ಮಾದ್ಯಮಗಳ ವಿರುದ್ದದ ಹೋರಾಟದಲ್ಲಿ ವೀರೇಂದ್ರ ಹೆಗ್ಗಡೆಗೆ ಮುನ್ನಡೆ..ಕೋರ್ಟ್ ಗೆ ಮೊರೆ ಹೋಗಲು ಮಾದ್ಯಮಗಳ ನಿರ್ದಾರ.

ಬೆಂಗಳೂರು/ಧರ್ಮಸ್ಥಳ: ಬೆಳ್ತಂಗಡಿ ಬಾಲೆ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿಕೊಂಡು ಸುದ್ದಿ ಪ್ರಸಾರ ಮಾಡುತ್ತಿವೆ..ಇದರಿಂದ ತನ್ನ ಮಾನಹಾನಿ ಆಗುತ್ತಿದೆ..ಘನತೆಗೆ ಧಕ್ಕೆ ಬರುತ್ತಿದೆ ಎಂದು ಕೋರ್ಟ್ ಮೊರೆ ಹೋಗಿದ್ದ ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಕಾನೂನಾತ್ಮಕ ಮುನ್ನಡೆ ಆಗಿದೆ. ವೀರೆಂದ್ರ ಹೆಗ್ಗಡೆ ಅವರ ಪ್ರಾರ್ಥನೆ-ಅಹವಾಲನ್ನು ಆಲಿಸಿದ ಕೋರ್ಟ್ ಧರ್ಮಸ್ಥಳವನ್ನಾಗಲಿ, ಧರ್ಮಾಧಿಕಾರಿಗಳ ಬಗೆಗಾಗಲಿ ಅವಹೇಳನಕಾರಿಯಾದ ಅಥವಾ ಆಕ್ಷೇಪಾರ್ಹವಾದ ಯಾವುದೇ ವರದಿ ಮಾಡದಂತೆ ಮಾದ್ಯಮಗಳಿಗೆ ಕಟ್ಟಪ್ಪಣೆ ಮಾಡಿದೆ.

ಸೌಜನ್ಯ ವಿಚಾರದಲ್ಲಿ ಶ್ರೀಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಸೋಶಿಯಲ್ ಮೀಡಿಯಾಗಳು ಸೇರಿದಂತೆ ಮಾದ್ಯಮಗಳು ತೀವ್ರ ತರಾಟೆಗೆ ತೆಗೆದುಕೊಂಡು ನೈತಿಕತೆ ಪ್ರಶ್ನಿಸುತ್ತಿರುವುದರಿಂದ ತೀವ್ರ ಮುಜುಗರದ ವಾತಾವರಣ ನಿರ್ಮಾಣವಾಗಿತ್ತು.ಈ ನಡುವೆ ಅವರನ್ನು ಸಮರ್ಥಿಸಿಕೊಳ್ಳಲು ಒಂದಷ್ಟು ಹೆಗ್ಗಡೆ ಬೆಂಬಲಿಗರು ಪ್ರಯತ್ನಿಸಿದ್ರೂ ಬಹುಸಂಖ್ಯಾತರ ಆಕ್ರೋಶದ ಮುಂದೆ ಅದು ಸಾಧ್ಯವಾಗಿರಲಿಲ್ಲ. ಇದೆಲ್ಲದರಿಂದ ತಪ್ಪಿಸಿಕೊಳ್ಳಲು, ಕಾನೂನಾತ್ಮಕ ರಕ್ಷಣೆಗೆ ಹೆಗ್ಗಡೆ ಅವರು ಮುಂದಾದ್ರು. ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದಾಗಲಿ, ತುಚ್ಛವಾಗಿ ಸಂಬೋಧಿಸುವುದಾಗಲಿ, ಅಪಮಾನ ಮಾಡುವ ರೀತಿಯಲ್ಲಿ ಸುದ್ದಿ ಮಾಡುವುದಾಗಲಿ ಮಾಡಬಾರದಂತೆ ನಿರ್ಬಂಧ ನೀಡುವಂತೆ ಮನವಿ ಮಾಡಿದ್ದರು.
ವೀರೇಂದ್ರ ಹೆಗ್ಗಡೆ ಅವರ ಮನವಿಯನ್ನು ಪರಿಗಣಿಸಿ ನ್ಯಾಯಾಲಯ ಇದೀಗ ಸೌಜನ್ಯ ವಿಚಾರದಲ್ಲಿ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ನಾನಾ ರೀತಿಯಲ್ಲಿ ಪ್ರಶ್ನಿಸಿದ್ದ ಮಾದ್ಯಮಗಳ ಮೇಲೆ ನಿಯಂತ್ರಣ ಹೇರುವ ಕೆಲಸ ಮಾಡಿದೆ. ಇನ್ಮುಂದೆ ಯಾವುದೇ ಮಾದ್ಯಮಗಳು ವೀರೇಂದ್ರ ಹೆಗ್ಗಡೆ ಅವರನ್ನು ತೇಜೋವಧೆ ಮಾಡುವಂತ ಸುದ್ದಿ ಪ್ರಸಾರ ಮಾಡಬಾರದೆಂದು ಸೂಚಿಸಿದೆ.ಒಂದು ವೇಳೆ ಈ ನಿರ್ಬಂಧದ ಹೊರತಾಗ್ಯೂ ಸುದ್ದಿ ಮಾಡಿದ್ರೆ ಕಾನೂನಾತ್ಮಕವಾಗಿ ಎದುರಾಗುವ ಸವಾಲನ್ನು ಎದುರಿಸಬೇಕಾಗುತ್ತದೆಯಂತೆ.
ವೀರೇಂದ್ರ ಹೆಗ್ಗಡೆ ಅವರಿಗೆ ಕೋರ್ಟ್ ನಿಂದ ಸಿಕ್ಕಿರುವ ಬಿಗ್ ರಿಲೀಫ್ ಬಗ್ಗೆ ಸಾಮಾಜಿಕ ಮಾದ್ಯಮ ಸ್ನೇಹಿತರು ವಿಚಲಿತರಾಗಿಲ್ಲ.ಇದು ನಿರೀಕ್ಷಿತ ಬೆಳವಣಿಗೆ.ಇದರಲ್ಲಿ ಅಚ್ಚರಿಯೂ ಇಲ್ಲ..ಆತಂಕವೂ ಇಲ್ಲ.ಕೋರ್ಟ್ ನೀಡಿರುವ ಸೂಚನೆಯನ್ನು ಗೌರವಿಸುತ್ತೇವೆ.ಇದರ ಜತೆಗೆ ವೀರೇಂದ್ರ ಹೆಗ್ಗಡೆ ಅವರ ಪರವಾಗಿ ತೀರ್ಪು ನೀಡಿರುವ ಕೋರ್ಟ್ ಆದೇಶದ ತೆರವಿಗೆ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಅನೇಕ ಮಾದ್ಯಮಸ್ನೇಹಿತರು ತಿಳಿಸಿದ್ದಾರೆ.ವೀರೇಂದ್ರ ಹೆಗ್ಗಡೆ ಅವರ ಭಾವನೆಯನ್ನು ಅರ್ಥೈಸಿಕೊಂಡು ಬೆಲೆ ಕೊಟ್ಟ ಅದೇ ನ್ಯಾಯಾಂಗ ವ್ಯವಸ್ಥೆ ನಮಗೂ ನ್ಯಾಯ ನೀಡಲಿದೆ ಎನ್ನುವ ವಿಶ್ವಾಸ ನಮಗಿದೆ ಎಂದು ಅಭಿಪ್ರಾಯಿಸಿದ್ದಾರೆ.

ಕೋರ್ಟ್ ನೀಡಿರುವ ತಡೆಯಾಜ್ಞೆಯ ಆದೇಶವನ್ನು ಗೌರವಿಸಿರುವ ಮಾದ್ಯಮ ಸ್ನೇಹಿತರು ಸೌಜನ್ಯಪರ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ದರಿಸಿದಂತಿದೆ. ಕಾನೂನಿನ ಬಗ್ಗೆ ನಮಗೆ ಅಪಾರ ಗೌರವವಿದೆ.ಹಾಗೆಂದು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಇರುವ ಸಾಕಷ್ಟು ಆರೋಪಗಳ ಬಗ್ಗೆ ಸುದ್ದಿ ಮಾಡಲೇಬಾರದೆಂದೇನೂ ಕೋರ್ಟ್ ಹೇಳಿಲ್ಲವಲ್ಲ.ಕಾನೂನಿನ ಚೌಕಟ್ಟಿನಲ್ಲೇ ವೀರೇಂದ್ರ ಹೆಗ್ಗಡೆ ಅವರನ್ನು ಪೃಶ್ನಿಸುತ್ತೇವೆ.ಅವರ ಮೇಲಿನ ಆರೋಪಗಳನ್ನು ಖಂಡಿಸುತ್ತೇವೆ ಎಂದು ಅನೇಕರು ತಿಳಿಸಿದ್ದಾರೆ.ಕೇವಲ ಒಂದು ಪ್ರಕರಣದಲ್ಲಿ ಕಾನೂನಾತ್ಮಕವಾಗಿ ರಕ್ಷಣೆ ಪಡೆದಿರಬಹುದು.

ಆದ್ರೆ ಅವರ ಮೇಲಿದೆ ಎನ್ನಲಾಗುತ್ತಿರುವ ದಂಡಿ ಆಪಾದನೆಗಳ ವಿಷಯದಲ್ಲೆಲ್ಲಾ ಕೋರ್ಟ್ ಅವರನ್ನು ರಕ್ಷಿಸುತ್ತದೆ ಎನ್ನುವ ಹಾಗೇನಿಲ್ಲವಲ್ಲ.ಕೋರ್ಟ್ ಕೂಡ ವಿವೇಚನೆಯಿಂದಲೇ ಕೆಲಸ ಮಾಡುತ್ತದೆ.ಎಲ್ಲಾ ಪ್ರಕರಣಗಳಲ್ಲಿ ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸುವಷ್ಟು ನಮ್ಮ ಕಾನೂನು ಪೇಲವವಾಗಿಲ್ಲ.ಾದು ತನ್ನ ಗಂಭೀರತೆ-ಸೂಕ್ಷ್ಮತೆಯನ್ನು ಇಂದಿಗೂ ಉಳಿಸಿಕೊಂಡಿದೆ. ನಮಗೂ ಕೋರ್ಟ್ ಬಗ್ಗೆ ಗೌರವವಿದೆ. ಸೌಜನ್ಯಳ ವಿಚಾರದಲ್ಲಿ ನೀಡಿರುವ ಆದೇಶವನ್ನು ಪಾಲಿಸುತ್ತೇವೆ.ಆದರೆ ಧರ್ಮಾಧಿಕಾರಿಗಳ ಬಗ್ಗೆ ಇರುವ ಆಪಾದನೆಗಳ ವಿರುದ್ದ ಧ್ವನಿ ಎತ್ತುವುದನ್ನಾಗಲಿ, ಅದನ್ನು ಖಂಡಿಸುವುದನ್ನಾಗಲಿ ಮಾಡದೆ ಇರೊಕ್ಕೆ ಸಾಧ್ಯವಿಲ್ಲ.ರಚನಾತ್ಮಕ ಟೀಕೆಗೆ ನಮ್ಮ ಘನತವೆತ್ತ ನ್ಯಾಯಾಂಗವೇ ಅವಕಾಶ ನೀಡಿದೆ ಎಂದು ಮಾದ್ಯಮಸ್ನೇಹಿತರು ಹೇಳುವ ಮೂಲಕ ವೀರೇಂದ್ರ ಹೆಗ್ಗಡೆ ಅವರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದಾರೆ ಎನಿಸುತ್ತದೆ.
