advertise here

Search

ಆರ್‌ಸಿಬಿ ಈಗ ಬಿರ್ಲಾ ಪಾಲು! 16,706 ಕೋಟಿಗೆ ಮಾರಾಟವಾದ ತಂಡ: ‘ರಾಯಲ್’ ಹೆಸರು ಬದಲಾಗುವುದು ಪಕ್ಕಾ?

aditya birla group buys

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಹಿವಾಟಿಗೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವದಂತಿರುವ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (RCB) ತಂಡ ಈಗ ಹೊಸ ಮಾಲೀಕರ ತೆಕ್ಕೆಗೆ ಜಾರಿದೆ. ಸುಮಾರು 16,706 ಕೋಟಿ ರೂಪಾಯಿ ಬೃಹತ್ ಮೊತ್ತಕ್ಕೆ ಆದಿತ್ಯ ಬಿರ್ಲಾ ಸಮೂಹ (Aditya Birla Group) ಈ ತಂಡವನ್ನು ಖರೀದಿಸಿದೆ.

ಮದ್ಯದ ಬ್ರ್ಯಾಂಡ್ ಹೆಸರಿಗಾಗಿ ಹುಟ್ಟಿದ್ದ ‘ಆರ್‌ಸಿಬಿ’

2008ರಲ್ಲಿ ಐಪಿಎಲ್ ಆರಂಭವಾದಾಗ ವಿಜಯ್ ಮಲ್ಯ ಅವರು ಈ ತಂಡವನ್ನು ಖರೀದಿಸಿದ್ದರು. ಆಗ ಅವರು ತಂಡಕ್ಕೆ ‘ರಾಯಲ್ ಚಾಲೆಂಜರ್ಸ್’ ಎಂದು ಹೆಸರಿಟ್ಟಿದ್ದರ ಹಿಂದೆ ಒಂದು ವ್ಯಾಪಾರೀ ರಹಸ್ಯವಿತ್ತು. ಅವರ ಮಾಲೀಕತ್ವದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನ (USL) ಪ್ರಸಿದ್ಧ ವಿಸ್ಕಿ ಬ್ರ್ಯಾಂಡ್ ‘ರಾಯಲ್ ಚಾಲೆಂಜ್’ (Royal Challenge) ಅನ್ನು ಪ್ರಚಾರ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು. ನೇರ ಮದ್ಯದ ಜಾಹೀರಾತು ನಿಷೇಧವಿರುವ ಕಾರಣ, ಕ್ರಿಕೆಟ್ ತಂಡದ ಮೂಲಕ ಬ್ರ್ಯಾಂಡ್ ಹೆಸರನ್ನು ಜನರ ಮನಸ್ಸಿಗೆ ತಲುಪಿಸುವ ತಂತ್ರ ಇದಾಗಿತ್ತು.

ಈಗ ಹೆಸರು ಬದಲಾವಣೆ ಅನಿವಾರ್ಯವೇ?

ಈಗ ತಂಡದ ಒಡೆತನವು ಆದಿತ್ಯ ಬಿರ್ಲಾ ಸಮೂಹಕ್ಕೆ ಹಸ್ತಾಂತರವಾಗಿದೆ. ಈ ವಹಿವಾಟಿನಲ್ಲಿ ಟೈಮ್ಸ್ ಆಫ್ ಇಂಡಿಯಾ ಸಮೂಹ, ಬ್ಲ್ಯಾಕ್‌ಸ್ಟೋನ್ ಮತ್ತು ಬೋಲ್ಟ್ ವೆಂಚರ್ಸ್‌ ಕೂಡ ಪಾಲುದಾರರಾಗಿದ್ದಾರೆ.

ಹೊಸ ಮಾಲೀಕರಾದ ಆದಿತ್ಯ ಬಿರ್ಲಾ ಸಮೂಹಕ್ಕೆ ಮದ್ಯದ ಬ್ರ್ಯಾಂಡ್ ಪ್ರಚಾರ ಮಾಡುವ ಉದ್ದೇಶವಿಲ್ಲ. ‘ರಾಯಲ್ ಚಾಲೆಂಜರ್ಸ್’ ಎಂಬ ಹೆಸರನ್ನು ಹಾಗೆಯೇ ಉಳಿಸಿಕೊಂಡರೆ, ಅದು ಈಗಲೂ ಹಳೆಯ ಮಾಲೀಕರ (ಡಿಯಾಜಿಯೊ/USL) ಮದ್ಯದ ಬ್ರ್ಯಾಂಡ್‌ಗೆ ಉಚಿತವಾಗಿ ಪ್ರಚಾರ ನೀಡಿದಂತಾಗುತ್ತದೆ. ಈ ಕಾರಣದಿಂದಾಗಿ, ತಂಡದ ಹೆಸರನ್ನು ಬದಲಾಯಿಸಲು ಹೊಸ ಮಾಲೀಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ALSO READ :  ಕಗ್ಗಲೀಪುರದಲ್ಲಿ ವಿಕೃತಿಯ ಪರಮಾವಧಿ – ಬರ್ತಡೆ ಪಾರ್ಟಿಗೆ ಬಂದವನ ಮೇಲೆ ಮೃಗೀಯ ಹಲ್ಲೆ!

ಆರ್.ಸಿ.ಬಿ ಎಂಬ ‘ಭಾವನೆ’ ಉಳಿಯಲಿದೆಯೇ?

ಕಳೆದ 19 ವರ್ಷಗಳಲ್ಲಿ ‘ಆರ್‌ಸಿಬಿ’ ಎಂಬುದು ಕೇವಲ ಹೆಸರಾಗಿ ಉಳಿದಿಲ್ಲ, ಅದು ಅಭಿಮಾನಿಗಳ ಪಾಲಿಗೆ ಒಂದು ‘ಎಮೋಷನ್’. ಹೆಸರನ್ನು ಪೂರ್ತಿಯಾಗಿ ಬದಲಿಸಿದರೆ ಬ್ರ್ಯಾಂಡ್ ವ್ಯಾಲ್ಯೂಗೆ ಹೊಡೆತ ಬೀಳುವ ಭೀತಿ ಇದೆ. ಹೀಗಾಗಿ, ಆರ್.ಸಿ.ಬಿ (RCB) ಎಂಬ ಸಂಕ್ಷಿಪ್ತ ರೂಪ ಬರುವಂತೆಯೇ ಹೊಸ ಹೆಸರನ್ನು ಹುಡುಕುವ ಸಾಧ್ಯತೆ ಹೆಚ್ಚು.

ಉದಾಹರಣೆಗೆ: Raditya Capital Bengaluru ಅಥವಾ Realestate Capital Bengaluru ಎಂಬಂತಹ ಕಾಲ್ಪನಿಕ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೊಸ ಸಾರಥ್ಯ ಯಾರ ಕೈಗೆ?

ಈ ವಹಿವಾಟಿನ ನಂತರ ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ತಂಡದ ಚೇರ್ಮನ್ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಆರ್ಯಮಾನ್ ಅವರೇ ಸ್ವತಃ ಕ್ರಿಕೆಟ್ ಆಟಗಾರರಾಗಿದ್ದು, ತಂಡದ ಬೆಳವಣಿಗೆಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ | ಪಂಚ ಗ್ಯಾರಂಟಿ ಹೆಸರಲ್ಲಿ ಕೋಟಿ ಕೋಟಿ ಪೋಲು: ಇದು ಅನುಷ್ಠಾನವೋ ಅಥವಾ ಲೂಟಿಯೋ?

ಮಾರ್ಚ್ 28ರಂದು ಈ ಸೀಸನ್‌ನ ಮೊದಲ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನವೇ ನಡೆದ ಈ ಮಾಲೀಕತ್ವ ಬದಲಾವಣೆ ಐಪಿಎಲ್ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದೆ. 2025ರಲ್ಲಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿರುವ ಆರ್‌ಸಿಬಿ, ಹೊಸ ಮಾಲೀಕರ ಅಡಿಯಲ್ಲಿ ತನ್ನ ಚಾಂಪಿಯನ್ ಪಟ್ಟವನ್ನು ಹೇಗೆ ಕಾಪಾಡಿಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top