ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!
ಬೆಂಗಳೂರು:ಇದು ನಿಜಕ್ಕೂ ಅನ್ಯಾಯದ ಹಾಗೂ ಅಮಾನವೀಯತೆಯ ಕೆಲಸವೇ ಸರಿ..ಯಾವ ಒಂದು ಯೋಜನೆ ನಿರ್ದಿಷ್ಟ ಸಮುದಾಯಕ್ಕೆ, ಅದರ ಬಳಕೆಗೆ , ಕಲ್ಯಾಣಕ್ಕೆ ಒದಗಿಬರ ಬೇಕಿತ್ತೋ… ಅದನ್ನೇ ಕಾಣೆಯಾಗುವಂತೆ ಮಾಡಲಾಗುತ್ತದೆ ಎಂದ್ರೆ ಅದು ಹಣದ ದುರುಪಯೋಗವಲ್ಲದೇ,ಯೋಜನೆಯೊಂದರ ಲಾಭ-ಪ್ರಯೋಜನದಿಂದ ಆ ಸಮುದಾಯವನ್ನು ವಂಚಿಸಿದಂತೆ ಅಲ್ಲವೇ..? ಅಂತದ್ದೊಂದು ಕೆಲಸ ಹಿಂದಿನ ಬಿಬಿಎಂಪಿ ಹಾಗೂ ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳಿಂದ ನಡೆದಿದೆ..ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡು ಇಡೀ ವ್ಯವಸ್ಥೆಯನ್ನು ಸರಿ ಮಾಡಲು ಹೊರಟಂತಿರುವ ಐಎಎಸ್ ಅಧಿಕಾರಿ ಕೆ.ವಿ ರಾಜೇಂದ್ರನ್ … Read more