

ಬೆಂಗಳೂರು: ಇಂಪ್ಯಾಕ್ಟ್ ಅಂದ್ರೆ ಇದು.. ಕನ್ನಡ ಫ್ಲ್ಯಾಶ್ ನ್ಯೂಸ್ ವರದಿ ಬೆನ್ನಲ್ಲಿ ರಾಜ್ಯ ಸರ್ಕಾರ ನಾಲ್ಕು ನಿಗಮಗಳಿಗೆ ೧೭೦೦ ಕೋಟಿ ಹಣ ಬಿಡುಗಡೆ ಮಾಡಿದೆ.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಉಚಿತ ಸಾರಿಗೆ ಸೇವೆ ನೀಡಿದ್ದರಿಂದ ನಾಲ್ಕು ವರ್ಷಗಳಲ್ಲಿ ನಾಲ್ಕು ಸಾರಿಗೆ ನಿಗಮಗಳಿಗೆ 5418 ಕೋಟಿ ಹೊರೆ ಆಗಿತ್ತು.ರಾಜ್ಯ ಸರ್ಕಾರದಿಂದ ನೆರವು ಕೋರಿದರೂ ಯಾವುದೇ ಸಹಾಯ ದೊರೆತಿರಲಿಲ್ಲ.ಈ ಹಿನ್ನಲೆಯಲ್ಲಿ ಕೆಎಸ್ ಆರ್ ಟಿಸಿ ಎಂಡಿ ಅವರು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು.
ಶಕ್ತಿ ಯೋಜನೆಯಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಹೊರೆಯಾಗಿರುವ ಮೊತ್ತದ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಸಮಗ್ರವಾದ ವರದಿಯನ್ನು ದಾಖಲೆ ಸಮೇತ ಬಿಡುಗಡೆ ಮಾಡಿತ್ತು.ಇದರಿಂದ ಎಚ್ಚೆತ್ತುಕೊಂಡ ಸರ್ಕಾರ 5418 ಕೋಟಿ ಬಾಕಿ ಪೈಕಿ ಮೊದಲ ಕಂತಿನಲ್ಲಿ 1700 ಕೋಟಿ ಹಣ ಬಿಡುಗಡೆ ಮಾಡಿದೆ.ಈ ದಾಖಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭ್ಯವಾಗಿದೆ.
ಅಂದ್ಹಾಗೆ 1700 ಕೋಟಿ ಯಾವ್ಯಾವ ನಿಗಮಗಳಿಗೆ ಹೇಗೆಲ್ಲಾ ಹಂಚಿಕೆಯಾಗಿದೆ ಎನ್ನುವುದರ ಬಗ್ಗೆ ನೋಡುವುದಾದರೆ ಕೆಎಸ್ ಆರ್ ಟಿಸಿಗೆ 543 ಕೋಟಿ -ಬಿಎಂಟಿಸಿಗೆ 518 ಕೋಟಿ -ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 328 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 309 ಕೋಟಿ ಅನುದಾನ ಬಿಡುಗಡೆ ಮಾಡಿದೆ.ತಮ್ಮ ಸಮಸ್ಯೆಗೆ ಸ್ಪಂದಿಸಿರುವ ಸರ್ಕಾರದ ಕ್ರಮಕ್ಕೆ ಸಾರಿಗೆ ಸಿಬ್ಬಂದಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
