advertise here

Search

ರಸ್ತೆ ಬದಿಯಲ್ಲಿ ನಿಂತಲ್ಲೇ ನಿಂತ ಬ್ಲಿಂಕಿಟ್ ಬಾಯ್‌: ಇದು ವಿಚಿತ್ರ ಕಾಯಿಲೆಯೋ ಅಥವಾ ‘ಜಾಂಬಿ ಡ್ರಗ್’ ಪ್ರಭಾವವೋ?

Chandigarh blinkit delivery boy

ನಾವು ಸಿನಿಮಾಗಳಲ್ಲಿ ಅಥವಾ ಹಾಲಿವುಡ್‌ನ ಹಾರರ್ ಚಿತ್ರಗಳಲ್ಲಿ ‘ಜಾಂಬಿ’ಗಳನ್ನು (Zombies) ನೋಡಿರುತ್ತೇವೆ. ಪ್ರಜ್ಞೆ ತಪ್ಪಿದವರಂತೆ, ವಿಚಿತ್ರವಾಗಿ ವರ್ತಿಸುತ್ತಾ ಚಲನೆ ಇಲ್ಲದೆ ನಿಲ್ಲುವ. ಆದರೆ, ಅಂತಹದ್ದೇ ಒಂದು ಘಟನೆ ಭಾರತದ ಚಂಡೀಗಢದಲ್ಲಿ ನಡೆದಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಒಬ್ಬ ಡೆಲಿವರಿ ಬಾಯ್ ರಸ್ತೆ ಬದಿಯಲ್ಲಿ ಬರೋಬ್ಬರಿ ಎರಡು ಗಂಟೆಗಳ ಕಾಲ ಒಂದೇ ಕಡೆ ಪ್ರತಿಮೆಯಂತೆ ನಿಂತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಾರ್ಚ್ 24ರಂದು ಚಂಡೀಗಢದ ಸೆಕ್ಟರ್ 33B ನಲ್ಲಿ ಈ ಘಟನೆ ನಡೆದಿದೆ. ಇ-ಕಾಮರ್ಸ್ ಸಂಸ್ಥೆ ‘ಬ್ಲಿಂಕಿಟ್’ (Blinkit) ನಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ ಒಬ್ಬ ತನ್ನ ಬ್ಯಾಗ್ ಸಮೇತ ಮತ್ತು ರಸ್ತೆಯ ಪಕ್ಕದಲ್ಲಿ ನಿಂತಿದ್ದ. ಆದರೆ ಆತ ಸಾಮಾನ್ಯ ವ್ಯಕ್ತಿಯಂತೆ ಇರಲಿಲ್ಲ. ಆತನ ದೇಹವು ಒಂದು ವಿಚಿತ್ರ ಭಂಗಿಯಲ್ಲಿ ಲಾಕ್ ಆಗಿತ್ತು. ಆ ದಾರಿಯಲ್ಲಿ ಹೋಗುವವರು ಆತನನ್ನು ಮಾತನಾಡಿಸಲು ಯತ್ನಿಸಿದರೂ ಆತ ಮಾತ್ರ ಕಣ್ಣು ರೆಪ್ಪೆ ಕೂಡ ಬಡಿಯದೆ ಪ್ರತಿಮೆಯಂತೆ ನಿಂತಿದ್ದ. ಬರೋಬ್ಬರಿ ಎರಡು ಗಂಟೆಗಳ ಕಾಲ ಆತ ಅದೇ ಸ್ಥಿತಿಯಲ್ಲಿದ್ದದ್ದು ಜನರಲ್ಲಿ ಭೀತಿ ಹುಟ್ಟಿಸಿದೆ.

ಜಾಂಬಿ ಡ್ರಗ್ಸ್ ಅಥವಾ ಟ್ರಾಂಕ್ ಹಾವಳಿಯೇ?

ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಇದು ಅಮೆರಿಕದಂತಹ ದೇಶಗಳಲ್ಲಿ ಹಾವಳಿ ಎಬ್ಬಿಸಿರುವ ‘ಜಾಂಬಿ ಡ್ರಗ್’ ಅಥವಾ ‘ಟ್ರಾಂಕ್’ (Fentanyl/Xylazine) ಪ್ರಭಾವವಿರಬಹುದು ಎಂದು ಶಂಕಿಸುತ್ತಿದ್ದಾರೆ. ಈ ಮಾದಕ ದ್ರವ್ಯವನ್ನು ಸೇವಿಸಿದವರು ಗಂಟೆಗಟ್ಟಲೆ ಪ್ರಜ್ಞೆ ಕಳೆದುಕೊಂಡು ಇಂತಹದ್ದೇ ಸ್ಥಿತಿಯಲ್ಲಿ ಇರುತ್ತಾರೆ. ಚರ್ಮ ಕೊಳೆಯುವ ಮತ್ತು ದೇಹವು ತನ್ನ ಮೇಲಿನ ನಿಯಂತ್ರಣ ತಪ್ಪುವ ಈ ಡ್ರಗ್ಸ್ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಚರ್ಚೆ ಈಗ ಗಂಭೀರವಾಗಿ ನಡೆಯುತ್ತಿದೆ.

ALSO READ :  ಮುಂಬೈನ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಮೂವರು ದುರ್ಮರಣ

ಇದನ್ನೂ ಓದಿ | SSLC ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ: 625 ಅಲ್ಲ, ಇನ್ಮುಂದೆ 525 ಅಂಕಗಳಿಗಷ್ಟೇ ಪರೀಕ್ಷೆ ರಿಸಲ್ಟ್!

ಆದರೆ, ಕೇವಲ ಡ್ರಗ್ಸ್ ಮಾತ್ರವಲ್ಲದೆ ಇದಕ್ಕೆ ವೈದ್ಯಕೀಯ ಕಾರಣಗಳೂ ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ‘ಕ್ಯಾಟಟೋನಿಯಾ’ (Catatonia) ಎಂಬ ಮಾನಸಿಕ ಕಾಯಿಲೆಯಲ್ಲಿ ಮನುಷ್ಯನ ಚಲನೆ ಸಂಪೂರ್ಣವಾಗಿ ನಿಂತು ಹೋಗುತ್ತದೆ. ಇದು ಸ್ಕಿಜೋಫ್ರೇನಿಯಾ ಅಥವಾ ತೀವ್ರ ಖಿನ್ನತೆಯ ಲಕ್ಷಣವೂ ಇರಬಹುದು. ಇನ್ನು ಕೆಲವರು ಇದು ತೀವ್ರ ಕೆಲಸದ ಒತ್ತಡದಿಂದ ಉಂಟಾದ ‘ನ್ಯೂರೋಲಾಜಿಕಲ್’ ಸಮಸ್ಯೆಯೂ ಇರಬಹುದು ಎಂದು ಅಂದಾಜಿಸಿದ್ದಾರೆ.

ಈ ಘಟನೆಯ ನಂತರ ಬ್ಲಿಂಕಿಟ್ ಸಂಸ್ಥೆಯ ಡೆಲಿವರಿ ಪಾರ್ಟ್ನರ್‌ಗಳ ಕೆಲಸದ ಪರಿಸ್ಥಿತಿಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ತೀವ್ರ ಬಿಸಿಲು ಮತ್ತು ನಿರಂತರ ಕೆಲಸದಿಂದ ಯುವಕ ಹೀಗೆ ಆಗಿರಬಹುದೇ? ಎಂಬ ಪ್ರಶ್ನೆಗಳಿಗೆ ಸಂಸ್ಥೆಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಆದರೆ, ಸ್ಥಳೀಯ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ಆ ಯುವಕನ ಆರೋಗ್ಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top