advertise here

Search

ದಾವಣಗೆರೆ ದಕ್ಷಿಣ ಉಪಚುನಾವಣೆ: ಟಿಕೆಟ್ ಘೋಷಣೆಗೂ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ!

davanagere south bypoll

ದಾವಣಗೆರೆ: ಜಿಲ್ಲೆಯ ರಾಜಕೀಯದ ಭದ್ರಕೋಟೆ ಎಂದೇ ಕರೆಯಲ್ಪಡುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಹೊಸ ಟ್ವಿಸ್ಟ್ ಎದುರಾಗಿದೆ. ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಏಪ್ರಿಲ್ 9ರಂದು ಉಪಚುನಾವಣೆ ನಡೆಯಲಿದೆ. ಈ ಮಧ್ಯೆ, ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲದ ನಡುವೆಯೇ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಇಂದು ನಾಮಪತ್ರ ಸಲ್ಲಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

ತಾಯಿ ಹಾಗೂ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ಆಗಮಿಸಿದ ಸಮರ್ಥ್, ಒಟ್ಟು ಎರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು. ಕುತೂಹಲಕಾರಿ ವಿಷಯವೆಂದರೆ, ಅವರು ಒಂದು ಸೆಟ್ ಅನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಗೂ ಇನ್ನೊಂದು ಸೆಟ್ ಅನ್ನು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಕೆ ಮಾಡಿದ್ದಾರೆ. “ನಮ್ಮ ತಾತ ಈ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ, ಹೀಗಾಗಿ ಟಿಕೆಟ್ ನಮಗೇ ಸಿಗುವ ವಿಶ್ವಾಸವಿದೆ” ಎಂದು ಸಮರ್ಥ್ ಈ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.

ALSO READ :  ತುಮಕೂರು DC ಶ್ರೀನಿವಾಸ್‌ ರನ್ನು ಸಮರ್ಥಿಸಿಕೊಳ್ಳುವುದೆಂದರೆ "ಅಸತ್ಯ-ಅನ್ಯಾಯ" ಬೆಂಬಲಿಸಿದಂತಲ್ವಾ..!?..ಅವರೇ "ಸರಿ" ಎನ್ನುವವರು,ಅವರಷ್ಟೇ ತಪ್ಪಿತಸ್ಥರಲ್ವಾ..!?.

ಬಲವಾದ ಲಾಬಿ ಮತ್ತು ಆಂತರಿಕ ಪೈಪೋಟಿ:

ಈ ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ಹಿಡಿತ ಸಾಧಿಸಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ದೆಹಲಿ ಮಟ್ಟದಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮತ್ತೊಂದೆಡೆ ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರು ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿರುವ ಸಾದಿಕ್ ಪೈಲ್ವಾನ್ ಕೂಡ ಇಂದು ನಾಮಪತ್ರ ಸಲ್ಲಿಸಿದ್ದು, ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ | ಜಿಬಿಎ ಟೌನ್‌ ಪ್ಲ್ಯಾನಿಂಗ್‌ನಲ್ಲಿ ‘ಪರ್ಸಂಟೇಜ್‌’ ಪರ್ವ; ಡಿಸಿಎಂ ಹೆಸರಲ್ಲೇ ಅಧಿಕಾರಿಗಳ ಲೂಟಿ ದರ್ಬಾರ್‌!

ಸೋಮವಾರ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ಸಮರ್ಥ್ ಹೇಳಿದ್ದು, “ಯುಗಾದಿ ಹಬ್ಬದಂದು ಹೊಸ ಚಿಗುರು ಬರಲಿದೆ” ಎಂದು ಪ್ರಭಾ ಮಲ್ಲಿಕಾರ್ಜುನ್ ಮಾರ್ಮಿಕವಾಗಿ ನುಡಿದಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್ ಅಧಿಕೃತ ಬಿ-ಫಾರಂ ಯಾರಿಗೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.


Political News

ಉಪಚುನಾವಣೆ ಸಮರ: ಯುಗಾದಿ ಹಬ್ಬದಂದೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಭಿನ್ನಮತಕ್ಕೆ ಸಿಎಂ ‘ಬ್ರೇಕ್’; ಸಂಧಾನ ಸಭೆ ಯಶಸ್ವಿ!

ಪೆನ್‌ಡ್ರೈವ್ ಹಗರಣ: 13,712 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದ ಎಸ್‌ಐಟಿ; 39 ಜನರ ವಿರುದ್ಧ ಸಾಬೀತಾಯ್ತು ಆರೋಪ!

RSS-RAW ಗೆ ಅಮೆರಿಕ ಶಾಕ್: ಟ್ರಂಪ್‌ಗೆ ಯುಎಸ್‌ ಆಯೋಗ ನೀಡಿದ ಶಿಫಾರಸಿನಲ್ಲಿ ಏನಿದೆ?

ಶಾಸಕರ ಪ್ರಶ್ನೆಗಳಿಗೆ ಬೆಲೆ ಇಲ್ಲವೇ? ಕರ್ತವ್ಯ ಲೋಪ ಎಸಗಿದ 3 ಅಧಿಕಾರಿಗಳು ಸಸ್ಪೆಂಡ್!

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ!

ನೆಹರೂ ಬದುಕಿದ್ದರೆ ಕಾನ್ಶಿರಾಮ್ ಅವರನ್ನೇ ಸಿಎಂ ಮಾಡುತ್ತಿದ್ದರು: ರಾಹುಲ್ ಗಾಂಧಿ 

ನನ್ನ ದೇಹದಲ್ಲಿ ಪ್ರಾಣವಿರುವವರೆಗೂ ಜನರ ಸೇವೆ ಮಾಡುತ್ತೇನೆ : ಸಿದ್ದರಾಮಯ್ಯ

Scroll to Top