ಮೈಸೂರು- ದರ್ಬಾಂಗ ರೈಲು ಮತ್ತು ಗೂಡ್ಸ್ ರೈಲುಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ಗಾಯಗೊಂಡ ಘಟನೆ ಚೆನ್ನೈನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಮೈಸೂರು ದರ್ಬಾಂಗ ನಡುವೆ ಸಂಚರಿಸುವ ರೈಲು ಕಾವರೈಪಟ್ಟಿ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, 12 ಬೋಗಿಗಳು ಹಳಿ ತಪ್ಪಿವೆ.
ಆಯುಧಪೂಜೆ ದಿನವಾದ ಶುಕ್ರವಾರ ಬೆಳಿಗ್ಗೆ 12578 ಬೆಳಿಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟ್ಟಿದ್ದ ರೈಲು ಚೆನ್ನೈ ಮೂಲಕ ದರ್ಬಾಂಗ ಭಾಗಮತಿಗೆ ತಲುಪಬೇಕಿತ್ತು.
ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೈಸೂರಿನಿಂದ ಹೊರಡಬೇಕಿದ್ದ 2 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಸಿಗ್ನಲ್ ಸಮಸ್ಯೆ ಇರದ ಕಾರಣ ಅವಘಡಕ್ಕೆ ಕಾರಣ ಪತ್ತೆ ಹಚ್ಚಲು ತನಿಖೆಗೆ ಆದೇಶಿಸಲಾಗಿದೆ.