“ಕಳಂಕಿತ” ಅಧಿಕಾರಿ ನಾಗರಾಜಮೂರ್ತಿ ಬೆನ್ನಿಗೆ ನಿಂತಿರುವುದೇಕೆ BMTC ಆಡಳಿತ..?!

“ಕಳಂಕಿತ” ಅಧಿಕಾರಿ ನಾಗರಾಜಮೂರ್ತಿ ಬೆನ್ನಿಗೆ ನಿಂತಿರುವುದೇಕೆ BMTC ಆಡಳಿತ..?!

ಅಕ್ರಮ ಕಣ್ಣಿಗೆ ರಾಚುವಂತಿದ್ರೂ  ಡಿ ಸಿ.ನಾಗರಾಜಮೂರ್ತಿ ವಿರುದ್ದ ಕ್ರಮವೇಕಿಲ್ಲ…?!

BMTCಯಲ್ಲಿ  ಇದೆಂಥಾ ಅನ್ಯಾಯ..!? ಕ್ಷುಲ್ಲಕ ತಪ್ಪೆಸಗಿದ್ರೆ ಸಿಬ್ಬಂದಿಗೆ ಸಸ್ಪೆಂಡ್-ಡಿಸ್ಮಿಸ್.. ಗಂಭೀರ ಆಪಾದನೆಯಿದ್ರೂ ಕ್ಷಮಾದಾನ..?!

ಬಿಎಂಟಿಸಿ ಕೇಂದ್ರ ವಿಭಾಗದ ವಿಭಾಗೀಯ ನಿಯಂತ್ರಕ ನಾಗರಾಜಮೂರ್ತಿ
ಬಿಎಂಟಿಸಿ ಕೇಂದ್ರ ವಿಭಾಗದ ವಿಭಾಗೀಯ ನಿಯಂತ್ರಕ ನಾಗರಾಜಮೂರ್ತಿ

ಬೆಂಗಳೂರು: ಬಿಎಂಟಿಸಿ ಆಡಳಿತದ ಕಾರ್ಮಿಕ ವಿರೋಧಿ ಧೋರಣೆ ಮತ್ತೆ ಸಾಬೀತಾಗಿದೆ.ನಮ್ಮ ಬೆಂಬಲ-ಸಹಕಾರ ಯಾವತ್ತಿದ್ರೂ ಅಧಿಕಾರಿಗಳಿಗೇ ವಿನಃ ,ಕೆಳಹಂತದ ಸಿಬ್ಬಂದಿಗಲ್ಲ. ಅಧಿಕಾರಿಗಳು ಕಣ್ಣಿಗೆ ರಾಚುವಂತ ಗಂಭೀರ ಸ್ವರೂಪದ ತಪ್ಪು ಮಾಡಿದ್ರೂ ಅವರನ್ನು ರಕ್ಷಿಸುವುದೇ ನಮ್ಮ ಮೂಲಮಂತ್ರ.ಹಾಗೆಯೇ ಕೆಳಹಂತದ ಸಿಬ್ಬಂದಿ ಕ್ಷುಲ್ಲಕ ಎನಿಸುವಂತ ತಪ್ಪೆಸಗಿದ್ರೂ ನಮಗದು ಗಂಭೀರ.ಅವರನ್ನು ಅಮಾನತುಗೊಳಿಸದೆ ಬಿಡೋ ಪ್ರಶ್ನೆಯೇ ಇಲ್ಲ ಎನ್ನುವಂತ ಆಡಳಿತದ ಮಾನಸಿಕತೆನೇ ಇನ್ನೂ ಬದಲಾಗಲಿಲ್ಲವಲ್ಲ ಎನ್ನುವುದೇ ದುರಾದೃಷ್ಟಕರ.

ಬಿಎಂಟಿಸಿ ಆಡಳಿತದ ಬಗ್ಗೆ ಇಷ್ಟೊಂದು ಆಕ್ರೋಶಭರಿತವಾಗಿ,ನಿಷ್ಟೂರವಾಗಿ,ಅತ್ಯಂತ ನಿರಾಶೆಯಿಂದ ಮಾತನಾಡೊಕ್ಕೆ ಕಾರಣವೂ ಇದೆ.ಹೊಸದಾಗಿ  ಎಂಡಿಯಾಗಿ ಅಧಿಕಾರ ವಹಿಸಿಕೊಂಡಿರುವ ರಾಮಚಂದ್ರನ್ ಅವರಿಗೂ ಅಲ್ಲಿ ನಡೆಯುತ್ತಿರುವ ಅನ್ಯಾಯ,ದೌರ್ಜನ್ಯ,ಶೋಷಣೆ,ಕ್ರೌರ್ಯ ಅರ್ಥವಾಗಬೇಕೆನ್ನುವ ಕಾರಣಕ್ಕೆ ಆ ಒಂದು ಪ್ರಕರಣವನ್ನು ಇಲ್ಲಿ ಉಲ್ಲೇಖಿಸುತ್ತೇವೆ.

ಕೆಲ ತಿಂಗಳ ಹಿಂದೆ ನಡೆದ ಘಟನೆಯೊಂದನ್ನು ಸಾಕ್ಷ್ಯ ಸಮೇತ ವರದಿ ಮಾಡಿತ್ತು.ಕೇಂದ್ರ ವಿಭಾಗದ ವಿಭಾಗೀಯ ನಿರ್ದೇಶಕ ನಾಗರಾಜಮೂರ್ತಿ ಮಾಡಿರುವ ಯಡವಟ್ಟೊಂದನ್ನು ಸಾಕ್ಷಿ ಸಮೇತ ತೆರೆದಿಟ್ಟಿದ್ದೆವು.ಆ ಬಗ್ಗೆ ವ್ಯವಸ್ಥಾಪಕ ನಿರ್ದೆಶಕ ರಾಮಚಂದ್ರನ್ ಅವರನ್ನು ಪ್ರಶ್ನಿಸಲಾಗಿತ್ತು.ಅವರು ಕೂಡ ಈ ಬಗ್ಗೆ ತನಿಖೆ ನಡೆಸಿ ಮಾಹಿತಿ ಕೊಡ್ತೇವೆ.ತಪ್ಪಿದ್ದರೆ ಶಿಕ್ಷೆ ಕೊಡ್ತೇವೆ ಎಂದೆಲ್ಲಾ ಹೇಳಿದ್ರು.

ಬಿಎಂಟಿಸಿ ಕೇಂದ್ರ ವಿಭಾಗದ ವಿಭಾಗೀಯ ನಿಯಂತ್ರಕ ನಾಗರಾಜಮೂರ್ತಿ ನಡೆಸಿದ ಅಕ್ರಮಕ್ಕೆ ಇದಕ್ಕಿಂತ ಮತ್ತೊಂದು ಬೃಹತ್ ಸಾಕ್ಷ್ಯ ಬೇಕಾ...?!
ಬಿಎಂಟಿಸಿ ಕೇಂದ್ರ ವಿಭಾಗದ ವಿಭಾಗೀಯ ನಿಯಂತ್ರಕ ನಾಗರಾಜಮೂರ್ತಿ ನಡೆಸಿದ ಅಕ್ರಮಕ್ಕೆ ಇದಕ್ಕಿಂತ ಮತ್ತೊಂದು ಬೃಹತ್ ಸಾಕ್ಷ್ಯ ಬೇಕಾ…?!

ಅವರು ಹಾಗೆ ಹೇಳಿ ಅನೇಕ ದಿನಗಳೇ ಕಳೆದ್ರೂ ನಾಗರಾಮೂರ್ತಿ ವಿರುದ್ದ ತನಿಖೆಯೂ ನಡೆದಿಲ್ಲ. ಕ್ರಮವೂ ಆಗಿಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ.ನಾಗರಾಜಮೂರ್ತಿ ಯಾರು..ಏನು ಮಾಡುವರು..ನನಗೇನು ಮಾಡುವರು ಎನ್ನುವ ಸಿನೆಮಾ ಹಾಡನ್ನು ಗುನುಗುತ್ತಾ ಎಂದಿನಂತೆ ವಿಭಾಗದಲ್ಲಿ ಝಾಮ್ ಝೂಮ್ ಅಂಥ ಕೆಲಸ ಮಾಡುತ್ತಿದ್ದಾರೆಂದು ಅವರಿಂದ ನೊಂದ ಅಸಂಖ್ಯಾತ ಸಾರಿಗೆ ಸಿಬ್ಬಂದಿ ಹೊಟ್ಟೆ ಉರಿಸಿಕೊಂಡು ಹೇಳುತ್ತಿದ್ದಾರೆ.

BMTC ಎಂಡಿ ರಾಮಚಂದ್ರನ್
BMTC ಎಂಡಿ ರಾಮಚಂದ್ರನ್

ರಾಮಚಂದ್ರನ್ ಅವರು ಹೇಳಿದ ಮಾತಿನಂತೆ ಶಿಕ್ಷೆ ಮಾತು ಹಾಳಾಗಿ ಹೋಗ್ಲಿ,ಕನಿಷ್ಟಕ್ಕೆ ಇಷ್ಟೊತ್ತಿಗೆ ತನಿಖೆಯಾದ್ರೂ ಶುರುವಾಗಬೇಕಿತ್ತು.ಆದರೆ ಅಂತದ್ದ್ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ ಎನ್ನುವ ಮಾತು ಕೇಳಿಬಂದಿದೆ.ಅಸಲಿಗೆ ನಾಗರಾಜಮೂರ್ತಿ ಅವರ ವಿರುದ್ಧ ಕೇಳಿಬಂದ ಆರೋಪದ ಸಂಬಂಧ  ಅವರ ವಿವರಣೆಯನ್ನೂ ಕೇಳುವ ಕೆಲಸ ಸಂಬಂಧಪಟ್ವವರಿಂದ ಆಗಿಲ್ಲವಂತೆ.

ಸಂಬಂಧಪಟ್ಟವರನ್ನು ಈ ಬಗ್ಗೆ ಸಂಪರ್ಕಿಸುವ ಕೆಲಸ ಮಾಡಲಾಯಿತಾದ್ರೂ ಸಮರ್ಪಕ ಉತ್ತರ ಸಿಕ್ಕಿಲ್ಲ.ಇಲಾಖೆ ವ್ಯಾಪ್ತಿಯಲ್ಲಿ ಏನ್ ನಡೀಬೇಕೋ..ಅದು ನಡೆಯುತ್ತೆ..ನಾಗರಾಜಮೂರ್ತಿ ಅವರ ವಿಚಾರ ಮಾದ್ಯಮಗಳಿಂದ ನಮ್ಮ ಗಮನಕ್ಕೆ ಬಂದಿದೆ.ಅದರ ಬಗ್ಗೆ ವಿಚಾರಣೆ ಕೂಡ ನಡೆಯುತ್ತಿದೆ.ಅವರು ತಪ್ಪಿತಸ್ಥರೇ ಆಗಿದ್ದಲ್ಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ ಎನ್ನುವ ಉತ್ತರ ಸಿಕ್ಕಿತೇ ಹೊರತು ಅದು ಸಮರ್ಪಕ ಎನಿಸುವಂತಿರಲಿಲ್ಲ.

ಹಾಗಾದ್ರೆ ನಾಗರಾಜಮೂರ್ತಿ ಮಾಡಿದ್ದು ಘನಂದಾರಿ ಕೆಲಸನಾ.?: ನಾಗರಾಜಮೂರ್ತಿ ಅವರು ಮಾಡಿರುವುದು ಅಕ್ಷಮ್ಯ ಎನ್ನುವುದು ಎಂಥವರಿಗೂ ಅರ್ಥವಾಗುತ್ತದೆ.ಮೇಲಾಧಿಕಾರಿಯಾಗಿದ್ದುಕೊಂಡು ಹೇಗೆ ಕೆಲಸ ಮಾಡಬೇಕೆನ್ನುವ ಕನಿಷ್ಟ ಜ್ನಾನ ಇಲ್ಲ ಎನ್ನುವುದಾದ್ರೆ ಅವರು ಇಷ್ಟು ವರ್ಷ ಇಲಾಖೆಯಲ್ಲಿದ್ದು ಪ್ರಯೊಜನವೇನು..? ಅವರು ಮಾಡಿದ್ದು ನಿಯಮಬಾಹಿರ ಕೆಲಸ ಎನ್ನುವುದನ್ನು ಪುಷ್ಟೀಕರಿಸುವಂತ ಎಲ್ಲಾ ಸಾಕ್ಷ್ಯಗಳು ಸಿಕ್ಕಿದ್ದರೂ ಅವರ ವಿರುದ್ದ ಕ್ರಮವಾಗದೆ ಅವರನ್ನು ಆರಮಾಗಿ ಅಡ್ಡಾಡಿಕೊಂಡಿರಲು ಬಿಡಲಾಗುತ್ತೆ ಎಂದ್ರೆ ಆಡಳಿತವೇ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದಲ್ಲವೇ..? ಆಡಳಿತದ ಬಗ್ಗೆ ಇಂತದ್ದೊಂದು ಭಾವನೆ ಬರೊಕ್ಕೇಕೆ ಅವಕಾಶ ಮಾಡಿಕೊಡಲಾಗ್ತಿದೆ ಎನ್ನುವುದೇ ಎಲ್ಲರ ಪ್ರಶ್ನೆ.

ನಮಗೊಂದು ನ್ಯಾಯ..ಅಧಿಕಾರಿಗಳಿಗೊಂದು ನ್ಯಾಯ ಎನ್ನುವಂತಾದರೆ ಹೇಗೆ ಸರ್.: ನಾಗರಾಜಮೂರ್ತಿ ಅವರ ವಿಚಾರದಲ್ಲಿ ಇಷ್ಟೊಂದು ಅಸಡ್ಡೆಯಿಂದ ಆಡಳಿತ ನಡೆದುಕೊಳ್ತಿದೆ ಎನ್ನುವ ವಿಚಾರಕ್ಕೆ ಕೆಳಹಂತದ ಸಿಬ್ಬಂದಿ ಕೆಂಡಾಮಂಡಲಗೊಂಡಿದ್ದಾರೆ.ಅಧಿಕಾರಿಗಳು ಎಷ್ಟೇ ದೊಡ್ಡ ಅಕ್ರಮ ಎಸಗಿದ್ರೂ ಸಾಕ್ಷ್ಯಗಳ ಹೊರತಾಗ್ಯೂ ಅವರ ವಿರುದ್ಧ ಯಾವುದೇ ಕ್ರಮ ಆಗೊಲ್ಲ.ನಾಗರಾಜಮೂರ್ತಿ ಮಾಡಿದ ಅಕ್ರಮಕ್ಕೆ ಎಲ್ಲಾ ಪುರಾವೆಗಳಿವೆ.ಆಡಳಿತಕ್ಕೂ ಇದು ಅಕ್ಷಮ್ಯ  ಎನ್ನುವುದು ಗೊತ್ತಿದೆ..ಹಾಗಿದ್ದಾಗ್ಯೂ ಮೌನ ವಹಿಸಿದೆ ಎನ್ನುವುದಾದ್ರೆ ಇದರ ಅರ್ಥವೇನು.. ಎಂದು ಅನೇಕ ಸಾರಿಗೆ ಸಿಬ್ಬಂದಿ ಪ್ರಶ್ನಿಸಿದ್ದಾರೆ.

ನಾಗರಾಜಮೂರ್ತಿ ಜಾಗದಲ್ಲಿ ಯಾವುದೋ ಡ್ರೈವರ್.ಕಂಡಕ್ಟರ್ ಇದ್ದಿದ್ದೇ ಅದಲ್ಲಿ ಅವರು ಸಣ್ಣ ತಪ್ಪು ಮಾಡಿದ್ರೂ ಅವರನ್ನು ಸಸ್ಪೆಂಡ್-ಡಿಸ್ಮಿಸ್ ಮಾಡಿಬಿಡ್ತಿದ್ರು.ನಮಗಂತೂ ಈ ಅವ್ಯವಸ್ಥೆ-ತಾರತಮ್ಯ ನೋಡಿ ಸಾಕಾಗಿದೆ.ನಮ್ಮನ್ನು ಮನುಷ್ಯರಂತೆ ನೋಡುವವರೇ ಇಲ್ಲವಾಗಿದೆ. ನಾಗರಾಜಮೂರ್ತಿ ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಗುತ್ತೆ ಎಂದು ನಂಬಿದ್ದೆವು.ಹೊಸ ಎಂಡಿ ಬಗ್ಗೆ ಭರವಸೆಗಳಿದ್ವು.ಆದ್ರೆ ಅವರ ಮೌನ ನಮಗೆ ಉತ್ತರ ನೀಡಿದೆ ಬಿಡಿ..ನಾವು ಯಾರ ಮೇಲೂ ನಂಬಿಕೆ ಇಡೋದು ನಮ್ಮ ತಪ್ಪು ಎನ್ನುವುದು ನಮಗೀಗ ಅರ್ಥವಾಗಿದೆ ಎನ್ನುವಾಗ ಬೇಸರವಾಗುತ್ತೆ.

ಎಂಡಿ,ಸಿಟಿಎಂ,ಭದ್ರತಾಧಿಕಾರಿಗಳನ್ನೆಲ್ಲಾ  ಅಡ್ಜೆಸ್ಟ್ ಮಾಡಿಕೊಂಡಿದ್ದಾರಂತೆ:  ಡಿಸಿ ನಾಗರಾಜಮೂರ್ತಿ ಬಗ್ಗೆ ಇಷ್ಟೆಲ್ಲಾ ಆಪಾದನೆ ಕೇಳಿಬಂದ್ರೂ ಅಂತದ್ದೇನು ನಡೆದೇ ಇಲ್ಲ ಎನ್ನುವಂತೆ ಫೋಸ್ ಕೊಟ್ಕಂಡು,ಅವರಿವರ ಮೇಲೆ ದರ್ಪ-ದರ್ಬಾರ್ ನಡೆಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತುಗಳಿವೆ.ಯಾರ ಭಯವೂ ಇಲ್ಲದೆ ಅಡ್ಡಾಡಿಕೊಂಡಿರುವುದಕ್ಕೆ ಕಾರಣವೇ ಮೇಲಾಧಿಕಾರಿಗಳ ಕೃಪೆಯಂತೆ.ಅವರಿವರ ಬಳಿ ನನಗೆ ಯಾರೂ ಏನು ಮಾಡಲಾರರು..ಏಕೆಂದ್ರೆ ಯಾರೆಲ್ಲಾ ನನ್ ವಿರುದ್ದ ಕ್ರಮ ಕೈಗೊಳ್ಳೊಕ್ಕೆ ಸಾಧ್ಯವಿದೆಯೋ ಅಂಥವರನ್ನೆಲ್ಲಾ ಅಡ್ಜೆಸ್ಟ್ ಮಾಡಿಕೊಂಡಿದ್ದೇನೆ.ಅವರಿಗೆ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಿದ್ದೇನೆ ಎಂದ್ಹೇಳಿಕೊಂಡು ಅಡ್ಡಾಡುತ್ತಿದ್ದಾರೆ.ಈ ವಿಷಯವೂ ಗಂಭೀರ ಸ್ವರೂಪದ್ದಲ್ಲ ಎಂದು ಆಡಳಿತ ಭಾವಿಸುತ್ತದೆ ಎಂದ್ರೆ ಇದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ.ಆದ್ರೆ ನಾಗರಾಜಮೂರ್ತಿ ಅವರನ್ನು ಈ ವಿಷಯದಲ್ಲಿ ಸರಿಯಾಗಿ ವಿಚಾರಿಸಿದ್ರೆ ಸತ್ಯ ಹೊರಬಹುದೇನೋ..?

ನೂತನವಾಗಿ ಎಂಡಿ ಆಗಿ ಅಧಿಕಾರ ವಹಿಸಿಕೊಂಡಿರುವ ರಾಮಚಂದ್ರನ್ ಅವರ ಬಗ್ಗೆ ನೌಕರರಿಗೆ ಇನ್ನೂ ನಂಬಿಕೆ ಕಡಿಮೆಯಾಗಿಲ್ಲ.ನಾಗರಾಜಮೂರ್ತಿ ವಿರುದ್ದ ಅವರು ಕ್ರಮ ಕೈಗೊಳ್ಳುತ್ತಾರೆನ್ನೋ ನಂಬಿಕೆ ಈ ಕ್ಷಣಕ್ಕು ಇದೆ..ರಾಮಚಂದ್ರನ್ ಅವರು ಕೂಡ ಮೊದಲೇ ಹೇಳಿದಂತೆ ನ್ಯಾಯದ ಮುಂದೆ  ಅಧಿಕಾರಿಯಾಗಿರಲಿ ಅಥವಾ ಕೆಳಹಂತದ ಸಿಬ್ಬಂದಿಯಾಗಲಿ….ಎಲ್ಲರೂ ಒಂದೇ.. ಎಂದ್ಹೇಳಿರುವುದು ಅವರ ಬಗ್ಗೆ ನಂಬಿಕೆ ಉಳಿಯುವಂತೆ ಮಾಡಿದೆ..ನೌಕರರು ಇಟ್ಟ ನಂಬಿಕೆಯನ್ನು ರಾಮಚಂದ್ರನ್ ಅವರು ಕೂಡ ಉಳಿಸಿಕೊಳ್ಳುತ್ತಾರೆನ್ನುವುದು ನಮ್ಮ ಆಶಯ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *