advertise here

Search

ಬೆಂಗಳೂರಲ್ಲಿ ಸಿಲಿಂಡರ್ ಗೋಳಾಟ: 20 ದಿನದ ಹಿಂದೆ ಬುಕ್ ಮಾಡಿದ್ರೂ ಬರ್ತಿಲ್ಲ ಗ್ಯಾಸ್!

lpg cylinder shortage

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗ ಅಡುಗೆ ಅನಿಲದ (LPG) ಬಿಕ್ಕಟ್ಟು ತಾರಕಕ್ಕೇರಿದೆ. ಕಳೆದ ಹದಿನೈದು ದಿನಗಳಿಂದ ಮನೆ ಬಳಕೆಯ ಸಿಲಿಂಡರ್ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುವಂತಾಗಿದೆ. ಬೆಂಗಳೂರಿನ ಸಂಜಯನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಬುಕ್ ಮಾಡಿ 20 ದಿನಗಳಾದರೂ ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ರಾಜ್ಯ ರಾಜಧಾನಿಯ ಬಹುತೇಕ ಗ್ಯಾಸ್ ಏಜೆನ್ಸಿಗಳ ಆವರಣದಲ್ಲಿ ಈಗ ಕೇವಲ ಖಾಲಿ ಸಿಲಿಂಡರ್‌ಗಳಷ್ಟೇ ಕಾಣಿಸುತ್ತಿವೆ. ಹೆಚ್‌ಪಿ, ಇಂಡಿಯನ್‌ ಸೇರಿದಂತೆ ಪ್ರಮುಖ ಕಂಪನಿಗಳಿಂದ ಸಕಾಲಕ್ಕೆ ಪೂರೈಕೆಯಾಗದ ಕಾರಣ ವಿತರಕರು ಅಸಹಾಯಕರಾಗಿದ್ದಾರೆ. ಸಂಜಯನಗರದ ಎಚ್‌ಪಿ ಗ್ಯಾಸ್ ಏಜೆನ್ಸಿಯಲ್ಲಿ ಗ್ರಾಹಕರು ಪ್ರತಿ ನಿತ್ಯ ಅಲೆದಾಡುತ್ತಿದ್ದು, “20 ದಿನಗಳ ಹಿಂದೆ ಬುಕ್ ಮಾಡಿದ್ರೂ ಈಗ ವಿತರಣೆ ಮಾಡಲಾಗುತ್ತಿದೆ” ಎಂದು ಕಿಡಿಕಾರುತ್ತಿದ್ದಾರೆ.

ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ

ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಶೇ. 70 ರಷ್ಟು ಕುಸಿದಿದೆ. ಈ ಹಿಂದೆ ದಿನಕ್ಕೆ 10 ಸಿಲಿಂಡರ್ ಪಡೆಯುತ್ತಿದ್ದ ಹೋಟೆಲ್‌ಗಳಿಗೆ ಈಗ ಕೇವಲ 2 ಅಥವಾ 3 ಸಿಲಿಂಡರ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಇದರಿಂದಾಗಿ ಸಣ್ಣಪುಟ್ಟ ಹೋಟೆಲ್‌ಗಳು ಮತ್ತು ಕ್ಯಾಂಟೀನ್‌ಗಳು ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಆಹಾರ ಒದಗಿಸಲು ಪರದಾಡುತ್ತಿವೆ. ಆಟೋ ಗ್ಯಾಸ್ ಕೇಂದ್ರಗಳಲ್ಲೂ ಉದ್ದನೆಯ ಸರತಿ ಸಾಲುಗಳಿದ್ದು, ಚಾಲಕರ ದೈನಂದಿನ ದುಡಿಮೆಗೆ ಪೆಟ್ಟು ಬಿದ್ದಿದೆ.

ALSO READ :  "ಕಳಂಕಿತ" ಅಧಿಕಾರಿ ನಾಗರಾಜಮೂರ್ತಿ ಬೆನ್ನಿಗೆ ನಿಂತಿರುವುದೇಕೆ BMTC ಆಡಳಿತ..?!

ಮೂಲಗಳ ಪ್ರಕಾರ, ಗ್ಯಾಸ್ ಬಾಟ್ಲಿಂಗ್ ಪ್ಲಾಂಟ್‌ಗಳಲ್ಲಿನ ತಾಂತ್ರಿಕ ಸಮಸ್ಯೆ ಅಥವಾ ಸಾರಿಗೆ ವ್ಯವಸ್ಥೆಯಲ್ಲಿನ ವ್ಯತ್ಯಯವೇ ಈ ಅಭಾವಕ್ಕೆ ಕಾರಣ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ತೈಲ ಕಂಪನಿಗಳು ಅಥವಾ ಸರ್ಕಾರದಿಂದ ಯಾವುದೇ ಸ್ಪಷ್ಟ ಸ್ಪಷ್ಟೀಕರಣ ಹೊರಬಂದಿಲ್ಲ. ಚುನಾವಣೆಗಳ ಹೊತ್ತಿನಲ್ಲಿ ಅಥವಾ ಹಬ್ಬದ ನಂತರ ಇಂತಹ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೇ ಎಂಬ ಅನುಮಾನವನ್ನೂ ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | ನಳಂದದಲ್ಲಿ ಭೀಕರ ಕಾಲ್ತುಳಿತ: ಶೀತಲ ಮಾತೆ ದರ್ಶನದ ವೇಳೆ 8 ಮಹಿಳೆಯರ ಸಾವು!

ಒಂದೆಡೆ ಬೆಲೆ ಏರಿಕೆಯ ಬಿಸಿ, ಇನ್ನೊಂದೆಡೆ ಹಣ ಕಟ್ಟಿದರೂ ಸಿಗದಿರುವ ಸಿಲಿಂಡರ್! ಇದು ಜನಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿದೆ. “ಡಿಜಿಟಲ್ ಇಂಡಿಯಾ” ಎನ್ನುವ ಸರ್ಕಾರಗಳು ಸಿಲಿಂಡರ್ ಬುಕ್ಕಿಂಗ್ ಅನ್ನು ಸುಲಭಗೊಳಿಸಿವೆಯೇ ಹೊರತು, ಅದನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಸುಧಾರಿಸಿಲ್ಲ ಎಂಬುದು ದುರ್ದೈವ. ಸಚಿವರು ಮತ್ತು ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಈ ‘ಗ್ಯಾಸ್ ಗೋಳಾಟ’ಕ್ಕೆ ಮುಕ್ತಿ ನೀಡಬೇಕಿದೆ.


Political News

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

ವಿಶ್ವ ರಾಜಕಾರಣದಲ್ಲಿ ಹೊಸ ಸಮೀಕರಣ: ಟ್ರಂಪ್-ಮೋದಿ ಕಾಲ್‌ನಲ್ಲಿ ಎಲಾನ್ ಮಸ್ಕ್ ಎಂಟ್ರಿ!

ನೇಪಾಳ:  ‘ಜೆನ್ ಜಿ’ ಪ್ರತಿಭಟನೆ ಹತ್ತಿಕ್ಕಿದ್ದ ಮಾಜಿ ಪ್ರಧಾನಿ ಓಲಿ ಸೆರೆ

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?

ಪೆಟ್ರೋಲ್-ಡೀಸೆಲ್ ಶಾಕ್ ನಡುವೆ ಕೇಂದ್ರದ ಮಾಸ್ಟರ್ ಪ್ಲಾನ್: ಅಬಕಾರಿ ಸುಂಕ ₹10 ಕಡಿತ

ಬೆಂಗಳೂರು ಕೇಂದ್ರ ಬಜೆಟ್ 2026: ಕಾಂಕ್ರೀಟ್ ಕಾಡಿಗೆ ‘ಮಾನವೀಯ’ ಸ್ಪರ್ಶ!

ಬೆಂಗಳೂರು ಪೂರ್ವ ಬಜೆಟ್ 2026-27: ಮೂಲಸೌಕರ್ಯದ ಜೊತೆ ‘ಕಲ್ಯಾಣ’ ಮಂತ್ರ; ಬಡವರ ಮನೆಗೆ ಪಾಲಿಕೆ ಆಸರೆ!

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ!

Scroll to Top