advertise here

Search

ಯಾದಗಿರಿ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್: ಡೊಂಗಿ ಸ್ವಾಮೀಜಿಗಳ ಕರಾಳ ಮುಖ!

mallikarjun mutya pocso case

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಭಕ್ತಿ ಮತ್ತು ನಂಬಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಒಂದೊಂದಾಗಿ ಹೊರಬರುತ್ತಿವೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ ಎಂಬುವವರ ವಿರುದ್ಧ ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೋಕ್ಸೋ (POCSO) ಪ್ರಕರಣ ದಾಖಲಾಗಿರುವುದು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ಹಿನ್ನೆಲೆ: ಏನಿದು ಘಟನೆ?

ಸಾಮಾಜಿಕ ಜಾಲತಾಣಗಳಲ್ಲಿ ಮಲ್ಲಿಕಾರ್ಜುನ ಮುತ್ಯಾ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ್ ಕೋಸಂಬೆ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ಇದರ ಬೆನ್ನಲ್ಲೇ ಶಹಾಪುರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (CDPO) ನೀಡಿದ ದೂರಿನ ಮೇರೆಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಮತ್ತು ಬಿಎನ್‌ಎಸ್ (BNS) ಕಾಯ್ದೆಗಳಡಿ ಕೇಸ್ ದಾಖಲಾಗಿದೆ. ಸದ್ಯ ಈ ‘ಸ್ವಾಮೀಜಿ’ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ನಂಬಿಕೆಯ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ

ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ಈತನಿಗೆ ಅಪಾರ ಭಕ್ತರಿದ್ದಾರೆ ಎನ್ನಲಾಗಿದೆ. ಜನಸಾಮಾನ್ಯರ ಮುಗ್ಧತೆ ಮತ್ತು ಕಷ್ಟಗಳನ್ನು ಬಂಡವಾಳ ಮಾಡಿಕೊಳ್ಳುವ ಇಂತಹ ವ್ಯಕ್ತಿಗಳು ‘ದೈವಾಂಶ ಸಂಭೂತರು’ ಎಂದು ಬಿಂಬಿಸಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ.

“ಕಲ್ಯಾಣ ಕರ್ನಾಟಕ ಶಿಕ್ಷಣ ಮತ್ತು ಅಭಿವೃದ್ಧಿಯಲ್ಲಿ ಹಿಂದೆ ಉಳಿಯಲು ಇಂತಹ ‘ಡೊಂಗಿ’ ಮುತ್ಯಾಗಳ ಪ್ರಭಾವವೂ ಒಂದು ಮುಖ್ಯ ಕಾರಣ.”

ಮಲ್ಲಿಕಾರ್ಜುನ ಮುತ್ಯಾ ಮಾತ್ರವಲ್ಲದೆ, ರಶೀದ್ ಮುತ್ಯಾ ರಂತಹ ಅನೇಕ ಪ್ರಭಾವಿ ವ್ಯಕ್ತಿಗಳು ಭಕ್ತಿಯ ಹೆಸರಿನಲ್ಲಿ ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ದುರಂತವೆಂದರೆ, ಇಂತಹ ವ್ಯಕ್ತಿಗಳಿಗೆ ರಾಜಕಾರಣಿಗಳ ಬೆಂಬಲವೂ ದೊರೆಯುತ್ತಿರುವುದು ಸಮಾಜಕ್ಕೆ ದೊಡ್ಡ ಹಿನ್ನಡೆಯಾಗಿದೆ.

ALSO READ :  ಪ್ರೆಸ್‌ ಕ್ಲಬ್-2023 ಪ್ರಶಸ್ತಿ ಪ್ರಕಟ: ಡಿಕೆ ಶಿವಕುಮಾರ್ "ವರ್ಷದ ವ್ಯಕ್ತಿ"-ಶಾಮನೂರು ಶಿವಶಂಕರಪ್ಪಗೆ  "ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿ"-ಕಾರ್ಮಿಕ ಸಚಿವ  ಸಂತೊಷ್ ಲಾಡ್ ,ಡಾ. ಕೆ. ಗೋವಿಂದರಾಜುಗೆ "ಪ್ರೆಸ್‌ಕ್ಲಬ್ ಪ್ರಶಸ್ತಿ"

ಯುವಜನತೆ ಎಚ್ಚೆತ್ತುಕೊಳ್ಳಬೇಕಾದ ಕ್ಷಣ

ಬಸವಣ್ಣನವರು “ಕಾಯಕವೇ ಕೈಲಾಸ” ಎಂದು ಸಾರಿದ ಭೂಮಿ ಇದು. ಮೂಢನಂಬಿಕೆಗಳನ್ನು ತೊಡೆದುಹಾಕಿ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕಾದ ಕಲ್ಯಾಣ ಕರ್ನಾಟಕದಲ್ಲಿ ಇಂದು ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. 

ಎಲ್ಲೋ ಇರುವ ಡೊಂಗಿ ಬಾಬಾಗಳನ್ನು ನಂಬುವ ಬದಲು, ಜನ್ಮ ನೀಡಿ ಸಲಹುವ ತಂದೆ-ತಾಯಿಯನ್ನು ಗೌರವಿಸುವುದು ನಿಜವಾದ ಭಕ್ತಿ. ಕಷ್ಟಗಳು ಬಂದಾಗ ದೈವ ಮಾನವರ ಮೊರೆ ಹೋಗುವ ಬದಲು, ಪರಿಶ್ರಮ ಮತ್ತು ಶಿಕ್ಷಣದ ಮೂಲಕ ಪರಿಹಾರ ಕಂಡುಕೊಳ್ಳಬೇಕು. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಇಂತಹ ವ್ಯಕ್ತಿಗಳನ್ನು ಪೋಷಿಸಬಹುದು. ಆದರೆ ನಾಗರಿಕರಾಗಿ ನಮಗೆ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆ ಇರಬೇಕು.

ಇದನ್ನೂ ಓದಿ | NCERT ಪಠ್ಯ ವಿವಾದ: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಬೇಷರತ್ ಕ್ಷಮೆ

ನಮಗೆ ಕಷ್ಟ ಬಂದಾಗ ನಮ್ಮ ಬೆನ್ನಿಗೆ ನಿಲ್ಲುವುದು ನಮ್ಮ ಕುಟುಂಬ ಮತ್ತು ನಮ್ಮ ಧೈರ್ಯವೇ ಹೊರತು, ಇಂತಹ ಆರೋಪ ಹೊತ್ತಿರುವ ವ್ಯಕ್ತಿಗಳಲ್ಲ. ಬಸವಣ್ಣನವರ ತತ್ವದಡಿ ಬೆಳೆದ ನಾವು, ಇನ್ನು ಮುಂದಾದರೂ ಇಂತಹ ಶೋಷಣೆಯ ವಿರುದ್ಧ ಧ್ವನಿ ಎತ್ತಬೇಕಿದೆ. ರಾಜಕಾರಣಿಗಳ ಮತ್ತು ಡೊಂಗಿ ಮುತ್ಯಾಗಳ ‘ಬಕೆಟ್’ ಹಿಡಿಯುವ ಸಂಸ್ಕೃತಿಯಿಂದ ಹೊರಬಂದು, ಸ್ವಾಭಿಮಾನಿ ಜೀವನ ನಡೆಸಬೇಕಿದೆ.

ಇದು ಕೇವಲ ಒಬ್ಬ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಹೋರಾಟವಲ್ಲ; ಇದು ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ ಮತ್ತು ಶೋಷಣೆಯ ವಿರುದ್ಧದ ಹೋರಾಟವಾಗಬೇಕಿದೆ. 


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top