ಕನ್ನಡ ಸುದ್ದಿ ಕ್ಷೇತ್ರಕ್ಕೆ ಮತ್ತೊಂದು ಚಾನೆಲ್‌ ಚಾನೆಲ್‌ ಸೇರ್ಪಡೆ -ನಾಳೆ “NEWS-6” ಲೋಕಾರ್ಪಣೆ


ಕನ್ನಡ ಸುದ್ದಿ ಕ್ಷೇತ್ರಕ್ಕೆ ಮತ್ತೊಂದು ಹೊಸ ಸುದ್ದಿ ವಾಹಿನಿಯ ಪ್ರವೇಶವಾಗುತ್ತಿದೆ.ನಾಳೆ ಅಂದರೆ 12-11-2026 ರಂದು ಚಾನೆಲ್‌ ಲೋಕಾರ್ಪಣೆ ಆಗಲಿದ್ದು ಮಂತ್ರಾಲಯದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ರು ಚಾಲನ್‌ ಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಕೋಲಾರ ಮೂಲದ ಉದ್ಯಮಿ ಶತ್ರುಘ್ನ ರವಿಕುಮಾರ್‌ ಅವರ ಮಾಲೀಕತ್ವದ್ದು ಎನ್ನಲಾಗಿರುವ ನ್ಯೂಸ್-‌6 ಶೇಷಾದ್ರಿಪುರಣ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಿದೆ.ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿ ರುವ ವ್ಯವಸ್ಥೆಯನ್ನು ಚಾನೆಲ್‌ ಹೊಂದಿದೆ ಎಂದು ತಿಳಿದುಬಂದಿದೆ.

ಸುದ್ದಿ ಜಗತ್ತು ಕ್ಷಣ ಕ್ಷಣಕ್ಕೂ ಮಗ್ಗಲು ಬದಲಿಸುತ್ತಿರುವ ಸನ್ನಿವೇಶದಲ್ಲಿ, ಹೊಸ ಸವಾಲುಗಳನ್ನು ಎದುರಿಸಿ ನಿಂತು ಕೆಲಸ ಮಾಡುವ ತಯಾರಿಯನ್ನು ಹೊಂದಿರುವ   ಚಾನೆಲ್‌ ನಲ್ಲಿ ಈಗಾಗಲೇ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ನೇಮಕ ನಡೆಯುತ್ತಿದೆ.ಈಗಾಗಲೇ ಸುದ್ದಿಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಅನುಭವಿಗಳ ತಂಡವನ್ನು ಚಾನೆಲ್‌ ಹೊಂದಿದೆ.ಹತ್ತರೊಳಗೆ ಹನ್ನೊಂದಾಗಿ ಉಳಿಯದೆ ವಿಭಿನ್ನ ರೀತಿಯಲ್ಲಿ ಕೆಲಸ ಮಾಡುವ ಇರಾದೆಯನ್ನು ಹೊಂದಿ ಚಾನೆಲ್‌ ಕಾರ್ಯಾಚರಣೆ ಮಾಡಲಿದೆ ಎನ್ನುವುದು ಚಾನೆಲ್‌ ಮೂಲಗಳ ಮಾತು.

ಉತ್ಸಾಹಿ  ಉದ್ಯಮಿ ಶತ್ರುಘ್ನ ರವಿಕುಮಾರ್‌  ಅವರಿಗೆ ಸುದ್ದಿ ಜಗತ್ತು ಹೊಸದು..ಆದರೆ ಸುದ್ದಿ ಜಗತ್ತಿನಲ್ಲಿ ಕೆಲಸ ಮಾಡುತ್ತಿ ರುವ, ಹೆಸರು ಮಾಡಿರುವ ಅನುಭವಿಗಳ ಜತೆಗಿನ ಒಡನಾಟವಿದೆ.ಅವರ ಅನುಭವ ಹಾಗೂ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಇರಾದೆ ಹೊಂದಿದ್ದಾರೆ. ಮಾನವ ಸಂಪನ್ಮೂಲ ಹಾಗೂ ಬಂಡವಾಳವನ್ನು ಕ್ರೋಢೀಕರಿಸಿ ಕೆಲಸ ಮಾಡುವುದರಲ್ಲಿ ಸಿದ್ದಹಸ್ತರಾಗಿರುವ ಅವರು ಹೊಸ ತಂಡವನ್ನು ತಮ್ಮ ಗುರಿಯನ್ನು ಕ್ರಮಿಸುವುದಕ್ಕೆ ಬಳಸಿಕೊಳ್ಳಲಿದ್ದಾರೆ ಎನ್ನುವುದು ಅವರ ಆತ್ನೀಯರ ಅನಿಸಿಕೆ..ಮಾದ್ಯಮ ಜಗತ್ತನ್ನು ಹೊರಗಿದ್ದುಕೊಂಡೇ ಸೂಕ್ಷ್ಮವಾಗಿ ಅವಲೋಕಿಸುತ್ತಾ ಬಂದಿರುವ ಅವರು ಅದರ ಎಲ್ಲಾ ಬೀಜಾಕ್ಷರಗಳು ಹಾಗೂ ಗ್ರ್ಯಾಮರನ್ನು ಅರ್ಥ ಮಾಡಿಕೊಂಡು ಎಲ್ಲವನ್ನು ತೂಗಿ ಅಳೆದ ಮೇಲೆಯೇ ಚಾನೆಲ್‌  ನಡೆಸಲು ಮುಂದಾದರೆನ್ನುವುದು ಹಲವರ ಅನಿಸಿಕೆ.

ALSO READ :  "ವೈದೇಹಿ ಆಸ್ಪತ್ರೆ" ಆಸ್ತಿ ತೆರಿಗೆ ಕಡತ ಗೌಪ್ಯ ಪ್ರಕರಣ: ಕಂದಾಯಾಧಿಕಾರಿ ಬಸವಾಚಾರಿಗಿಂತ ಮುನ್ನ ಕಡತ ಮುಚ್ಚಿಟ್ಟಿದ್ರಂತೆ AC ಬಸವರಾಜ ಮಗಿ..!?

ಉದ್ಯಮದಲ್ಲಿ ಸಾಕಷ್ಟು ಅನುಭವ ಹೊಂದಿ ನಿರೀಕ್ಷಿತ ಯಶಸ್ಸು ಪಡೆದ ಮೇಲೆ ಮಾದ್ಯಮದಲ್ಲಿ ಪ್ರಯೋಗ ಮಾಡಲು ಮುಂದಾಗಿದ್ದಾರೆ.ಅವರಿಗೆ ಬೆನ್ನೆಲುಬಾಗಿ ಉದ್ಯಮ ಮತ್ತು ಮಾದ್ಯಮ ರಂಗದ ಹಲವರು ಒತ್ತಾಸೆಯಾಗಿ ನಿಲ್ಲಲು ನಿರ್ದರಿಸಿದ್ದಾರಂತೆ.ಈ ದೈರ್ಯದ ಮೇಲೆಯೇ  ಶತ್ರುಘ್ನ ರವಿಕುಮಾರ್‌ ನ್ಯೂಸ್-‌6 ಚಾನೆಲ್‌ ಗೆ ಕೈ ಹಾಕಿದ್ದಾರೆ.ಈ ಪ್ರಯತ್ನದಲ್ಲಿ ಖಂಡಿತಾ ಯಶಸ್ವಿಯಾಗುತ್ತೇನೆ ಎನ್ನುವ ಆತ್ಮವಿಶ್ವಾಸ ಹೊಂದಿದ್ದಾ ರಂತೆ.ಅವರ ಸಾಹಸಕ್ಕೆ ಮಾದ್ಯಮ ಕ್ಷೇತ್ರದ ದಿಗ್ಗಜರುಗಳು ಸಾಥ್‌ ಕೊಟ್ಟಿರುವುದು ಆನೆಬಲ ನೀಡಿದಂತಾಗಿದೆ.

ನಾಳೆಯಿಂದ ಕಾರ್ಯಾಚರಣೆ ಮಾಡಲಿರುವ ನ್ಯೂಸ್-‌6 ಚಾನೆಲ್‌ ಗೆ  ಮಂತ್ರಾಲಯದ ಶ್ರೀ ಶ್ರೀ ಸುಭು ದೇಂದ್ರ ತೀರ್ಥ ರು ಚಾಲನೆ ನೀಡಿ ಹರಸಿ-ಆಶೀರ್ವದಿಸಲಿದ್ದಾರೆ. ಎಲ್ಲಾ ಸುದ್ದಿ ವಾಹಿನಿಗಳಿಗೆ ಪೈಪೋಡಿ ನೀಡುವ ಮಟ್ಟಕ್ಕೆ ಚಾನೆಲ್‌ ಬೆಳೆಯಲಿ.ಹತ್ತರೊಳಗೆ ಹನ್ನೊಂದಾಗಿ ಉಳಿಯದೆ ವಿಭಿನ್ನ ಕಾರ್ಯಶೈಲಿ ಯಿಂದ ಕ್ಲುಪ್ತ ಅವಧಿಯಲ್ಲೇ ರಾಜ್ಯದ ಮನೆ ಮಾತಾಗಲಿ..ಎಲ್ಲಾ ವಯೋಮಾನದ ವೀಕ್ಷಕರನ್ನು ತಲುಪುವಂತಾಗಲಿ ಎನ್ನುವುದೇ “ಕನ್ನಡ ಫ್ಲ್ಯಾಶ್‌ ನ್ಯೂಸ್‌” ನ ಹಾರೈಕೆ ಹಾಗೂ ಆಶಯ.


Leave a Comment