ನಾಳೆಯಿಂದ ಡಿಜಿಟಲ್‌ ಮಾದ್ಯಮದಲ್ಲಿ ಹೊಸ ಕ್ರಾಂತಿ, ನಾಲ್ವರು ಮಾದ್ಯಮಸ್ನೇಹಿತರ ಹೊಸ ಕನಸಿನ ಪಯಣ “ಫೋರ್‌ ಎವರ್(FOUREVER)..” ಕ್ಕೆ ಆಲ್‌ ದಿ ಬೆಸ್ಟ್.

ಬೆಂಗಳೂರು:ಇದು  ಪತ್ರಿಕೋದ್ಯಮದಲ್ಲಿ ಸ್ವಂತದ್ದಾಗಿ ಏನನ್ನಾದರೂ ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ನಾಲ್ವರು ಮಾದ್ಯಮಮಿತ್ರರ ಹೊಸ ಕನಸಿನ ಕಥೆ..ಇವತ್ತಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ಎನ್ನುವುದು ಬಹುತೇಕ ವ್ಯಾಪಾರೀಕರಣವಾಗಿರುವ, ಇನ್ನೊಬ್ಬರ ಓಲೈಕೆಗೆ ಸೀಮಿತವಾಗಿರುವ, ಸ್ವಂತಿಕೆ-ಬದ್ಧತೆ ಕಳೆದುಕೊಂಡಿರುವ ಸನ್ನಿವೇಶದಲ್ಲಿ ಆ ನಿರ್ವಾತವನ್ನು ದೂರ ಮಾಡುವ ಸಂಕಲ್ಪ ಮಾಡಿಕೊಂಡಿರುವ ಈ ನಾಲ್ವರ ಪ್ರಯತ್ನ ಎಲ್ಲರ ಗಮನ ಸೆಳೆಯುತ್ತಿದೆ.ಸದಾ ಹೊಸ ಪ್ರಯತ್ನಗಳಿಗೆ ತುಡಿಯುವ ಮಾದ್ಯಮ ಮನಸುಗಳನ್ನು ಪ್ರೋತ್ಸಾಹಿಸುವ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಈ ನಾಲ್ವರು ಮಾದ್ಯಮ ಮಿತ್ರರನ್ನು ಪರಿಚಯಿಸಲು ಹೆಮ್ಮೆ ಪಡುತ್ತದೆ. … Read more

“ನ್ಯೂಸ್‌ ಫಸ್ಟ್‌” 5 ನೇ ಹುಟ್ಟುಹಬ್ಬದಂದೇ   ಮತ್ತೊಂದು “ಚಾನೆಲ್‌” ಘೋಷಣೆ..

ಸರಳ ಸಮಾರಂಭದಲ್ಲಿ ಸಿಬ್ಬಂದಿ ಮುಂದೆ ರವಿಕುಮಾರ್-ಮಾರುತಿ ಜೋಡಿಯಿಂದ ಮಹತ್ವದ ಘೋಷಣೆ.. ಕನ್ನಡದ ಜನಪ್ರಿಯ ನ್ಯೂಸ್‌ ಚಾನೆಲ್‌ ಗಳಲ್ಲಿ ಒಂದಾದ ನ್ಯೂಸ್‌ ಫಸ್ಟ್‌ ಮೊನ್ನೆ 5ನೇ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಚಾನೆಲ್‌ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಒಂದು ಚಾನೆಲ್‌ 5 ವರ್ಷ ಪೂರೈಸುವುದು ಸಾಧನೆಯೇ ಸರಿ..ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೋದ್ಯಮದ ಜೋಡೆತ್ತುಗಳಾದ ಮಾರುತಿ-ರವಿಕುಮಾರ್‌ ಬಳಗಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಬಳಗದಿಂದ ಅಭಿನಂದನೆ ಹಾಗೂ ಶುಭಾಷಯ ( ನಮ್ಮ ಬರವಣಿಗೆಯ ನೈತಿಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನಿಸಿ ಮಾತನಾಡುವವರಿಗೆ ನಮ್ಮದೊಂದು  ಸ್ಪಷ್ಟನೆ … Read more

ಮಹಿಳಾ ಉದ್ಯೋಗಿಯ ಅಮ್ಮನನ್ನೇ ಬಲಿ ತೆಗೆದುಕೊಂಡುಬಿಡ್ತಾ ಆ ನ್ಯೂಸ್‌ ಚಾನೆಲ್..?!

*ನನ್ನ ಅಮ್ಮನೇ ಹೋದ್ಮೇಲೆ ನಿಮ್ಮ ಸ್ಯಾಲರಿ ತಗಂಡ್‌ ಏನ್‌ ಮಾಡೋಣ ಬಿಡಿ ಸಾರ್..‌* *ಅನ್ಯಾಯವಾಗಿ ನನ್ನ ಅಮ್ಮನನ್ನು  ಕೊಂದ್‌ ಬಿಟ್ರಲ್ಲಾ ಸಾರ್..!?* *ನ್ಯಾಯಯುತ ದ್ವನಿಯಲ್ಲಿ ಹಕ್ಕಿನ ವೇತನ ಕೇಳಿದ್ದಕ್ಕೆ ಗೇಟ್‌ ಪಾಸ್… ಸಂಬಳ ಕೊಡದೆ ಸತಾವಣೆ..* ಬೆಂಗಳೂರು: ಈ ಸುದ್ದಿ ನಿಜಕ್ಕೂ ಎಂಥಾ ಕಲ್ಲು ಮನಸನ್ನು ಕರೆಗಿಸುತ್ತದೆ…ಸುದ್ದಿ ಮನೆಗಳಲ್ಲಿ ಕೆಲಸ ಮಾಡುವವರನ್ನು ಇಷ್ಟೊಂದು ತಾತ್ಸಾರದಿಂದ ನಡೆಸಿಕೊಳ್ಳಲಾಗುತ್ತಾ..? ತಮಗೆ ಬರಬೇಕಿರೋ ಸಂಬಳಕ್ಕೆ ದ್ವನಿ ಎತ್ತಿದ್ರೆ ಸಂಸ್ಥೆಯಿಂದಲೇ ಗೇಟ್‌ ಪಾಸ್‌ ಕೊಡಲಾಗುತ್ತಾ..? ಕೊನೆಗೆ ಅವರ ಕುಟುಂಬದವರ ಸಾವಿಗೂ  ನೈತಿಕವಾಗಿ ಕಾರಣವಾಗುವಂತ … Read more

“ವಿಸ್ತಾರ” ಪುನರಾಂಭಕ್ಕೆ ದೊಡ್ಡ ಹಿನ್ನಡೆ..!! “ಚಾನೆಲ್” ಮಾಲೀಕತ್ವದ ಕಂಪೆನಿಯ ಸ್ವತ್ತುಗಳು ಜಪ್ತಿ..!?

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ವಿಸ್ತಾರ ನ್ಯೂಸ್ ಚಾನೆಲ್ ನ ನಿರ್ದೇಶಕರಲ್ಲಿ ಒಬ್ಬರೆನ್ನಲಾಗಿದ್ದ ಹರಿಪ್ರಕಾಶ್ ಕೋಣೆಮನೆ ವಿರುದ್ಧ ಮಾಹಿತಿ ಮತ್ತು  ಪ್ರಸಾರ ಸಚಿವಾಲಯಕ್ಕೆ ದೂರು ಸಲ್ಲಿಕೆಯಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಪಾಲುದಾರರೂ ಆಗಿರುವ ಮೈಸೂರು ಮರ್ಕಂಟೈಲ್  ಕಂಪೆನಿಯ  ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ.ಎಚ್.ಎಸ್ ಶೆಟ್ಟಿ ಅವರು ದೂರು ನೀಡಿದ್ದಾರೆನ್ನಲಾಗಿದ್ದು,ಅನುಮತಿ ಇಲ್ಲದೆ ಕಂಪೆನಿಯ ಷೇರುಗಳನ್ನು ಹಸ್ತಾಂತರಿಸಿದ್ದಾರೆನ್ನುವುದು ಕೋಣೆಮನೆ ಮೇಲೆ ಕೇಳಿಬಂದಿರುವ ಆಪಾದನೆ. ಅನುಮತಿ ಇಲ್ಲದೆ ಷೇರುಗಳನ್ನು ಇನ್ನೊಬ್ಬರಿಗೆ ಮಾರಬಾರದೆನ್ನುವುದು ಕಂಪೆನಿ ರೂಲ್ಸ್.ಆದರೆ … Read more