advertise here

Search

ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನದಲ್ಲೂ ನಡೆದೋಯ್ತಾ ಯಡವಟ್ಟು..!: ಮರುಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳಿಂದ ಒತ್ತಾಯ


 ಬೆಂಗಳೂರು:ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನದಲ್ಲಿ ನಡೆದ ಯಡವಟ್ಟುಗಳೇ, ಕಾನೂನು ವಿವಿ  ಉತ್ತರಪತ್ರಿಕೆಗಳ ಮೌಲ್ಯಮಾಪನದಲ್ಲೂ ನಡೆದಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.ಈ ಹಿನ್ನಲೆಯಲ್ಲಿ ಮರುಮೌಲ್ಯಮಾಪನಕ್ಕೆ ಒತ್ತಾಯಿಸಿ ಕಾನೂನು ವಿವಿ ಉಪಕುಲಪತಿಗಳಿಗೆ ಕೆಲವು ಕಾನೂನು ವಿದ್ಯಾರ್ಥಿಗಳು ಪತ್ರ ಬರೆಯಲು ನಿರ್ದರಿಸಿದ್ದಾರೆ.ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಸಾಕಷ್ಟು ಕಾನೂನು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಸಾಕಷ್ಟು ಲೋಪಗಳು ಮೌಲ್ಯಮಾಪಕರಿಂದ ನಡೆದಿತ್ತೆನ್ನುವ ಆರೋಪ ಸಾಕಷ್ಟು ಕಡೆಗಳಿಂದ ಕೇಳಲ್ಪಟ್ಟಿತ್ತು.ಆದರೆ ವಿವಿಯ ಆಡಳಿತ ಇದನ್ನು ನಿರಾಕರಿಸಿತ್ತು.ಆದರೆ ನಂತರ ವೈರಲ್ ಆದ ಒಂದಷ್ಟು ವೀಡಿಯೋಗಳು ಮೌಲ್ಯಮಾಪನದ ಆದ್ವಾನ ಎತ್ತಿ ತೋರಿಸಿತ್ತು. ಮೌಲ್ಯಮಾಪನ ಎಂದ್ರೆ ಅದೊಂದು ಜವಾಬ್ದಾರಿಯುತ ಕೆಲಸ.. ಪವಿತ್ರವಾದ ಕೆಲಸ ಎಂದು ಭಾವಿಸಿದ್ದವರ ನಂಬಿಕೆಗಳನ್ನು ಬುಡಮೇಲು ಮಾಡುವ ಮಟ್ಟದಲ್ಲಿ ಮೌಲ್ಯಮಾಪನವನ್ನು ಅದಕ್ಕೆಂದೇ ನಿಯೋಜನೆಗೊಂಡಿದ್ದ ಒಂದಷ್ಟು ಉಪನ್ಯಾಸಕರು ಮಾಡಿದ್ದು ವೀಡಿಯೋಗಳು ವೈರಲ್ ಆಗಿದ್ದವು.ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಬೆಂಗಳೂರು ನಗರ ವಿವಿ ಆಡಳಿತದ ಬಗ್ಗೆ ಕೆಂಡಾಮಂಡಲಗೊಂಡಿದ್ದರು.

ವರ್ಷಪೂರ್ತಿ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳು ಗಂಭೀರ ಸ್ವರೂಪದಲ್ಲಿ ಪರೀಕ್ಷೆ ಬರೆದಿರುತ್ತಾರೆ.ತಮ್ಮ ಫಲಿತಾಂಶದ ಬಗ್ಗೆ ಸಾಕಷ್ಟು ಕನಸು-ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.ಆದ್ರೆ ಮೌಲ್ಯಮಾಪಕರು ಅದ್ಯಾವುದನ್ನು ಪರಿಗಣಿಸದೆ ಬೇಕಾಬಿಟ್ಟಿ ಮೌಲ್ಯಮಾಪನ ಮಾಡಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜತೆ ಚೆಲ್ಲಾಟ ಆಡಿದಂತೆ ಎನ್ನುವ ಮಾತುಗಳು ವೈರಲ್ ಆದ ವೀಡಿಯೋಗಳ ಹಿನ್ನಲೆಯಲ್ಲಿ ಕೇಳಿಬಂದಿದ್ದವು.

ಮೊಬೈಲ್ ನೋಡುತ್ತಾ..ಮೊಬೈಲ್ ನಲ್ಲಿ ಮಾತನಾಡುತ್ತಾ..ಉತ್ತರ ಪತ್ರಿಕೆಗಳ ಮೇಲೆ ಕಣ್ಣಾಡಿಸದೆ ಬೇಕಾಬಿಟ್ಟಿ ಮೌಲ್ಯಮಾಪನ ನಡೆಸಿರುವುದು ವೀಡಿಯೋಗಳಲ್ಲಿ ಎದ್ದುಕಾಣುತ್ತಿತ್ತು.ವಿದ್ಯಾರ್ಥಿಗಳಿಗೆ ಇದರಿಂದ ಏನಾಗಬಹುದೆನ್ನುವ ಸಣ್ಣ ತಿಳಿವೂ ಇಲ್ಲದೆ ಮೌಲ್ಯಮಾಪಕರು ವರ್ತಿಸಿರುವುದು ಕೂಡ ಎದ್ದುಕಾಣುತ್ತಿತ್ತು.ವೀಡಿಯೋಗಳು ವೈರಲ್ ಆದ್ಮೇಲೆ ಅದು ಸಾಕಷ್ಟು ಚರ್ಚೆಗು ಗ್ರಾಸವಾಗಿತ್ತು.ಬೇಕಾಬಿಟ್ಟಿ ಮೌಲ್ಯಮಾಪನ ಮಾಡಿದವರ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕೆಂಬ ಕೂಗು ಕೇಳಿಬಂದಿತ್ತು.

ALSO READ :  ನಟ ಕಿಚ್ಚ ಸುದೀಪ್ ಗೆ ಮಾತೃ ವಿಯೋಗ: ಸಿನಿ ಗಣ್ಯರಿಂದ ಅಂತಿಮ ದರ್ಶನ

ಇದೇ ಆಗಸ್ಟ್-ಸೆಪ್ಟೆಂಬರ್ ನಲ್ಲಿ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ತಿಗಳಿಗೆ ಪರೀಕ್ಷೆ ನಡೆದಿತ್ತು.ಅದರ ಫಲಿತಾಂಶ ಅಕ್ಟೋಬರ್ ನಲ್ಲಿ ಪ್ರಕಟವಾಗಿದೆ.ಆದ್ರೆ ಫಲಿತಾಂಶ ನೋಡಿದ ಸಾಕಷ್ಟು ವಿದ್ಯಾರ್ಥಿಗಳು ಮೌಲ್ಯಮಾಪನವೇ ಸರಿಯಾಗಿ ನಡೆದಿಲ್ಲ..ಕಳಪೆಯಾಗಿ ಪರೀಕ್ಷೆ ಬರೆಯದಿದ್ರೂ ಕನಿಷ್ಟ ಮಟ್ಟದ ಅಂಕಗಳನ್ನು ನೀಡಿ ಫೇಲ್ ಮಾಡಲಾಗಿದೆ.ಮೌಲ್ಯಮಾಪಕರು ಬೇಜವಾಬ್ದಾರಿಯಿಂದ ನಡೆದುಕೊಂಡಿರುವು ದರಿಂದಲೇ ಇಂತದ್ದೊಂದು ಯಡವಟ್ಟು ಆಗಿದೆ   ಎಂದು ಆಪಾದಿಸಿದ್ದಾರೆ. ಬೆಂಗಳೂರು ನಗರ ವಿವಿ ಯಲ್ಲಿ ಕೆಲವರು ಮಾಡಿದ ಯಡವಟ್ಟಿನ ಮಾದರಿಯಲ್ಲೆ ಕಾನೂನು ವಿವಿಯಲ್ಲಿ ನಡೆದಿರುವ ಅನುಮಾನವಿದೆ ಎಂದು  ಕಾನೂನು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಓದುತ್ತಿರುವ ಅನೇಕ ವಿದ್ಯಾರ್ಥಿಗಳ ಆರೋಪ.

ಪರೀಕ್ಷೆಗಳನ್ನು ಚೆನ್ನಾಗಿಯೇ ಬರೆಯಲಾಗಿದೆ.ಉತ್ತಮ ಫಲಿತಾಂಶ ಬರಬಹುದೆನ್ನುವ ವಿಶ್ವಾಸವಿತ್ತು.ಆದರೆ ಬಹುತೇಕ ಸಬ್ಜೆಕ್ಟ್ಸ್ ಫೇಲ್ ಆಗಿದೆ.ಇದಕ್ಕೆ ಮೌಲ್ಯಮಾಪನದಲ್ಲಿ ನಡೆದಿರಬಹುದಾದ ಯಡವಟ್ಟುಗಳೇ  ಕಾರಣ ಎಂದು ಆಪಾದಿಸಿರುವ ಕಾನುನು ವಿದ್ಯಾರ್ಥಿಗಳು ಬೆಂಗಳೂರು ನಗರ ವಿವಿ ಮಾದರಿಯಲ್ಲೇ ನಮ್ಮ ವಿಷಯದಲ್ಲೂ ಮೌಲ್ಯಮಾಪನದಲ್ಲಿ ಮೋಸವಾಗಿದೆ.ನಮಗಾಗಿರುವ ಅನ್ಯಾಯ ಸರಿಪಡಿಸಿಕೊಡುವ ನಿಟ್ಟಿನಲ್ಲಿ ಮರುಮೌಲ್ಯಮಾಪನಕ್ಕೆ ಆಗ್ರಹಿಸಿದ್ದಾರೆ.ಕಾನೂನು ವಿವಿಯ ಸಂಯೋಜನೆಯಲ್ಲಿರುವ ಕಾಲೇಜುಗಳ ಪೈಕಿ ಕೆಲವು ಕಾಲೇಜ್ ಗಳ ವಿದ್ಯಾರ್ಥಿಗಳು ಉಪಕುಲಪತಿ,ಕುಲಸಚಿವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.ಇದಕ್ಕೆ ವಿವಿ ಆಡಳಿತ ಮಂಡಳಿ ಯಾವ್ ರೀತಿ ರಿಯಾಕ್ಟ್ ಮಾಡುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಗಮನಿಸಿ: ಮೇಲ್ಕಂಡಂತೆ ಪ್ರದರ್ಶಿಸಿರುವ ಚಿತ್ರಗಳೆಲ್ಲಾ ಬೆಂಗಳೂರು ನಗರ ವಿವಿಯ ಉತ್ತರ ಪತ್ರಿಕೆಗಳಲ್ಲಿ ನಡೆದಿದೆ ಎನ್ನಲಾದ ಯಡವಟ್ಟುಗಳು..ಮೌಲ್ಯಮಾಪನ ಮಾಡಬೇಕಾದವರು ಹೊಣೆಗೇಡಿಗಳಂತೆ ಮೊಬೈಲ್ ಗಳಲ್ಲಿ ಮಾತನಾಡುತ್ತಾ..ಮೊಬೈಲ್ ಗಳಲ್ಲಿ ನೋಡುತ್ತಾ ಮೌಲ್ಯಮಾಪನ ಮಾಡಿರುವುದು.


Political News

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

Scroll to Top