advertise here

Search

MLA N.A. HARRIS NEW CHAIRMAN TO BDA..!? BDA ಅಧ್ಯಕ್ಷಗಾದಿಗೆ MLA ಎನ್.ಎ ಹ್ಯಾರೀಸ್ ಹೆಸರು ಫೈನಲ್..?!


CM ಸಿದ್ದರಾಮಯ್ಯ, DCM ಡಿ.ಕೆ.ಶಿವಕುಮಾರ್ ಗೆ ಅತ್ಯಾಪ್ತರಾಗಿರುವ ಹ್ಯಾರೀಸ್.

ಬೆಂಗಳೂರು: ಎಲ್ಲಾ ನಿರೀಕ್ಷೆಯಂತಾದ್ರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ)ದ ಅಧ್ಯಕ್ಷಗಾಧಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ ಹ್ಯಾರೀಸ್ ಗೆ ಒಲಿಯಬಹುದೆನ್ನಲಾಗ್ತಿದೆ

ನಿಗಮ ಮಂಡಳಿಗಳ ನೇಮಕ ವಿಚಾರದಲ್ಲಿ ಸರ್ಕಾರ ಕೊಡುತ್ತಾ ಬಂದಿದ್ದ ಡೆಡ್ ಲೈನ್ ಎಲ್ಲಾ ಮುಗಿದಿದ್ದು ಯಾವ್ ಕ್ಷಣದಲ್ಲಿ ಬೇಕಾದ್ರೂ  ನಿಗಮ ಮಂಡಳಿಗಳ ನೇಮಕಾತಿ ಪಟ್ಟಿ ಹೊರಬೀಳಬಹುದೆಂದು ಹೇಳಲಾಗುತ್ತಿದೆ.ಅನುಭವಿಗಳಿಗೆ ಆಯಕಟ್ಟಿನ ಹುದ್ದೆಗಳು ಸಿಗುವ ಸಾಧ್ಯತೆ ದಟ್ಟವಾಗಿರುವ ಜತೆಗೇನೆ ಪ್ರಮುಖ ನಿಗಮಮಂಡಳಿಗಳಲ್ಲಿ ಒಂದಾದ ಬಿಡಿಎ ಅಧ್ಯಕ್ಷರಾಗಿ ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ ಹ್ಯಾರೀಸ್ ಅವರು ನೇಮಕಗೊಳ್ಳುವುದು ಬಹುತೇಕ ನಿಕ್ಕಿ ಆಗಿದೆ ಎನ್ನಲಾಗುತ್ತಿದೆ.

ಎನ್.ಎ ಹ್ಯಾರೀಸ್ ಕಾಂಗ್ರೆಸ್ ನ ಹಿರಿಯ ಶಾಸಕರಾಗಿದ್ದು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.ಅವರ ಹೆಸರು ಸಚಿವ ಸ್ಥಾನಿಗಳ ರೇಸ್ ನಲ್ಲಿ ಕೇಳಿಬಂದಿದ್ದರೂ ಕೊನೇ ಕ್ಷಣದಲ್ಲಿ ವಂಚಿತರಾಗಿದ್ದರು.ಆದರೆ ಆಗಲೇ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಅವರಿಂದ ಆಯಕಟ್ಟಿನ ನಿಗಮ ಮಂಡಳಿ ದಯಪಾಲಿಸುವ ಭರವಸೆ ಸಿಕ್ಕಿತ್ತೆನ್ನಲಾಗಿತ್ತು.

ALSO READ :  ನ್ಯೂಯಾರ್ಕ್ ಗೆ ಹೊರಟ್ಟಿದ್ದ 239 ಪ್ರಯಾಣಿಕರಿದ್ದ ವಿಮಾನ ದೆಹಲಿಗೆ ಮಾರ್ಗ ಬದಲಾವಣೆ!

ಈಗ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿ ಫೈನಲ್ ಆಗಿದೆ ಎನ್ನಲಾಗ್ತಿದ್ದು ಎನ್.ಎ. ಹ್ಯಾರೀಸ್ ಅವರಿಗೆ ಪ್ರಬಲ ನಿಗಮ ಮಂಡಳಿಗಳಲ್ಲೊಂದಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಾದಿ ದಯಪಾಲಿಸಲಾಗುತ್ತಿದೆ ಎನ್ನುವ ಮಾತು ಕೇಳಿಬಂದಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಜತೆ ಹ್ಯಾರೀಸ್ ಸಂಬಂಧ ಚೆನ್ನಾಗಿದೆ.ಇಬ್ಬರಿಗೂ ಆಪ್ತರಾಗಿದ್ದಾರೆ.ಅಲ್ಲದೇ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ಲೀಡರ್ ಎನಿಸಿಕೊಂಡಿದ್ದಾರೆ.ಈ ಎಲ್ಲಾ ಮಾನದಂಡಗಳು ಎನ್ ಎ ಹ್ಯಾರೀಸ್ ನೇಮಕದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎನ್ನಲಾಗುತ್ತಿದೆ.

ಇದಕ್ಕು ಮುನ್ನ ಬೆಂಗಳೂರು ವಿಜಯನಗರ ಶಾಸಕ ಎಂ.ಕೃಷ್ಣಪ್ಪ. ಕುಣಿಗಲ್ ಶಾಸಕ ಡಾ.ರಂಗನಾಥ್ ಹೆಸರು ಸಹ ಕೇಳಿಬಂದಿತ್ತು.ಆದರೆ ಇವರಿಬ್ಬರ ಬಗ್ಗೆ ಹೇಳಿಕೊಳ್ಳುವಂತ ಒಲವು ಇಲ್ಲದ್ದರಿಂದ ಎನ್.ಎ ಹ್ಯಾರೀಸ್ ಗೆ ಅಂತಿಮವಾಗಿ ಬಿಡಿಎ ಅಧ್ಯಕ್ಷಗಾದಿ ಪಾಲಿಸಬಹುದೆನ್ನಲಾಗ್ತಿದೆ.


Political News

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

INSIDE THE TRUTH….ಮುರಿದುಬಿದ್ದ ಮಾತುಕತೆ- ಬೇಡಿಕೆಗಳಿಗೆ ಸೊಪ್ಪಾಕದ ಸರ್ಕಾರ-14 ತಿಂಗಳ ಹಿಂಬಾಕಿ 700 ಕೋಟಿ ಬಿಡುಗಡೆಗಷ್ಟೇ ಸರ್ಕಾರ ಒಪ್ಪಿಗೆ…

ನಾಳೆ ಸಾರಿಗೆ ಮುಷ್ಕರ ಇಲ್ಲ, ಒಂದು ದಿನ ಮುಂದೂಡಿಕೆ :ಹೈಕೋರ್ಟ್ ಆದೇಶ

“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..

Scroll to Top