
ಭವಿಷ್ಯದ ಪರಿಣಾಮಗಳೇನೇ ಇರಲಿ,ಕನ್ನಡ ಮಾದ್ಯಮ ಲೋಕ ಎರಡು ಬೆಳವಣಿಗೆಗಳಿಗೆ ಸಾಕ್ಷಿ ಆಗುತ್ತಿದೆ. ಒಂದು ಕೆಲ ವರ್ಷಗಳಿಂದೆ ಅಬ್ಬರದಲ್ಲಿ ಆರಂಭವಾದಷ್ಟೇ ವೇಗದಲ್ಲಿ ಬಾಗಿಲು ಮುಚ್ಚಿಕೊಂಡ ವಿಸ್ತಾರ ನ್ಯೂಸ್ ಚಾನೆಲ್ ಏಳು ಬೀಳುಗಳ ತರುವಾಯ ರೀ ಲಾಂಚ್ ಆಗುತ್ತಿರುವುದು ಮೊದಲ ಸಂಗತಿಯಾದರೆ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಮೂಡಿಬರುತ್ತಿದ್ದ ಫ್ರೀಡಂ ನ್ಯೂಸ್ ಚಾನೆಲ್ ಆಗಿ ಲೋಕಾರ್ಪಣೆಗೊಳ್ಳಲು ಅಣಿಯಾಗುತ್ತಿದೆ.
ಕನ್ನಡ ಫ್ಲ್ಯಾಶ್ ನ್ಯೂಸೇ ,ವಿಸ್ತಾರ ನ್ಯೂಸ್ ಚಾನೆಲ್ ಬಗ್ಗೆ ಈ ಹಿಂದೆನೇ ಸಾಕಷ್ಟು ಬರೆದಿತ್ತು.ವಿಸ್ತಾರದ ಭವಿಷ್ಯ ಡೋಲಾಯಮಾನವಾದ ಸನ್ನಿವೇಶದಲ್ಲೇ ಎಚ್ಚರಿಸುವ ಕೆಲಸ ಮಾಡಿದ್ವಿ.ಆದರೆ ಮಾದ್ಯಮದ ಬೃಹ್ಪತಿಗಳೆನಿಸಿಕೊಂಡವರು ಅದನ್ನು ನೆಗ್ಲೆಕ್ಟ್ ಮಾಡಿದ್ರಿಂದ 200ಕ್ಕೂ ಹೆಚ್ಚು ಮಾದ್ಯಮ ಮಿತ್ರರು ಕೆಲಸ ಮಾಡ್ತಿದ್ದ ವಿಸ್ತಾರ ಬಾಗಿಲು ಹಾಕಿಕೊಳ್ಳಬೇಕಾಯ್ತು.,ಚಾನೆಲ್ ಹೆಸರನ್ನು ಅಡವಿಟ್ಟುಕೊಂಡು ಹಣ ಮಾಡಿದವ್ರು ಆರಾಮಾದ್ರು.ಆದರೆ ತಿಂಗಳ ಸಂಬಳಕ್ಕಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದ ಮಾದ್ಯ,ಮ ಮಿತ್ರರು ಬೀದಿಗೆ ಬಿದ್ದರು.ತಮಗೆ ಬರಬೇಕಾದ ಬಾಕಿಗೆ ಇವತ್ತಿಗೂ ಕಾರ್ಮಿಕ ಇಲಾಖೆಯಲ್ಲಿ ಕಾನೂನಾತ್ಮಕ ಸಮರ ಸಾರಿಕೊಂಡು ಸುಮ್ಮನಿದ್ದಾರೆ.ಆದರೆ ಯಾರನ್ನು ಅಡ್ಜೆಸ್ಟ್ಮೆಂಟ್ ಮಾಡಿಕೊ ಳ್ಳಬೇಕೋ ಅವರನ್ನು ಮ್ಯಾನೇಜ್ ಮಾಡಿಕೊಂಡು ಪ್ರಕರಣವನ್ನು ಮ್ಯಾನೇಜ್ಮೆಂಟ್ ಮುಂದೂಡಿಕೊಂಡೇ ಬಂದಿದೆ.

ಇದರ ನಡುವೆಯೇ ವಿಸ್ತಾರ ನ್ಯೂಸ್ ಚಾನೆಲ್ ಪುನಾರಂಭಕ್ಕೆ ಪ್ರಯತ್ನಗಳು ನಡೆಯುತ್ತಲೇ ಇದ್ದವು.ಆದರೆ ಅನೇಕ ಕಾರಣಗಳಿಂದ ಸಾಧ್ಯವೇ ಆಗಲಿಲ್ಲ.ಯೋಗ್ಯರೆನಿಸಿಕೊಂಡವರೇ ಮ್ಯಾನೇಜ್ಮೆಂಟ್ ಗೆ ಸಿಗಿಲಿಲ್ವಾ ಗೊತ್ತಿಲ್ಲ. ಕೋಟ್ಯಾಂತರ ರೂ ಸುರಿದ ಕೆಲವು ಅಪ್ರಮಾಣಿಕರಿಂದಾಗಿ ಹಣ ಕಳೆದುಕೊಂಡ ಹೂಡಿಕೆದಾರರ ಕೈಯಿಂದ ಈಗ ಆಡಳಿತ ಬದಲಾಗಿದೆ ಎನ್ನಲಾಗುತ್ತಿದ್ದು ಹೊಸ ಆಡಳಿತ ವಿಸ್ತಾರವನ್ನು ರೀಲಾಂಚ್ ಮಾಡುವ ಉತ್ಸಾಹದಲ್ಲಿದೆ ಎನ್ನಲಾಗ್ತಿದೆ.
ವಿಸ್ತಾರ ರೀ ಲಾಂಚ್ ನ ತಂಡದಲ್ಲಿ ನುರಿತ ಹಾಗೂ ಅನುಭವಿಗಳಿದ್ದಾರೆ.ವಿದ್ಯುನ್ಮಾನ ಮಾದ್ಯಮದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ನಿಖಿಲ್ ಜೋಷಿ ವಿಸ್ತಾರ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ನ್ಯೂಸ್ 9, ಟಿವಿ9 ನಿಂದ ಆರಂಭಗೊಂಡು ಟೈಮ್ಸ್ ನೌ, ನ್ಯೂಸ್ ಫಸ್ಟ್ ವರೆಗೆ ಕೆಲಸ ಮಾಡಿ ಅಲ್ಲಿಂದ ನ್ಯೂಸ್ 18 ಕನ್ನಡದ ಸಾರಥ್ಯ ವಹಿಸಿಕೊಂಡು ಅತ್ಯದ್ಭುತವಾಗಿ ಚಾನೆಲ್ ಮೂಡಿ ಬರುವುದಕ್ಕೆ ಕಾರಣವಾದವರು ನಿಖಿಲ್ ಜೋಷಿ.ಅವರನ್ನು ನಂಬಿಕೊಂಡು ಹೂಡಿಕೆದಾರರು ಹೊಸ ವೆಂಚರ್ ಗೆ ಕೈ ಹಾಕಿದ್ದಾರೆ. ನಿಖಿಲ್ ಕೂಡ ಈ ಸವಾಲನ್ನು ಅಷ್ಟೇ ಖುಷಿಯಿಂದ ಸ್ವೀಕರಿಸಿದ್ದಾರೆ ಎನ್ನಲಾಗುತ್ತಿದೆ. ತಾನು ಏನನ್ನುವುದನ್ನು ಸಾಬೀತುಪಡಿಸಬೇಕಿರುವುದರಿಂದ ಇದು ಒಂದೊಳ್ಳೆ ಅವಕಾಶ ಎನ್ನುವ ಭಾವನೆ ಅವರಲ್ಲಿದೆ.ಶುದ್ಧಹಸ್ತ ಹಾಗೂ ಆಳವಾದ ವಿಷಯ ಜ್ನಾನ ನಿಖಿಲ್ ಬಂಡವಾಳ.ಈ ಪ್ರಯತ್ನದಲ್ಲಿ ಯಶಸ್ವಿಯಾಗಲಿ.
ಹಾಗೆಯೇ ನಿಖಿಲ್ ಜೋಷಿ ಜತೆಗೆ ಅನುಭವಿಗಳ ದೊಡ್ಡ ತಂಡವೇ ಇರಲಿದೆ ಎನ್ನಲಾಗುತ್ತಿದೆ.ಉದಯ ಟಿವಿಯ ಶ್ರೀಧರ್ , ಟಿವಿ9 ನಲ್ಲಿ ಕೆಲಸ ಮಾಡಿರುವ ನ.ವಿನಯ್ ಅವರಂಥ ಪತ್ರಕರ್ತರು ನಿಖಿಲ್ ಗೆ ಸಾಥ್ ಕೊಡಲಿದ್ದಾರೆ.ಎಲ್ಲರಲ್ಲೂ ಈಗ ಏನೋ ಹೊಸದನ್ನು ಮಾಡಬೇಕು.ತಮ್ಮ ಸಾಮರ್ಥ್ಯವನ್ನು ಪ್ರೂವ್ ಮಾಡಬೇಕಾದ ತುಡಿತವಿರುವುದರಿಂದ ಕಂಗೆಟ್ಟಿದ್ದ ವಿಸ್ತಾರವನ್ನು ಮುಗಿಲೆತ್ತರಕ್ಕೆ ಬೆಳೆಸಬೇಕೆನ್ನುವ ಇರಾದೆ ಕನಸನ್ನು ಹೊಂದಿದ್ದಾರೆ.ಅದು ಸಾಫಲ್ಯಗೊಳ್ಳಲಿ.

ರಿಪಬ್ಲಿಕ್ ಕನ್ನಡದಲ್ಲಿ ಅಲ್ಲೋಕಲ್ಲೋಲ:ರಾಷ್ಟ್ರವಾದಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರ ಮಹತ್ವಾಕಾಂಕ್ಷೆಯ ರಿಪಬ್ಲಿಕ್ ಕರ್ನಾಟಕದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಒದ್ದಾಡುತ್ತಿರುವ ಸನ್ನಿವೇಶದಲ್ಲಿ ಹೊಸ ಸಾರಥಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಹಿರಿಯ ಪತ್ರಕರ್ತ ಶಿವಂಶಕರ್. ಟಿವಿ9 ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ನಿರ್ಣಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ದೃಶ್ಯ ಮಾದ್ಯಮ ತೊರೆದು ಮುದ್ರಣ ಮಾದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಶಂಕರ್ ದಶಕಗಳ ನಂತರ ವಿದ್ಯುನ್ಮಾನ ಮಾದ್ಯಮಕ್ಕೆ ರಿಪಬ್ಲಿಕ್ ಕನ್ನಡದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.
ಆದರೆ ಆಗಿನ ಪತ್ರಿಕೋದ್ಯಮದ ಗ್ರಾಮರ್ ಗೂ ವರ್ಕಿಂಗ್ ಸ್ಟೈಲ್ ಗೂ ಈಗಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸಗಳು ಅಗೋಗಿವೆ..ಹೊಸದಾಗಿ ಬಂದ ಹುಮ್ಮಸ್ಸಿನಲ್ಲಿ ಶಿವಶಂಕರ್ ನಿರೀಕ್ಷೆ ಮಾಡುತ್ತಿರುವುದು ಅಲ್ಲಿನ ಉದ್ಯೋಗಿಗಳನ್ನು ಕಂಗಾಲುಗೊಳಿಸಿದೆಯಂತೆ.ಅವರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲು ಒದ್ದಾಡುತ್ತಿದ್ದಾರಂತೆ.ಮೊದಲೇ ಹೇಳಿಕೊಳ್ಳುವಂಥ ಒಳ್ಳೆಯ ಟೀಮ್ ರಿಪಬ್ಲಿಕ್ ಕನ್ನಡದಲ್ಲಿಲ್ಲ ಎನ್ನುವ ಮಾತಿದೆ.ಹಿಂದಿದ್ದವರಲ್ಲಿ ಬಹುತೇಕರು ಚಾನೆಲ್ ನ್ನು ಉದ್ದಾರ ಮಾಡೊಕ್ಕಿಂತ ಹಾಳು ಮಾಡಿದ್ದೇ ಹೆಚ್ಚಂತೆ. ರಿಪಬ್ಲಿಕ್ ಕನ್ನಡದ ಸುದ್ದಿವಾಸ್ತುವನ್ನೇ ಹಾಳು ಮಾಡಿರುವ ಹಲವರಿಂದಾಗಿ ಅದು ಸುಧಾರಣೆ ಆಗದಷ್ಟು ಹಾಳಾಗಿ ಹೋಗಿದೆ.ಅದು ದಿಢೀರ್ ಸರಿಯಾಗುವುದಂತೂ ಅಲ್ಲ.ಇದನ್ನು ಶಿವಶಂಕರ್ ಅವರು ಅರ್ಥ ಮಾಡಿಕೊಳ್ಳೋದು ಒಳ್ಳೇದೆನಿಸುತ್ತದೆ. ಶಿವಶಂಕರ್ ಅವರನ್ನು ದುರಿತ ಸನ್ನಿವೇಶದಲ್ಲಿ ಮುಖ್ಯಸ್ಥನ ಸೀಟಿನಲ್ಲಿ ಕೂರಿಸಿರುವುದರಿಂದ ಅವರಿಂದ ಮ್ಯಾನೇಜ್ಮೆಂಟ್ ಗೆ ನಿರೀಕ್ಷೆಗಳು ಹೆಚ್ಚಾಗೇ ಇರುತ್ತದೆ.ಇವರು ಕೂಡ ಅದೇ ಭರವಸೆ ನೀಡಿ ಬಂದಿರುತ್ತಾರೆ.ಹಾಗಾಗಿ ಸಹಜವಾಗೇ ಒತ್ತಡ ಇರುತ್ತದೆ.ಹಾಗಂತ ಕೆಲವರಿಂದಾಗಿ ಹಾಳಾಗಿ ಹೋಗಿರುವ ವ್ಯವಸ್ಥೆಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿರುವವರನ್ನು ಬಾಯ್ಲ್ ಮಾಡುತ್ತಿದ್ದಾರೆ ಎನ್ನುವ ಮಾತಿದೆ.ಈಗಾಗಲೇ ಸಾಕಷ್ಟು ಸಿಬ್ಬಂದಿ ಚಾನೆಲ್ ಬಿಡುವ ಲಕ್ಷಣ ಗೋಚರಿಸುತ್ತಿದೆ.ಇದಕ್ಕೆ ಶಿವಶಂಕರ್ ಅವರು ಅವಕಾಶ-ಆಸ್ಪದ ಕೊಡಬಾರದೆನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಕಾಳಜಿ-ಕಳಕಳಿ..
ಇದೆಲ್ಲದಕ್ಕಿಂತ ಹೆಚ್ಚಾಗಿ ವಿಸ್ತಾರ ನ್ಯೂಸ್ ಚಾನೆಲ್ ಪುನಾರಂಭ ಆಗುತ್ತಿರುವುದು ಎಷ್ಟರ ಮಟ್ಟಿಗೆ ಸಂತಸದ ವಿಷಯವೋ ಕಾರ್ಮಿಕರ ಲಕ್ಷಾಂತರ ಬಾಕಿ ಉಳಿಸಿಕೊಂಡಿದೆ ಎನ್ನುವುದು ದುರಾದೃಷ್ಟಕರ. ನೀಡಬೇಕಾಗಿರುವುದನ್ನೆಲ್ಲಾ ಕಾರ್ಮಿಕರಿಗೆ ನೀಡಿದ್ರೆ ಅವರ ಹಾರೈಕೆ ಮ್ಯಾನೇಜ್ಮೆಂಟ್ ಗೆ ದೊರೆಯಬಹುದು..ಬಾಕಿ ಉಳಿಸಿಕೊಂಡೇ ಚಾನೆಲ್ ಲಾಂಚ್ ಮಾಡಿದ್ರೆ ನೊಂದವರ ನಿಟ್ಟುಸಿರು-ಶಾಪ ತಟ್ಟಬಹುದಾದ ಆತಂಕವಿದೆ. ಇದಕ್ಕೆ ಆಸ್ಪದ ನೀಡದೆ ಆ ಕೆಲಸವನ್ನು ಮೊದಲು ಮಾಡಬೇಕಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಚಾನೆಲ್ ನ್ನು ನಂಬಿಕೊಂಡು ಬರುವವರ ಜೀವ-ಜೀವನ ಎರಡನ್ನೂ ಬೀದಿಗೆ ತರುವಂತ ಕೆಲಸ ಆಗದಿದ್ದರೆ ಸಾಕು..? ಯಾಕೆಂದರೆ ಬಹುತೇಕ ಚಾನೆಲ್ ಗಳ ಸ್ಥಿತಿಯೇ ಹಾಗಿದೆ.ಹಣ ಮಾಡಿಕೊಳ್ಳುವವರು ಲೂಟಿ ಮಾಡುತ್ತಲೇ ಇರುತ್ತಾರೆ.ನಿಷ್ಪಾಪಿ ಕಾರ್ಮಿಕರು ಮಾತ್ರ ಸಂಬಳ ಸಿಗದೆ ಬೀದಿಗೆ ಬೀಳುತ್ತಿದ್ದಾರೆ.ಅದ್ಯಾವಾಗ ಇದೆಲ್ಲಾ ಸರಿ ಹೋಗುತ್ತದೋ ಗೊತ್ತಿಲ್ಲ.


ಇನ್ನು ಹೊಸದಾಗಿ ಲಾಂಚ್ ಆಗಲಿರುವ ಮತ್ತೊಂದು ಚಾನೆಲ್ ಫ್ರೀಡಂ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವವಿರುವ ನಾಗರಾಜ್ ತಮ್ಮ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಫ್ರೀಡಂ ನ್ನು ಸ್ಯಾಟಲೈಟ್ ಚಾನೆಲ್ ಆಗಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಮುದ್ರಣ ಮತ್ತು ದೃಶ್ಯ ಮಾದ್ಯಮಗಳೆರಡರಲ್ಲೂ ಅಪಾರ ಅನುಭವ ಹೊಂದಿರುವ ನಾಗರಾಜ್ ವರ್ಷಗಳಿಂದಲೂ ಫ್ರೀಡಂನ್ನು ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ನಡೆಸಿಕೊಂಡು ಬಂದಿದ್ದರು. ಪತ್ರಕರ್ತ ಶಿವರುದ್ರಪ್ಪ ಅವರ ಆರ್ ಮ್ಯಾಕ್ಸ್ ಚಾನೆಲ್ ನಿಂದ ಅನೇಕ ಕಾರಣಗಳಿಗಾಗಿ ಹೊರಬಿದ್ದ ಅಲ್ಲಿನ ಬಹುತೇಕ ತಂಡವೇ ಫ್ತೀಡಂನಲ್ಲಿ ಕೆಲಸ ಮಾಡಲಿದೆ.ಒಂದಷ್ಟು ಅನುಭವಿಗಳ ಜತೆಗೆ ಹೊಸಬರ ತಂಡ ಫ್ರೀಡಂನಲ್ಲಿದೆ. ಬಹಳಷ್ಟು ಕನಸು-ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ನಾಗರಾಜ್ ಕನಸು ಈಡೇರಲಿ.
ಅದೇನೇ ಇರಲಿ, ಹೊಸ ಚಾನೆಲ್ ಆರಂಭವಾಗುವುದು, ಸ್ಥಗಿತಗೊಂಡ ಚಾನೆಲ್ ಗಳು ರೀ ಲಾಂಚ್ ಆಗುವುದು ಸರ್ವೇಸಾಮಾನ್ಯವಾಗಿರುವ ಸನ್ನಿವೇಶದಲ್ಲಿ ವಿಸ್ತಾರ, ಫ್ರೀಡಂ ಲೋಕಾರ್ಪಣೆ ಆಗುತ್ತಿದೆ. ಪತ್ರಿಕೋದ್ಯಮ ದಿನ ಕಳೆದಂತೆಲ್ಲಾ ಅತ್ಯಂತ ಅತಂತ್ರ ಹಾಗೂ ಅಭದ್ರವಾದ ಕೆಲಸ ಎನ್ನುವ ಕಳಂಕ ತಟ್ಟುತ್ತಿರುವ ಸನ್ನಿವೇಶದಲ್ಲಿ ಮಾದ್ಯಮಮಿತ್ರರಲ್ಲಿ ಹೊಸ ಆಶಾಭಾವನೆ-ಭರವಸೆಯನ್ನು ಇವು ಮೂಡಿಸಲಿ,,ಈ ಚಾನೆಲ್ ಗಳನ್ನು ನಂಬಿಕೊಂಡು ಹೊಸದಾಗಿ ಬರುವ ಅಥವಾ ಇರುವ ಚಾನೆಲ್ ಗಳನ್ನು ಬಿಟ್ಟು ಹೊಸ ನಿರೀಕ್ಷೆಗಳೊಂದಿಗೆ ಕಾಲಿಡುವ ಮಾದ್ಯಮ ಮಿತ್ರರನ್ನು ಬೀದಿಗೆ ತಳ್ಳದೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತಾಗಲಿ ಎನ್ನುವುದೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಕಳಕಳಿ.










