advertise here

Search

ಕನ್ನಡ ಕ್ರೈಸ್ತ ಸಾಹಿತ್ಯದ ಗಾನಕೋಗಿಲೆ, ಫಾದರ್‌ ಫೆಲಿಕ್ಸ್‌ ನರೊನ್ಹಾ “ಕ್ರಿಸ್ತೈಕ್ಯ”


ಶಿವಮೊಗ್ಗ: ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕೆ ಅತ್ಯದ್ಭುತ ಕೊಡುಗೆ ನೀಡಿದ್ದ ಕನ್ನಡ ಕ್ರೈಸ್ತ ಸಾಹಿತ್ಯಕ್ಕೆ ತಮ್ಮ ಸಂಗೀತ ಮತ್ತು ಗಾಯನದ ಮೂಲಕ ಜೀವ ತುಂಬಿ ಅನೇಕ ದಶಕಗಳವರೆಗೂ ನಾಭೂತೋ ನಾ ಭವಿಷ್ಯತಿ ಎನ್ನುವಂತೆ ರಾರಾಜಿಸಿದ್ದ ಗುರುಶ್ರೇಷ್ಟ ಫಾದರ್‌ ಫೆಲಿಕ್ಸ್‌ ನರೊನ್ಹಾ(76) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಅವರು ದೇಹ ತ್ಯಜಿಸಿದ್ದಾರೆ ಎಂದು ಶಿವಮೊಗ್ಗ ಧರ್ಮಕ್ಷೇತ್ರದ ಮೂಲಗಳು ಅಧೀಕೃತವಾಗಿ ದೃಢಪಡಿಸಿವೆ.

ಏಸುಕ್ರಿಸ್ತರ ಪುನರುತ್ಥಾನದ ಪ್ರತೀಕವಾದ ಪವಿತ್ರ ಈಸ್ಟರ್ ದಿನವೇ ಅವರು ಶಾಶ್ವತವಾಗಿ ಇಹಲೋಕ ವನ್ನು ತ್ಯಜಿಸಿದ್ದಾರೆ.ಬೆಂಗಳೂರಿನ ಸೆಂಟ್‌ ಜಾನ್ಸ್‌ ಆಸ್ಪತ್ರೆಯ  ತೀವ್ರ ನಿಗಾಘಟಕದಲ್ಲಿ ಫೆಲಿಕ್ಸ್‌ ನರೊನ್ಹಾ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ( 05-04-2026) ರಂದು ಕೊನೆಯುಸಿ ರೆಳೆದಿ ದ್ದಾರೆ ಎಂದು ಶಿವಮೊಗ್ಗ ಧರ್ಮಕ್ಷೇತ್ರದ ಪ್ರಕಟಣೆ ತಿಳಿಸಿದೆ.ಶಿವಮೊಗ್ಗ ಧರ್ಮಕ್ಷೇತ್ರದ ಗುರುಶ್ರೇಷ್ಟ ರಾಗಿದ್ದ( ಮೊನ್ಸಿಗ್ನರ್)‌ ಫಾದರ್‌ ಫೆಲಿಕ್ಸ್‌ ನರೊನ್ಹಾ ಅವರು ವಯೋಸಹಜ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು.ತಿಂಗಳ ಹಿಂದೆ ಅವರನ್ನು ಸೆಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು.ಕೃತಕ ವೆಂಟಿಲೇಟರ್‌ ನಲ್ಲಿದ್ದ ಅವರು ಇಂದು ಬೆಳಗ್ಗೆ ನಿಧನರಾದರು ಎನ್ನುವುದನ್ನು ಆಸ್ಪತ್ರೆ ಮೂಲಗಳು ದೃಢೀಕರಿಸಿವೆ.

04-03-1950 ರಂದು ಜನಿಸಿದ್ದ ಫೆಲಿಕ್ಸ್‌ ನರೊನ್ಹಾ ಬಾಲ್ಯದಲ್ಲೇ  ಧಾರ್ಮಿಕವಾಗಿ ಕ್ರಿಸ್ತನ ಪ್ರಭಾವಕ್ಕೆ ಒಳಗಾಗಿದ್ದರು.ಅತ್ಯದ್ಭುತ ಕಂಠವನ್ನು ಹೊಂದಿದ್ದರಿಂದ ಕೆಲವೊಂದು ಹಾಡುಗಳನ್ನು ತಾವೇ ರಚಿಸಿ ಅದಕ್ಕೆ ಸಂಗೀತ ಒದಗಿಸಿ ಹಾಡುತ್ತಿದ್ದರು.ಇದು ಅನೇಕರಿಗೆ ಇಷ್ಟವೂ ಆಗಿತ್ತು.ಮಗನಿಗಿದ್ದ ಧಾರ್ಮಿಕ ಆಕರ್ಷಣೆಯನ್ನು ಅರಿತ ಪೋಷಕರು ದೈವ ಕರೆಯ ನಿಮಿತ್ತ ಅವರನ್ನು ಸೆಮಿನರಿಗೆ ಕಳುಹಿಸಿಕೊಟ್ಟರು.ಸ್ವ ಇಚ್ಛೆಯಿಂದ ಸೆಮಿನರಿಗೆ ತೆರಳಿದ ಅವರು ವ್ಯಾಸಂಗದ ಜತೆಗೆ ಕ್ರೈಸ್ತ ಧಾರ್ಮಿಕ ಸಾಹಿತ್ಯ, ಹಾಡುಗಾರಿ ಕೆ, ಸಂಗೀತ ಸಂಯೋಜನೆಯನ್ನು ಜತೆ ಜತೆಯಾಗಿ ಸಂಭಾಳಿಸಿಕೊಂಡು ಹೋದರು. ಅವರಲ್ಲಿದ್ದ ಆಸಕ್ತಿ ಯನ್ನು ಗುರುತಿಸಿದ ಹಿರಿಯ ಧರ್ಮಗುರುಗಳು ಆಸಕ್ತಿಗೆ ನೀರೆರೆದರು.ಇದರ ಪರಿಣಾಮವಾಗಿ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕೆ ಒಂದು ಆಸ್ತಿ ದೊರೆತಂತಾಯಿತು.ಅದನ್ನೇ  ಮುಂದುವರೆಸಿಕೊಂಡು ಹೋದ ಫೆಲಿಕ್ಸ್‌ ನರೊ ನ್ಹಾ ದೀಕ್ಷೆ ಪಡೆಯುವ ಮುನ್ನವೇ ನೂರಾರು ಹಾಡುಗಳನ್ನು ರಚಿಸಿ, ಅದಕ್ಕೆ ಸಂಗೀತ ನೀಡಿದರು. ಹತ್ತಾ ರು ದ್ವನಿಸುರುಳಿ ಹೊರತಂದಿದ್ದರು.ಅವು ಅವರಿಗೆ  ರಾತ್ರೋರಾತ್ರಿ  ಅವರಿಗೆ ಜನಪ್ರಿಯತೆ ತಂದುಕೊಟ್ಟವು . 04-09-1974 ರಂದು ಗುರುದೀಕ್ಷೆ ಪಡೆದರು.ಅಲ್ಲಿಂದ ಅವರ ಮತ್ತೊಂದು ಪಯಣ ಪ್ರಾರಂಭವಾಯಿತು.

ALSO READ :  ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

ಅನೇಕ ಧರ್ಮಕ್ಷೇತ್ರಗಳಲ್ಲಿ ಕೆಲಸ ಮಾಡಿದ ಫೆಲಿಕ್ಸ್‌ ನರೊನ್ಹಾ ಒಬ್ಬ ಗುರುವಾಗಿ ತಮ್ಮನ್ನು ಗುರುತಿಸಿ ಕೊಂಡಿದ್ದಕ್ಕಿಂತ  ಹೆಚ್ಚಾಗಿ  ಒಬ್ಬ ಅತ್ಯದ್ಭುತ ಹಾಡುಗಾರರಾಗಿ, ಸಾಹಿತ್ಯಕಾರರರಾಗಿ,ಸಂಯೋಜಕಾರಿ ಕೆಲಸ ಮಾಡಿದ್ದೇ ಹೆಚ್ಚು.ಅವರ ಕಂಠಸಿರಿಯಲ್ಲಿ ಮೂಡಿಬಂದ ನೂರಾರು ಹಾಡುಗಳು ಇವತ್ತಿಗೂ  ಚರ್ಚ್‌ ಗಳಲ್ಲಿ ಪ್ರತಿನಿತ್ಯ ಸುಪ್ರಭಾತದಂತೆ ಮೊಳಗುತ್ತವೆ.ಅವರ ಕಂಠಸಿರಿಯ ಮೋಡಿಗೆ ಒಳಗಾಗದವರೇ ಇರಲಿಲ್ಲವೇನೋ..ಅಂಥ ಅತ್ಯದ್ಭುತವಾದ ಕಂಠವನ್ನು ಅವರು ಹೊಂದಿದ್ದರು.ಚಿತ್ರಸಾಹಿತಿ ಆರ್.ಎನ್‌ ಗೋಪಾಲ್‌, ಗಾಯಕರಾದ ವಾಣಿಜಯರಾಂ ಸೇರಿದಂತೆ ಅನೇಕ ದಿಗ್ಗಜರುಗಳ ಸೇರಿ ಅವರು ರಚಿಸಿ,ರೂಪಿಸಿ,ಸಂಯೋಜನೆ ಮಾಡಿದ ಹಾಡುಗಳು ಎಲ್ಲಾ ಕಾಲಕ್ಕೂ ಎಲ್ಲರನ್ನು ಕೇಳಿಸಿಕೊಂಡು ಹೋಗುತ್ತವೆ.ಕನ್ನಡ ಕ್ರೈಸ್ತ ಹಾಡುಗಳ ಕ್ಷೇತ್ರದಲ್ಲಿ ಅವರಷ್ಟು ಹೆಸರು ಮಾಡಿದ ಧರ್ಮಗುರು ಇನ್ನೊಬ್ಬರಿಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ.ಅವರ ನಿಧನದಿಂದ ಅತೀದೊಡ್ಡ ನಷ್ಟ ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯಕ್ಕಾಗಿದೆ ಎಂದರೂ ಅತಿಶಯವಿಲ್ಲ.

ಫಾದರ್‌ ಫೆಲಿಕ್ಸ್‌ ನರೊನ್ಹಾ ಅವರ ನಿಧನಕ್ಕೆ ಬೆಂಗಳೂರು ಮಹಾಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪೀಟರ್‌ ಮಚಾದೋ ಕಂಬನಿ ಮಿಡಿದಿದ್ದಾರೆ.ಇತಿಹಾಸದಲ್ಲಿ ಮತ್ತೊಬ್ಬ ಇಂಥ ಅತ್ಯದ್ಭುತ ಧರ್ಮಗುರುವನ್ನು ನೋಡಲಿಕ್ಕೆ ಸಾಧ್ಯವೇ ಇಲ್ಲ ಎಂದು ಬಣ್ಣಿಸಿದ್ದಾರೆ. ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತಿ ವಂದನೀಯ ಡುಮಿಂಗ್‌ ಡಯಾಸ್‌ ಕೂಡ ಅವರ ಹಾಡುಗಳ ಮೋಡಿಗೆ ಒಳಗಾಗದವರೇ ಇರಲಿಲ್ಲ ಎಂದು ಶ್ಲಾಘಿಸಿದ್ದಾರೆ.ಫೆಲಿಕ್ಸ್‌ ಅವರ ಜತೆ ಕೆಲಸ ಮಾಡಿ ಅವರಂತೆಯೇ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಮೊಗ್ಗ ಧರ್ಮಕ್ಷೇತ್ರದ ಗುರುಶ್ರೇಷ್ಟ ಫಾದರ್‌ ಸ್ಟ್ಯಾನಿ ಡಿಸೋಜಾ ಕೂಡ ಕಂಬನಿ ಮಿಡಿದಿದ್ದಾರೆ.

ಕನ್ನಡ ಕ್ರೈಸ್ತ ಧಾರ್ಮಿಕ ಸಾಹಿತ್ಯ ಅದರಲ್ಲೂ ಧ್ವನಿ ಸುರುಳಿಗಳ ವಿಷಯದಲ್ಲಿ ತಮ್ಮ ಅಗಾಧ ಪರಿಶ್ರಮದಿಂದ ರಾಜ್ಯಾದ್ಯಂತ ಹೆಸರು ಮಾಡಿದ ಫಾದರ್‌ ಫೆಲಿಕ್ಸ ನರೊನ್ಹಾ ಅವರ ಸಾವಿನಿಂದ ನಿಜಕ್ಕೂ ದೊಡ್ಡ ನಷ್ಟ ಉಂಟಾಗಿದೆ.ಆ ಕೊರತೆಯನ್ನು ನೀಗಿಸಬಲ್ಲ ಮತ್ತೊಬ್ಬ ಧರ್ಮಗುರು ಹುಟ್ಟಿಬರುವುದು ಸಧ್ಯಕ್ಕಂತೂ ಕಷ್ಟ.ಅವರ ಸಾವಿಗೆ ಸದ್ಗತಿ ದೊರೆಯಲಿ ಎಂದು ಫೆಲಿಕ್ಸ್‌ ನರೊನ್ಹಾ ಅವರ ಹಾಡುಗಳನ್ನು ದಶಕಗಳಿಂದಲೂ ಕೇಳಿಸಿಕೊಂಡು ಬಂದಿದ್ದ ಲಕ್ಷಾಂತರ ಕ್ರೈಸ್ತ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.ಕನ್ನಡ ಫ್ಲ್ಯಾಶ್‌ ನ್ಯೂಸ್‌ ಕೂಡ ಫಾದರ್‌ ಫೆಲಿಕ್ಸ್‌ ನರೊನ್ಹಾ ಅವರ ಅಗಲಿಕೆಗೆ ಕಂಬನಿ ಮಿಡಿಯುತ್ತದೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top