ವಾರದೊಳಗೆ ಅನ್ನಭಾಗ್ಯದ ಹಣ ಜಮೆ: ಆಹಾರ ಸಚಿವ ಕೆಎಚ್ ಮುನಿಯಪ್ಪ

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಡಿ ನೀಡುತ್ತಿರುವ ಅನ್ನಭಾಗ್ಯದ ಅಕ್ಕಿ ಹಣ ವಾರದೊಳಗೆ ಪಾವತಿಯಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ. ಕೋಲಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವರ್‌ ಸಮಸ್ಯೆಯಿಂದಾಗಿ 2 ತಿಂಗಳಿಂದ ಅಕ್ಕಿ ಹಣ ಬಿಡುಗಡೆ ಮಾಡಲು ಆಗಿರಲಿಲ್ಲ. ಇದೀಗ ಸಮಸ್ಯೆ ಬಗೆಹರಿದಿದ್ದು, ವಾರದೊಳಗೆ ಹಣ ಪಾವತಿಯಾಗಲಿದೆ ಎಂದರು. ಸಾಮಾನ್ಯವಾಗಿ ಪ್ರತಿ ತಿಂಗಳು 10ನೇ ತಾರೀಖಿನಿಂದ ಬಿಡುಗಡೆಯಾಗುತ್ತಿದ್ದು, ಸರ್ವರ್‌ ಸಮಸ್ಯೆಯಿಂದಾಗಿ ಅಕ್ಕಿ ಹಣ ಬಂದಿಲ್ಲ. ಸರಕಾರದಲ್ಲಿ ಹಣದ ಕೊರತೆಯಿಲ್ಲ. … Read more

ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆ: ತಪ್ಪಿದ ದುರಂತ

ರೈಲ್ವೆ ಹಳಿ ಮೇಲೆ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದ್ದು, ಸ್ವಲ್ಪದರಲ್ಲೇ ದುರಂತವೊಂದು ತಪ್ಪಿದ ಘಟನೆ ಉತ್ತರಾಖಂಡ್ ನ ರೂರ್ಕಿಯಲ್ಲಿ ಜರುಗಿದೆ. ಗೂಡ್ಸ್ ರೈಲಿನ ಲೋಕೋ ಪೈಲೆಟ್ ಗ್ಯಾಸ್ ಸಿಲಿಂಡರ್ ಕಂಡು ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಇದರಿಂದ ರೈಲು ಹಳಿ ತಪ್ಪುವ ಅಪಾಯದಿಂದ ಪಾರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈನಲ್ಲಿ ಮೈಸೂರು ದರ್ಬಾಂಗ ರೈಲು ದುರಂತ ಸಂಭವಿಸಿದ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದೆ. ಇದರಿಂದ ದೇಶದಲ್ಲಿ ರೈಲು ಅನಾಹುತಗಳು ಸಂಭವಿಸುವಂತೆ ಮಾಡುವ ಪ್ರಯತ್ನಗಳು ಪದೇಪದೆ ಬೆಳಕಿಗೆ ಬರುತ್ತಿರುವುದು ಆಘಾತಕಾರಿ … Read more

ಪ್ರಿಯಕರ ಜೊತೆ ಸೇರಿ ಇಬ್ಬರು ಮಕ್ಕಳನ್ನು ಕೊಂದ ಪಾಪಿ ತಾಯಿ!

ಪ್ರಿಯಕರನ ಜೊತೆಗೂಡಿ ಹೆತ್ತ ಇಬ್ಬರು ಮಕ್ಕಳನ್ನೇ ತಾಯಿಯೊಬ್ಬಳು ಕೊಂದ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಕೆಂಪೇಗೌಡ ವೃತ್ತದ ಬಳಿಯ ನಿವಾಸಿ ಸ್ವೀಟಿ (21) ಮತ್ತು ಪ್ರಿಯಕರ ಗ್ರಗೋರಿ ಫ್ರಾನ್ಸಿಸ್ ಜೊತೆಗೂಡಿ ಕಬಿಲ್ ಹಾಗೂ 11 ತಿಂಗಳ ಕಬಿಲನ್ ನನ್ನು ಹತ್ಯೆ ಮಾಡಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾರೆ. ಸ್ವೀಟಿಗೆ ಈ ಹಿಂದೆ ಶಿವು ಎಂಬಾತನ ಜೊತೆ ಮದುವೆ ಆಗಿದ್ದು, ಎರಡು ಮಕ್ಕಳಿದ್ದವು. ಮಕ್ಕಳಾದ ನಂತರ ಶಿವುವನ್ನು ತೊರೆದು ಗ್ರೆಗೋರಿ ಫ್ರಾನ್ಸಿಸ್ ಜೊತೆ ವಾಸಿಸುತ್ತಿದ್ದಳು. ಮಕ್ಕಳಿಂದ ಪ್ರಿಯಕರ ಜೊತೆ … Read more

ಜ್ಞಾನದ ಹಣತೆ ಹಚ್ಚಿದರು, ಜೀವರಾಶಿ ಸಂಪಾದಲೆ: ಬೀರೂರಿನ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ

ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ನ್ಯಾಯದ ತಕ್ಕಡಿ ಜರುಗಿತು, ಜ್ಞಾನದ ಹಣತೆ ಹಚ್ಚಿದರು, ಜೀವರಾಶಿ ಸಂಪಾದಲೆ ಪರಾಕ್ ಎಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಇತಿಹಾಸ ಪ್ರಸಿದ್ಧ ಮೈಲಾಂಗರಲಿಂಗೇಶ್ವರ ಕಾರ್ಣಿಕ ನುಡಿದಿದೆ. ವಿಜಯದಶಮಿಯ ಮಾರನೇ ದಿನವಾದ ಭಾನುವಾರ ಮಹಾನವಮಿ ಬಯಲಿನಲ್ಲಿ ನಡೆದ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿಯಿಂದ ಹೂವಿನ ಪಲಕ್ಕಿಯೊಂದಿಗೆ ಮೆರವಣಿಗೆ ನಡೆದಿದ್ದು, ಭಾನುವಾರ ಬೆಳಿಗ್ಗೆ ದಶರಥ ಪೂಜಾರ್ ಕಾರ್ಣಿಕ ನುಡಿದಿದ್ದಾರೆ. ಮೈಲಾರಲಿಂಗೇಶ್ವರ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಅಗಮಿಸಿರುವ ಭಕ್ತರು. ಹಲವು ಬಾರಿ ಕಾರ್ಣಿಕದ … Read more

ದಾಖಲೆ 7ನೇ ಬಾರಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಅರಮನೆಯಲ್ಲಿ ದಾಖಲೆಯ 7ನೇ ಬಾರಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ಶನಿವಾರ ಮಧ್ಯಾಹ್ನ 2.10ರ ಸುಮಾರಿಗೆ ಕುಂಭ ಲಗ್ನದಲ್ಲಿ ನಂದಿಧ್ವಜಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ ಪೂಜೆ ಸಲ್ಲಿಸಿದರು. ಈ ಮೂಲಕ ಮುಡಾ ಹಗರಣದಲ್ಲಿ ದಸರಾಗೆ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸುಳ್ಳಾಗಿಸಿದರು. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ವಿಶ್ವವಿಖ್ಯಾತ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸರ್ಕಾರದ ವತಿಯಿಂದ ಮೈಸೂರು ದಸರಾ … Read more

ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಅರೆಸ್ಟ್: ನಾಲ್ವರು ಯುವತಿಯರ ರಕ್ಷಣೆ!

ಈವೆಂಟ್ ಮ್ಯಾನೇಜ್ ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಬೆಂಗಳೂರಿನ ಪಟ್ಟೆಗಾರಪಾಳ್ಯ ನಿವಾಸಿ ಪ್ರಕಾಶ್ ಹಾಗೂ ಪತಿ ಪಾರಿಜಾತ ಬಂಧಿತ ದಂಪತಿ. ರಾಕೇಶ್ ಮತ್ತು ಪೂಜಾ ಎಂದು ಹೆಸರು ಬದಲಿಸಿಕೊಂಡಿದ್ದ ಆರೋಪಿಗಳು ಉದ್ಯೋಗ ಕೊಡಿಸುವ ನೆಪದಲ್ಲಿ ಬಡ ಹೆಣ್ಣುಮಕ್ಕಳನ್ನ ವೇಶ್ಯಾವಾಟಿಕೆ ಅಡ್ಡೆಗೆ ತಳ್ಳುತ್ತಿದ್ದರು. ಉತ್ತರ ಕರ್ನಾಟಕ ಮೂಲದ ಬಡ ಹೆಣ್ಣು ಮಕ್ಕಳನ್ನ ಬೆಂಗಳೂರಿಗೆ ಕರೆತಂದು ಕೆಲಸ ಕೊಡಿಸದೇ ಹಣದ ಆಮಿಷ ತೋರಿಸುತ್ತಿದ್ದರು. ಕರ್ನಾಟಕದ ಯುವತಿಯರನ್ನು ತಮಿಳುನಾಡು, … Read more

ರಾಜ್ಯೋತ್ಸವದ ಹೊಸ್ತಿಲಲ್ಲೇ ಕನ್ನಡ ಸಾಹಿತ್ಯ ಪರಿಷತ್ ಗೆ ಮರ್ಮಾಘಾತ..! ಪರಿಷತ್ ನಿಂದ ಹೊರಬಿದ್ದ ಕನ್ನಡದ ಕಟ್ಟಾಳು ಜೆ.ಎಂ ರಾಜಶೇಖರ್..

ಬೆಂಗಳೂರು: ಕನ್ನಡ ನಾಡುನುಡಿಯ ಹಬ್ಬ ರಾಜ್ಯೋತ್ಸವ ಆಚರಣೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ.ಅಷ್ಟರಲ್ಲೇ ಕನ್ನಡ ನಾಡುನುಡಿಯ ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡಬೇಕಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ.ಅಧ್ಯಕ್ಷ ನಾಡೋಜ ಮಹೇಶ್ ಜೋಷಿ ಅವರ ಧೋರಣೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಅವರ ನಿಲುವಿಗೆ ಬೇಸತ್ತು ಸಾಕಷ್ಟು ಕನ್ನಡದ ಕಟ್ಟಾಳುಗಳು ಹೊರಬರಲು ನಿರ್ದರಿಸಿದ್ದು ಇದರ ಮೊದಲ ಪ್ರಯತ್ನ ಎನ್ನುವಂತೆ ಕನ್ನಡದ ಕಟ್ಟಾಳು, ಕನ್ನಡಪರ ಹೊರಾಟಗಾರ, ಸಾಮಾಜಿಕ ಕಾರ್ಯಕರ್ತ,ಆರ್ ಟಿಐ ಗೆ ಕರ್ನಾಟಕದಲ್ಲಿ ನೆಲೆ-ಬೆಲೆ ದೊರಕಿಸಿಕೊಟ್ಟಿರುವ ಜೆ.ಎಂ.ರಾಜಶೇಖರ್ … Read more

ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನದಲ್ಲೂ ನಡೆದೋಯ್ತಾ ಯಡವಟ್ಟು..!: ಮರುಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳಿಂದ ಒತ್ತಾಯ

 ಬೆಂಗಳೂರು:ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನದಲ್ಲಿ ನಡೆದ ಯಡವಟ್ಟುಗಳೇ, ಕಾನೂನು ವಿವಿ  ಉತ್ತರಪತ್ರಿಕೆಗಳ ಮೌಲ್ಯಮಾಪನದಲ್ಲೂ ನಡೆದಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.ಈ ಹಿನ್ನಲೆಯಲ್ಲಿ ಮರುಮೌಲ್ಯಮಾಪನಕ್ಕೆ ಒತ್ತಾಯಿಸಿ ಕಾನೂನು ವಿವಿ ಉಪಕುಲಪತಿಗಳಿಗೆ ಕೆಲವು ಕಾನೂನು ವಿದ್ಯಾರ್ಥಿಗಳು ಪತ್ರ ಬರೆಯಲು ನಿರ್ದರಿಸಿದ್ದಾರೆ.ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ಸಾಕಷ್ಟು ಕಾನೂನು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ಸಾಕಷ್ಟು ಲೋಪಗಳು ಮೌಲ್ಯಮಾಪಕರಿಂದ ನಡೆದಿತ್ತೆನ್ನುವ ಆರೋಪ ಸಾಕಷ್ಟು ಕಡೆಗಳಿಂದ ಕೇಳಲ್ಪಟ್ಟಿತ್ತು.ಆದರೆ ವಿವಿಯ ಆಡಳಿತ ಇದನ್ನು ನಿರಾಕರಿಸಿತ್ತು.ಆದರೆ … Read more

POLITICAL EXCLUSIVE..”ಡಿ.ಕೆ” ಗೆ “ಠಕ್ಕರ್” ಕೊಡಲು “ಸತೀಶ್ ಜಾರಕಿಹೊಳಿ” ಹೆಸ್ರು “ತೇಲಿ”ಬಿಟ್ಟವರು “ಇವರೇ”ನಾ..? ಏಕೆ..?

ಬೆಂಗಳೂರು:ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ..ಮಗ್ಗಲು ಬದಲಿಸುತ್ತಿದೆ.ದಸರಾ ಮುಗಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎಂಬ ಭವಿಷ್ಯವಾಣಿ ಬಗ್ಗೆನೇ ಎಲ್ಲರ ಕುತೂಹಲ ನೆಟ್ಟಿದೆ.ಆ ಕ್ಷಿಪ್ರ ರಾಜಕೀಯ ಬೆಳವಣಿಗೆ ಏನು ಎನ್ನುವ ಕುತೂಹಲದ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿ ರುವಾಗಲೆ ಮತ್ತೊಂದು ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ದಸರಾ ಬಳಿಕ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲು ಬದಲಿಸಲಿದೆ ಎನ್ನುವ  ಭವಿಷ್ಯ ವಾಣಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ..? ಅಥವಾ ಬಲವಂತವಾಗಿ ಅವರಿಂದ ಕೊಡಿಸಲಾಗುತ್ತಾ ಎನ್ನುವುದರತ್ತಲೇ … Read more

ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ಬುಮ್ರಾಗೆ ಉಪನಾಯಕ ಪಟ್ಟ!

ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ರೋಹಿತ್ ಶರ್ಮ ಸಾರಥ್ಯದ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಶುಕ್ರವಾರ ರಾತ್ರಿ ಬಿಸಿಸಿಐ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಮಧ್ಯಮ ವೇಗಿ ಜಸ್ ಪ್ರೀತ್ ಬುಮ್ರಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 16ರಂದು ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ತಂಡದಲ್ಲಿ ಕೆಎಲ್ ರಾಹುಲ್, ಶುಭಮನ್ ಗಿಲ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದು, 157 ಕಿ.ಮೀ. ವೇಗದ ಬೌಲರ್ … Read more