advertise here

Search

“ವೈದೇಹಿ ಆಸ್ಪತ್ರೆ” ಆಸ್ತಿ ತೆರಿಗೆ ಕಡತ ಗೌಪ್ಯ ಪ್ರಕರಣ: ಕಂದಾಯಾಧಿಕಾರಿ ಬಸವಾಚಾರಿಗಿಂತ ಮುನ್ನ ಕಡತ ಮುಚ್ಚಿಟ್ಟಿದ್ರಂತೆ AC ಬಸವರಾಜ ಮಗಿ..!?


2024ರ ಅಂತ್ಯದಲ್ಲಿ ಕಂದಾಯಾಧಿಕಾರಿಯಾಗಿ ಬಸವಾಚಾರಿ ಚಾರ್ಜ್ ...ಅದಕ್ಕೂ  ಮುನ್ನ ಆ ಹುದ್ದೆಯಲ್ಲಿದ್ದವರು ಬಸವರಾಜ ಮಗಿ ಅಂತೆ..ತನಿಖೆಯಲ್ಲಿ ದೃಢ..

ಬೆಂಗಳೂರು:50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡತವನ್ನು ಬಚ್ಚಿಟ್ಟು ಕರ್ತವ್ಯಲೋಪ ಎಸಗಿದ ವೈಟ್ ಫೀಲ್ಡ್ ಕಂದಾಯಾಧಿಕಾರಿ ಬಸವಾಚಾರಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮನಿಷ್ ಮೌದ್ಗಿಲ್ ಅವರು ಪತ್ತೆ ಮಾಡಿದ ಈ ಪ್ರಕರಣದಲ್ಲಿ ಕಡತವನ್ನು ಬಚ್ಚಿಟ್ಟಿದ್ದು ಬಸವಾಚಾರಿ ಮಾತ್ರವಲ್ಲ ಅವರ ಸ್ಥಾನದಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಅಧಿಕಾರಿಯು ಭಾಗಿಯಾಗಿರುವುದು ಗೊತ್ತಾಗಿದೆ.ಈ ಹಿನ್ನಲೆಯಲ್ಲಿ ಬಸವಾಚಾರಿ ಜತೆಗೆ ಆ ಇನ್ನೊಬ್ಬ ಅಧಿಕಾರಿ ವಿರುದ್ಧವೂ ತನಿಖೆಗೆ ಸೂಚಿಸಲಾಗಿದೆ.

ಅಂದ್ಹಾಗೆ ನಿನ್ನೆ ಕನ್ನಡ ಫ್ಲ್ಯಾಶ್ ನ್ಯೂಸ್ ವೈದೇಹಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಆಸ್ತಿ ತೆರಿಗೆ ಕಡತದ ನಿಗೂಡ ಕಣ್ಮರೆ ಹಾಗೂ ಅದರಲ್ಲಿ ಭಾಗಿಯಾಗಿರಬಹುದಾದ ಕಂದಾಯಾದಿಕಾರಿ ಬಸವಾಚಾರಿ ಅವರ ನಿರ್ಲಕ್ಷ್ಯದ ಕುರಿತು ಸಮಗ್ರವಾಗಿ ವರದಿ ಬಿತ್ತರಿಸಿತ್ತು.ಈ ಸ್ಟೋರಿಯ ಹಿನ್ನಲೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿಚಾರಿಸಲಾಗಿ ಮತ್ತಷ್ಟು ಸ್ಪೋಟಕ ಎನ್ನುವಂಥ ಮಾಹಿತಿ ಹೊರಬಿದ್ದಿದೆ.ಅದರ ಫಾಲೋಅಪ್ ಸುದ್ದಿ ಸ್ಪೋಟಕದಷ್ಟೆ ರೋಚಕವಾಗಿಯೂ ಇದೆ.

ವೈಟ್ ಫೀಲ್ಡ್ ನಲ್ಲಿರುವ ಪ್ರತಿಷ್ಟಿತ ವೈದೇಹಿ ಮೆಡಿಕಲ್ ಕಾಲೇಜ್-ಹಾಸ್ಪಿಟಲ್ ಬಿಬಿಎಂಪಿಗೆ ಪಾವತಿಸ ಬೇಕಿದ್ದ 50 ಕೋಟಿ ಆಸ್ತಿ ತೆರಿಗೆಗೆ ಸಂಬಂಧಿಸಿದ ಕಡತ ಮಿಸ್ ಆದ ಪ್ರಕರಣ ಮತ್ತೊಂದು ತಿರುವು ಪಡೆದಿದೆ.ಮಹಾದೇವಪುರ ಕಂದಾಯಾಧಿಕಾರಿ ಬಸವಾಚಾರಿಯ ಜತೆಗೆ ಅವರ ಸ್ಥಾನದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ  ಮತ್ತೊಬ್ಬ ಅಧಿಕಾರಿಯ ಪಾತ್ರವಿರುವುದು ಗೊತ್ತಾಗಿದೆ.ಆ ಅಧಿಕಾರಿಯೇ ಬಸವರಾಜ ಮಗಿ ಎನ್ನುವುದು ಇದೀಗ ಗೊತ್ತಾ್ಗಿದೆ. ಕಳೆದ ಒಂದು ವರ್ಷದಿಂದಲೂ ಕಡತವನ್ನು ಮಂಡಿಸದೆ ಅದನ್ನು ಮರೆ ಮಾಚಲಾಗುತ್ತಿದ್ದ ರಹಸ್ಯ ಬಗೆದಾಗ ಬಸವರಾಜ ಮಗಿ ಪಾತ್ರ ಬಯಲಾಗಿದೆಯಂತೆ.

ಕಂದಾಯಾಧಿಕಾರಿ ಬಸವಾಚಾರಿ ಸಧ್ಯ ಮಹಾದೇವಪುರ ವಲಯದ ಕಂದಾಯಾದಿಕಾರಿಯಾಗಿ ಕೆಲಸ ಮಾಡುತ್ತಿರುವುದರಿಂದ ಈ ನಿರ್ಲಕ್ಷ್ಯದ ಸಂಪೂರ್ಣ ನೈತಿಕ ಹೊಣೆಯನ್ನು ಅವರೇ ಹೊರಬೇಕಾಗುತ್ತ ದೆ.ಅವರ ಪಾತ್ರ ಎಷ್ಷರ ಮಟ್ಟಿಗೆ ಇದೆ ಎನ್ನುವುದು ಎಷ್ಟು ಸತ್ಯವೋ ಅವರಿಂದೆ ಕೆಲಸ ಮಾಡಿದವರ ಪಾಲ್ಗೊಳ್ಳುವಿಕೆಯೂ ಇರುವುದು ಗೊತ್ತಾಗಿದೆ. ಬಸವಾಚಾರಿ ಮಹಾದೇವಪುರ ವಲಯದ ಕಂದಾಯಾ ದಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಕಳೆದ ವರ್ಷದ ಡಿಸೆಂಬರ್ ಎನ್ನಲಾಗುತ್ತಿದೆ.ಅವರಿಗಿಂತ ಮುನ್ನ ಈ ಕಡತ ನಿರ್ವಹಣೆಯ ಉಸ್ತುವಾರಿ ಹೊತ್ತಿದ್ದು ಆಗಿನ ಕಂದಾಯಾಧಿಕಾರಿ ಹಾಗೂ ಈಗಿನ ಸಹಾಯಕ ಆಯುಕ್ತ ಬಸವರಾಜ ಮಗಿ ಎನ್ನುವುದು ಮನಿಷ್ ಮೌದ್ಗಿಲ್ ಅವರ ಮಾತು.

ಬಸವರಾಜ ಮಗಿ ಮಹಾದೇವಪುರ ವಲಯಕ್ಕೆ ವರ್ಗವಾಗಿ ಹೋದ ಸಂದರ್ಭದಲ್ಲಿ ಈ ಕಾಲೇಜು-ಆಸ್ಪತ್ರೆಯ ಆಸ್ತಿ ತೆರಿಗೆ ಕಡತದ ಗೋಲ್ಮಾಲ್ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ.ಕಳೆದ ಡಿಸೆಂಬರ್ ನಲ್ಲಿ ಬಸವಾಚಾರಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದಾರೆ.ಅದಕ್ಕೆ ಮುನ್ನ ಅವರ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದುದು ಬಸವರಾಜ ಮಗಿ ಎನ್ನಲಾಗುತ್ತಿದೆ.ಹಾಗಾಗಿ ಈ ಒಂದು ಕಡತ ಬಸವರಾಜ ಮಗಿ ಅವರ ಅವದಿಯಲ್ಲಿ ಗೌಪ್ಯಗೊಳಿಸುವ ಕೆಲಸ ನಡೆದಿರುವ ಸಾಧ್ಯತೆಗಳಿರುವುದನ್ನು ಮೌದ್ಗಿಲ್ ಪತ್ತೆ ಮಾಡಿದ್ದಾರೆ.

ಬಸವಾಚಾರಿ ಕಂದಾಯಾಧಿಕಾರಿಯಾಗಿ ಹೋದ ಮೇಲೆ ಇದನ್ನು ಪತ್ತೆ ಮಾಡಿ ಆಸ್ತಿ ತೆರಿಗೆ ಪಾವತಿಸುವಂತೆ ಆಸ್ಪತ್ರೆ ಆಡಳಿತದ ಮೇಲೆ ಒತ್ತಡ ಹೇರಿ ಯಶಸ್ವಿಯಾಗಿದಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲವೇನೋ..ಆದರೆ ಬಸವರಾಜ ಮಗಿ ಮಾಡಿದ್ದಾರೆನ್ನಲಾಗಿರುವ ತಪ್ಪನ್ನೇ ಈವರೆಗು  ಮುಂದುವರೆಸಿಕೊಂಡು ಬಂದಿದ್ದಾರೆ.ಹಾಗಾಗಿ ಬಸವರಾಜ ಮಗಿ ನಡೆಸಿರಬಹುದಾದ ಅಕ್ರಮದಲ್ಲಿ ಬಸವಾಚಾರಿ ಕೂಡ ಪಾಲ್ಗೊಂಡಿರುವುದನ್ನು ತಾಂತ್ರಿಕ ಹಾಗೂ ಆಡಳಿತಾತ್ಮಕವಾಗಿ ಒಪ್ಪಲೇಬೇಕಾಗುತ್ತದೆ.ಕಂದಾಯಾಧಿಕಾರಿಯಾಗಿದ್ದಾಗ ಬಸವರಾಜ ಮಗಿ ಎಷ್ಟು ಪ್ರಮಾಣದ ಅಕ್ರಮ ಎಸಗಿ ಪ್ರಸಾದ ಸೇವಿಸಿದ್ದಾರೆ ,ಅವರ ನಂತರ ಬಂದ ಬಸವಾಚಾರಿ ಅವರು ಎಷ್ಟು ಮೊತ್ತದ ಕಿಕ್ ಬ್ಯಾಕ್ ಪಡೆದಿದ್ದಾರೆನ್ನುವುದು ತನಿಖೆಯಿಂದ ಸಾಬೀತಾಗಬೇಕಿದೆ.

ALSO READ :  EXCLUSIVE.. ಹೊಸ ವರ್ಷದಂದೇ ಸರ್ಕಾರದಿಂದ 4 ಸಾರಿಗೆ ನಿಗಮಗಳಿಗೆ 2,000 ಕೋಟಿ ಬಂಪರ್ ಗಿಫ್ಟ್..

ಮೇಲ್ಕಂಡ ಪ್ರಕರಣದಲ್ಲಿ ನಿನ್ನೆವರೆಗೂ ಬಸವಾಚಾರಿ ಪಾತ್ರದ ಬಗ್ಗೆ ಪ್ರಸ್ತಾಪವಾಗುತ್ತಿತ್ತು.ಆದರೆ ಮರುಪರಿಶೀಲನೆ ನಡೆಸಿದ ವೇಳೆ ಕಳೆದೊಂದು ವರ್ಷದಲ್ಲಿ ಕೆಲಸ ಮಾಡಿರುವ ಬಸವರಾಜ ಮಗಿ ಅವರ ಕೈವಾಡವೂ ಇದೆ ಎನ್ನುವುದು ಮೌದ್ಗಿಲ್ ಅವರಿಗೆ ಗೊತ್ತಾಗಿದೆ.ಹಾಗಾಗಿ ಇವರಿಬ್ಬರ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಲಯದ ಆಯುಕ್ತ ರಮೇಶ್ ಅವರಿಗೆ ಸೂಚಿಸಿದ್ದಾರೆನ್ನಲಾಗಿದೆ.ಜತೆಗೆ ಬಸವಾಚಾರಿ ಅವರ ಅಮಾನತ್ತಿನ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ.

ಅದೇನೇ ಆಗಲಿ ವೈದೇಹಿ ಆಸ್ಪತ್ರೆಯ ಆಸ್ತಿ ತೆರಿಗೆ ಕಡತ ಮರೆ ಮಾಚಿದ ಪ್ರಕರಣದಲ್ಲಿ ಬಸವಾಚಾರಿ ಅವರ ಪಾತ್ರದಷ್ಟೇ ಬಸವರಾಜ ಮಗಿ ಅವರ ಪಾತ್ರ ಇರುವುದು ಕೂಡ ಗೊತ್ತಾಗಿದ್ದು ಇಬ್ಬರ ವಿರುದ್ದ ಕ್ರಮ ಜಾರಿಯಾಗುವವರೆಗೂ ಬಿಡುವುದಿಲ್ಲ ಎಂದು ಮೌದ್ಗಿಲ್ ಪಟ್ಟು ಹಿಡಿದಿದ್ದಾರೆ.ಈ ಪ್ರಯತ್ನದಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೋ ಕಾದುನೋಡಬೇಕಿದೆ.

ಅಮಾನತ್ತುಪಡಿಸುವ ನಿರ್ದಾರ ಸರ್ಕಾರದ ಅಂಗಳದಲ್ಲಿದೆ: ಈ ಬಗ್ಗೆ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಮಂಜುನಾಥ ಸ್ವಾಮಿ ಅವರನ್ನು ಸಂಪರ್ಕಿಸಲಾಗಿ ಅಕ್ರಮ ನಡೆದಿರುವ ಬಗ್ಗೆ ನಮ್ಮ ಕಚೇರಿಗೆ  ಮಾಹಿತಿ ಬಂದಿರುವುದು ಸತ್ಯ. ಆಸ್ತಿ ತೆರಿಗೆ ನಿಗಧಿಯಾದಾಗ ಅದನ್ನು ಸಂಗ್ರಹಿಸಬೇಕಿರುವುದು  ಕಂದಾಯಾಧಿಕಾರಿಗಳ ಮಹತ್ವದ ಜವಾಬ್ದಾರಿ.ಅದನ್ನು ಮಾಡದಿರುವ ಇಬ್ಬರದು ಅಕ್ಷಮ್ಯ ಅಪರಾಧ. ಬಸವರಾಜ ಮಗಿ ಹಾಗೂ ಬಸವಾಚಾರಿ ಅವರ ವಿರುದ್ದ ತನಿಖೆ ನಡೆಯುವುದು ಒಂದು ಭಾಗವಾದರೆ ಅವರ ಅಮಾನತು ಆದೇಶ ಜಾರಿಗೆ ತರುವ ಕೆಲಸ ತತ್ ಕ್ಷಣ ಆಗುವುದು ಕಷ್ಟ.ಇಬ್ಬರು ಕ್ಲಾಸ್-1 ಅಧಿಕಾರಿಗಳಾಗಿರುವುದರಿಂದ ಸರ್ಕಾರದ ಮಟ್ಟದಿಂದಲೇ ಇದಕ್ಕೆ ಆದೇಶ ಹೊರಡಬೇಕಾಗುತ್ತದೆ. ಸರ್ಕಾರದ ಜತೆಗೆ ಈಗಾಗಲೇ ಪತ್ರ ವ್ಯವಹಾರ ಶುರುವಾಗಿದ್ದು ಸರ್ಕಾರಕ್ಕೆ ಅಮಾನತ್ತು ಶಿಫಾರಸ್ಸಿನ ಕಡತ ರವಾನಿಸಲಾಗಿದೆ ಎಂದರು.ಜತೆಗೆ ಪ್ರಕರಣ ಮುಚ್ಚಿಹಾಕಲು ತಮ್ಮ ಕಚೇರಿ ಮೇಲೆ ಪ್ರಭಾವ ಬೀರಿದ್ದು ಸತ್ಯವಾದ್ರೂ ಅದಕ್ಕೆ ಅವಕಾಶ ನೀಡಿಲ್ಲ..ನೀಡುವುದೂ ಇಲ್ಲ ಎಂದರು.

ಬಸವಾಚಾರಿ ಜತೆಗೆ ಬಸವರಾಜ ಮಗಿ ಪಾತ್ರವೂ ಇದೆ..ಇಬ್ಬರಿಗೂ ಶಿಕ್ಷೆ ಆಗಬೇಕಿದೆ.: ಇನ್ನು ಆಸ್ತಿ ತೆರಿಗೆ ಕಡತವನ್ನು ಗೌಪ್ಯಗೊಳಿಸಿರುವ ಪ್ರಕರಣವನ್ನು ಪತ್ತೆ ಮಾಡಿದ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನಿಷ್ ಮೌದ್ಗಿಲ್ ಅವರಿಗೆ  ಪ್ರಕರಣದಲ್ಲಿ ಆಗಿನ  ಕಂದಾಯಾಧಿಕಾರಿ ಹಾಗು ಇವತ್ತಿನ ಸಹಾಯಕ ಆಯುಕ್ತ ಬಸವರಾಜ ಮಗಿ ಅವರ ಪಾತ್ರ ಪ್ರಕರಣದಲ್ಲಿರುವುದು ಗೊತ್ತಾಗಿದೆ. ಡಿಸೆಂಬರ್ ನಲ್ಲಿ ಬಸವಾಚಾರಿ ಚಾರ್ಜ್ ತೆಗೆದುಕೊಂಡ ಮೇಲಾದ್ರು ತೆರಿಗೆ ಕಟ್ಟಿಸಬೇಕಿತ್ತು.ಅಲ್ಲದೇ ಹಿಂದಿನವರ ತಪ್ಪನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬೇಕಿತ್ತು.ಹಾಗಾಗಿ ಬಸವಾಚಾರಿ ಅಮಾನತ್ತಿಗೆ ಶಿಫಾರಸ್ಸು ಮಾಡಲಾಗಿದೆ.ಜತೆಗೆ ಬಸವಾಚಾರಿಗಿಂತ ಮುನ್ನ ಕೆಲಸ ಮಾಡುತ್ತಿದ್ದ ಬಸವರಾಜ ಮಗಿ ಅವರ ಪಾತ್ರದ ಬಗ್ಗೆಯೂ ಕೂಲಂಕುಷ ಪರಿಶೀಲನೆ ನಡೆಯುತ್ತಿದೆ.ಆದರೆ  ಅಕ್ರಮದಲ್ಲಿ ಮಗಿ ಅವರ ಪಾತ್ರ ಇರುವುದು ಮಾತ್ರ ಸ್ಪಷ್ಟವಾಗಿದೆ ಎಂದು ತಿಳಿಸಿದರು.


Political News

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Scroll to Top