advertise here

Search

BBMP ಶಾಲೆ ವಿದ್ಯಾರ್ಥಿನಿಯ ಹೆಮ್ಮೆಯ ಸಾಧನೆಯಿಂದ ವಿದ್ಯಾಇಲಾಖೆ ಕಲಿಯಬೇಕಾದ ಪಾಠ..?!


ಬೆಂಗಳೂರು: ಈ ವಿದ್ಯಾರ್ಥಿನಿಯ ಸಾಧನೆಯ ಕ್ರೆಡಿಟ್ ನ್ನು ಬಿಬಿಎಂಪಿ ವಿದ್ಯಾ ಇಲಾಖೆ ತೆಗೆದುಕೊಳ್ಳುವ ಮುನ್ನ ಒಂದು ಮಾತು..ಗೆದ್ದರೆ ಆಡಲು ಬಂದಿದ್ದೆ..ಸೋತರೆ ನೋಡಲಿಕ್ಕೆ ಬಂದಿದ್ದೇ ಎನ್ನುವ ಆಪಾದನೆ ಬಿಬಿಎಂಪಿ ವಿದ್ಯಾಇಲಾಖೆಯಲ್ಲಿರುವ ಕೆಲವರ ಮೇಲಿದೆ.ಈ ಆಪಾದನೆ ಹೊರತಾಗಿಯೂ ಬಿಬಿಎಂಪಿ ಶಾಲೆಗಳೆಂದ್ರೆ ಮೂಗು ಮುರಿಯುವ ಸನ್ನಿವೇಶ ದಲ್ಲಿಯೇ ಇಲ್ಲೋರ್ವ ವಿದ್ಯಾರ್ಥಿನಿ ಎಲ್ಲರ ಹುಬ್ಬೇರಿಸುವಂತ ಸಾಧನೆ ಮಾಡಿ ಪರಿಶ್ರಮ ಹಾಕಿದರೆ ಪ್ರತಿಫಲ ಕಟ್ಟಿಟ್ಟಬುತ್ತಿ..ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಪ್ರೂವ್ ಮಾಡಿದ್ದಾಳೆ. ಆ ವಿದ್ಯಾರ್ಥಿನಿ ಸಾಧನೆಯಿಂದ ಇಡಿ ಬಿಬಿಎಂಪಿ ಆಡಳಿತ ಬೆನ್ನುತಟ್ಟಿಕೊಳ್ಳುವಂತಾಗಿದೆ.

ಹೌದು..ಇವತ್ತು ಬಿಬಿಎಂಪಿ ಶಾಲಾ ಕಾಲೇಜುಗಳೆಂದರೆ ಎಲ್ಲರೂ ಮೂಗು ಮುರಿಯುವಂತ ವಾತಾವರಣವಿದೆ..ಅಯ್ಯೋ ಬಿಬಿಎಂಪಿ ಶಾಲೆನಾ ಎಂದು ತಾತ್ಸಾರ ಮನೋಭಾವದಿಂದ ಮಾತನಾಡುವಂತಾಗಿದೆ.ಎಷ್ಟೇ ಸುಧಾರಣೆ,ಸೌಲಭ್ಯಗಳ ಹೊರತಾಗಿಯೂ ಬಿಬಿಎಂಪಿ ಶಾಲೆಗಳಲ್ಲಿರುವ ಶೈಕ್ಷಣಿಕ ವಾತಾವರಣ ಬದಲಾಗಿಲ್ಲ.ಅಲ್ಲಿನ ಗುಣಮಟ್ಟದಲ್ಲೂ ಸುಧಾರಣೆ ಯಾಗಿಲ್ಲ. ಬಿಬಿಎಂಪಿ ಶಿಕ್ಷಣಕ್ಕೆ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದ್ದರೂ ಅದೆಲ್ಲಾ ಕೆಲವು ದುಷ್ಟಕೂಟದಲ್ಲಿಯೇ ಸೋರಿಕೆಯಾಗುತ್ತಿದೆ.ಹಾಗಾಗಿ ಬಿಬಿಎಂಪಿ ಶಾಲೆಗಳ ಮಕ್ಕಳು ವೈಯುಕ್ತಿಕ ಪರಿಶ್ರಮದಿಂದ ಸಾಧನೆ ಮಾಡುವಂತಾಗಿದೆಯೇ ವಿನಃ ಇದರಲ್ಲಿ ಬಿಬಿಎಂಪಿ ಶಾಲೆಗಳ ಶಿಕ್ಷಕರ ಪಾತ್ರವಾಗಲಿ,ಅವರ ಪರಿಶ್ರಮವಾಗಲಿ ಇಲ್ಲ ಎನ್ನುವುದನ್ನು ಕೂಡ ಒಪ್ಪಿಕೊಳ್ಳಬೇಕಾಗುತ್ತದೆ.

2024-25ನೇ ಎಸ್ ಎಸ್ ಎಲ್ ಸಿ ಶೈಕ್ಷಣಿಕ ಸಾಲಿನಲ್ಲಿ ಸಾದನೆ ಮಾಡಿರುವ ವಿದ್ಯಾರ್ಥಿನಿದು ಕೂಡ ವೈಯುಕ್ತಿಕ ಪರಿಶ್ರಮವೇ ಹೊರತು, ಇದರಲ್ಲಿ ಬಿಬಿಎಂಪಿ ವಿದ್ಯಾಇಲಾಖೆ ಕೊಡುಗೆಯೇನೂ ಇಲ್ಲ.ವಿದ್ಯಾರ್ಥಿನಿ ಬಿ.ಆರ್ ಶಾಲಿನಿ 625ಕ್ಕೆ 614 ಅಂಕಗಳನ್ನು ಪಡೆದು ಶೇಕಡಾ 98.24 ರಷ್ಟು ಫಲಿತಾಂಶ ಪಡೆದಿರುವುದರಲ್ಲಿ ವಿದ್ಯಾ ಇಲಾಖೆಯಲ್ಲಿರುವವವರ ಹೆಗ್ಗಳಿಕೆಯೇನೂ ಇಲ್ಲ.ಹೇರೋಹಳ್ಳಿ ಶಾಲೆಯಲ್ಲಿ ಓದುತ್ತಿರುವ ಶಾಲಿನಿ ತನ್ನ ಪರಿಶ್ರಮದಿಂದ ಹಾಗೂ ಪೋಷಕರ ಒತ್ತಾಸೆ ಮತ್ತು ಕೆಲವೇ ಕೆಲವು ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಸಾಧನೆಯನ್ನು ತನ್ನದಾಗಿ ಮಾಡಿಕೊಂಡಿದ್ದಾಳೆ.ಇದರಲ್ಲಿ ಬಿಬಿಎಂಪಿ ವಿದ್ಯಾಇಲಾಖೆಯಲ್ಲಿರುವವರ ನೆರವು ಇರುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ALSO READ :  ನಿರ್ಮಾಣ ಹಂತದ ಅಕ್ರಮ ಕಟ್ಟಡಗಳ ಸರ್ವೆ...1712 ಒತ್ತುವರಿ ಕಟ್ಟಡಗಳಿಗೆ ಕಾದಿದೆ ಡೆಮಾಲಿಷನ್ ಭೀತಿ

ಸಾಧನೆಗೆ ನಾವು ಓದುತ್ತಿರುವ ಶಾಲೆ ಯಾವುದು ಎನ್ನುವುದು ಮುಖ್ಯವಲ್ಲ…ಅಲ್ಲಿನ ವಾತಾವರಣ ಹೀಗಿಯೇ ಇರಬೇಕೆನ್ನುವ ನಿಯಮವೇನೂ ಇಲ್ಲ.. ಸಾಧಿಸಬೇಕೆನ್ನುವ ಉಮೇದು-ಆತ್ಮವಿಶ್ವಾಸ-ಛಲಕ್ಕೆ ನೀರೆರೆಯುವ ಶಿಕ್ಷಕರಿದ್ದರೆ ಸಾಧನೆ ಅನಾಯಾಸ ಎನ್ನುವುದನ್ನು ಶಾಲಿನಿ ಬಿ.ಆರ್ ಪ್ರೂವ್ ಮಾಡಿದ್ದಾಳೆ.ಬಹುತೇಕ ಬಿಬಿಎಂಪಿ ಶಾಲೆಗಳಲ್ಲಿ ಇರುವಂತದ್ದೇ ವಾತಾವರಣ ಹೇರೋಹಳ್ಳಿ ಶಾಲೆಯಲ್ಲಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವೆನಿಸುವಷ್ಟು ವಾತಾವರಣ ಅಲ್ಲಿಲ್ಲ ಎನ್ನುವ ಮಾತುಗಳಿವೆ.ಇಂಥಾ ಪರಿಸರದಲ್ಲೇ ಓದಿ ಸಾಧನೆ ಮಾಡಿರುವ ಶಾಲಿನಿ ಯಶಸ್ಸನ್ನು ಹೊಗಳಲೇಬೇಕು.. ಸೂಕ್ತವಾದ ವಾತಾವರಣ ಇನ್ನೂ ಹೆಚ್ಚಿನ ರೀತಿಯಲ್ಲಿ ಬಿಬಿಎಂಪಿ ಶಾಲೆಗಳಲ್ಲಿ ಸಿಕ್ಕರೆ ಅಲ್ಲಿನ ಎಷ್ಟೊ ಮಕ್ಕಳು ಕೂಡ ಶಾಲಿನಿಯಂತೆ ಸಾಧನೆ ಮಾಡುತ್ತಿದ್ದರೇನೋ ಗೊತ್ತಿಲ್ಲ..ಇದರ ಬಗ್ಗೆ ಎಷ್ಟೇ ಎಚ್ಚರಿಸಿದರೂ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಯಾಕೆ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೋ ಗೊತ್ತಾಗುತ್ತಿಲ್ಲ.

ಅದೇನೇ ಆಗಲಿ ಬಿ.ಆರ್ ಶಾಲಿನಿ ಯ ಸಾಧನೆ ಹುಬ್ಬೇರಿಸುವಂತದ್ದು.ಬಿಬಿಎಂಪಿ ಶಾಲೆಗಳಲ್ಲಿಯೇ ಮಕ್ಕಳನ್ನು ಓದಿಸಬೇಕೆಂದು ಪುಂಗಿ ಊದುವ ಬಿಬಿಎಂಪಿ ವಿದ್ಯಾಇಲಾಖೆಯಲ್ಲಿರುವ ಕೆಲವರು, ಈ ವಿದ್ಯಾರ್ಥಿನಿ ಸಾಧನೆಯ ಕ್ರೆಡಿಟ್ ನ್ನು ತೆಗೆದುಕೊಳ್ಳುವ ಮುನ್ನ, ಇನ್ನಾದ್ರೂ ತಮ್ಮದೇ ಶಾಲೆಯ ವಿದ್ಯಾರ್ಥಿನಿ ಸಾಧನೆ ನೋಡಿದ ಮೇಲಾದ್ರೂ ಅವರ ಮಕ್ಕಳನ್ನೂ ಬಿಬಿಎಂಪಿ ಶಾಲೆ-ಕಾಲೇಜುಗಳಿಗೆ ಸೇರಿಸುವಂತಾಗಲಿ ..ಈ ವಿದ್ಯಾರ್ಥಿನಿಯ ಸಾಧನೆ, ಬಿಬಿಎಂಪಿಯ ಶಾಲೆ ಕಾಲೇಜುಗಳ ಬಗ್ಗೆ ಬಿಬಿಎಂಪಿ ಆಡಳಿತಕ್ಕಿರುವ ತಾತ್ಸಾರ-ಉಪೇಕ್ಷೆ-ನಿರ್ಲಕ್ಷ್ಯದ ಮನೋಭಾವನೆ ದೂರ ಮಾಡುವಂತಾಗಲಿ..ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತ ಕೆಲಸಗಳಾಗಲಿ..ವಿದ್ಯಾಇಲಾಖೆಗೆ ಬಿಡುಗಡೆಯಾಗುತ್ತಿರುವ ಅನುದಾನ, ಅದೇ ಇಲಾಖೆಯಲ್ಲಿರುವ ಕೆಲವು ಭ್ರಷ್ಟರಲ್ಲಿ ಸೋರಿಕೆಯಾಗುತ್ತಿರುವುದಕ್ಕೆ ಬ್ರೇಕ್ ಬೀಳಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ..


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top