advertise here

Search

ಇದು ಇಡೀ ರಾಜ್ಯವೇ ಖುಷಿ ಪಡುವ ವಿಚಾರ…ದಿವ್ಯಾ ವಸಂತ ಈಗ “ಸಾಮ್ರಾಟ್‌” ಚಾನೆಲ್‌ “ಚೀಫ್‌-ಎಡಿಟರ್‌”..


ಬೆಂಗಳೂರು: ಇದು,ಇಡೀ ರಾಜ್ಯವೇ ಖುಷಿ ಪಡುವ ವಿಷಯ ಎಂದ್ಹೇಳಿ ರಾತ್ರೋರಾತ್ರಿ ಸುದ್ದಿಯಾದ ಹೆಣ್ಣುಮಗಳು ದಿವ್ಯಾವಸಂತ.ಆದ್ರೆ ನಂತರ ಮಾಡಿಕೊಂಡ ಯಡವಟ್ಟುಗಳು ಆಕೆಯನ್ನು ಯಾವ ಸ್ಥಿತಿಗೆ ತಂದುನಿಲ್ಲಿಸಿತು ಎನ್ನುವುದನ್ನು ತಿಳಿಸಿ ಹೇಳಬೇಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ನೆಗೆಟಿವ್‌ ಆಗಿ ಟ್ರೋಲ್‌ ಆಗಿ ಅದಕ್ಕೆ ಸ್ಪಷ್ಟನೆ ಕೊಡಲು ಕಣ್ಣೀರು ಹಾಕಿದ್ರೂ ಆಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸುವಂಥ ಸ್ಥಿತಿ ನಿರ್ಮಾಣವಾಗಿದ್ದು ಕೂಡ ಸುಳ್ಳಲ್ಲ.ಸಾಮಾಜಿಕ ಜಾಲತಾಣಗಳಲ್ಲಿ  ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ದ ಆಕೆ ದಿಡೀರ್‌ ನಾಪತ್ತೆ ಆಗಿಬಿಟ್ಟಿದ್ಲು..ಕಮ್‌ ಬ್ಯಾಕ್‌ ಮಾಡೊಕ್ಕೆ ಒದ್ದಾಡುವಂತಾಗಿತ್ತು.ಇದರ ನಡುವೆಯೇ ಸ್ತ್ರೀ ಎನ್ನುವ ಮಹಿಳಾ ಪ್ರಧಾನವಾದ ಮೊದಲ ಚಾನೆಲ್‌ ಗೆ ಸಂಪಾದಕಿ ಎಂಬ ಸುದ್ದಿ ಕೇಳಿಬಂದಿತ್ತು.ಆದರೆ ಈಗ ಸಾಮ್ರಾಟ್‌ ಎನ್ನುವ ಡಿಜಿಟಲ್‌ ಚಾನೆಲ್‌ ಮುಖ್ಯ ಸಂಪಾ ದಕಿ ಎಂದು ಆಕೆಯೇ ಹೇಳಿಕೊಂಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದೆ.

ಯೆಸ್..ಸೋಶಿಯಲ್‌ ಮೀಡಿಯಾದ ಮೋಸ್ಟ್‌ ಕಾಂಟ್ರವರ್ಸಿಯಲ್‌ ಪರ್ಸನಾಲಿಟಿ ದಿವ್ಯಾವಸಂತ ಸಾಮ್ರಾಟ್‌ ಎನ್ನುವ ಡಿಜಿಟಲ್‌ ಚಾನೆಲ್‌ಮುಖ್ಯ ಸಂಪಾದಕಿ ಎಂಬ ಸುದ್ದಿ ಹೊರಬಿದ್ದಿದೆ.ಆಕೆಯೇ ಅದನ್ನು ಸ್ಪಷ್ಟಪಡಿಸಿದ್ದಾಳೆ ಕೂಡ.ಸಂಪಾದಕಿ ಆಗುತ್ತಿರುವ ಸುದ್ದಿ ಮಾದ್ಯಮ ಕ್ಷೇತ್ರದಲ್ಲಿ ಅನೇಕ ರೀತಿಯ ಚರ್ಚೆ ಹುಟ್ಟುಹಾಕುತ್ತಿದೆ. ಆಕೆ ಸಂಪಾದಕಿನಾ.. ಆಕೆಗೇನು ಸಂಪಾದಕಿ ಆಗುವ ಯೋಗ್ಯತೆ ಇದೆ..ಆಕೆ ಸಂಪಾದಕತ್ವ ಎಂದ್ರೆ ಕಥೆ ಮುಗೀತು ಬಿಡಿ..ಆಕೆಯನ್ನು ಸಂಪಾದಕಿಯನ್ನಾಗಿ ಮಾಡಿಕೊಂಡ ಪುಣ್ಯಾತ್ಮನನ್ನು ದೇವರೇ ಕಾಯಬೇಕು…ಹೀಗೆ ನಾನಾ ತೆರನಾದ ಪ್ರತಿಕ್ರಿಯೆಗಳು ಕೇಳಿಬರಲಾರಂಭಿಸಿದೆ.

ದಿವ್ಯಾ ವಸಂತ ಎಡಿಟರ್‌ ಆಗಬಾರದಾ..? ಆ ಸಾಮರ್ಥ್ಯ ಆಕೆಗೆ ನಿಜಕ್ಕೂ ಇಲ್ಲವೇ.? ಇದು ಒಂದು ರೀತಿಯ ಗೊಂದಲದ ಪ್ರಶ್ನೆ..ಪತ್ರಿಕೋದ್ಯಮದ ವ್ಯಾಖ್ಯಾನ-ಸ್ವರೂಪ-ಪರಿಕಲ್ಪನೆ-ಅರ್ಥ ಎಲ್ಲವೂ ಬದಲಾಗಿ ಹೋಗಿರುವ  ಇವತ್ತಿನ ಅತ್ಯಂತ ಕೆಟ್ಟ ಪರಿಸ್ತಿತಿಯಲ್ಲಿ ಯಾರು ಏನ್‌ ಬೇಕಾದ್ರೂ ಆಗಬಹುದು..ಉತ್ತುಂಗಕ್ಕೂ ಏರಬಲ್ಲರು.ಪಾತಾಳಕ್ಕೂ ತಳ್ಳಲ್ಪಡಬಹದು…ಕೆಪಾಸಿಟಿ-ಕೇಪಬಿಲಿಟಿ ಇಲ್ಲದವರು ದಶಕಗಳಿಂದಲೂ ಕತ್ತೆಯಂತೆಯೇ ದುಡಿಯುತ್ತಿರುತ್ತಾರೆ. ಅರ್ಹತೆನೇ ಇಲ್ಲದ ಅದೆಷ್ಟೋ ನಾಲಾಯಕ್‌ ಗಳು ದೊಡ್ಡವರ ಕೈ ಕಾಲು ಹಿಡಿದು-ಪಾದಸೇವೆ ಜತೆಗೆ ಎಲ್ಲಾ ರೀತಿಯ ಸೇವೆ ಮಾಡಿ ಯಾರೂ ಊಹಿಸದ ಮಟ್ಟಕ್ಕೆ ಬೆಳೆಯುತ್ತಿರುವುದನ್ನು ನೋಡುತ್ತಿದ್ದೇವೆ.ಹಾಗಾಗಿ ಅದಕ್ಕೆ ಸಿದ್ದನಿಯಮವೂ ಇಲ್ಲ ಹಾಗೆಯೇ ಮಾನದಂಡಗಳೂ ಇಲ್ಲ. ದೊಡ್ಡವರನ್ನು ಒಳಗಾಕಿಕೊಂಡ್ರೆ, ಅವರನು ಮ್ಯಾನೇಜ್‌ ಮಾಡಿದ್ರೆ, ಅವರಿಗೆ ಅತ್ಯಾಪ್ತರಾದ್ರೆ( ಇವರನ್ನು ಬಕೆಟ್‌ ಗಿರಾಕಿಗಳೆಂದ್ರೂ ತಪ್ಪಾಗಲಿಕ್ಕಿಲ್ಲ) ಆತ/ಆಕೆಗೆ ಪತ್ರಕರ್ತನಾ(ಳಾ)ಗುವ ಯೋಗ್ಯತೆ ಇಲ್ಲದಿದ್ದರೂ ಆಯಕಟ್ಟಿನ ಹುದ್ದೆಯನ್ನು ಅಲಂಕರಿಸಬಹುದು ಎನ್ನುವುದು ಇವತ್ತಿನ ಪತ್ರಿಕೋದ್ಯಮದ ವ್ಯಾಖ್ಯಾನ.ಏನೂ ಇಲ್ಲದ ಅದೆಷ್ಟೋ  ಪತ್ರಕರ್ತರು ಇವತ್ತು ಏನೇನೋ ಆಗಿರುವುದನ್ನು ಕಂಡಾಗ ದಿವ್ಯಾವಸಂತಳ ಪ್ರಕರಣದಲ್ಲಿ ಉತ್ತರವೂ ಅಷ್ಟೇ ಮಾರ್ಮಿಕವಾಗಿ ದೊರೆಯಬಲ್ಲದು.

ದಿವ್ಯಾವಸಂತ ಲೋಗೋ ಕೈಲಿಡಿದು ಕೆಲಸ ಮಾಡಿದ್ದೇ ಕಡಿಮೆ: ದಿವ್ಯಾವಸಂತನಾವು ಕಂಡಂತೆ ಪತ್ರಿಕೋದ್ಯಮಕ್ಕೆ ಬಂದು 10 ವರ್ಷಗಳೂ ಆಗಿರಲಿಕ್ಕೆ ಇಲ್ಲವೇನೋ..? ಆಕೆ ಲೋಗೋ ಹಿಡಿದು ಕೆಲಸ ಮಾಡಿದ್ದನ್ನು ನೋಡಿದವರೇ ಕಡಿಮೆ.ಪ್ರಜಾ ಟಿವಿ ನಂತರ ಬಿಟಿವಿಯಲ್ಲಿ ತೆರೆಗೆ ಬಂದ್ಲು.ಆಕೆಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ನಟಿ ಅಮೂಲ್ಯ ಅವರ ಅವಳಿ ಮಕ್ಕಳ ಜನ್ಮದಿನಾಚರಣೆ ಸಂದರ್ಭ.ಇದು ರಾಜ್ಯವೇ ಖುಷಿ ಪಡುವ ವಿಚಾರ ಎಂದ್ಹೇಳಿ ರಾತ್ರೋರಾತ್ರಿ ಟ್ರೋಲ್‌ ಆಗಿಬಿಟ್ಲು.ಅದು ಯಾವ್‌ ಮಟ್ಟದ ಹೆಸರು ಆಕೆಗೆ ತಂದುಕೊಡ್ತು ಎಂದ್ರೆ ಇದು ರಾಜ್ಯವೇ ಖುಷಿ ಪಡುವ ವಿಚಾರ ಎನ್ನುವ ಅಕೆಯ ಡೈಲಾಗ್‌ ಜನಸಾಮಾನ್ಯರ ಬಾಯಲ್ಲಿ ಹರಿದಾಡ್ತು. ನಟ ಉಪೇಂದ್ರ ತನ್ನ ಸಿನೆಮಾದಲ್ಲಿ ಈ ವಾಕ್ಯವನ್ನು ತಮ್ಮ ಹಾಡಿನಲ್ಲಿ ಬಳಸಿಕೊಂಡಿದ್ರು.

ALSO READ :  SAD DEMISE: ಕ್ರೈಂ ಪತ್ರಿಕೋದ್ಯಮದ "ಪದ-ಪಂಡಿತ" ಅಕ್ಷರಗಳಲ್ಲಿ ಲೀನ..

ವಿವೇಚನೆ ಕಳೆದುಕೊಂಡು ಮಾಡಿಕೊಟ್ಟ ಯಡವಟ್ಟುಗಳು ಒಂದಾ ಎರಡಾ..! ಆದರೆ ಹಾಗೆ ಬಂದ ಹೆಸರನ್ನು ಸರಿಯಾಗಿ ಕಾಪಾಡಿಕೊಳ್ಳುವಲ್ಲಿ ದಿವ್ಯಾವಸಂತ ಎಡವಿದ್ಲು.ಜನಪ್ರಿಯತೆಯ ಗುಂಗಲ್ಲಿ ಮೈಮರೆತು ವಿವೇಚನೆಯನ್ನೇ ಕಳೆದುಕೊಂಡ್ಲು. ಅನಗತ್ಯ  ವಿಚಾರಗಳಲ್ಲಿ ಆಕೆಯ ಹೆಸರು ಕೇಳಿಬಂತು.ವಿವಾದ ಮೈಮೇಲೆ ಎಳೆದುಕೊಂಡ್ಲು.ತಾನು ನಡೆದು ಬಂದ ಹಾದಿಯನ್ನೇ ಮರೆತ್ಲು.ಬೆಳೆಸಿದವ್ರ ಆಶ್ರಯ ಬಿಟ್ಲು.ಸಣ್ಣ ವಯಸ್ಸಿನಲ್ಲೇ ದೊಡ್ಡ ಮಟ್ಟದ ಸಮಸ್ಯೆಗಳಿಗೆ ಸಿಲುಕಿಕೊಂಡ್ಲು.ಯಾವ ದಿವ್ಯಾವಸಂತಳನ್ನು ರಾಜ್ಯ ಒಂದ್‌ ರೇಂಜ್ನಲ್ಲಿ ಒಪ್ಪಿಕೊಂಡಿತ್ತೋ,ಅದೇ ಜನತೆ ದೃಷ್ಟಿಯಲ್ಲಿ ಕೆಟ್ಟದಾಗಿ ಬಿಂಬಿತಳಾಗೊಕ್ಕೆ ಶುರುವಾದ್ಲು.ರಾಜ್ಯದ ಜನತೆ ಕೊಟ್ಟ ಪ್ರೀತಿ-ಹೆಸರನ್ನು ಸರಿಯಾಗಿ ಕಾಪಾಡಿಕೊಳ್ಳುವುದನ್ನು ಬಿಟ್ಟು ತಾನೊಬ್ಬ ಸೋಶಿಯಲ್‌ ಮೀಡಿಯಾ ಸೆನ್ಸೇಷನ್‌ ಎನ್ನುವ ಭ್ರಮೆಯಲ್ಲಿ ಮೈಮರೆತ ಪರಿಣಾಮವೇ ದಿವ್ಯಾವಸಂತ ಗಳಿಸಿಕೊಂಡಿದ್ದನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾದ್ಲು.

ಕಳೆದುಕೊಂಡ ಹೆಸರು-ಸ್ಥಾನಮಾನ-ಘನತೆ ಪಡೆದುಕೊಳ್ಳೊಕ್ಕೆ ಇವತ್ತಿಗೂ ಆಕೆ ಕಷ್ಟಪಡುತ್ತಿದ್ದಾಳೆ. ಇದಕ್ಕೆಲ್ಲಾ ಮುಖ್ಯ ಕಾರಣವೇ ಆಕೆಯ ವಿವೇಚನಾರಹಿತ ನಡೆ- ದುಡುಕು ನಿರ್ದಾರ-ಸೂಕ್ತ ಮಾರ್ಗದರ್ಶನದ ಕೊರತೆ ಎನಿಸುತ್ತದೆ.ಕೆಲವರು ಆಕೆಯಲ್ಲಿರುವ ಮುಗ್ಧತೆಯನ್ನು ಮಿಸ್ಯೂಸ್‌ ಮಾಡಿಕೊಂಡ್ರು ಎನ್ನುವ ಮಾತಿದೆ.ಹಾಗೆಂದು ಇದರಲ್ಲಿ ಆಕೆಯ ತಪ್ಪೇ ಇರಲಿಲ್ಲ ಎಂದೇನಿಲ್ಲ. ಪ್ರಜ್ಞಾಪೂರ್ವಕ ತಪ್ಪುಗಳಿಂದಲೇ ದಿವ್ಯಾವಸಂತ ವಿವಾದಕ್ಕೆ ಗ್ರಾಸವಾದ್ಲು.   ಕಳೆದುಕೊಂಡ ಜಾಗದಲ್ಲೇ ಮತ್ತೆ ಹುಡುಕಿ ಪಡೆದುಕೊಳ್ಳಬೇಕೆನ್ನುವ ಮಾತಿದೆ.ಹಾಗೆಯೇ ಮಾಡಲಿಕ್ಕೆ ಹೊರಟಿದ್ದಾಳೆ ದಿವ್ಯಾ ವಸಂತ.ಪತ್ರಿಕೋದ್ಯಮದಲ್ಲಿ ಏನ್‌ ಕಳೆದುಕೊಂಡಿದ್ಲೋ ಅಲ್ಲೇ ಪಡೆದುಕೊಂಡು ಒಳ್ಳೆಯ ಹೆಸರು ಮಾಡಬೇಕೆನ್ನುವುದು ಆಕೆಯ ಧ್ಯೇಯದಂತಿದೆ.ಇದಕ್ಕೆ ಸಾಮ್ರಾಟ್‌ ಎನ್ನುವ ಡಿಜಿಟಲ್‌ ಚಾನೆಲ್‌ ನ ವೇದಿಕೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾಳೆ. ಸಾಮ್ರಾಟ್‌ ನ ಸಂಪಾದಕಿಯಾಗಿ ತಂಡ ಸೇರಿರುವುದಾಗಿ ಹೇಳಿಕೊಂಡಿದ್ದಾಳೆ.ಆಕೆಗೆ ಆ ಕೆಪಾಸಿಟಿ ಇದೆ ಎಂದು ಆಲೋಚಿಸಿ  ಸಂಪಾದಕಿ ಸ್ಥಾನ ನೀಡಿದ ಚಾನೆಲ್‌ ಮುಖ್ಯಸ್ಥರದು ದೊಡ್ಡ ಸಾಹಸ ಗುಣ ಎನ್ನಿಸುತ್ತೆ.

ಸ್ತ್ರೀ ಚಾನೆಲ್‌ ಕಥೆ ಮುಗಿದ ಅಧ್ಯಾಯನಾ..?! ಆದ್ರೆ ಈ ನಡುವೆ ಸ್ತ್ರೀ ಚಾನೆಲ್‌ ಮುನ್ನಡೆಸುವುದಾಗಿ ಹೇಳಿದ್ದ ಮಾತು ಎಲ್ಲಿ ಹೋಯ್ತೋ ಗೊತ್ತಿಲ್ಲ.‌ ಅದನ್ನು ಆಕೆಯ ಮೊದಲ ಮಹಿಳಾ ಚಾನೆಲ್‌ ಎಂದೆಲ್ಲಾ ಹೇಳಿಕೊಂಡು ಬಿಲ್ಡಪ್‌ ಪ್ರೋಮೋ  ಕೊಟ್ಟಿದ್ದಳು.ಆದರೆ ಅದು ನಂತರ ಸದ್ದೂ ಮಾಡಲಿಲ್ಲ..ಇದಕ್ಕೆ ಏನು ಕಾರಣ ಎನ್ನುವುದು ಗೊತ್ತಾಗಲಿಲ್ಲ..ಅದರ ಬೆನ್ನಲ್ಲೇ ಈಗ ಸಾಮ್ರಾಟ್‌ ನ ಸಂಪಾದಕಿ ಎಂದು ಕ್ಲೇಮ್‌ ಮಾಡಿಕೊಂಡಿದ್ದಾಳೆ.ಆದರೆ ಫೀಲ್ಡ್‌ ನಲ್ಲಿ ಆಕೆಗೆ ಇಂತದ್ದೊಂದು ದೊಡ್ಡ ಜವಾಬ್ದಾರಿ ವಹಿಸಿರುವ ಬಗ್ಗೆ ಸಾಕಷ್ಟು ಭಿನ್ನ ರೀತಿಯ ಅಭಿಪ್ರಾಯ ಕೇಳಿಬಂದಿದೆ.

ಅದೇನೇ ಇರಲಿ, ಎಲ್ಲಾ ಕಳೆದುಕೊಂಡ ಅದೇ ಪತ್ರಿಕೋದ್ಯಮದಲ್ಲಿ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ದಿವ್ಯಾವಸಂತ ಮುಂದಾಗಿದ್ದಾಳೆ.ಆಕೆಗೆ ಆ ಸಾಮರ್ಥ್ಯ ಇದೆಯೋ ಇಲ್ಲವೋ ಎನ್ನುವುದು ಮುಂದಿನ ದಿನಗಳಲ್ಲಿ ಚಾನೆಲ್‌ ನ ಭವಿಷ್ಯದಿಂದ ತಿಳಿದುಬರುತ್ತದೆ.ಅಕೆಗೆ ಮತ್ತೊಂದು ಅವಕಾಶ ಕೂಡ ನೀಡಬೇಕಿದೆ.ಆದರೆ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ದೊರೆತಿರುವ ಈ ಅಪೂರ್ವ ಅವಕಾಶವನ್ನು ದಿವ್ಯಾವಸಂತ ಅತ್ಯಂತ ಜಾಗರೂಕತೆ-ಕಾಳಜಿ-ಆಸ್ಥೆಯಿಂದ ಬಳಸಿಕೊಳ್ಳಬೇಕಿದೆ. ಪತ್ರಿಕೋದ್ಯಮದಲ್ಲೂ ತನ್ನ ಸಾಮರ್ಥ್ಯ ಏನೆನ್ನುವುದನ್ನು ಪ್ರೂವ್‌ ಮಾಡಬೇಕಿದೆ. ಮಾಡಿದ ಯಡವಟ್ಟುಗಳಿಂದ ಪಾಠ ಕಲಿಯಬೇಕಿದೆ.ಅದನ್ನು ಬಿಟ್ಟು ತನ್ನ ಹಳೆಯ ಲೈಫ್‌ ಸ್ಟೈಲ್-ಆಟಿಟ್ಯೂಡ್-ಬಿಹೇವಿಯರ್‌ ನ್ನು ಮುಂದುವರೆಸಿಕೊಂಡು ಹೋದಲ್ಲಿ ಇದೇ ಆಕೆಯ ಕೊನೆಯ ಅವಕಾಶವೂ ಆಗಬಹುದೇನೋ..? ಹಾಗೆ ಆಗದಿರಲಿ..ಒಳ್ಳೆಯದಾಗಲಿ  ಎಂದು ಆಲ್‌ ದಿ ಬೆಸ್ಟ್‌ ಹೇಳುವ ಜತೆಗೆ ಬಿ ಕೇರ್‌ ಫುಲ್‌ ಎನ್ನುವ ಎ ಚ್ಚರಿಕೆಯ ಮಾತನ್ನ ಹೇಳುತ್ತದೆ ಕನ್ನಡ ಫ್ಲ್ಯಾಶ್‌ ನ್ಯೂಸ್.  


Political News

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

Scroll to Top