“ಕಿದ್ವಾಯಿ”ಗೆ ಟೆರರ್ KAS ಡಾ.ಅಶಾ ಪರ್ವಿನ್ ಎಂಟ್ರಿ..ಭ್ರಷ್ಟರಲ್ಲಿ ನಡುಕ..


ಕೆಎಎಸ್ ಅಧಿಕಾರಿಗಳಲ್ಲಿ ಬಹುತೇಕರು ಹಣ ಮಾಡ್ಲಿಕ್ಕೆಂದೇ ಆಯಕಟ್ಟಿನ ಹುದ್ದೆಗಳನ್ನು ಹುಡುಕಿ, ಅದಕ್ಕಾಗಿ ಕೋಟಿಗಳಲ್ಲಿ ಹಣ ಖರ್ಚು ಮಾಡಿ ಕಟ್ಟಿದ ಹಣವನ್ನು ಕೆಲ ಅವಧಿಯಲ್ಲೇ ಡಬಲ್-ತ್ರಿಬಲ್ ಮಾಡಿಕೊಳ್ಳುತ್ತಿರುವುದರ ಬಗ್ಗೆ ಹೇಳಿದ್ದೇವೆ..‌ ಕೇಳಿದ್ದೇವೆ.ಆದರೆ ಕೆಲಸ ಮಾಡುವ ವ್ಯವಸ್ಥೆ ಜನಪರವಾಗಿಲ್ಲದಿದ್ದರೆ, ಅದರಿಂದ ಸರ್ಕಾರದ ಉದ್ದೇಶ ಈಡೇರಿಲ್ಲ ಎಂದ್ರೆ ಆ ವ್ಯವಸ್ಥೆ ವಿರುದ್ಧವೇ ಬಂಡಾಯ ಎದ್ದು ಪ್ರಶ್ನಿಸುವ ಕೆಲಸವನ್ನು ಎಷ್ಟು ಅದಿಕಾರಿಗಳು ಮಾಡ್ತಾರೆ..?ಆ ಧೈರ್ಯವನ್ನು ಎಷ್ಟು ಜನ ಪ್ರದರ್ಶಿಸ್ತಾರೆ ಹೇಳಿ..? ತುಂಬಾ ಕಡಿಮೆ ಅಲ್ವಾ..?

ಖರ್ಚು ಮಾಡಿ ಪೋಸ್ಟಿಂಗ್ ಹಾಕಿಸಿಕೊಂಡು ಬಂದ ಜಾಗದಲ್ಲಿ ಹೇಗೆ ಅದನ್ನು ಬಡ್ಡಿ ಸಮೇತ ವಸೂಲಿ ಮಾಡಿ ಮಾಲಾಮಾಲ್ ಆಗಬೇಕೆಂದು ಆಲೋಚಿಸುವವರ ನಡುವೆ ಇವತ್ತಿಗೂ ಇಲಾಖೆಯಲ್ಲಿ ಪ್ರಾಮಾಣಿಕತೆ-ನೀಯತ್ತು-ಶಿಸ್ತು-ಬದ್ಧತೆಯ ಪಳೆಯುಳಿಕೆಗಳಂತೆ ಕಾಣಸಿಗುತ್ತಾರೆ.ಅಂಥಾ ಅಧಿಕಾರಿಗಳಲ್ಲಿ ಹಿರಿಯ ಕೆಎಎಸ್ ಅಧಿಕಾರಿಣಿ ಶ್ರೀಮತಿ ಡಾ.ಆಶಾ ಪರ್ವಿನ್ ಕೂಡ ಒಬ್ಬರು.ಅವರು ಇದೀಗ ಬೆಂಗಳೂರಿನ ಪ್ರತಿಷ್ಟಿತ ಕಿದ್ವಾಯಿ ಆಸ್ಪತ್ರೆಗೆ ಎಂಟ್ರಿ ಹೊಡೆದಿದ್ದಾರೆ.ಅದು ಕೂಡ ಆಡಳಿತ ವ್ಯವಸ್ಥೆ ಉಸ್ತುವಾರಿ ನೋಡಿಕೊಳ್ಳುವ ಮುಖ್ಯ ಆಡಳಿತಾಧಿಕಾರಿಯಾಗಿ(ಸಿಎಓ). ಸೋ ಅಲ್ಲೊಂದು ಸಮಗ್ರ ಬದಲಾವಣೆ ಗ್ಯಾರಂಟಿ ಎನ್ನಲಾಗುತ್ತಿದೆ.ಅದಕ್ಕೆ ಕಾರಣ ಅವರ ಒಟ್ಟಾರೆ ಟ್ರ್ರಾಕ್‌ ರೆಕಾರ್ಡ್.

ಹೌದು,ಕಿದ್ವಾಯಿ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿಯಾಗಿ ಖಡಕ್ ಕೆಎಎಸ್ ಅಧಿಕಾರಿ ಡಾ.ಆಶಾ ಪರ್ವಿನ್ ನೇಮಕಗೊಂಡಿದ್ದಾರೆ. ತಮ್ಮ ಅಧಿಕಾರದುದ್ದಕ್ಕೂ ಪರಿಸ್ಥಿತಿಗಳ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದ ಟಫ್ ಅಧಿಕಾರಿಣಿ ಎಂದೇ ಕರೆಸಿಕೊಂಡಿರುವ ಆಶಾ ಪರ್ವಿನ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿರುವ ಸರ್ಕಾರದ ಕ್ರಮ ನಿಜಕ್ಕೂ ಸ್ವಾಗತಾರ್ಹ. ಹಿಂದೆ ಅವರು ಕೆಲಸ ಮಾಡುತ್ತಿದ್ದ ವಿಕ್ಟೋರಿಯಾದ ನೆಫ್ರೋ ಯುರಾಲಜಿ ಸೆಕ್ಷನ್ ನಲ್ಲಿ ನಡೆಯುತ್ತಿದ್ದ ವ್ಯಾಪಕ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಬಯಲಿಗೆಳೆದು ಸರ್ಕಾರಕ್ಕೆ ವರದಿ ಸಲ್ಲಿಸಿದ್ರು.ಆ ಎಲ್ಲಾ ಅಕ್ರಮಗಳ ಮುಖ್ಯ ಸೂತ್ರಧಾರ ನೆಫ್ರೋ ಯುರಾಲಜಿ ವಿಭಾಗದ ನಿರ್ದೇಶಕ ಡಾ.ಶಿವಲಿಂಗಯ್ಯ.ಅವರ ಅಕ್ರಮಗಳ ಬಗ್ಗೆ ಆಶಾ ಪರ್ವಿನ್ 30 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ರೆ ಶಿವಲಿಂಗಯ್ಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಇವರನ್ನೇ ಸರ್ಕಾರ ಸ್ಥಳ ತೋರಿಸದೆ ವರ್ಗಾವಣೆ ಮಾಡಿತ್ತು.ಅನೇಕ ತಿಂಗಳುವರೆಗೂ ಯಾವುದೇ ಸ್ಥಳವಿಲ್ಲದೆ ಅವರು ಕೆಲಸ ಮಾಡಿದ್ದರು.ಈಗ ಸರ್ಕಾರಕ್ಕೆ ಅದೇನ್ ಅನ್ನಿಸಿದೆಯೋ ಗೊತ್ತಾಗ್ತಿಲ್ಲ..ಇವರೇ ಕಿದ್ವಾಯಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ಸೂಕ್ತ ಎಂದೆನಿಸಿ ಇವರನ್ನು ನೇಮಕ ಮಾಡಿದೆ.

ಶ್ರೀಮತಿ ಆಶಾ ಪರ್ವಿನ್ ಪ್ರಾಮಾಣಿಕತೆಗೆ ಹೆಸರಾದ ಕೆಎಎಸ್ ಅಧಿಕಾರಿಣಿ.ಅವರು ಕೆಲಸ ಮಾಡಿದ ಸ್ಥಳದಲ್ಲಿ ಏನೇ ಅನ್ಯಾಯ-ಅಕ್ರಮ ನಡೆದರೂ ಅದನ್ನು ಸಹಿಸುವ ಜಾಯಮಾನವೇ ಅವರದಲ್ಲ.ಹಾಗಾಗಿನೇ ಅವರು ಬಹುತೇಕರಿಗೆ ಬೇಡವಾದ ವ್ಯಕ್ತಿಯಾಗ್ತಾರೆ.ಹಾಗಂತ ತಮ್ಮ ಸರ್ವಿಸ್ ನುದ್ದಕ್ಕೂ ಅವರು ಅಧಿಕಾರಕ್ಕಾಗಿ ಲಾಭಿ ಮಾಡಲಿಲ್ಲ..ಒಳ್ಳೆ ಹುದ್ದೆಗಾಗಿ ಹಣ ಖರ್ಚು ಮಾಡಲಿಲ್ಲ.ಹಾಗಾಗಿನೇ ಅವರು ವಿಕ್ಟೋರಿಯಾ ಆಸ್ಪತ್ರೆಯಿಂದ ವರ್ಗಾವಣೆ ಆದ ಸಾಕಷ್ಟು ತಿಂಗಳಾದ್ರೂ ಒಳ್ಳೆಯ ಹುದ್ದೆಗೆ ಹೋಗಲು ಆಗಲಿಲ್ಲ.ಅವರ ಪ್ರಕಾರ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುವವರೆಗೂ ಕಾಯಬೇಕಷ್ಟೆ.ಆ ಕಾಯುವಿಕೆ ಪರಿಣಾಮವಾಗಿ ಸರ್ಕಾರವೇ ಅವರಿಗೆ ಹೊಸ ಹುದ್ದೆಯ ಜವಾಬ್ದಾರಿಯನ್ನು ನೀಡಿದೆ.

ALSO READ :  CRICKET NEWS..DHRUV JUREL STORY.. ಟೀಮ್ ಇಂಡಿಯಾದ “ಧ್ರುವ” ನಕ್ಷತ್ರ “ಜುರೇಲ್” ಹಿಂದಿದೆ ಅಮ್ಮನ ತ್ಯಾಗ.. ಅಪ್ಪನ ಶಿಸ್ತು..!

ಆಶಾ ಪರ್ವಿನ್ ಅವರಿಗೆ ಸರ್ಕಾರ ಇದೀಗ ಒಳ್ಳೆಯ ಹುದ್ದೆಯನ್ನೇನೋ ನೀಡಿದೆ.ಆದರೆ ಹಿಂದೆ ಕೆಲಸ ಮಾಡುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿರ್ದೇಶಕ ಡಾ.ಶಿವಲಿಂಗಯ್ಯ ಹಾಗೂ ಅವರ ಪಟಾಲಂ ನಡೆಸುತ್ತಿತ್ತು ಎನ್ನಲಾದ ಅಕ್ರಮ-ಅವ್ಯವಹಾರ-ಅಧಿಕಾರ ದುರುಪಯೋಗ-ಕರ್ತವ್ಯಲೋಪದಂತ ಅಂಶಗಳನ್ನು ಸಾಕ್ಷ್ಯ ಸಮೇತ ಹಿಡಿದುಕೊಟ್ಟರೂ ಸರ್ಕಾರವಾಗಲಿ,ಮಿನಿಸ್ಟರ್ ಆಗಲಿ ಕ್ರಮ ಕೈಗೊಳ್ಳುಇವ ಕೆಲಸವನ್ನೇ ಮಾಡಲಿಲ್ಲವಂತೆ. .ಸರ್ಕಾರಕ್ಕೆ ಶಿವಲಿಂಗಯ್ಯ ಅವರು ಮಾಡಿದ್ದಾರೆನ್ನಲಾದ ಕೋಟ್ಯಾಂತರ ವಂಚನೆ ಹಾಗೂ ದ್ರೋಹವನ್ನು ಎಳೆ ಎಳೆಯಾಗಿ ದಾಖಲೆ ಸಮೇತ ಬಿಚ್ಚಿಟ್ಟ ಹೆಗ್ಗಳಿಕೆ ಅವರದು. ಇವತ್ತಲ್ಲ ನಾಳೆ ನಾನು ನಡೆಸುತ್ತಿರುವ ಹೋರಾಟಕ್ಕೆ ಬೆಲೆ ಸಿಗುತ್ತೆ.ಭ್ರಷ್ಟ ಡಾ.ಶಿವಲಿಂಗಯ್ಯ ನಿಗೆ ಶಿಕ್ಷೆ ಆಗಿಯೇ ತೀರುತ್ತದೆ ಎನ್ನುವ ಆತ್ಮವಿಶ್ವಾಸ ಅವರದು.

ಕನ್ನಡ ಫ್ಲ್ಯಾಶ್‌ ನ್ಯೂಸ್‌ ಜತೆ ಮಾತನಾಡಿದ ಆಶಾ ಪರ್ವಿನ್.‌ ವಿಕ್ಟೋರಿಯಾ ನೆಪ್ರೋ ಅಕ್ರಮ-ಭ್ರಷ್ಟಾಚಾರದಲ್ಲಿ ಸಣ್ಣ ಕೆರೆಯಾದರೆ ಕಿದ್ವಾಯಿ ಸಮುದ್ರವಿದ್ದಂತೆ,ನಾನು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅನ್ಯಾಯಕ್ಕೊಳಗಾದ ನೂರಾರು ಸಿಬ್ಬಂದಿ ನನ್ನ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.ಅವರ ಗೋಳಿನ ಕಥೆ ಕೇಳಿ ನನಗೆ ಬೇಸರವಾಗಿದೆ.ಪೆಟ್‌ ಸ್ಕ್ಯಾನ್‌ ವಿಚಾರ, ಸಿಎಸ್‌ ಆರ್‌ ಫಂಡ್‌ ದುರುಪಯೋಗ, ಸೇರಿದಂತೆ ಅನೇಕ ವಿಚಾರಗಳಲ್ಲಿ ದೊಡ್ಡ ಮಟ್ಟದ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ.ನನ್ನ ಕರ್ತವ್ಯಾವಧಿಯಲ್ಲಿ ನೊಂದವರಿಗೆ ನ್ಯಾಯ, ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯಬೇಕೆನ್ನುವುದು ನನ್ನ ಕನಸು.ಅದನ್ನು ಈಡೇರಿಸಿಯೇ ತೀರುತ್ತೇನೆ ಎಂದರು.ಅವರಿಗೊಂದು ಆಲ್‌ ದಿ ಬೆಸ್ಟ್.

ಏನೇ ಅಗಲಿ ಕಿದ್ವಾಯಿಯಂಥ ಆಸ್ಪತ್ರೆಗೆ ಮಾನವಾಂತರಕಣವುಳ್ಳ ಅಧಿಕಾರಿಗಳು ಬೇಕಿದೆ.ಆ ಕೊರತೆಯನ್ನು ಈಗ ಆಶಾ ಪರ್ವಿನ್ ತುಂಬಲು ಬಂದಿದ್ದಾರೆ.ಅಲ್ಲಿಯೂ ನಡೆದಿರಬಹುದಾದ ಅಕ್ರಮ-ಭ್ರಷ್ಟಾಚಾರವನ್ನು ಪತ್ತೆ ಮಾಡಲಿ ಅದಕ್ಕೊಂದು ಚಿಕಿತ್ಸೆ ಕೊಡಿಸುವ ಕೆಲಸ ಅವರಿಂದಾಗಲಿ.. ಇಂದು ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಶಿವಕುಮಾರ್, ಪತ್ರಕರ್ತ ರಾಘವೇಂದ್ರಾಚಾರಿ ಅವರು ಆಶಾ ಪರ್ವಿನ್ ಅವರನ್ನು ಸನ್ಮಾನಿಸಿ ಅವರಿಂದ ಇನ್ನೊಂದಷ್ಟು ಉತ್ತಮ ಕೆಲಸಗಳಾಗಲಿ ಎಂದು ಶುಭ ಹಾರೈಸಿದರು.


Leave a Comment