
ಪ್ರಣಯ ಗೀತೆಗಳು, ಪಾರ್ಟಿ ಸಾಂಗ್ಸ್ ಮತ್ತು ಐಟಂ ಸಾಂಗ್ಸ್, ಭಾವಪೂರ್ಣ ಗಜಲ್‌ಗಳು , ಭಕ್ತಿಗೀತೆಗಳು ,ಪಾಪ್ ಸಂಗೀತ..ಹೀಗೆ ಎಲ್ಲಾ ಗಾಯನ ಪ್ರಾಕಾರಗಳಲ್ಲಿ ತಮ್ಮ ಅತ್ಯದ್ಭುತ ಕಂಠಸಿರಿಯಿಂದ ಪ್ರಸಿದ್ದಿ ಪಡೆದಿದ್ದ ಭಾರತೀಯ ಚಿತ್ರರಂಗದ ಖ್ಯಾತ ಹಿನ್ನಲೆ ಗಾಯಕಿ ಆಶಾ ಬೋಸ್ಲೆ ಶಾಶ್ವತವಾಗಿ ಹಾಡು ನಿಲ್ಲಿಸಿದ್ದಾರೆ.
ಆಶಾ ಬೋಸ್ಲೆ ಅವರಿಗೆ ೯೨ ವರ್ಷ ವಯಸ್ಸಾಗಿತ್ತು.ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ನಿನ್ನೆ( ಶನಿವಾರ -೧೧-೦೪-೨೦೨೬) ರಂದು ದಾಖಲಿಸಲಾಗಿತ್ತು.ಅವರ ಆರೋಗ್ಯದಲ್ಲಿ ಇಂದು ಏರುಪೇರು ಕಂಡು ಬಂತು.ವೈದ್ಯರ ತಂಡ ಚಿಕಿತ್ಸೆ ನೀಡಿತಾದರೂ ಅದು ಫಲ ನೀಡಲಿಲ್ಲ.ಕೆಲ ಗಂಟೆಗಳ ಮುನ್ನ ಅವರು ಶಾಶ್ವತವಾಗಿ ದೇಹವನ್ನು ತ್ಯಜಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
.ಆಶಾ ಬೋಸ್ಲೆ ಅವರು ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ. ಏಳು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸುಮಧುರ ಧ್ವನಿಯಿಂದ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ ಸಂಗೀತ ಲೋಕದ ದಿಗ್ಗಜ ಗಾಯಕಿಯಾಗಿದ್ದರು. ಸೆಪ್ಟೆಂಬರ್ 8, 1933 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದ ಆಶಾ ಬೋಸ್ಲೆ ಅವರ ತಂದೆ ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ದೀನನಾಥ್ ಮಂಗೇಶ್ಕರ್ . ಲತಾ ಮಂಗೇಷ್ಕರ್ ಮತ್ತು ಲತಾ ಮಂಗೇಷ್ಕರ್ ಅವರು ಇವರ ಸಹೋದರಿಯರು.

1943ರಲ್ಲಿ ತಮ್ಮ 10ನೇ ವಯಸ್ಸಿನಲ್ಲೇ ಗಾಯನ ವೃತ್ತಿ ಆರಂಭಿಸಿದರು.ತಮ್ಮ ಧ್ವನಿಯ ವೈವಿಧ್ಯತೆಗೆ ಹೆಸರುವಾಸಿಯಾಗಿದ್ದ ಆಶಾ ಬೋಸ್ಲೆ ಎಲ್ಲಾ ಪ್ರಾಕಾರಗಳ ಹಾಡುಗಾರಿಕೆಯಲ್ಲೂ ಸಿದ್ದಹಸ್ತರಾಗಿದ್ದರು. ಕೇವಲ ಮೆಲೊಡಿ ಹಾಡುಗಳಲ್ಲದೆ,ಪ್ರಣಯ ಗೀತೆಗಳು, ಪಾರ್ಟಿ ಸಾಂಗ್ಸ್ ಮತ್ತು ಐಟಂ ಸಾಂಗ್ಸ್ ಗಳಲ್ಲೂ ಹೆಸರಾಗಿದ್ದರು.ಹಾಗೆಯೇ ಭಾವಪ್ರಧಾನ ಗಜಲ್ ಮತ್ತು ಭಕ್ತಿಪ್ರಧಾನವಾದ ಭಜನೆಗಳಲ್ಲೂ ಸಿದ್ದಹಸ್ತರಾಗಿದ್ದರು. ಬಾಲಿವುಡ್ ನಲ್ಲಿ ಪಾಪ್ ಸಂಗೀತವನ್ನು ಜನಪ್ರಿಯಗೊಳಿಸಿದವರಲ್ಲಿ ಇವರು ಪ್ರಮುಖರು. ಸಂಗೊಳ್ಳಿ ರಾಯಣ್ಣಚಿತ್ರದಲ್ಲಿನ “ಬೆಳ್ಳನೆ ಬೆಳಗಾಯಿತು ಹಾಗೂ ಕುಲವಧು ಚಿತ್ರದಲ್ಲಿ ಹಾಡಿರುವುದು ಸೇರಿದಂತೆ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ೧೨ ಸಾವಿರ ಹಾಡುಗಳನ್ನು ಹಾಡಿದ್ದಾರೆ.
ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಭಾರತೀಯ ಚಿತ್ರರಂಗ ತನ್ನ ಅತ್ಯುನ್ನತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2000): : ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ (2008) ನೀಡಿ ಗೌರವಿಸಿದೆ. ಅತಿ ಹೆಚ್ಚು ಸ್ಟುಡಿಯೋ ರೆಕಾರ್ಡಿಂಗ್‌ಗಳನ್ನು (ಹಾಡುಗಳು) ಮಾಡಿದ ಗಾಯಕಿ ಎಂಬ ಹೆಗ್ಗಳಿಕೆ ಇವರಿಗಿದೆ. ಹಾಗೆಯೇಅನೇಕ ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಮತ್ತು ‘ಲೈಫ್‌ಟೈಮ್ ಅಚೀವ್‌ಮೆಂಟ್’ ಪ್ರಶಸ್ತಿ ಪಡೆದಿದ್ದಾರೆ.
ಆಶಾ ಬೋಸ್ಲೆ ಅವರ ಅಂತ್ಯಸಂಸ್ಕಾರ ನಾಳೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆಯಲಿದೆ.ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಡಲಾಗುವುದು.ಬಾಲಿವುಡ್ ನ ಗಣ್ಯರಾದಿಯಾಗಿ ಅನೇಕರು ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.ಅವರ ನಿಧನಕ್ಕೆ ದೇಶದ ಪ್ರಧಾನ ನರೆಂದ್ರಮೋದಿ, ವಿಪಕ್ಷ ನಾಯಕ ರಾಹುಲ್ ಗಾಂಧೀ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.










