ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ಏರ್ ಇಂಡಿಯಾ ದುರಂತ: 140 ಪ್ರಯಾಣಿಕರು ಪಾರು!

ಹಾರಾಟದ ವೇಳೆ ಹೈಡ್ರೋಲಿಕ್ ವೈಫಲ್ಯಕ್ಕೆ ಒಳಗಾದ ಏರ್ ಇಂಡಿಯಾ ವಿಮಾನ ತಮಿಳುನಾಡಿನ ತಿರುಚನಾಪಳ್ಳಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, 140 ಪ್ರಯಾಣಿಕರು ಪಾರಾಗಿದ್ದಾರೆ. ತಿರುಚನಾಪಳ್ಳಿಯಿಂದ ಶಾರ್ಜಾಕ್ಕೆ ಶುಕ್ರವಾರ ಸಂಜೆ 5.40ರ ಸುಮಾರಿಗೆ ಹೊರಟ್ಟಿದ್ದ ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ದೋಷಕ್ಕೆ ಒಳಗಾಯಿತು. ಪೈಲೆಟ್ ಗಳು ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದರು. ವಿಮಾನದ ಹೈಡ್ರೋಲಿಕ್ ವಿಫಲಗೊಂಡಿದೆ ಎಂದು ಪೈಲೆಟ್ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ವಿಮಾನ ಇಳಿಸಲು ವ್ಯವಸ್ಥೆ … Read more

ತರಬೇತಿ ವೇಳೆ ಸ್ಫೋಟದಿಂದ ಇಬ್ಬರು ಅಗ್ನಿವೀರ್ ಯೋಧರ ದುರ್ಮರಣ

ಗುಂಡು ಹಾರಿಸುವ ತರಬೇತಿ ವೇಳೆ ಮೈದಾನದ ಗನ್ ಸ್ಫೋಟಗೊಂಡ ಪರಿಣಾಮ ಇಬ್ಬರು ಅಗ್ನಿವೀರ್ ಯೋಧರು ಮೃತಪಟ್ಟ ದಾರುಣ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಸಂಭವಿಸಿದೆ. ನಾಸಿಕ್ ರಸ್ತೆಯಲ್ಲಿರುವ ಆರ್ಟಿಲರಿ ಸೆಂಟರ್ ನಲ್ಲಿ ಶುಕ್ರವಾರ ನಡೆದ ತರಬೇತಿ ವೇಳೆ ಈ ದುರಂತ ಸಂಭವಿಸಿದೆ. ಇತ್ತೀಚೆಗಷ್ಟೇ ಅಣಕು ಪ್ರದರ್ಶನದ ವೇಳೆ ಸಂಭವಿಸಿದ ಸ್ಫೋಟದಲ್ಲಿ ಅಗ್ನಿವೀರ್ ಯೋಧ ಮೃತಪಟ್ಟ ಘಟನೆ ಬೆನ್ನಲ್ಲೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಸ್ಫೋಟದಲ್ಲಿ ಮೃತಪಟ್ಟ ಅಗ್ನಿವೀರ್ ಯೋಧರನ್ನು ಗೋಹ್ಲಿ ವಿಶ್ವಾಸ್ ಸಿಂಗ್ (21) ಮತ್ತು ಸೈಫತ್ ಶಿಟ್ … Read more

ಚೆನ್ನೈನಲ್ಲಿ ಮೈಸೂರು ದರ್ಬಾಂಗ-ಗೂಡ್ಸ್ ರೈಲು ಢಿಕ್ಕಿ: 19 ಮಂದಿಗೆ ಗಾಯ

ಮೈಸೂರು- ದರ್ಬಾಂಗ ರೈಲು ಮತ್ತು ಗೂಡ್ಸ್ ರೈಲುಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ 19 ಮಂದಿ ಗಾಯಗೊಂಡ ಘಟನೆ ಚೆನ್ನೈನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮೈಸೂರು ದರ್ಬಾಂಗ ನಡುವೆ ಸಂಚರಿಸುವ ರೈಲು ಕಾವರೈಪಟ್ಟಿ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, 12 ಬೋಗಿಗಳು ಹಳಿ ತಪ್ಪಿವೆ. ಆಯುಧಪೂಜೆ ದಿನವಾದ ಶುಕ್ರವಾರ ಬೆಳಿಗ್ಗೆ 12578 ಬೆಳಿಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟ್ಟಿದ್ದ ರೈಲು ಚೆನ್ನೈ ಮೂಲಕ ದರ್ಬಾಂಗ … Read more

ಖಾಸಗಿ ಸಂಸ್ಥೆಗಳಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ: ರಾಜ್ಯ ಸರ್ಕಾರ ಮಹತ್ವದ ಆದೇಶ

ಶಾಲೆ, ಐಟಿ ಬಿಟಿ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ನವೆಂಬರ್ 1ರಂದು ಕಡ್ಡಾಯವಾಗಿ ಧ್ವಜಾರೋಹಣ ಮಾಡಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕನ್ನಡ ಭಾಷಾ ಪ್ರೇಮ ಹೆಚ್ಚಲು ಆಗಲು ಜಾಗೃತಿ ಮೂಡಿಸುವ ಉದ್ದೇಶದಿಂದ ಖಾಸಗಿ ಶಾಲಾ-ಕಾಲೇಜು, ಖಾಸಗಿ ಸಂಸ್ಥೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ಶಾಲೆಗಳಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಬೇಕು ಹಾಗೂ ಕನ್ನಡ ಸಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆದರೆ ಖಾಸಗಿ ಕಂಪನಿಗಳಲ್ಲಿ ಅದರಲ್ಲೂ ಐಟಿ-ಬಿಟಿ ಕಂಪನಿಗಳಲ್ಲಿ … Read more

ಸರಿಯಾಗಿ ಬಟ್ಟೆ ಹಾಕದಿದ್ದರೆ ಆಸಿಡ್ ಹಾಕುವೆ ಎಂದು ಬೆದರಿಸಿದ್ದ ಬೆಂಗಳೂರಿನ ಉದ್ಯೋಗಿ ವಜಾ!

ಸರಿಯಾಗಿ ಬಟ್ಟೆ ಧರಿಸದಿದ್ದರೆ ಆಸಿಡ್ ಎರಚುವೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಇಟಿಯೋಸ್ ಸರ್ವಿಸಸ್ ಕಂಪನಿ ಸೇವೆಯಿಂದ ವಜಾಗೊಳಿಸಿದೆ. ಪತ್ನಿಗೆ ಮಾಡಿದ ಮೆಸೇಜ್ ನ ಸ್ಕ್ರೀನ್ ಶಾಟ್ ಅನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಮಹಿಳೆಯರಿಗೆ ಎಷ್ಟು ಸುರಕ್ಷಿತ? ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ್ದ ನಿಕಿತ್ ಶೆಟ್ಟಿ ಎಂಬಾತನನ್ನು ಕಂಪನಿಯು ಸೇವೆಯಿಂದ ವಜಾಗೊಳಿಸಿದೆ. ನಿನಗಿಷ್ಟ ಬಂದ ಬಟ್ಟೆಗಳನ್ನು ಹಾಕಿಕೊಳ್ಳಬೇಡ. ಸರಿಯಾಗಿರುವ ಬಟ್ಟೆ ಹಾಕಿಕೊ. ಇಲ್ಲದಿದ್ದರೆ ಮುಖದ ಮೇಲೆ ಆಸಿಡ್ ಎರಚುವೆ ಎಂದು … Read more

ಟಾಟಾ ಟ್ರಸ್ಟ್ ಉತ್ತರಾಧಿಕಾರಿಯಾಗಿ ನೊಯೆಲ್ ಟಾಟಾ ಅವಿರೋಧ ಆಯ್ಕೆ

ಉದ್ಯಮಿ ರತನ್ ಟಾಟಾ ನಿಧನದ ಹಿನ್ನೆಲೆಯಲ್ಲಿ ಟಾಟಾ ಟ್ರಸ್ಟ್ ನೂತನ ಅಧ್ಯಕ್ಷರಾಗಿ ನೊಯೆಲ್ ಟಾಟಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶನಿವಾರ ನಡೆದ ರತನ್ ಟಾಟಾ ಅವರ ಸೋದರ ಸಂಬಂಧಿ ನೊಯೆಲ್ ಟಾಟಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೊಯೆಲ್ ಟಾಟಾ 4 ದಶಕದಿಂದ ಟಾಟಾ ಸಮೂಹ ಕಂಪನಿಯೊಂದಿಗೆ ಒಡನಾಟ ಹೊಂದಿದ್ದು, ಸಾಕಷ್ಟು ಅನುಭವಿ ಉದ್ಯಮಿಯಾಗಿದ್ದಾರೆ. ನೊಯೆಲ್ ಟಾಟಾ ಸೇರ್ಪಡೆಯಾದ ನಂತರ 2000ದಿಂದ ಟಾಟಾ ಅಭಿವೃದ್ಧಿ ಏರುಗತಿಯಲ್ಲಿ ಸಾಗಿದ್ದು, ಟಾಟಾ ಯಶಸ್ಸಿನ ಹಿಂದೆ ನೊಯೆಲ್ ಪಾತ್ರ ಕೂಡ ಮುಖ್ಯ … Read more

ರಜನಿಕಾಂತ್ `ವೆಟ್ಟಿಯಾನ್’: ಮೊದಲ ದಿನವೇ 30 ಕೋಟಿ ಗಳಿಕೆ!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ವೆಟ್ಟಿಯಾನ್ ಚಿತ್ರ ಭಾರತದಲ್ಲಿ ಮೊದಲ ದಿನವೇ 30 ಕೋಟಿ ರೂ. ಗಳಿಸುವ ಮೂಲಕ ಭರ್ಜರಿ ಓಪನಿಂಗ್ ಪಡೆದಿದೆ. ರಜನಿಕಾಂತ್ ಜೊತೆಗೆ ಅಮಿತಾಭ್ ಬಚ್ಚನ್, ರಾಣಾ ದಗ್ಗುಬಾಟಿ, ಫೈಜಲ್ ಫಜಲ್ ಸೇರಿದಂತೆ ದೊಡ್ಡ ತಾರಾಬಳಗವೇ ಹೊಂದಿರುವ ವೆಟ್ಟಿಯಾನ್ ಚಿತ್ರ ಭಾರತದಲ್ಲಿ ಭರ್ಜರಿ ಓಪನಿಂಗ್ ಪಡೆದಿದ್ದು, ಅತೀ ಹೆಚ್ಚು 26.15 ಕೋಟಿ ರೂ. ಪಾಲು ತಮಿಳುನಾಡಿನಿಂದ ಬಂದಿದೆ. ಮೊದಲ ದಿನದ ಗಳಿಕೆಯಲ್ಲಿ ತೆಲುಗಿನಲ್ಲಿ 3.2 ಕೋಟಿ ರೂ., ಹಿಂದಿಯಲ್ಲಿ ಕೇವಲ 60 ಲಕ್ಷ, ಕನ್ನಡದಲ್ಲಿ … Read more

ಜಪಾನ್ ನ ನಿಹಾನ್ ಹಿಡಾಂಕ್ಯೊಗೆ ಒಲಿದ ನೋಬೆಲ್ ಶಾಂತಿ ಪ್ರಶಸ್ತಿ

ಪರಮಾಣು ಮುಕ್ತ ಜಗತ್ತು ಪ್ರತಿಪಾದಿಸಿ ಜಾಗತಿಕ ಮಟ್ಟದಲ್ಲಿ ಶಾಂತಿ ಸುವ್ಯವಸ್ಥೆಗೆ ಹೋರಾಟ ನಡೆಸುತ್ತಿರುವ ಜಪಾನ್ ನ ನಿಹಾನ್ ಹಿಂಡಾಕ್ಯೊ ಸಂಸ್ಥೆಗೆ ನೋಬೆಲ್ ಶಾಂತಿ ಪ್ರಶಸ್ತಿ ಒಲಿದಿದೆ. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಪರಮಾಣು ದಾಳಿಯಿಂದ ಸಂತ್ರಸ್ತರ ನೆರವಿಗೆ ತಳಮಟ್ಟದಲ್ಲಿ ಶ್ರಮ ವಹಿಸುತ್ತಿರುವ ನಿಹಾನ್ ಹಿಂಡಾಕ್ಯೊ ಸಂಸ್ಥೆ ಹಿಬಾಶುಕಾ ಎಂದೇ ಖ್ಯಾತಿ ಪಡೆದಿದೆ. ಪರಮಾಣುವಿನಿಂದ ಆಗುವ ಹಾನಿಗಳ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಿ ಅವುಗಳ ಮೂಲಕ ನಿಹಾನ್ ಹಿಂಡಾಕ್ಯೊ ಪರಮಾಣು ಮುಕ್ತ ಜಗತ್ತಿಗಾಗಿ ಹೋರಾಟ ನಡೆಸುತ್ತಾ ಬಂದಿದೆ.

ಬೆಂಗಳೂರಿನ ಪಿಜಿಗಳಿಗೆ 10 ನಿಯಮಗಳ ಮಾರ್ಗಸೂಚಿ ಪ್ರಕಟ

ಬೆಂಗಳೂರಿನ ಮಹಾನಗರ ಪಾಲಿಕೆಯ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ಬೆಂಗಳೂರು ಬೃಹತ್ ನಗಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ಪಿಜಿಗಳಿಗೆ ಭೇಟಿ ನೀಡಿ ಪಾಲಿಕೆ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. 2193 ಅಧಿಕೃತ ಪಿಜಿ: ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2193 ಅಧಿಕೃತ ಪಿ.ಜಿ.ಗಳಿರುತ್ತದೆ. ಇದರಲ್ಲಿ 1578 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ … Read more

ಮಾದ್ಯಮಗಳಿಗೆ ವಿಧಾನಸೌಧಕ್ಕೆ ನೋ ಎಂಟ್ರಿ..? ಮಂತ್ರಿಮಹೋದಯರ ಭದ್ರತೆಗೆ ಧಕ್ಕೆಯಾಗುವ ನೆವ..?!ಎಸಿಪಿ ಯಿಂದ ಆಡಳಿತ ಸುಧಾರಣಾ ಇಲಾಖೆಗೆ ಪತ್ರ..?!

ಕರೆದಾಗ ಬರಬೇಕಂತೆ…ಹೇಳಿದ್ದಲ್ಲಿ ಬೈಟ್ ತಗೋಬೇಕಂತೆ..ಹಿಂದೆಮುಂದೆ ಅಡ್ಡಾಡುವಂತಿಲ್ವಂತೆ..ಹೇಳಿದಷ್ಟನ್ನೇ ಕೇಳ್ಕೊಂಡು ಹೋಗ್ಬೇಕಂತೆ..ಏನಿದು ಇದೆಲ್ಲಾ..?! ಬೆಂಗಳೂರು: ಕುಣಿಯಲಿಕ್ಕಾಗದವಳು ನೆಲ ಡೊಂಕು ಎಂದಳಂತೆ ಎನ್ನುವಂತಾಗಿದೆ ರಾಜ್ಯ ಸರ್ಕಾರದ ಧೋರಣೆ. ತನ್ನಲ್ಲಿರುವ ಹುಳುಕುಗಳನ್ನು ಸರಿ ಮಾಡಲು ಸಾಧ್ಯವಾಗದೆ ಮಾದ್ಯಮಗಳ ಮೇಲೆ ನಿರ್ಬಂದ-ನಿಯಂತ್ರಣ ಹೇರೊಕ್ಕೆ ಮುಂದಾಗಿದೆ ಎನ್ನಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುವ ರೀತಿಯಲ್ಲಿ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಮಾದ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.ಮಾದ್ಯಮಗಳಿಂದ ಮಂತ್ರಿ ಮಹೋದಯರ ಸುರಕ್ಷತೆ-ಭದ್ರತೆಗೆ ಧಕ್ಕೆ ಆಗುತ್ತಿದೆ. ಸಚಿವಾಲಯದ ಕೆಲಸ ಕಾರ್ಯಗಳಿಗೆ ತೀವ್ರತರದ ತೊಂದರೆ ಆಗುತ್ತಿದೆ ಎನ್ನುವ … Read more