advertise here

Search

ತುಮಕೂರಿನಲ್ಲಿ ಬಡಿದಾಡಿಕೊಂಡ ನ್ಯೂಸ್ ಚಾನೆಲ್ ರಿಪೋರ್ಟರ್ಸ್: FIR -ಅರೆಸ್ಟ್


ತುಮಕೂರು:ಸಾರ್ವಜನಿಕವಾಗಿ ಹೊಡೆದಾಡುವವರ ದೃಶ್ಯಗಳನ್ನು ಚಿತ್ರೀಕರಿಸಿ ಸುದ್ದಿ ಮಾಡುವ ವರದಿಗಾರರೇ  ಇವತ್ತು ಪರಸ್ಪರ ಹೊಡೆದಾಡಿಕೊಂಡು ಸುದ್ದಿಯಾಗಿದ್ದಾರೆ.ಈ ಒಂದು ಘಟನೆಗೆ ಸಾಕ್ಷಿಯಾಗಿರೋದುನ ಕಲ್ಪತರ ನಾಡು ತುಮಕೂರು.ಮಾದ್ಯಮ ಕ್ಷೇತ್ರದಲ್ಲಿ ಮುನ್ನಲೆಯಲ್ಲಿರುವ ಎರಡು ನ್ಯೂಸ್ ಚಾನೆಲ್ ಗಳ ವರದಿಗಾರರೇ ಸಾರ್ವಜನಿಕವಾಗಿ ಹೊಡೆದಾಡಿಕೊಂಡಿದ್ದಲ್ಲದೇ ಪರಸ್ಪರನ ಬೈಯ್ದಾಡಿಕೊಂಡಿದ್ದಾರೆನ್ನಲಾಗಿದೆ.ಪಬ್ಲಿಕ್ ಟಿವಿ ತುಮಕೂರು ವರದಿಗಾರ ಮಂಜುನಾಥ್ ವಿರುದ್ದ ಹಲ್ಲೆಗೊಳಗಾದರೆನ್ನಲಾದ ಝೀ ನ್ಯೂಸ್ ಜಿಲ್ಲಾ ವರದಿಗಾರ ಮಂಜುನಾಥ್ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.ಅವರ ದೂರಿನ ಮೇಲೆ  ಎಫ್ ಐಆರ್ ದಾಖಲಿಸಲಾಗಿದ್ದು ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್  ರನ್ನು ಅರೆಸ್ಟ್ ಮಾಡಲಾಗಿದೆಯಂತೆ.ಅಂದ್ಹಾಗೆ ಎಫ್ ಐ ಆರ್ ಪ್ರತಿ ಕನ್ನಡ ಪ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.

ಯಾಕೆ ಗಲಾಟೆಯಾಯ್ತು..?,ಮಾದ್ಯಮ ಮಿತ್ರರಿಬ್ಬರು ಹೊಡೆದಾಡಿಕೊಂಡಿದ್ದೇಕೆ..? ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಜಾತಿನಿಂದನೆಗೆ ತಲುಪಿ ಬಂಧನದಲ್ಲಿ ಕೊನೆಯಾಗಿದೆ. ಎಲ್ಲೆಡೆ ಇರುವಂತೆ ಎಲೆಕ್ಟ್ರಾನಿಕ್ ಮೀಡಿಯಾದ ಸ್ನೇಹಿತರೆಲ್ಲಾ ಸೇರಿಕೊಂಡು ತಮ್ಮದೇ ಪ್ರಾತಿನಿಧಿಕವಾದ ತುಮಕೂರು ಎಲೆಕ್ಟ್ರಾನಿಕ್ ಮೀಡಿಯಾ ಅಸೋಸಿಯೇಷನ್ ಮಾಡಿಕೊಳ್ಳಲು ನಿರ್ದರಿಸಿ ಅದಕ್ಕೊಂದು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರಂತೆ. ಈ ಗ್ರೂಪ್ ನಲ್ಲಿ ಸದಸ್ಯರು ಸಂಘದ ಅಭಿವೃದ್ಧಿ ಹಾಗು ಕಾರ್ಯಚಟುವಟಿಕೆ ಬಗ್ಗೆ ಚರ್ಚೆ ನಡೆಸುತ್ತಿರುವುದರ ನಡುವೆಯೇ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ಝೀ ವಾಹಿನಿಯ ವರದಿಗಾರನಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆನ್ನಲಾಗಿದೆ.ಜಾತಿಯಲ್ಲಿ ದಲಿತನಾಗಿರುವ ಝೀ ಟಿವಿಯ ಮಂಜುನಾಥ್ ಅವರ ಜಾತಿಯನ್ನು ಉಲ್ಲೇಖಿಸಿ ಲಘುವಾಗಿ ಮಾತನಾಡಿದ್ದಾನಂತೆ.ಗ್ರೂಪ್ ನಲ್ಲಿರುವ ಸದಸ್ಯರು ಬುದ್ದಿ ಹೇಳುವ ಕೆಲಸ  ಮಾಡಿದ್ರೂ ಪಬ್ಲಿಕ್ ಟಿವಿ ರಿಪೋರ್ಟರ್ ತನ್ನ ವರ್ತನೆಯನ್ನು ನಿಲ್ಲಿಸದೆ ನಿರಂತರವಾಗಿ ಮಂಜುನಾಥ್ ನನ್ನು ಮೂದಲಿಸಿದ್ದಾನಂತೆ.

ಇದರ ಮುಂದುವರೆದ ಭಾಗವಾಗಿ 21-05-2025 ರಂದು ಸಚಿವ ಪರಮೇಶ್ವರ್ ಅವರ  ಸಿದ್ದಾರ್ಥ  ಎಂಜಿನಿಯರಿಂಗ್ ಕಾಲೇಜ್ ಮೇಲೆ ಇಡಿ ಮೇಲೆ ದಾಳಿ ನಡೆದ ವೇಳೆ ಕವರೇಜ್ ಗಂತ ಎಲ್ಲರೂ ಹೋಗಿದ್ರಂತೆ.ಆ ವೇಳೆ ಅವರಿಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ಶುರುವಾಗಿದೆ.ಎಲ್ಲಾ ಮಾದ್ಯಮದವರ ಮುಂದೆಯೇ ಅತ್ಯಂತ ಅಸಭ್ಯವಾಗಿ ಇಬ್ಬರು ನಡೆದುಕೊಂಡಿದ್ದಾರೆ.ಆದರೆ ಒಂದು ಹೆಜ್ಜೆ ಮುಂದಕ್ಕೆ ಹೋದ ಪಬ್ಲಿಕ್ ಟಿವಿ ರಿಪೋರ್ಟರ್ ಮಂಜುನಾಥ್ ಝೀ ಟಿವಿ ರಿಪೋರ್ಟರ್ ನ್ನು ಜಾತಿ ಹಿಡಿದು ನಿಂದಿಸಿದ್ದಾರೆ.ಇದಕ್ಕೆ ಕೌಂಟರ್ ಕೊಟ್ಟಾಗ ತನ್ನ ಕೈಲಿದ್ದ ಲೋಗೋದಿಂದಲೇ ಹಲ್ಲೆ ನಡೆಸಿದ್ದಾನಂತೆ. ಇದರಿಂದ ನೊಂದಂಥ ಝೀ ಟಿವಿ ರಿಪೋರ್ಟರ್ ಮಂಜುನಾಥ್ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪಬ್ಲಿಕ್ ಟಿವಿ ರಿಪೋರ್ಟರ್ ವಿರುದ್ದ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ

ALSO READ :  ಸುವರ್ಣ ನ್ಯೂಸ್ ನಿಂದ ಹೊರನಡೆದ ಅಕ್ಷರಮಾಂತ್ರಿಕ ಮಹೇಶ್ ದೇವಶೆಟ್ಟಿ

ಹಲ್ಲೆ ಹಾಗು ಜಾತಿನಿಂದನೆ ಆಪಾದನೆ ಮೇಲೆ ಮಂಜುನಾಥ್ ತಾಳಮಕ್ಕಿ ವಿರುದ್ದ ಬಿಎನ್ ಎಸ್ 2003ರ ಸೆಕ್ಷನ್ 352,351(1),118(2), ಹಾಗೂ ಪ್ರಿವೆನ್ಷನ್ ಆಫ್ ಅಟ್ರಾಸಿಟಿ ಅಮೆಂಡ್ಮೆಂಟ್  ಆಕ್ಟ್ 2015 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಎಫ್ ಐಆರ್ ದಾಖಲಾದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಅವರ ಮನೆಯ ಬಳಿಯೇ ಅವರನ್ನು ಬಂಧಿಸಿದ್ದಾರಂತೆ.

ಮಂಜುನಾಥ್ ತಾಳಮಕ್ಕಿ ಒಳ್ಳೆಯ ಕೆಲಸಗಾರ ಎನ್ನುವುದರಲ್ಲಿ ಅನುಮಾನವಿಲ್ಲ.ಆದರೆ ಒಳ್ಳೆಯ ಕೆಲಸಗಾರನಿಗೆ ಒಳ್ಳೆಯ ಸಂಸ್ಕಾರ-ಸಂಸ್ಕ್ರತಿ ಇರಬೇಕಾಗುತ್ತದೆ. ಪತ್ರಿಕೋದ್ಯಮ ವೃತ್ತಿ ಎನ್ನುವುದು ಎಲ್ಲಾ ಜಾತಿಗಳನ್ನು ಮೀರಿನಿಂತ ವಿಶ್ವಮಾನವತ್ವ ಒಳಗೊಂಡಿರುತ್ತದೆ.ಎಲ್ಲೆಡೆ ಇರುವಂತೆ ಪತ್ರಿಕೋದ್ಯಮದಲ್ಲಿಯೂ ಜಾತಿಯ ಹೊಲಸು ರೊಚ್ಚೆಯಂತೆ ನಾರುತ್ತದೆ.ಆದರೆ ಅದೆಲ್ಲಾ ಆಂತರಿಕವಾದ ವಿಚಾರಗಳು.ಪತ್ರಕರ್ತರು ಅದನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕಾಗುತ್ತದೆ.ಅದನ್ನು ಬಿಟ್ಟು ಸಾರ್ವಜನಿಕವಾಗಿ ಜಾತಿಯನ್ನು ಮುಂದಿಟ್ಟುಕೊಂಡು ಅಪಮಾನ ಮಾಡುವುದನ್ನು ಯಾರೊಬ್ಬರೂ ಸಹಿಸಿಕೊಳ್ಳುವಂತದ್ದಲ್ಲ.

ಮಂಜುನಾಥ್ ತಾಳಮಕ್ಕಿ  ಮೇಲೆ ಮೇಲ್ವರ್ಗದ ವ್ಯಕ್ತಿ ಎಂದು ತನ್ನನ್ನು ಪದೇ ಪದೇ ಸಾರ್ವಜನಿಕವಾಗಿ ಬಿಂಬಿಸಿಕೊಳ್ಳುತ್ತಿದ್ದರು ಎನ್ನುವ ಆಪಾದನೆಯಿದೆ.ಬಿಂಬಿಸಿಕೊಳ್ಳಲಿ ಖಂಡಿತಾ ಬೇಸರವಿಲ್ಲ..ಹಾಗೆಂದು ತಾನು ದೊಡ್ಡ ಜಾತಿಯವನೆನ್ನುವ ಕಾರಣಕ್ಕೆ ನಿಮ್ನ ಹಾಗು ತಳ ಸಮುದಾಯಗಳನ್ನು ತುಚ್ಛವಾಗಿ ನಡೆಸಿಕೊಳ್ಳುವುದು,ವರ್ತಿಸುವುದು ಎಷ್ಟರ ಮಟ್ಟಿಗೆ ಸರಿ..ಹಾಗಾಗಿ ಈ ಘಟನೆಯನ್ನು ತುಮಕೂರು ಪತ್ರಿಕಾರಂಗ ಮಾತ್ರವಲ್ಲ ಇಡೀ ರಾಜ್ಯದ ಪತ್ರಿಕಾರಂಗವೇ ಉಗ್ರವಾಗಿ ಖಂಡಿಸಿದೆ.


Political News

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

BBMP ಯುಗಾಂತ್ಯ-ಗ್ರೇಟರ್ ಬೆಂಗಳೂರು ಯುಗಾರಂಭ..GBA ಗೆ ತುಷಾರ ಗಿರಿನಾಥ್ ಬಾಸ್…!

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

Scroll to Top