advertise here

Search

ಬೆಂಗಳೂರಿನ ಪಿಜಿಗಳಿಗೆ 10 ನಿಯಮಗಳ ಮಾರ್ಗಸೂಚಿ ಪ್ರಕಟ

ಬೆಂಗಳೂರಿನ ಮಹಾನಗರ ಪಾಲಿಕೆಯ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ಬೆಂಗಳೂರು ಬೃಹತ್ ನಗಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ಪಿಜಿಗಳಿಗೆ ಭೇಟಿ ನೀಡಿ ಪಾಲಿಕೆ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. 2193 ಅಧಿಕೃತ ಪಿಜಿ: ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 2193 ಅಧಿಕೃತ ಪಿ.ಜಿ.ಗಳಿರುತ್ತದೆ. ಇದರಲ್ಲಿ 1578 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ … Read more

ಮಾದ್ಯಮಗಳಿಗೆ ವಿಧಾನಸೌಧಕ್ಕೆ ನೋ ಎಂಟ್ರಿ..? ಮಂತ್ರಿಮಹೋದಯರ ಭದ್ರತೆಗೆ ಧಕ್ಕೆಯಾಗುವ ನೆವ..?!ಎಸಿಪಿ ಯಿಂದ ಆಡಳಿತ ಸುಧಾರಣಾ ಇಲಾಖೆಗೆ ಪತ್ರ..?!

ಕರೆದಾಗ ಬರಬೇಕಂತೆ…ಹೇಳಿದ್ದಲ್ಲಿ ಬೈಟ್ ತಗೋಬೇಕಂತೆ..ಹಿಂದೆಮುಂದೆ ಅಡ್ಡಾಡುವಂತಿಲ್ವಂತೆ..ಹೇಳಿದಷ್ಟನ್ನೇ ಕೇಳ್ಕೊಂಡು ಹೋಗ್ಬೇಕಂತೆ..ಏನಿದು ಇದೆಲ್ಲಾ..?! ಬೆಂಗಳೂರು: ಕುಣಿಯಲಿಕ್ಕಾಗದವಳು ನೆಲ ಡೊಂಕು ಎಂದಳಂತೆ ಎನ್ನುವಂತಾಗಿದೆ ರಾಜ್ಯ ಸರ್ಕಾರದ ಧೋರಣೆ. ತನ್ನಲ್ಲಿರುವ ಹುಳುಕುಗಳನ್ನು ಸರಿ ಮಾಡಲು ಸಾಧ್ಯವಾಗದೆ ಮಾದ್ಯಮಗಳ ಮೇಲೆ ನಿರ್ಬಂದ-ನಿಯಂತ್ರಣ ಹೇರೊಕ್ಕೆ ಮುಂದಾಗಿದೆ ಎನ್ನಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುವ ರೀತಿಯಲ್ಲಿ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಮಾದ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.ಮಾದ್ಯಮಗಳಿಂದ ಮಂತ್ರಿ ಮಹೋದಯರ ಸುರಕ್ಷತೆ-ಭದ್ರತೆಗೆ ಧಕ್ಕೆ ಆಗುತ್ತಿದೆ. ಸಚಿವಾಲಯದ ಕೆಲಸ ಕಾರ್ಯಗಳಿಗೆ ತೀವ್ರತರದ ತೊಂದರೆ ಆಗುತ್ತಿದೆ ಎನ್ನುವ … Read more

ನೌಕಾಪಡೆ ಬಲವರ್ಧನೆಗೆ 80,000 ಕೋಟಿ ರೂ. ವಿನಿಯೋಗಿಸಲು ಕೇಂದ್ರ ಅಸ್ತು

2 ಪರಮಾಣು ಸಾಮರ್ಥ್ಯದ ಸಬ್ ಮೇರಿನ್ ನಿರ್ಮಾಣ ಹಾಗೂ 31 ಪ್ರೀಡಿಯೇಟರ್ ಡ್ರೋಣ್ ಗಳ ಖರೀದಿಗೆ 80 ಸಾವಿರ ಕೋಟಿ ರೂ. ವಿನಿಯೋಗಿಸಲು ಕೇಂದ್ರ ರಕ್ಷಣಾ ಸಮಿತಿ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತದ ನೌಕಾಪಡೆ ಬಲವರ್ಧನೆಗೆ ದೊಡ್ಡ ಮೊತ್ತವನ್ನು ವಿನಿಯೋಗಿಸಲು ತೀರ್ಮಾನಿಸಲಾಯಿತು. ಇದರಿಂದ ಭಾರತದ ಬಳಿ ಸಬ್ ಮೇರಿನ್ ಗಳ ಸಂಖ್ಯೆ 5ಕ್ಕೆ ಏರಿಕೆಯಾಗಲಿದೆ. ಸಮುದ್ರದಲ್ಲಿ ಭಾರತ ಗಡಿ ರಕ್ಷಣೆಗೆ ಒತ್ತು ನೀಡಲು ನಿರ್ಧರಿಸಲಾಗಿದ್ದು, … Read more

ಉದ್ಯಮ ಲೋಕದ ದಿಗ್ಗಜ ರತನ್ ಟಾಟಾಗೆ ಸರ್ಕಾರಿ ಗೌರವದೊಂಗೆ ಅಂತ್ಯಕ್ರಿಯೆ

ಖ್ಯಾತ ಉದ್ಯಮಿ ರತನ್ ಟಾಟಾ ಪಾರ್ಸಿ ಸಂಪ್ರದಾಯದಂತೆ ವಿಧಿ ವಿಧಾನದೊಂದಿಗೆ ಮುಂಬೈನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಹಾರಾಷ್ಟ್ರ ಸರ್ಕಾರ ಸರ್ಕಾರಿ ಗೌರವದೊಂದಿಗೆ ಉದ್ಯಮ ಲೋಕದ ದಿಗ್ಗಜನ್ನು ಬೀಳ್ಕೊಟ್ಟಿತು. ಕೆಲವು ದಿನಗಳ ಹಿಂದೆಯಷ್ಟೇ ರಕ್ತದೊತ್ತಡದ ಏರಿಳಿತದಿಂದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರತನ್ ಟಾಟಾ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದ ಕಾರಣ ಬುಧವಾರ ರಾತ್ರಿ ರತನ್ ಟಾಟಾ ನಿಧನರಾಗಿದ್ದರು. ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ 1991ರಲ್ಲಿ 100 ಶತಕೋಟಿ ರೂ. ಮೌಲ್ಯದ … Read more

ಕೋವಿಡ್ ಅಕ್ರಮ ತನಿಖೆಗೆ ಸಂಪುಟ ಉಪ ಸಮಿತಿ ರಚನೆಗೆ ಸಚಿವ ಸಂಪುಟ ತೀರ್ಮಾನ

ಕೋವಿಡ್ ಸಮಯದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸಲು ಸಂಪುಟ ಉಪ ಸಮಿತಿ ರಚಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಇದರಿಂದ ಬಿಜೆಪಿ ಸಂಸದ ಡಾ.ಕೆ. ಸುಧಾಕರ್ ಗೆ ಸಂಕಷ್ಟ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ವೈರಸ್ ಅಬ್ಬರದ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಅಕ್ರಮಗಳ ಕುರಿತು ತನಿಖೆಯನ್ನು ಸಂಪುಟ ಉಪ ಸಮಿತಿಗೆ ವಹಿಸಲು ತೀರ್ಮಾನಿಸಲಾಯಿತು. ಕೋವಿಡ್ ಕಾಲದಲ್ಲಿ ಪಿಪಿಟಿ ಕಿಟ್, ಎಸಿ, ಮಾಸ್ಕ್ ಸೇರಿದಂತೆ ಹಲವು ಅಕ್ರಮಗಳು ನಡೆದಿದ್ದು, … Read more

ಭೀಮಾ ನದಿಪಾಲಾದ ಬಟ್ಟೆ ತೊಳೆಯಲು ನದಿಗೆ ಇಳಿದಿದ್ದ ಇಬ್ಬರು ಬಾಲಕಿಯರು

ಬಟ್ಟೆ ಒಗೆಯಲು ನದಿಗೆ ಇಳಿದಿದ್ದ ಇಬ್ಬರು ಬಾಲಕಿಯರಿಬ್ಬರು ಭೀಮಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಕಲಬುರಗಿ ಜಿಲ್ಲೆಯ ಅಫ್ಝಲ್ ಪುರ ತಾಲೂಕಿನ ಬನ್ನಹಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ಬನ್ನಹಟ್ಟಿ ಗ್ರಾಮದ ಭೂಮಿಕಾ ದೊಡ್ಡಮನಿ (8) ಮತ್ತು ಚಿಂಚೊಳ್ಳಿ ಗ್ರಾಮದ ಶ್ರಾವಣಿ ನಾಟೀಕರ್ (11) ನೀರುಪಾಲಾಗಿದ್ದಾರೆ. ಬಟ್ಟೆ ಒಗೆಯಲು ತೆರಳಿದ್ದ ಬಾಲಕಿಯರಿಬ್ಬರು ನದಿಯಲ್ಲಿ ಈಜಾಡಲು ಮುಂದಾಗಿದ್ದಾರೆ. ಈ ವೇಳೆ ಭೂಮಿಕಾ ಆಕಸ್ಮಿಕವಾಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಆಕೆಯನ್ನು ರಕ್ಷಿಸಲು ಶ್ರಾವಣಿ ಕೂಡ ಮುಂದಾಗಿದ್ದಾಳೆ. ನೀರಿನ ಸೆಳೆತಕ್ಕೆ ಸಿಲುಕಿದ ಭೂಮಿಕಾ ಮತ್ತು … Read more

ನಕಲಿ ಭೂ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ 70 ಕೋಟಿ ರೂ. ವಂಚನೆ: 5 ಮಂದಿ ಅರೆಸ್ಟ್

ಸರ್ಕಾರದಿಂದ 70 ಕೋಟಿ ರೂ. ಪರಿಹಾರ ಮೊತ್ತ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಯತ್ನಿಸಿದ 5 ಮಂದಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಕೆಂಗೇರಿ ಸಮೀಪದ ಚಲ್ಲಘಟ್ಟದಲ್ಲಿ 6 ಎಕರೆ ಜಮೀನು ನಮ್ಮದು ಎಂದು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ 70 ಕೋಟಿ ರೂ. ಪರಿಹಾರ ಪಡೆಯಲು ಯತ್ನಿಸಿದ್ದ 5 ಮಂದಿಯನ್ನು ಬೆಂಗಳೂರಿನ ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಲಘಟ್ಟ ನಿವಾಸಿಗಳಾದ ಶ್ರೀನಿವಾಸ್, ನಾಗರಾಜ್, ರವಿಕುಮಾರ್, ಭರತ್ ಮತ್ತು ಸ್ವಾಮಿ ಬಂಧಿತರು. ನಾಗರಾಜ್ ಎಂಬಾತನನ್ನು ಪೊಲೀಸರು … Read more

ದಸರಾಗೂ ದರ್ಶನ್ ಬಿಡುಗಡೆ ಭಾಗ್ಯವಿಲ್ಲ: ಅಕ್ಟೋಬರ್ 14ಕ್ಕೆ ಜಾಮೀನು ತೀರ್ಪು

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅಂತ್ಯಗೊಂಡಿದ್ದು, ಅಕ್ಟೋಬರ್ 14ರಂದು ತೀರ್ಪು ಹೊರಬೀಳಲಿದೆ. 57ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ಜೈ ಶಂಕರ್ ವಿಚಾರಣೆಯನ್ನು ಅಂತ್ಯಗೊಳಿಸಿದ್ದು, ಅಕ್ಟೋಬರ್ 14ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ. ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಮತ್ತು ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ಗುರುವಾರವೂ ಸುದೀರ್ಘ ವಾದ ಪ್ರತಿವಾದ ನಡೆಸಿದ್ದು, ವಿಚಾರಣೆ ಅಂತ್ಯಗೊಂಡಿದೆ. ವಾದ-ಪ್ರತಿವಾದ ಸುದೀರ್ಘ ಸಮಯ ತೆಗೆದುಕೊಂಡಿದ್ದರಿಂದ ದಸರಾ ಮುಗಿಯುವ ಮುನ್ನ ಜಾಮೀನು … Read more

SAD DEMISE: ಕ್ರೈಂ ಪತ್ರಿಕೋದ್ಯಮದ “ಪದ-ಪಂಡಿತ” ಅಕ್ಷರಗಳಲ್ಲಿ ಲೀನ..

“ಕ್ರೈಂ ಬರಹಗಾರಿಕೆಗೊಂದು ಹೊಸ ಭಾಷ್ಯ ಬರೆದ ಅಕ್ಷರಗಾರುಡಿಗ-ಗಣೇಶ್  ಎನ್ನುವ ಗುರುಕುಲದಲ್ಲಿ ಬೆಳೆದ ಶಿಷ್ಯ ಕೋಟಿ ದೊಡ್ಡದು” “ಶತೃತ್ವ ಕಟ್ಟಿಕೊಳ್ಳದ ಅಜಾತಶತೃ-ಮಹಾನ್ ಹಾಸ್ಯಪ್ರಜ್ನೆಯ  ಜೀವನ್ಮುಖಿ-ಇನ್ನೊಬ್ಬರ ಸಮಸ್ಗೆಗೆ ಮಿಡಿಯುವ ಮಹಾನ್ ಮಾನವತಾವಾದಿ” ಬೆಂಗಳೂರು: ಕನ್ನಡ  ಕ್ರೈಂ ಪತ್ರಿಕೋದ್ಯಮದ ದೈತ್ಯಪ್ರತಿಭೆ ಶಾಶ್ವತಕ್ಕೂ ನೇಪಥ್ಯಕ್ಕೆ ಸರಿದಿದೆ. ಕ್ರೈಂ ವರದಿಗಾರಿಕೆಯ ಸಾಕ್ಷಿಪ್ರಜ್ನೆಯಂತಿದ್ದ ಗಣೇಶ್ ಅಕ್ಷರಗಳಲ್ಲಿ ಲೀನವಾಗಿದ್ದಾರೆ.ಬಹು ಅಂಗಾಗ ವೈಫಲ್ಯದಿಂದ ಇಂದು ಬೆಳಗ್ಗೆ ವಸಂತನಗರದ ಜೈನ್ ಆಸ್ಪತ್ರೆಯಲ್ಲಿ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.ಕೇವಲ 41ರ ವಯಸ್ಸಿನಲ್ಲೇ ಪತ್ರಿಕೋದ್ಯಮದ ಅಪಾರ ಹಿರಿ-ಕಿರಿಯ ಸ್ನೇಹಿತರನ್ನು ಗಣೇಶ್ ಅಗಲಿದ್ದಾರೆ.ಅವರ ನಿಧನಕ್ಕೆ ಕನ್ನಡ ಪತ್ರಿಕೋದ್ಯಮವೇ … Read more

ಮಹಿಳೆಯರಿಗೆ “ಶಕ್ತಿ” ಪ್ರಯಾಣ ಇನ್ನೂ ಅನಾಯಾಸ.. “ಆಧಾರ್” ಓರಿಜಿನಲ್ಲೇ ಬೇಕೆಂತಿಲ್ಲ… ಮೊಬೈಲ್‌ ನಲ್ಲಿ‌ ತೋರಿಸಿದ್ರೂ ಪರ್ವಾಗಿಲ್ಲ..

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನು ಮತ್ತಷ್ಟು ಸ್ಮಾರ್ಟ್..ಸರಳ..ಪರಿಣಾಮಕಾರಿ ಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಪ್ರಯಾಣ ಮಾಡೊಕ್ಕೆ ಮಹಿಳೆಯರು ಒರಿಜಿನಲ್‌ ಆದ ದಾಖಲೆಯನ್ನೇ ತೋರಿಸಬೇಕೆಂದು ಸಾರಿಗೆ ಸಿಬ್ಬಂದಿ ಹಠ ಮಾಡುತ್ತಿದ್ದಾರೆನ್ನುವ ವ್ಯಾಪಕ ದೂರುಗಳ ಹಿನ್ನಲೆಯಲ್ಲಿ ಇನ್ಮುಂದೆ ದಾಖಲೆಗಳು ಕೈಲಿದ್ದರೆ ಮಾತ್ರ ದಾಖಲೆಗಳಲ್ಲ, ಮೊಬೈಲ್‌ ನಲ್ಲಿದ್ದರೂ ಅವನ್ನು ಪರಿಗಣಿಸಬೇಕೆಂದು ಅಧೀಕೃತವಾಗಿ ಆದೇಶ ಹೊರಡಿಸಿದ್ದಾರೆ.ಇದು ಮಹಿಳಾ ಪ್ರಯಾಣಿಕರಿಗಷ್ಟೇ ಅಲ್ಲ, ಕಂಡಕ್ಟರ್ಸ್‌ ಗೂ ಅನುಕೂಲವಾಗಲಿದೆ. ಶಕ್ತಿ ಯೋಜನೆಯ ಸದುಪಯೋಗ ಎಲ್ಲರಿಗೂ ಸಿಗಬೇಕು.ಯೋಜನೆ ಫಲಾನುಭವಿಗಳಿಗೆ ಎಲ್ಲಿಯೂ ಅಸಮಾಧಾನ-ಅತೃಪ್ತಿ ಆಗಬಾರದು.ಸರ್ಕಾರದ ಬಗ್ಗೆ ಅಪಸ್ವರ … Read more