advertise here

Search

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!


ಬಾಗಲಕೋಟೆ ಹಾಗೂ  ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ನಡೆಯುತ್ತಿರುವ ಬೈ ಎಲೆಕ್ಷನ್‌ ನ ಕಾವು ಬಿಸಿಲ ಝಳಕ್ಕಿಂತ ಹೆಚ್ಚಾಗಿ ಸುಡುತ್ತಿದ್ದರೆ ಕೆಲವೊಂದು ಅಪಥ್ಯ ಎನ್ನಬಹುದಾದ ಸಾಕಷ್ಟು ಸುದ್ದಿಗಳು ಮಾದ್ಯಮಗಳ ನಡುವಿಂದ ಕೇಳಿಬರಲಿಕ್ಕಾರಂಭಿಸಿವೆ.ಬಾಗಲಕೋಟೆ ಕಣದಲ್ಲಿ ಹೇಳಿಕೊಳ್ಳುವಂತ ವರ್ತಮಾನಗಳು ಸದ್ದು ಮಾಡದಿದ್ದರೂ ದಾವಣಗೆರೆ ದಕ್ಷಿಣದಲ್ಲಿ ಮಾತ್ರ ಚುನಾವಣಾ ಅಖಾಡವನ್ನು ಮಾದ್ಯಮಗಳು ತಮ್ಮ ಸ್ವಹಿತಾಸಕ್ತಿ-ಲಾಭಕ್ಕೆ ಬಳಸಿಕೊಳ್ಳುತ್ತಿರುವು ದಾಗಿ ವರದಿಯಾಗ್ತಿದೆ.ಈ ಸುದ್ದಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ ಸುದ್ದಿಮನೆಯಂಗಳಕ್ಕೂ ಬಂದು ತಲುಪಿದೆ.

ಅಂದ್ಹಾಗೆ ಈ ಸುದ್ದಿ ಬರೆಯುವ ಯಾವುದೇ ಉದ್ದೇಶ ಕನ್ನಡ ಫ್ಲ್ಯಾಶ್‌ ನ್ಯೂಸ್‌ ನದ್ದಾಗಿರಲಿಲ್ಲ. .ಚುನಾವಣೆ ಬಂದಾಗ ಬಹುತೇಕ ಚಾನೆಲ್‌ ಗಳು ಪ್ರಚಾರ- ಕಮರ್ಷಿಯಲ್‌ ಹೆಸರಲ್ಲಿ ದುಡ್ಡು ಮಾಡುವು ದು ಸಹಜ.ಅದು ಮಾರ್ಕೆಟಿಂಗ್‌ ನ ಭಾಗವೂ ಕೂಡ.ಆದರೆ ದಾವಣಗೆರೆಯಲ್ಲಿ ಇದಕ್ಕಿಂತ ಭಿನ್ನವಾದ ಚಿತ್ರಣವೇ ನಿರ್ಮಾಣವಾಗಿದೆ ಎನ್ನುವುದನ್ನು ಅಖಾಡದಲ್ಲಿ ನಿಂತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸುದ್ದಿ ಮಿತ್ರರು ಗಮನಕ್ಕೆ ತಂದಾಗ ಅದರ ಮೇಲೆ ಬೆಳಕು ಚೆಲ್ಲಲೇಬೇಕೆಂದು ತೀರ್ಮಾನಿಸಿಯೇ ಇದರ ಮೇಲೆ ಬೆಳಕು ಚೆಲ್ಲುತ್ತಿದ್ದೇವೆ.( ದಾವಣಗೆರೆಯಲ್ಲಿಯೂ ಸಾಕಷ್ಟು ಪತ್ರಕರ್ತರು ನಮ್ಮ ಆತ್ಮೀಯರಿದ್ದಾರೆ..!)

ಎಲೆಕ್ಷನ್‌ ಗಳು ಬಂದಾಗ ಬಹುತೇಕ ಮಾದ್ಯಮಗಳು-ಪತ್ರಕರ್ತರು ಸುದ್ದಿ ಜತೆಗೆ ದುಡ್ಡು ಮಾಡುವುದು ಸಹಜ ಎಂದು ಮೊದಲೇ ಹೇಳಿದ್ವಿ..ಅದು ಸಹನೀಯ ಎನ್ನುವಷ್ಟರ ಮಟ್ಟಿಗೆ ಇದ್ದರೆ ಓಕೆ..ಆದರೆ ಅತಿಯಾಯ್ತು ಎನ್ನುವ ರೀತಿಯಲ್ಲಿ, ಮಾದ್ಯಮಗಳಿಗೆ  ದುಡ್ಡು ಕೊಟ್ಟರೆ ಏನ್‌ ಬೇಕಾದ್ರೂ ಪ್ರಸಾರ ಮಾಡ್ತಾರೆ..ಅವರೆಲ್ಲಾ ಹಣಕ್ಕಾಗಿ ಸ್ವಂತಿಕೆ-ನೀಯತ್ತು-ವೃತ್ತಿನಿಷ್ಟೆಯನ್ನು ಮಾರಿಕೊಳ್ಳಬಲ್ಲರೆಂದು ಶ್ರೀಸಾಮಾನ್ಯರು ಹಾಗೂ ಹಣ ನೀಡುತ್ತಿದ್ದಾರೆನ್ನಲಾಗುತ್ತಿರುವ ರಾಜಕೀಯ ಪಕ್ಷಗಳ ಮುಖಂಡರು ಲೇವಡಿತನದಿಂದ ಮಾತನಾಡಿಕೊ‍ಳ್ಳುತ್ತಿದ್ದಾರೆಂದರೆ ಇದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಅಲ್ವಾ.!ದಾವಣಗೆರೆ ಚುನಾವಣೆ ಅಖಾಡ ಹೇಗಿದೆ ಎಂದ್ರೆ, ಹುಚ್ಚನ ಮದ್ವೇಲಿ, ಉಂಡವನೇ ಜಾಣ ಎನ್ನುವಂತ ಗಾಧೆಯನ್ನು ನೆನಪಿಸ್ತದೆ  ಕೆಲ  ಮಾದ್ಯಮಗಳು ಮತ್ತು ಹಲವು ಪತ್ರಕರ್ತರ ಮನಸ್ಥಿತಿ.

ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಾವಿನ ಘಟನೆಯನ್ನು ಒಂದು ಪ್ರಮುಖ ಜಾಗತಿಕ  ವಿದ್ಯಾಮಾನ ಎನ್ನುವ ರೀತಿಯಲ್ಲಿ ಬಿಂಬಿಸಿ, ಅಂತ್ಯಸಂಸ್ಕಾರ ಆಗುವವರೆಗೂ ಅದನ್ನು ದಿನವಿಡೀ ಪ್ರಸಾರ ಮಾಡಿದ ದಿನವೇ  ಮಾದ್ಯಮಗಳ( ಎಲ್ಲಾ ಮಾದ್ಯಮಗಳು ಅಲ್ಲ..ಕೆಲವು ಮಾದ್ಯಮಗಳು..) ಬಗ್ಗೆ ದಾವಣಗೆರೆಯ ಜನವೇ ಲೇವಡಿ ಮಾಡಿದ್ರಂತೆ. ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಇರಬಹುದಾದ ಗೌರವದ ಕಾರಣಕ್ಕೆ ಅದನ್ನು ಒಂದು ಸುದ್ದಿಯಾಗಿ ಪ್ರಸಾರ ಮಾಡಿದಿದ್ರೆ ಯಾವುದೇ ಆಕ್ಷೇಪ ಇರಲಿಲ್ಲವಂತೆ.ಆದ್ರೆ ಅಂದಿನ ಪ್ರಮುಖ ಯಾವುದೇ ಸುದ್ದಿಯನ್ನೂ ಬಿತ್ತರಿಸದೆ, ದಿನವಿಡೀ ಶಿವಶಂಕರಪ್ಪ ಅವರ  ಪಾರ್ಥಿವ ಶರೀರದ  ಸಾರ್ವಜನಿಕ ದರ್ಶನ, ಮೆರವಣಿಗೆ  ಹಾಗೂ ಅಂತ್ಯಸಂಸ್ಕಾರವನ್ನೆಲ್ಲಾ ದಿನವಿಡೀ ಪ್ರಸಾರ ಮಾಡಿದ್ದನ್ನು ಸಾರ್ವಜನಿಕರು ಟೀಕಿಸಿದ್ದೂ ಉಂಟು.. ಮಾದ್ಯಮಗಳು ಈ ಸ್ಥಿತಿಗೆ ಬಂದು ತಲುಪಿಬಿಟ್ವಾ ಥೂ..ಛೇ..ಎಂದು ಅನೇಕರು ಮಾತನಾಡಿದ್ದು ಕೂಡ ಸುಳ್ಳಲ್ಲ.

ಅಷ್ಟೇ ಅಲ್ಲ, ಶಾಮನೂರು ಶಿವಶಂಕರಪ್ಪ ಅವರ ಸಾವಿನ ವರದಿಯನ್ನು ಬಿಟ್ಟೂಬಿಡದೆ ಪ್ರಸಾರ ಮಾಡಿದ ಕೆಲ ಚಾನೆಲ್‌ ಗಳು ದುಡ್ಡು ಪಡೆದು ವರದಿ ಮಾಡುತ್ತಿವೆಯೇ ಎಂದು ಸಾರ್ವಜನಿಕರು  ಪ್ರಶ್ನೆ ಮಾಡಿದ್ದುಂಟು.ಆದರೆ ನೆನಪಿರಲಿ, ಮಾದ್ಯಮಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ನಂಬಿಕೆ-ವಿಶ್ವಾಸ ಕಳೆದು ಹೋಗಿರುವ ಸನ್ನಿವೇಶದಲ್ಲಿ ಹೀಗೆ ಮಾತನಾಡೋದು ಕಾಮನ್‌ ಬಿಡಿ ಎಂದು ನಿರ್ಲಕ್ಷ್ಯಿಸುವಷ್ಟು ಸಲೀಸಲ್ಲ ಈ ಆರೋಪ.ಸಾವಿನ ವರದಿಯನ್ನು ಪ್ರಸಾರ ಮಾಡಲೂ ಕೆಲ ಮಾದ್ಯಮಗಳು ಹಾಗೂ ವರದಿಗಾರರು ಹಣ ಪಡೆದಿರಬಹುದಾ ಎನ್ನುವ ಹೊಸ ಚರ್ಚೆಯೂ ದಾವಣಗೆರೆ ಮಾದ್ಯಮಗಳಲ್ಲೇ ಸೃಷ್ಟಿಯಾಗಿದೆಯಂತೆ. ಒಂದು ವೇಳೆ ಅಂದುಕೊಂಡಂತೆ ನಡೆದಿದ್ದರೆ, ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬಹುದೇನೋ..? ಅಂತದ್ದೊಂದು ಕುಖ್ಯಾತಿ-ಕಳಂಕ ದಾವಣಗೆರೆ ಮಾದ್ಯಮಕ್ಕೆ ಅಂಟಿಕೊಳ್ಳಬಹುದೇನೋ..? ಆದ್ರೆ ಇದು ಕೇವಲ ಆರೋಪವೋ..? ಆಗದ ಕೆಲವರು ಹಬ್ಬಿಸಿರುವ ಪುಕಾರೋ..? ಶಾಮನೂರು ಹಾಗೂ ಮಾದ್ಯಮ ಗಳ ನಡುವೆ ಇರುವ “ಮಧುರ” ಬಾಂಧವ್ಯಕ್ಕೆ ಹುಳಿ ಹಿಂಡುವ ಪ್ರಯತ್ನನಾ..?  ಇದಕ್ಕೆ ದಾವಣಗೆರೆ ಮಾದ್ಯಮರಂಗ  ಉತ್ತರಿಸಬೇಕಷ್ಟೇ.

ದಾವಣಗೆರೆ ಬೈ ಎಲೆಕ್ಷನ್‌ ಅಖಾಡದಲ್ಲಿ ಮಾದ್ಯಮಗಳು ಬಹಳ ಹುರುಪಿನಿಂದ ಕೆಲಸ ಮಾಡಲಾರಂಭಿ ಸಿವೆ. ಕೆಲವು  ಮಾದ್ಯಮಗಳು ಕೆಲವು ಅಭ್ಯರ್ಥಿಗಳ ಮುಖವಾಣಿಯಂತೆ ವಕ್ತಾರಿಕೆ ಮಾಡುತ್ತಿವೆ ಎನ್ನುವುದು ಸುಳ್ಳಲ್ಲ..ಕೆಲವು ಮಾದ್ಯಮಗಳು ತಮ್ಮ ಯೂನಿಟ್‌ ಗಳನ್ನೇ ದಾವಣಗೆರೆಯಲ್ಲಿ ಹಾಕ್ಕೊಂಡು ಕೆಲಸ ಮಾಡ್ತಿವೆ. ಇದಕ್ಕೆಲ್ಲಾ ಬಹುತೇಕ ಕಾಂಚಾಣವೇ ಕಾರಣ ಎನ್ನುವುದನ್ನು ಬಿಡಿಸೇಳಬೇಕಿಲ್ಲ.ಆದರೆ ಇದರ ನಡುವೆಯೇ ಕೆಲವು ಮಾದ್ಯಮಗಳು ಮತ್ತು ಅದರ ಪ್ರತಿನಿಧಿಗಳು ಬೇರೆಯದೇ ಆದ ರೀತಿಯಲ್ಲಿ  ಮಾಲಾಮಾಲ್‌ ಆಗುತ್ತಿದ್ದಾರೆನ್ನುವ ಸುದ್ದಿ ಕೇಳಿಬಂದಿದೆ. ಟಿಆರ್‌ ಪಿ ಆಧಾರದಲ್ಲಿ ರೇಟ್‌ ಫಿಕ್ಸ್‌ ಮಾಡಿಕೊಂಡು ಹಣ ಮಾಡುತ್ತಿದ್ದಾರೆನ್ನುವ ಸುದ್ದಿಯಿದೆ.ಆಶ್ವರ್ಯ ಎಂದರೆ ಒಂದೇ ಚಾನೆಲ್‌ ನ ಪ್ರತಿನಿಧಿಗಳೇ ಪರಸ್ಪರರನ್ನು ಯಾಮಾರಿಸಿ ಹಣ ಮಾಡಿಕೊಳ್ಳುತ್ತಿದ್ದಾರಂತೆ. ಇದರಿಂದ ಹೇಸಿಗೆ ಪಟ್ಟುಕೊಳ್ಳುತ್ತಿರುವ ಕೆಲವು ರಾಜಕೀಯ ಮುಖಂಡರು, ಚುನಾವಣಾ ಸಮಯವಾಗಿರುವುದರಿಂದ ಯಾರನ್ನೂ ಎದುರಾಕಿಕೊಳ್ಳುವುದು ಬೇಡ ಎಂದು ಸುಮ್ಮನಿದ್ದಾರಂತೆ.

ALSO READ :  "ಮಾರ್ಕೆಟ್ ಶೇರ್" ನಲ್ಲಿ ನ್ಯೂಸ್ 18 ಕನ್ನಡ ಸ್ಥಾನ ನಂ. 1 "ಅಬಾಧಿತ" ವಾಗಿದ್ರೂ "ಟಿಆರ್ ಪಿ"ಯಲ್ಲಿ ಟಿವಿ9 ನಂ.1..!

ಚುನಾವಣಾ ಸಮಯವನ್ನೇ ಉಪಯೋಗಿಸಿಕೊಂಡು ಕೆಲವು ಮಾದ್ಯಮಗಳ ಪ್ರತಿನಿಧಿಗಳು ಮಾಲಾಮಾಲ್‌ ಆಗುವ ಪ್ರಯತ್ನದಲ್ಲಿದ್ದಾರಂತೆ. ಕೆಲವು ಖತರ್ನಾಕ್‌ ಪ್ರತಿನಿಧಿಗಳು ತಮ್ಮ ಚಾನೆಲ್‌ ಮುಖ್ಯಸ್ಥರನ್ನೇ ಒಳಗಾಕಿಕೊಂಡು ಅವರಿಗೊಂದಿಷ್ಟು ಪಾಲು ನೀಡಿ ಉಳಿದಿದ್ದನ್ನು ಗುಳುಂ ಮಾಡುತ್ತಿದ್ದಾರಂತೆ. ತಾವು ಹಣ ಮಾಡುವ ಭರಾಟೆಯಲ್ಲಿ ಅವರಷ್ಟೇ ಕೆಲಸ ಮಾಡುವ-ಶ್ರಮ ಪಡುವ ಕ್ಯಾಮೆರಾಮನ್‌ ಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡ್ತಿದ್ದಾರಂತೆ. ಬೆಳಗ್ಗೆಯಿಂದ ಸಂಜೆವರೆಗೆ ಮೈ ಮುರಿಸಿ ಕೆಲಸ ಮಾಡಿಸುವ ರಿಪೋರ್ಟರ್‌ ಗಳು ಫೀಲ್ಡ್‌ ನಲ್ಲಿ ಅವರನ್ನು ಅತ್ಯಂತ ನಿರ್ದಯಿಗಳಂತೆ ಟ್ರೀಟ್‌ ಮಾಡ್ತಿದ್ದಾರಂತೆ.ಸಂಜೆ ಅಥವಾ ರಾತ್ರಿ ಕ್ಯಾಮೆರಾಮನ್‌ ಗಳನ್ನು ಮನೆಗೆ ಹೋಗುವಂತೆ ಹೇಳಿ ರಿಪೋರ್ಟರ್‌ ಗಳು ನಿಗಧಿತ ಸ್ಥಳಕ್ಕೆ ತೆರಳಿ ಅಲ್ಲಿ ತಮಗೆ ತಲುಪಬೇಕಾದುದನ್ನು ಪೀಕಿಕೊಂಡು ಮನೆಗೆ ಹೋಗುತ್ತಿದ್ದಾರಂತೆ.ಅನುಮಾನಗೊಂಡು ರಿಪೋರ್ಟರ್‌ ಗಳನ್ನು ಫಾಲೋ ಮಾಡಿದ ಕೆಲ ಕ್ಯಾಮೆರಾಮನ್‌ ಗಳ ಕಣ್ಣಿಗೆ ಕಂಡಂಥ ಸನ್ನಿವೇಶಗಳಂತೆ ಇವು.

“ರಿಪೋರ್ಟರ್‌ ಗಳು ದುಡ್ಡು ಮಾಡಲಿ ಸರ್..ಯಾರು ಬೇಡ ಅಂದ್ರು..ಬಹುತೇಕ ಎಲ್ಲರ ಉದ್ದೇಶ-ಗುರಿಯೂ ಅದೇ ಆಗೋಗಿದೆ.ಆದ್ರೆ ನಮ್ಮನ್ನು ಶೂಟ್‌ ಗೆ ಕರೆದುಕೊಂಡು ಹೋಗಿ ಅಲ್ಲಿ ಬಲವಂತವಾಗಿ ಅವರ ಬೈಟ್ಸ್‌ ಶೂಟ್‌ ಮಾಡಿಸಿ ಅಲ್ಲೇ ಸನ್ನೆಗಳಲ್ಲೇ ಏನೇನೋ ಮಾತನಾಡಿಕೊಂಡು ಸಂಜೆಯಾದ್ಮೇಲೆ ನಮ್ಮನ್ನು ಬಿಟ್ಟು ಅದನ್ನು ಪೀಕಿಕೊಂಡು ಹೋಗುವುದಿದೆಯೆಲ್ಲಾ ಅದನ್ನು ಸಹಿಸಿಕೊಳ್ಳಬೇಕಾ..? ಹಾಗೆ ದುಡ್ಡು ಮಾಡೊಕ್ಕೆ ಯಾವ ಸಂಸ್ಥೆಗಳಾದ್ರೂ ಅವಕಾಶ ಮಾಡಿಕೊಡ್ತವಾ..? ಅವರಿವರಿಂದ ಛೀ..ಥೂ..ಎಂದು ಬೈಸಿಕೊಂಡು ದುಡ್ಡು ಮಾಡಿಕೊಳ್ಳ ಬೇಕಾ..?ಇದು ಒಂದು ಬದುಕಾ..? ಚುನಾವಣಾ ಫೀಲ್ಡ್‌ ನಲ್ಲಿ ನಮ್ಮೊಂದಿಗೆ ಬರುವ ಅದೆಷ್ಟೋ ರಿಪೋರ್ಟರ್‌ ಗಳೆಲ್ಲಾ ಹೀಗೆಯೇ ಆಗೋಗಿದ್ದಾರೆ..” ಎನ್ನುವ ಆರೋಪ ಅನೇಕ ಕ್ಯಾಮೆರಾಮನ್‌ ಗಳದ್ದು.

“ದುಡ್ಡು ಯಾರಿಗೆ ಬೇಡ ಹೇಳಿ..ರಿಪೋರ್ಟರ್‌ ಗಳಂತೆ ನಮಗೂ ಅದರ ಅವಶ್ಯಕತೆ ಇದೆ..ರಿಪೋರ್ಟರ್‌ ಗಳ ಹೋಲಿಕೆಯಲ್ಲಿ ಕ್ಯಾಮೆರಾಮನ್‌ ಗಳಿಗೆ ಸಿಗುವ ಸಂಬಳ ಎಷ್ಟು ಎಂದು ಎಲ್ಲರಿಗೂ ಗೊತ್ತಿದೆ.ತಿಂಗಳ ಸಂಬಳ ಒಂದೇ ದಿನದಲ್ಲಿ ಸೋರಿ ಹೋಗುತ್ತಿದೆ.ಇಂಥಾ ಸನ್ನಿವೇಶದಲ್ಲಿ ರಿಪೋರ್ಟರ್‌ ಗಳು ಅವರಿವರಿಂದ ಪಡೆಯುವ ಹಣದಲ್ಲಿ ನಮಗೂ ಒಂದಷ್ಟು ಕೊಟ್ಟರೆ ನಾವು ಖುಷಿಯಿಂದ ಕೆಲಸ ಮಾಡ್ತೇವೆ ಅಲ್ವಾ..?ಹೀಗೆ ನಿಜಕ್ಕೂ ಮಾತನಾಡಬಾರದು.‌ .ಆದ್ರೆ ನಮ್ಮಗಳ ಪರಿಸ್ತಿತಿ ಅಷ್ಟೊಂದು ಶೋಚನೀಯವಾಗಿದೆ ಎನ್ನುವದು ಕೆಲವು ಕ್ಯಾಮೆರಾಮನ್‌ ಗಳ ಅಳಲು.ಫೀಲ್ಡ್‌ ನಲ್ಲಿ ಶೂಟ್‌ ಗೆ ಹೋದಾಗ ಕೆಲವರು ನಮ್ಮದೂ ಸೇರಿ ಎಂದು ರಿಪೋರ್ಟರ್‌ ಗಳಿಗೆ ಹಣ ಕೊಡ್ತಾರೆ.ಆದರೆ ನೀಯತ್ತಾಗಿ ಅದನ್ನು ಎಷ್ಟ್‌ ರಿಪೋರ್ಟರ್ಸ್‌ ಕೊಡ್ತಾರೆ ಹೇಳಿ..? ಯಾರೊಬ್ಬರೂ ಕೊಡುವುದಿಲ್ಲ..ರಿಪೋರ್ಟರ್‌ ಗಳ ಈ ಧೋರಣೆ ನಮ್ಮನ್ನು ನಿಗಿನಿಗಿ ಕೆಂಡವಾಗಿಸಿಬಿಟ್ಟಿದೆ.ಅವರ ಈ ದಂಧೆಯನ್ನು ಕಂಪೆನಿಗಳ ಗಮನಕ್ಕೆ ಸಾಕ್ಷ್ಯ ಸಮೇತ ತರುವುದು ದೊಡ್ಡ ವಿಷಯವೇನಲ್ಲ.ಆದರೆ ಅವರ ಕೆಲಸ ಕಸಿದುಕೊಂಡು ಯಾವ ನರಕಕ್ಕೆ ಹೋಗೋದು ಹೇಳಿ..ಅಲ್ಲದೇ ನಾವು ಸಾಕ್ಷ್ಯ ಕೊಟ್ಟರೂ ರಿಪೋರ್ಟರ್‌ ಗಳ  ಜತೆ ಅಡ್ಜೆಸ್ಟ್‌ ಮೆಂಟ್‌ ಆಗಿರುವ  ಮ್ಯಾನೇಜ್ಮೆಂಟ್‌ ಗಳು ಕ್ರಮ ಕೈಗೊಳ್ಳುತ್ತವೆ ಎಂದೇನು ಗ್ಯಾರಂಟಿ..ಏನೋ ಮಾಡಲು ಹೋಗಿ ನಾವೇ ಬಲಿಪಶುಗಳಾದ್ರೆ ನಾವು..ನಮ್ಮ ಹೆಂಡತಿ-ಮಕ್ಕಳು,ಸಂಸಾರದ ಗತಿ ಏನು.. ?” ಎಂದು ಅನೇಕರು ಅಸಹಾಯಕತೆ ವ್ಯಕ್ತಪಡಿಸ್ತಾರೆ.

ಪ್ರತಿ ಎಲೆಕ್ಷನ್‌ ಗಳು ಬಂದಾಗ ಬಹುತೇಕ ಮಾದ್ಯಮಗಳಲ್ಲಿ ಹೀಗೆ ನಡೆಯೋದು ಸಹಜ.ಹಣ ಮಾಡಿಕೊ‍ಳ್ಳುವುದು  ಇವತ್ತಿನ ಸ್ತಿತಿಗೆ ವೃತ್ತಿಯ ಭಾಗವಾಗಿ ಹೋಗಿದೆ.ಇದಕ್ಕೆ ದಾವಣಗೆರೆ ದಕ್ಷಿಣದ ಅಖಾಡವೂ ಹೊರತಾಗಿಲ್ಲ.ಆದರೆ ತಮ್ಮಂತೆ ಎನ್ನುವುದಕ್ಕಿಂತ ತಮಗಿಂತಲೂ ಹೆಚ್ಚಾಗಿಯೇ ಬೆವರು ಸುರಿಸಿ ಕೆಲಸ ಮಾಡುವ ಕ್ಯಾಮೆರಾಮನ್‌ ಗಳನ್ನು ಮನುಷ್ಯರಂತೆ ಟ್ರೀಟ್‌ ಮಾಡುವ ತಮಗೆ ಸಂದಾಯವಾಗಿದ್ದರಲ್ಲಿ ಅವರಿಗೂ ಒಂದು ಪಾಲನ್ನು ನೀಡುವುದು ಮನುಷ್ಯತ್ವ ಎನಿಸಿಕೊಳ್ಳುತ್ತದೆ ಅಲ್ಲವೇ..?! ರಿಪೋರ್ಟರ್‌ ಗಳು ದಕ್ಷ-ಪ್ರಾಮಾಣಿಕರಾಗಿದ್ದರೆ ಅವರ ಕ್ಯಾಮೆರಾಮನ್‌ ಗಳೂ ಇದರ ಬಗ್ಗೆ ಚಕಾರ ಎತ್ತವುದಿಲ್ಲ.ಆದರೆ ಅದನ್ನೆಲ್ಲಾ ಗಂಟು ಮೂಟೆ ಕಟ್ಟಿ ಬಿಸಾಡಿರುವ ಬಹುತೇಕ ರಿಪೋರ್ಟರ್‌ ಗಳು( ಹಾಗೆ ಆಗೊಕ್ಕೆ ಸನ್ನಿವೇಶಗಳು ಕಾರಣವಾಗಿರಬಹುದು.) ತಮಗೆ ಸಂದಾಯವಾಗುವುದರಲ್ಲಿ ಸಣ್ಣ ಪಾಲನ್ನೂ ನೀಡದೆ ಎಲ್ಲವನ್ನೂ ಸ್ವಾಹ ಮಾಡುತ್ತಿದ್ದಾರೆ ಎನ್ನುವುದು ಮಾತ್ರ ಒಳ್ಳೆಯ ಬೆಳವಣಿಗೆಯಲ್ಲ. (ಹಾಗಂತ ಇದನ್ನು ನಾವು ಖಂಡಿತಾ  ಪ್ರೋತ್ಸಾಹಿಸುತ್ತಿಲ್ಲ.)ಹಂಚಿ ತಿಂದರೆ ಅದರ ಸಿಹಿಯೂ ಹೆಚ್ಚು..! ಅದರಿಂದ ಸಿಗುವ ಆತ್ಮತೃಪ್ತಿಯೂ ದೊಡ್ಡದಲ್ವಾ..! ಅಲ್ಲದೆ ಸಂಬಂಧಗಳನ್ನು ಕೂಡ ಇದು ಗಟ್ಟಿಗೊಳಿಸುತ್ತದೆ.    


Political News

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

ದಾವಣಗೆರೆ ದಕ್ಷಿಣದಲ್ಲಿ ಜಮೀರ್ ಗೈರುಹಾಜರಿ: ಸಮರ್ಥ್ ಶಾಮನೂರು ಗೆಲುವಿಗೆ ಮುಸ್ಲಿಂ ಮತಗಳೇ ಅಡ್ಡಿ?

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

ವಿಶ್ವ ರಾಜಕಾರಣದಲ್ಲಿ ಹೊಸ ಸಮೀಕರಣ: ಟ್ರಂಪ್-ಮೋದಿ ಕಾಲ್‌ನಲ್ಲಿ ಎಲಾನ್ ಮಸ್ಕ್ ಎಂಟ್ರಿ!

ನೇಪಾಳ:  ‘ಜೆನ್ ಜಿ’ ಪ್ರತಿಭಟನೆ ಹತ್ತಿಕ್ಕಿದ್ದ ಮಾಜಿ ಪ್ರಧಾನಿ ಓಲಿ ಸೆರೆ

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?

ಪೆಟ್ರೋಲ್-ಡೀಸೆಲ್ ಶಾಕ್ ನಡುವೆ ಕೇಂದ್ರದ ಮಾಸ್ಟರ್ ಪ್ಲಾನ್: ಅಬಕಾರಿ ಸುಂಕ ₹10 ಕಡಿತ

ಬೆಂಗಳೂರು ಕೇಂದ್ರ ಬಜೆಟ್ 2026: ಕಾಂಕ್ರೀಟ್ ಕಾಡಿಗೆ ‘ಮಾನವೀಯ’ ಸ್ಪರ್ಶ!

Scroll to Top