BBMP ಡಿಸಿಎಫ್‌ ವಿರುದ್ಧ 15 % ಕಮಿಷನ್‌ ಆರೋಪ-ಡಿಸಿಎಂಗೆ ದೂರು.

18 ಲಕ್ಷ ಬಿಲ್‌ ಗೆ 16 ಪರ್ಸೇಂಟ್‌ ಕಮಿಷನ್‌ ಕೇಳಿದ್ರಂತೆ ಡಿಸಿಎಫ್‌ ಸ್ವಾಮಿ..! ಮಾಡದ ಕೆಲಸಕ್ಕೆ ಬೋಗಸ್‌ ಬಿಲ್‌ ಮಾಡಿಕೊಂಡು ಬಂದಿದ್ರಂತೆ ಶ್ರೀನಿವಾಸ್..!?‌ ಬೆಂಗಳೂರು:ಬಿಬಿಎಂಪಿ ಅರಣ್ಯ ಘಟಕದಲ್ಲಿ ಕಮಿಷನ್‌ ಸುದ್ದಿ ಸದ್ದು ಮಾಡಿದೆ. ಮಳೆಗಾಲದಲ್ಲಿ ಮಾಡಿದ ಕೆಲಸದ ಬಿಲ್‌ ಕೇಳಲು ಹೋದರೆ ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಎಲ್‌.ಜಿ. ಸ್ವಾಮಿ ಅವರು ಶೇಕಡಾ 15 ರಷ್ಟು ಕಿಕ್‌ ಬ್ಯಾಕ್‌ ಕೇಳುತ್ತಿದ್ದಾರೆ ಎಂದು ಅರಣ್ಯ ಗುತ್ತಿಗೆದಾರ ಶ್ರೀನಿವಾಸ್‌ ಆಪಾದಿಸಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಗೆ ದೂರು ನೀಡಿದ್ದಾರೆ. … Read more

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವ್ರ ಮೌನವನ್ನು ಬಿಎಂಟಿಸಿ ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೋ..? ಅಥವಾ  ಅವರ ಒಳ್ಳೇತನಕ್ಕೆ ಬೆಲೆ ಕೊಡುತ್ತಿಲ್ಲವೋ..? ಅಥವಾ ಏನ್ ಮಾಡಿದ್ರೂ ಅವ್ರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಬಿಡು ಎನ್ನುವ ತಾತ್ಸಾರವೋ..? ಗೊತ್ತಿಲ್ಲ..ಬಿಎಂಟಿಸಿಯಲ್ಲಿ ಅಧಿಕಾರಿಗಳು ಆಡಿದ್ದೇ ಆಟ..ಹೂಡಿದ್ದೇ ಲಗ್ಗೆ..ಮಾಡಿದ್ದೇ ರೂಲ್ಸ್ ಎನ್ನುವಂತಾಗಿದೆ. .ಇದಕ್ಕೆ ಜ್ಬಲಂತ ಉದಾಹರಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವೀಡಿಯೋಗಳು. ಬಿಎಂಟಿಸಿ ಡಿಪೋ 34 ಕ್ಕೆ ಸಂಬಂಧಿಸಿದ್ದೆಂದು ಹೇಳಲಾಗ್ತಿರೋ ಒಂದಷ್ಟು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ವೀಡಿಯೋ … Read more