ಖ್ಯಾತ ವಿಜ್ಞಾನಿ,ಸಾಹಿತಿ ಪ್ರಸನ್ನ ಸಂತೆಕಡೂರು ಗೆ ವಿಶ್ವದ ಐವರು ಅಗ್ರಗಣ್ಯ ವಿಜ್ಞಾನಿಗಳಲ್ಲಿ ಸ್ಥಾನ

ಸಂಶೋ‍ಧಕನಾಗಷ್ಟೇ ಸೀಮಿತಗೊಳ್ಳದೆ ಸಾಹಿತ್ಯಕ್ಕೂ ತನ್ನನ್ನು ತೆರೆದುಕೊಂಡು ಯಶಸ್ವಿಯಾದ ಪ್ರಸನ್ನ ಸಂತೆಕಡೂರು ಶಿವಮೊಗ್ಗ ಜಿಲ್ಲೆಯ ಪ್ರತಿಭೆ ಖ್ಯಾತ ಸಂಶೋಧಕ..ವಿಜ್ಞಾನಿ…ಶಿವಮೊಗ್ಗ ಮೂಲದ ಪ್ರತಿಭಾನ್ವಿತ ಪ್ರಸನ್ನ ಸಂತೆಕಡೂರು ಅವರಿಗೆ ವಿಶ್ವದ ಅಗ್ರಗಣ್ಯ ಐವರು ವಿಜ್ಞಾನಿಗಳ ಪಟ್ಟಿಯಲ್ಲಿ ಒಬ್ಬರಾಗಿ ಗೌರವಾನ್ವಿತ ಸ್ಥಾನ ಪಡೆದಿದ್ದಾರೆ. ಆತ್ಮೀಯ ಸ್ನೇಹಿತ ಪ್ರಸನ್ನ ಸಂತೆಕಡೂರು ಅವರಿಗೆ ಅಭಿನಂದನೆಗಳು..ಅವರ ಸಾಧನೆ ಬಗ್ಗೆ ಬರೆಯಲೇಬೇಕಿದೆ. ನಾವೆಲ್ಲಾ ಒಂದಷ್ಟು ಸಾವಿರಗಳಷ್ಟು ಸಂಬಳದ ಉದ್ಯೋಗ ಸಿಕ್ಕರೆ ಸಾಕಪ್ಪಾ..ಲೈಫ್ ಸೆಟ್ಲಾದಂತೆ ಎಂದು ಕಂಫರ್ಟ್ ಝೋನ್ ಕಂಡುಕೊಳ್ಳುವ ಯತ್ನದಲ್ಲಿದ್ದಾಗ ಪ್ರಸನ್ನ ಪ್ರಯೋಗಾಲಯಗಳಲ್ಲಿ ಸೆಲ್ಸು….ಝೀನ್ಸ್…ಇವುಗಳ ಸುತ್ತಲೇ ಪ್ರಯೋಗಶೀಲನಾಗಿದ್ದ…ಆಗಲೇ ಅನ್ನಿಸಿತ್ತು..ಈತ … Read more

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ

ಬೆಂಗಳೂರು ಸೇರಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಅಕ್ಟೋಬರ್ 20ರವರೆಗೆ ಭಾರೀ ಮಳೆಯಾಗಲಿದ್ದು, ರಾಜ್ಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್​ ಘೋಷಿಸಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಮೈಸೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ … Read more

ದಾಖಲೆ 7ನೇ ಬಾರಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಅರಮನೆಯಲ್ಲಿ ದಾಖಲೆಯ 7ನೇ ಬಾರಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದಾರೆ. ಶನಿವಾರ ಮಧ್ಯಾಹ್ನ 2.10ರ ಸುಮಾರಿಗೆ ಕುಂಭ ಲಗ್ನದಲ್ಲಿ ನಂದಿಧ್ವಜಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ ಪೂಜೆ ಸಲ್ಲಿಸಿದರು. ಈ ಮೂಲಕ ಮುಡಾ ಹಗರಣದಲ್ಲಿ ದಸರಾಗೆ ಮುನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸುಳ್ಳಾಗಿಸಿದರು. ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ವಿಶ್ವವಿಖ್ಯಾತ ಜಂಬೂಸವಾರಿಗೆ ಚಾಲನೆ ದೊರೆಯಲಿದೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಸರ್ಕಾರದ ವತಿಯಿಂದ ಮೈಸೂರು ದಸರಾ … Read more

ಚೆನ್ನೈನಲ್ಲಿ ಮೈಸೂರು ದರ್ಬಾಂಗ-ಗೂಡ್ಸ್ ರೈಲು ಢಿಕ್ಕಿ: 19 ಮಂದಿಗೆ ಗಾಯ

ಮೈಸೂರು- ದರ್ಬಾಂಗ ರೈಲು ಮತ್ತು ಗೂಡ್ಸ್ ರೈಲುಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ಗಾಯಗೊಂಡ ಘಟನೆ ಚೆನ್ನೈನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮೈಸೂರು ದರ್ಬಾಂಗ ನಡುವೆ ಸಂಚರಿಸುವ ರೈಲು ಕಾವರೈಪಟ್ಟಿ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, 12 ಬೋಗಿಗಳು ಹಳಿ ತಪ್ಪಿವೆ. ಆಯುಧಪೂಜೆ ದಿನವಾದ ಶುಕ್ರವಾರ ಬೆಳಿಗ್ಗೆ 12578 ಬೆಳಿಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟ್ಟಿದ್ದ ರೈಲು ಚೆನ್ನೈ ಮೂಲಕ ದರ್ಬಾಂಗ … Read more