ಇದನ್ನು ಅಘಾತಕಾರಿ ಎನ್ನಬೇಕೋ.. ಆತಂಕಕಾರಿ ಎನ್ನಬೇಕೋ..ಅಥವಾ ನಿರೀಕ್ಷಿತ ಎನ್ನಬೇಕೋ ಗೊತ್ತಾಗ್ತಿಲ್ಲ.ಕನ್ನಡದ ನಂಬರ್ 1 ಚಾನೆಲ್ ಟಿವಿ9 ನ ಮಾತೃ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಸಾಕಷ್ಟು ಚಾನೆಲ್ ಗಳು ಆರ್ಥಿಕ ನಷ್ಟದಲ್ಲಿವೆ ಎನ್ನುವ ಸುದ್ದಿ ಮಾರುಕಟ್ಟೆಯಲ್ಲಿ ಪಸರ್ ಆಗ್ತಿದೆ. ಟಿವಿ9 ಟ್ಯಾಗ್ ನ ಅಡಿಯಲ್ಲಿ ನಡೆಯುತ್ತಿರುವ ಚಾನೆಲ್ ಗಳ ಪೈಕಿ ಲಾಭದಲ್ಲಿರುವುದು ಕೇವಲ ಟಿವಿ9 ಕನ್ನಡ ಎನ್ನಲಾಗ್ತಿದೆ.ಉಳಿದ ಪ್ರಾದೇಶಿಕ ಭಾಷೆಯ ನ್ಯೂಸ್ ಚಾನೆಲ್ ಗಳ ಆರ್ಥಿಕತೆ ಕುಸಿದುಬಿದ್ದಿದೆಯಂತೆ.ಇದನ್ನು ಸರಿದೂಗಿಸುವ ಕಾರಣಕ್ಕೆ ಮ್ಯಾನೇಜ್ಮೆಂಟ್ ಮೊದಲ ಹಂತದಲ್ಲಿ ಕೈ ಹಾಕಿರುವುದು ಅನಗತ್ಯ ಖರ್ಚುಗಳಿಗೆ ಹಾಗೆಯೇ .ನಷ್ಟಕ್ಕೆ ಕಾರಣವಾಗಬಹುದಾದ ಎಲ್ಲಾ ಅನಾವಶ್ಯಕ ಹೊರೆಗಳಿಗೆಯಂತೆ..ಇದರ ಪ್ರಯೋಗ ಕನ್ನಡ ಚಾನೆಲ್ ನಲ್ಲೂ ಪ್ರಾಯೋಗಿಕವಾಗಿ ಶುರುವಾಗಿಬಿಟ್ಟಿದೆಯಂತೆ. ಇದರ ಲಕ್ಷಣ ಈಗಾಗಲೇ ಗೋಚರಿಸಲಾರಂಭಿಸಿದೆಯಂತೆ.ಇದು ಅಲ್ಲಿ ಕೆಲಸ ಮಾಡ್ತಿರುವ ಸಿಬ್ಬಂದಿಯಲ್ಲೂ ಆತಂಕ ಮೂಡಿಸಿದೆಯಂತೆ.ಇದು ಸಹಜ ಕೂಡ ಬಿಡಿ.
ಕನ್ನಡದ ಬಹುತೇಕ ಚಾನೆಲ್ ಗಳ ಆರ್ಥಿಕ ಸ್ಥಿತಿ ಶೋಚನೀಯವಾಗಿರುವ ಸನ್ನಿವೇಶದಲ್ಲಿ ತನ್ನ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಬಂದಿರುವ ಸಂಸ್ಥೆ ಟಿವಿ9.ಮಾಲೀಕತ್ವ ಬದಲಾದರೂ, ಹೊಣೆಗಾರಿಕೆಗಳು ಸ್ಥಿತ್ಯಂತರಗೊಂಡರೂ, ಮುಖಗಳು ಬದಲಾದರೂ ಚಾನೆಲ್ ತನ್ನ ಗಟ್ಟಿತನ-ಸ್ವಂತಿಕೆ-ಜೀವಂತಿಕೆಯನ್ನು ಸ್ವಲ್ಪವೂ ಬದಲಿಸಿಕೊಂಡಿಲ್ಲ( ಇಲ್ಲಿ ನಡೆಯುತ್ತಿರುವ ಒಂದಷ್ಟು ಅನ್ಯಾಯ-ಅಕ್ರಮ- ಅಸಹ್ಯಗಳನ್ನು ಹೊರತುಪಡಿಸಿ..ಇದಕ್ಕೆ ಅಂಥದ್ದಕೆಲ್ಲಾ ಕಾಲ ಕಾಲಕ್ಕೆ ಕಡಿವಾಣ ಹಾಕದೆ ಸುಮ್ಮನಾಗಿರುವ ಮ್ಯಾನೇಜ್ಮೆಂಟ್ ಕೂಡ ಹೊಣೆಯೇ ಬಿಡಿ). ಟಿಆರ್ ಪಿಯಲ್ಲಿ ಮಹಾರಾಜ್ ಎನ್ನುವ ಖ್ಯಾತಿಯನ್ನು ಕಳೆದುಕೊಂಡಾಗಲೂ ಅದರಿಂದ ಹೇಳಿಕೊಳ್ಳುವಂತ ಪರಿಣಾಮಗಳು ಕನ್ನಡದ ಮೇಲಾಗಿರಲಿಲ್ಲ. ಏಕಂದರೆ ಕನ್ನಡದ ಚಾನೆಲ್ ನ ಆರ್ಥಿಕ ಗಳಿಕೆ ಉಳಿದೆಲ್ಲಾ ಚಾನೆಲ್ ಗಳಿಗಿಂತ ಎಷ್ಟೋ ಹೆಚ್ಚಾಗಿದ್ದುದು ಮ್ಯಾನೇಜ್ಮೆಂಟ್ ಗೆ ಸಮಾಧಾನ ತಂದಿತ್ತೆನ್ನುವುದು ಚಾನೆಲ್ ನಲ್ಲಿ ಕೆಲಸ ಮಾಡುತ್ತಿರುವ ಹಲವು ಹಿರಿಯರ ಅಭಿಪ್ರಾಯ.
ಟಿಆರ್ ಪಿಯಲ್ಲಿ ಹಿಂದಕ್ಕೆ ಬಿದ್ದರೂ,ಮಾರುಕಟ್ಟೆಯಲ್ಲಿ ಟಿವಿ9 ಕನ್ನಡದ ಆರ್ಥಿಕ ಗಳಿಕೆಯ ಗ್ರಾಫ್ ಗೇನೂ ತೊಂದರೆಯಾಗಿಲ್ಲ.ಒಂದು ಅಂದಾಜಿನ ಪ್ರಕಾರ ಕನ್ನಡ ನ್ಯೂಸ್ ಚಾನೆಲ್ ಗಳ ಜಾಹಿರಾತು ಮಾರುಕಟ್ಟೆಯ ಗಳಿಕೆ 10 ಕೋಟಿ ಇದ್ದರೆ ಅದರಲ್ಲಿ 4-5 ಕೋಟಿಯಷ್ಟು ಗಳಿಕೆ ಅಂದರೆ ಮಾರುಕಟ್ಟೆಯ ಸಿಂಹಪಾಲನ್ನು ಟಿವಿ9 ಅನಾಯಾಸವಾಗಿ ಗಿಟ್ಟಿಸಲಾರಂಭಿಸಿದೆ.ಟಿವಿ9 ನಲ್ಲಿ ಜಾಹಿರಾತು ಬಂದರೇನೆ ನಮಗೆ ಕಮರ್ಷಿಯಲ್ಲಾಗಿ ಲಾಭ ಆಗೋದೆನ್ನುವ ಮನಸ್ತಿತಿ ಇವತ್ತಿಗೂ ಜಾಹಿರಾತುದಾರರಲ್ಲಿದೆ.ಹಾಗಾಗಿನೇ ದಶಕದಿಂದಲೂ ಟಿವಿ9 ತನ್ನ ಸ್ಥಾನವನ್ನು ಎಲ್ಲದರಲ್ಲೂ ಭದ್ರ ಮಾಡಿಟ್ಟು ಕೊಂಡಿದೆ.ಕನ್ನಡ ಚಾನೆಲ್ ನ ಆರ್ಥಿಕತೆ ಚೆನ್ನಾಗಿರುವುದರಿಂದಲೇ ಮ್ಯಾನೇಜ್ಮೆಂಟ್ ಬೆಂಗಳೂರು ಕಚೇರಿಯಲ್ಲಿ ಏನೇ ವ್ಯತ್ಯಾಸವಾದ್ರೂ ಅದನ್ನು ಗಣನೆಗೇ ತೆಗೆದುಕೊಳ್ಳುತ್ತಿರಲಿಲ್ಲವಂತೆ.
ಟಿವಿ9 ಸಮೂಹ ಸಂಸ್ಥೆ ಬಗ್ಗೆ ಒಂದಿಷ್ಟು: ” ಗೂಗಲ್ ನಲ್ಲಿ ಲಭ್ಯವಿರುವ ಮಾಹಿತಿಗಳ ಪ್ರಕಾರ ಟಿವಿ9 (TV9 Network) ಸಮೂಹದ ಪ್ರಮುಖ ಒಡೆತನವು ಅಲಾಂಡಾ ಮೀಡಿಯಾ ಪ್ರೈವೇಟ್ ಲಿಮಿಟೆಡ್ (Alanda Media Pvt Ltd) ಕೈಯಲ್ಲಿದೆ. ಈ ಸಂಸ್ಥೆಯ ಮೂಲಕ ಭಾರತದ ಪ್ರಸಿದ್ಧ ಉದ್ಯಮ ಸಮೂಹಗಳಾದ ಮೈ ಹೋಮ್ ಗ್ರೂಪ್ (My Home Group) ಮತ್ತು ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಟಿವಿ9 ನ ಪ್ರಮುಖ ಮಾಲೀಕರಾಗಿದ್ದಾರೆ ಟಿವಿ9 ನೆಟ್‌ವರ್ಕ್‌ನ ಸುದ್ದಿ ವಾಹಿನಿಗಳನ್ನು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ (ABCL) ನಿರ್ವಹಿಸುತ್ತದೆ. ಈ ABCL ಕಂಪನಿಯ ಶೇಕಡಾ 90 ಕ್ಕಿಂತ ಹೆಚ್ಚು ಷೇರುಗಳನ್ನು ಅಲಾಂಡಾ ಮೀಡಿಯಾ ಸಂಸ್ಥೆಯು ಹೊಂದಿದೆ.ಪ್ರಮುಖ ಉದ್ಯಮಿಗಳು: ಮೈ ಹೋಮ್ ಗ್ರೂಪ್‌ನ ಮುಖ್ಯಸ್ಥರಾದ ಜುಪಲ್ಲಿ ರಾಮೇಶ್ವರ ರಾವ್ ಮತ್ತು MEIL ಸಂಸ್ಥೆಯ ಪ್ರವರ್ತಕರು ಇದರ ಪ್ರಮುಖ ಹೂಡಿಕೆದಾರರಾಗಿದ್ದಾರೆ”
ಮ್ಯಾನೇಜ್ಮೆಂಟ್ ಗೆ ಪೂರೈಸಬೇಕಾದ ಸಂಪನ್ಮೂಲಕ್ಕಿಂತ ತುಸು ಹೆಚ್ಚನ್ನೇ ನೀಡುತ್ತಿದ್ದ ಟಿವಿ9 ಕನ್ನಡದ ಆಡಳಿತ ಕೂಡ ನೆಮ್ಮದಿಯಿಂದಿತ್ತು.ಯಾವ ತಂಟೆ ತಕರಾರುಗಳಿಲ್ಲದಂತೆ ಅನಾಯಾಸವಾಗಿ ಇಲ್ಲಿನ ವ್ಯವಸ್ಥೆ ಸಂಭಾಳಿಸಿಕೊಂಡು ಹೋಗುತ್ತಿತ್ತು( ಈ ಹಣದ ಹರಿವಿನಲ್ಲಿ ಮಿಂದು ಉದ್ದಾರವಾದವರು ಅದೆಷ್ಟೋ ಅಂತೆ..!)ಆದರೆ ಕೇಂದ್ರದ ಮ್ಯಾನೇಜ್ಮೆಂಟ್ ತೆಗೆದುಕೊಂಡಿದೆ ಎನ್ನಲಾಗುತ್ತಿರುವ ನಿರ್ದಾರಕ್ಕೆ ಬೆಂಗಳೂರು ಕಚೇರಿಯೂ ಬೆಚ್ಚಿಬಿದ್ದಿದೆಯಂತೆ.ಟಿವಿ ಕನ್ನಡ ಬಿಟ್ಟರೆ ಟಿವಿ9 ಅಧೀನದಲ್ಲಿ ನಡೆಯುತ್ತಿರುವ ಬಹುತೇಕ ಚಾನೆಲ್ ಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆಯಂತೆ.ಅವುಗಳ ಆರ್ಥಿಕ ಗಳಿಕೆ ನಿರೀಕ್ಷೆಗಿಂತಲೂ ಕಳಪೆಯಾಗಿದೆಯಂತೆ.ಅವುಗಳನ್ನು ಆನೆ ರೀತಿ ಸಾಕುವುದಕ್ಕಿಂತ ಕೆಲವನ್ನು ಮುಚ್ಚುವುದೇ ಒಳ್ಳೇದೆನ್ನುವ ನಿರ್ದಾರಕ್ಕೂ ಮ್ಯಾನೇಜ್ಮೆಂಟ್ ಬಂದಿದೆಯಂತೆ. ಆದರೆ ಮುಚ್ಚಿದರೆ ಮರ್ಯಾದೆ ಹೋಗಬಹುದೆನ್ನುವ ಕಾರಣಕ್ಕೆ ಬಹುದೊಡ್ಡ ನಿರ್ದಾರ ಮಾಡಿದೆ.ಅದರ ಎಫೆಕ್ಟ್ ಇದೀಗ ಬೆಂಗಳೂರು ಕಚೇರಿಗೂ ವಿಸ್ತರಿಸಿದೆಯಂತೆ.
ಟಿವಿ9 ಸಮೂಹದಲ್ಲಿರುವ ನಷ್ಟದಲ್ಲಿ ನಡೆಯುತ್ತಿದೆ ಎನ್ನಲಾದ ಚಾನೆಲ್ ಗಳ ನಿರ್ವಹಣೆಗೆ ಈಗ ಟಿವಿ9 ಕನ್ನಡದ ಹಣವನ್ನು ಬಳಸಿಕೊಳ್ಳಬೇಕಾದ ಸ್ಥಿತಿ ಬಂದಿದೆ ಎನ್ನಲಾಗುತ್ತಿದೆ.ಒಂದು ಮಾಹಿತಿ ಪ್ರಕಾರ ಟಿವಿ9 ಕನ್ನಡಕ್ಕೆ ಸಧ್ಯಕ್ಕೆ ಎರಡು ರೀತಿಯ ಆದಾಯ ಬರುತ್ತಿದೆಯಂತೆ.ಒಂದು ಚಾನೆಲ್ ಮೂಲಕ ಇನ್ನೊಂದು ಡಿಜಿಟಲ್ ಮೂಲಕ.ಸ್ಯಾಟಲೈಟ್ ಗಿಂತ ಡಿಜಿಟಲ್ ನಿಂದಲೇ ಕೋಟ್ಯಾಂತರ ಆದಾಯ ಟಿವಿ9 ಕನ್ನಡಕ್ಕೆ ಬರುತ್ತಿದೆಯಂತೆ.ಇಡೀ ಟಿವಿ9 ಕನ್ನಡ ಸಂಸ್ಥೆಯ ಸಿಬ್ಬಂದಿಯ ಸಂಬಳದಿಂದ ಹಿಡಿದು ಎಲ್ಲಾ ಖರ್ಚು ವೆಚ್ಚಗಳನ್ನು ಸರಿದೂಗಿಸುತ್ತಿರುವುದೇ ಡಿಜಿಟಲ್ ಆದಾಯವಂತೆ.ಎಲ್ಲಾ ಕೊಟ್ಟು ಅದರಲ್ಲೂ ಒಂದಷ್ಟು ಲಕ್ಷಗಳು ಮಿಕ್ಕುತ್ತವಂತೆ.ಸ್ಯಾಟಲೈಟ್ ಮೂಲಕ ಬರುತ್ತಿರುವ ಆದಾಯ ಇಡಿಗಂಟಾಗಿ ಸೇವ್ ಆಗುತ್ತಲಿದೆಯಂತೆ.ಹಾಗಾಗಿನೇ ಟಿವಿ9 ಕನ್ನಡದ ಗಳಿಕೆ ಮೇಲೆ ಮ್ಯಾನೇಜ್ಮೆಂಟ್ ಗಮನಹರಿಸಿದೆಯಂತೆ.ಇದರ ಲಾಭವನ್ನು ಬೇರೆ ಚಾನೆಲ್ ಗಳ ನಿರ್ವಹಣೆಗೆ ಬಳಸಲು ನಿರ್ದರಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಬರುನ್ ದಾಸ್: ವ್ಯವಸ್ಥಾಪಕ ನಿರ್ದೇಶಕರು- ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ (ABCL)–
ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ: “ಪ್ರಸ್ತುತ ಇಡೀ ಟಿವಿ9 ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕರು (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಬರುನ್ ದಾಸ್ ಕಾರ್ಯನಿರ್ವಹಿಸುತ್ತಿದ್ದಾರೆ.ವಿ ಪ್ರಕಾಶ್ ಮತ್ತು ಇತರ ಪತ್ರಕರ್ತರ ತಂಡವು ಆರಂಭಿಸಿತ್ತು (ನಂತರ 2019 ರಲ್ಲಿ ಅವರು ಸಂಸ್ಥೆಯಿಂದ ಹೊರಬಂದರು).ಈ ಸಮೂಹವು TV9 ಕನ್ನಡ ಸೇರಿದಂತೆ ತೆಲುಗು, ಹಿಂದಿ (ಟಿವಿ9 ಭಾರತವರ್ಷ), ಗುಜರಾತಿ, ಮರಾಠಿ ಮತ್ತು ಬಾಂಗ್ಲಾ ಭಾಷೆಗಳಲ್ಲಿ ಪ್ರಮುಖ ಸುದ್ದಿ ವಾಹಿನಿಗಳನ್ನು ನಡೆಸುತ್ತಿದೆ ಟಿವಿ9 ಸಮೂಹವು ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ (ABCL) ನ ಒಡೆತನದಲ್ಲಿದೆ。 ಪ್ರಸ್ತುತ ಇದರ ಪ್ರಮುಖ ಷೇರುದಾರರು ಮೇಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ನ ಪ್ರವರ್ತಕರು ಮತ್ತು ಅಲಾಂಡಾ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಆಗಿದೆಟಿವಿ9 ನೆಟ್‌ವರ್ಕ್‌ನಲ್ಲಿ TV9 ಕನ್ನಡ ಸೇರಿದಂತೆ ಹಲವಾರು ಪ್ರಾದೇಶಿಕ ಸುದ್ದಿ ವಾಹಿನಿಗಳು ಮತ್ತು ರಾಷ್ಟ್ರೀಯ ಮಟ್ಟದ TV9 ಭಾರತವರ್ಷ ಕಾರ್ಯನಿರ್ವಹಿಸುತ್ತಿವೆ。 ಇದರ ಆಡಳಿತ ಮಂಡಳಿಯಲ್ಲಿ ಜಗಪತಿ ರಾವ್ ಜುಪಲ್ಲಿ ಮತ್ತು ಬರುನ್ ದಾಸ್ ನಿರ್ದೇಶಕರಿದ್ದಾರೆ”
ಒಂದಷ್ಟು ದಿನಗಳಿಂದಲೂ ಕೇಂದ್ರದ ಮ್ಯಾನೇಜ್ಮೆಂಟ್ ಬೆಂಗಳೂರು ಕಚೇರಿಯನ್ನು ಕೇಂದ್ರೀಕರಿಸಿಕೊಂಡು ಒಂದಷ್ಟು ಬದಲಾವಣೆ ತರುವ ಪ್ರಯತ್ನದಲ್ಲಿದೆ ಎನ್ನುವ ಮಾತಿದೆ.ಸಧ್ಯಕ್ಕೆ ಯಾವುದೇ ಸಿಬ್ಬಂದಿಯ ಕೆಲಸಕ್ಕೆ ಬಾಧೆಯನ್ನು ಉಂಟು ಮಾಡುವ ಉದ್ದೇಶ ಮ್ಯಾನೇಜ್ಮೆಂಟ್ ಗೆ ಇಲ್ಲವಂತೆ.ಅದರ ಮೂಲ ಉದ್ದೇಶ, ಟಿವಿ9 ಕನ್ನಡ ಚಾನೆಲ್ ನಲ್ಲಿ ನಡೆಯುತ್ತಿದೆ ಎನ್ನಲಾದ ಅನಗತ್ಯ ಹಾಗೂ ಹೆಚ್ಚುವರಿ ಹೊರೆಗಳಿಗೆ ಬ್ರೇಕ್ ಹಾಕೋದಂತೆ.ಅಂದರೆ ದಿನ ಕಳೆದಂತೆಲ್ಲಾ ತಂತ್ರಜ್ಞಾನ ಹೆಚ್ಚೆಚ್ಚು ಅನಾಯಾಸವಾಗುತ್ತಿರುವುದನ್ನು ಎನ್ ಕ್ಯಾಶ್ ಮಾಡಿಕೊಳ್ಳಲಿಕ್ಕೆ ಸಿಬ್ಬಂದಿ ಹಾಗೂ ಅವರ ಸವಲತ್ತುಗಳಿಗೆ ಮಾಡಲಾಗುತ್ತಿದ್ದ ಖರ್ಚನ್ನು ತಗ್ಗಿಸುವುದು ಪ್ರಮುಖ ಉದ್ದೇಶವಾಗಿದೆಯಂತೆ.ಹಾಗಾಗಿ ಸಿಬ್ಬಂದಿಗೆ ಮಾಡಲಾಗುತ್ತಿರುವ ಖರ್ಚುಗಳು ಹಾಗೂ ಬೇರೆ ವ್ಯವಸ್ಥೆಗಳಿಗೆ ಮಾಡಲಾಗುತ್ತಿದ್ದ ಖರ್ಚನ್ನು ತಗ್ಗಿಸಲು ಸೂಚನೆ ನೀಡಲಾಗಿದೆಯಂತೆ. ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಂತಿಲ್ಲ..ಹೆಚ್ಚು ಸಂಬಳ ಕೊಡುವಂತಿಲ್ಲ…ಖರ್ಚು ವೆಚ್ಚಗಳಿಗೆ ಕಾರಣವಾಗುವ ಕಾರಣವಾಗುವ ಕಾರ್ಯಕ್ರಮಗಳಿಗೆಲ್ಲಾ ಬ್ರೇಕ್ ಹಾಕಬೇಕೆನ್ನುವ ಸೂಚನೆಯನ್ನು ಯಾರಿಗೆ ಕೊಡಬೇಕೋ..ಅವರಿಗೆ ಕೊಟ್ಟಾಗಿದೆ ಎನ್ನುವುದು ಲೇಟೆಸ್ಟ್ ಮಾಹಿತಿ.
ಟಿವಿ9 ಸಮೂಹ ಸಂಸ್ಥೆಯ ಇತರೆ ಚಾನೆಲ್ ಗಳನ್ನು ಮುಚ್ಚದೆ ಎಂದಿನಂತೆ ನಡೆಸಿಕೊಂಡು ಹೋಗುವ ಕಾರಣಕ್ಕೆ ಟಿವಿ9 ಕನ್ನಡದಲ್ಲಿ ಸಧ್ಯಕ್ಕೆ ಕೇವಲ ಖರ್ಚುಗಳಿಗೆ ಕಡಿವಾಣ ಹಾಕೊಕ್ಕೆ ಮ್ಯಾನೇಜ್ಮೆಂಟ್ ಸೂಚಿಸಿದೆ ಎನ್ನಲಾಗಿದೆ.ಇದನ್ನು ಬಿಟ್ಟು ಬೇರೆಯದರ ಬಗ್ಗೆ ಚರ್ಚೆ ನಡೆದಿಲ್ಲ ಎನ್ನಲಾಗ್ತಿದೆ.ಇದು ಸಿಬ್ಬಂದಿಯಲ್ಲಿ ನಿಟ್ಟುಸಿರು ಮೂಡಿಸಿದೆ. ಮ್ಯಾನೇಜ್ಮೆಂಟನ್ನು ಆ ನಿಟ್ಟಿನಲ್ಲಿ ಬೆಂಗಳೂರು ಆಡಳಿತ ಸಮಾಧಾನಪಡಿಸಿದೆಯಂತೆ.ಇದರಿಂದ ಕೆಲಸ ಕಳೆದುಕೊಳ್ಳಬಹುದಾದ ಭೀತಿಯಲ್ಲಿದ್ದ ಮಾದ್ಯಮ ಮಿತ್ರರಿಗೆ ರಿಲೀಫ್ ಸಿಕ್ಕಂತಾಗಿದೆ.ಆದರೆ ಪರಿಸ್ಥಿತಿ ಹೀಗೆಯೇ ಇರುತ್ತೆ ಎಂದೂ ಹೇಳಲಿಕ್ಕಾಗೊಲ್ಲ..ಭವಿಷ್ಯದಲ್ಲಿ ಅನಗತ್ಯ ವೆಚ್ಚ ಕಡಿತಕ್ಕೆ ಬ್ರೇಕ್ ಹಾಕುವ ಭರದಲ್ಲಿ ನಮ್ಮ ಕೆಲಸವನ್ನು ಕಸಿದುಕೊಂಡ್ರೆ ಹೇಗಪ್ಪಾ ಎನ್ನುವ ಭಯ ಅನೇಕರನ್ನು ಕಾಡುತ್ತಿದೆಯಂತೆ. ದೊಡ್ಡ ಮೊತ್ತದ ಸಂಬಳ ಪಡೆಯುತ್ತಿರುವವರಲ್ಲಿ..ಹಾಗೆಯೇ ವಯಸ್ಸಾದವರಲ್ಲಿಯೇ ಅಂತದ್ದೊಂದು ಭಯ ಹೆಚ್ಚಾಗಿದೆಯಂತೆ..ಹಾಗೆ ಆಗದಿರಲಿ ಎನ್ನುವುದೇ ನಮ್ಮ ಹಾರೈಕೆ ಕೂಡ.