ್ಮ ಕೆಳಹಂತದ ಸಿಬ್ಬಂದಿ ಎಂದರೆ ಜೀತದ ಆಳುಗಳಂತೆ ಎನ್ನುವ ಭಾವನೆ ಇದೆಯಂತೆ.ಅವರನ್ನು  ಹೀಯಾಳಿಸಿ ವಿಕೃತ ಆನಂದ ಪಡುವ ಮನಸ್ಥತಿ ಅವರದಂತೆ.ಇದಕ್ಕೆ ಜ್ವಲಂತ ಉದಾಹರಣೆ ಶರಣಪ್ಪ ಅವರದು ಎನ್ನಲಾಗ್ತಿದೆ.

ಅಂದ್ಹಾಗೆ   ಸೂರ್ಯಕಾಂತ ಮತ್ತು  ವೆಂಕಟರಾಮ್ ಅವರಿಗೆ  ಓರ್ವ ಚಾಲಕ ಮಾನಸಿಕ ಆರೋಗ್ಯ ಸದೃಢತೆ ವಿಶ್ರಾಂತಿ ಇಲ್ಲದೆ ವಾಹನವನ್ನು ಮಾರ್ಗಚರಣೆಗೆ ತೆಗೆದು ಕೊಂಡು ಹೋಗುವುದು, ಮಲೈ ಮಹದೇಶ್ವರ ಬೆಟ್ಟದ ಕಡಿದಾದ ತಿರುವುಗಳಲ್ಲಿ ವಾಹನ ಚಾಲನೆ ಮಾಡುವುದು ಎಷ್ಟು ಕಷ್ಟ ಎನ್ನುವುದು ಗೊತ್ತಿಲ್ಲದ ವಿಷಯವೇ ನಲ್ಲ.ನಿದ್ದೆ-ವಿರಾಮವಿಲ್ಲದೆ ಕೆಲಸ ಮಾಡುವಾಗ ಏನಾದರೂ ಅವಘಡ ಅಪಘಾತಗಳು ಸಂಭವಿಸಿದರೆ ಅದಕ್ಕೆ ಹೊಣೆ ಯಾರು..?

ಚಾಲಕರನ್ನು ಹೊಣೆ ಮಾಡಿ ಈ ಮಹಾನುಭಾವರು ತಪ್ಪಿಸಿಕೊಳ್ಳಬಹುದು,ಆದರೆ ಆತನಿಂದ ಸಾವುನೋವುಗ ಳಾದ್ರೆ ಆ ನಷ್ಟ ಭರಿಸೊಕ್ಕೆ ಸಾಧ್ಯನಾ..? ಇದೆಲ್ಲಾ ಗೊತ್ತಿದ್ದೂ ಡ್ರೈವರ್ಸ್-ಕಂಡಕ್ಟರ್ಸ್ ಗೆ ರೆಸ್ಟ್ ಲೆಸ್ ಆಗಿ ಕೆಲಸ ಮಾಡುವಂಥ ಶಿಕ್ಷೆ ವಿಧಿಸು ತ್ತಿರುವುದು ಅಮಾನವೀಯ ಎನ್ನುತ್ತಾರೆ ಮಾನವ ಹಕ್ಕುಗಳ ಹೋರಾಟಗಾರ ಮನೋರಂಜನ್.ಈ ವಿಷಯದಲ್ಲಿ ಚಾಲಕ ಶರಣಪ್ಪನ ಬೆನ್ನಿಗೆ ನಾವು ನಿಲ್ಲುತ್ತೇವೆ. ಅಧಿಕಾರಿ ಗಳ ವಿರುದ್ಧ ಕೇಸ್ ದಾಖಲಿಸುವ ಕೆಲಸ ಮಾಡುತ್ತೇವೆ.ಒಂದಿಬ್ಬರಿಗೆ ಶಿಕ್ಷೆಯಾದರೆ ಉಳಿದವರು ಅಲರ್ಟ್ ಆಗ್ತಾರೆ ಎನ್ನುತ್ತಾರೆ ಮನೋರಂಜನ.

ಕೆಳಹಂತದ ನೌಕರರು ನಿಮ್ಮಂತೆಯೇ ಮನುಷ್ಯರು..ಅವರಿಗೂ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಅಧಿಕಾರ-ಅವಕಾಶವಿದೆ.ಅವರು ಬಂದಿರೋದೇ ಕೆಲಸಕ್ಕೆ,ಹಾಗಂತ ಅವರನ್ನು ಜೀತದಾಳುಗಳಂತೆ ನಡೆಸಿಕೊಳ್ಳುವ ಅಧಿಕಾರವನ್ನು ಯಾರು ಕೊಟ್ಟವರು..?

ಮೇಲ್ಕಂಡ ಪ್ರಕರಣದಲ್ಲಿ ಚಾಲಕ ಶರಣಪ್ಪನನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಲ್ಲದೇ ಸಾರ್ವಜನಿಕರ ಮುಂದೆ ಅಪಮಾನವಾಗುವಂತೆ ವರ್ತಿಸಿದ ಚಾಮರಾಜನಗರ ವಿಭಾಗದ ವಿಭಾಗೀಯ ತಾಂತ್ರಿಕ ಶಿಲ್ಪಿ, ಸೂರ್ಯ ಕಾಂತ ಮತ್ತು ಕೊಳ್ಳೇಗಾಲ ಘಟದ ಹಂಗಾಮಿ ಡಿಪೋ ಮ್ಯಾನೇಜರ್ ವೆಂಕಟರಾಮ್ ವಿರುದ್ಧ ನಿರ್ದಾಕ್ಷ್ಯಿಣ್ಯ ಕ್ರಮ ಜಾರಿಯಾಗಬೇಕು. ಅವರನ್ನು ವಿಚಾರಣೆಗೊಳಪಡಿಸಿ ಶಿಕ್ಷೆ ನೀಡಬೇಕು.ಏಕೆಂದ್ರೆ ಇವರಿಬ್ಬರಿಗೆ ನೀಡಲಾಗುವ ಶಿಕ್ಷೆ ಅದೇ ಮನಸ್ಥಿತಿಯಲ್ಲಿ ಅಂದಾದರ್ಬಾರ್ ನಡೆಸುತ್ತಿರುವ ಅದೆಷ್ಟೋ ದುರಂಹಕಾರಿ ಅಧಿಕಾರಿಗಳಿಗೆ ಪಾಠವಾಗ್ಬೇಕಿದೆ.

Spread the love

Leave a Reply

Your email address will not be published. Required fields are marked *