ಕ್ರೈಂ ವರದಿಗಾರನ ಸಸ್ಪೆನ್ಸ್-ಥ್ರಿಲ್ಲರ್ ಅನುಭವವೇ “ಕಪ್ಪುಹುಂಜ” ಕಾದಂಬರಿಯಾದಾಗ..?


ಕ್ರೈಂ ಸುದ್ದಿ (crime news)ಜಗತ್ತಿನಲ್ಲಿ ಅಪರಾಧವೊಂದರ ಬೆನ್ನತ್ತಿ ವರದಿಗಾರಿಕೆ(reporting) ಮಾಡುವುದು ಒಬ್ಬ ಕ್ರೈಂ ರಿಪೋರ್ಟರ್‌ ಗೆ, ತನಿಖಾಧಿಕಾರಿಯ ಇನ್ವೆಸ್ಟಿಗೇ಼ಷನ್‌(investigation) ನಷ್ಟೇ ಸವಾಲಿನದು ಹಾಗೆಯೇ ಕ್ಲಿಷ್ಟವಾದದ್ದು, ಎಲ್ಲ ಮೀರಿ ರೋಚಕವಾದದ್ದು. ಅದಕ್ಕೊಂದು ತಾರ್ಕಿಕ ಅಂತ್ಯ ಕೊಡೋದಿದೆಯೆಲ್ಲಾ ಅದು ನೀಡುವ ಸಮಾಧಾನ-ಆತ್ಮತೃಪ್ತಿ ತುಂಬಾ ದೊಡ್ಡದು.ನಮ್ಮ ಕ್ರೈಂ ಸುದ್ದಿಮಿತ್ರರ ದೈನಂದಿನ ವೃತ್ತಿ ಯಾವುದಾದರೊಂದು ಕ್ರೈಂನ ಸುತ್ತವೇ ಸುತ್ತುತ್ತಲಿರುತ್ತದೆ.ಅದರ ಫಾಲೋಅಪ್‌, ಟ್ವಿಸ್ಟ್‌, ಯೂಟರ್ನ್‌.. ಹೀಗೆಯೇ ನಡೆದಿರುತ್ತದೆ.ಅದನ್ನೆಲ್ಲಾ ಕ್ರೋಢೀಕರಿಸಿದ್ರೆ ಎಲ್ಲರೂ ಒಂದೊಂದು ಕಥೆ-ಕಾದಂಬರಿ ಬರೆಯಬಲ್ಲಷ್ಟು ಅಗಾಧ ಅನುಭವ ಪಡೆದಿರುತ್ತಾರೆ.

ಯಾವುದಾದರೂ ಅನುಭವಿ ಕ್ರೈಂ ರಿಪೋರ್ಟರ್‌(crime reporter) ಜತೆ ಒಂದು ಅರ್ಧ ಗಂಟೆ ಮಾತನಾಡಿ ದ್ರೆ ಅದು ವೇದ್ಯವಾಗಿಬಿಡುತ್ತೆ.ಅನೇಕರಿಗೆ ಅದನ್ನು ದಾಖಲಿಸಬೇಕೆನ್ನುವ ಇಚ್ಚೆಇದ್ದರೂ ಕೆಲಸದ ಒತ್ತಡ- ತಾಳ್ಮೆ-ಸಂಯಮ-ಏಕಾಗ್ರತೆಯ ಕೊರತೆ ಅದಕ್ಕೆ ಅನುವು ಮಾಡಿಕೊಡುವುದಿಲ್ಲ ಅಷ್ಟೆ..ಆದರೆ ಆ ಅನುಭವಗಳನ್ನು ಕೃತಿಯಾಗಿ ದಾಖಲಿಸಲೇಬೇಕೆನ್ನುವ ಪಟ್ಟನ್ನು ಹಿಡಿದು ಕೂತರೆ ಕಪ್ಪುಹುಂಜದಂಥ ಕಾದಂಬರಿ ಹೊರಹೊಮ್ಮುತ್ತದೆ.ಅದರ ಸೃಷ್ಟಿಕರ್ತ B.V.ಮನೋಹರ್‌( B.V MANOHAR) ನಂಥ ಹಿರಿಯ ಕ್ರೈಂ ವರದಿಗಾರ ಕಾದಂಬರಿಕಾರನಾಗಿ ವಿಜೃಂಭಿಸುತ್ತಾನೆ.

ಹೌದು.. ತನ್ನ ಅನೇಕ ವರ್ಷಗಳ ಕ್ರೈಂ ವರದಿಗಾರಿಕೆಯ ಅನುಭವಗಳನ್ನು ಕ್ರೋಢೀಕರಿಸಿ ಗೆಳೆಯ   ಬಿ.ವಿ.ಮನೋಹರ್‌  “ಕಪ್ಪುಹುಂಜ” (KEMPU HUNJA)ಎನ್ನುವ ಅತ್ಯದ್ಭುತ ಪತ್ತೆದಾರಿ ಕಾದಂಬರಿಯನ್ನು ಸಾಹಿತ್ಯ ಲೋಕ ಕ್ಕೆ ನೀಡಿದ್ದಾನೆ.(ಕ್ರೈಂ ವರದಿಗಾರಿಕೆಗೆ ಇದೊಂದು ಮೂಲ ಆಕರ ಹಾಗೂ ಸಂಶೋಧನಾ ಸಂಪನ್ಮೂಲವಾಗಲೂಬಹುದೇನೋ..) ಕ್ರೈಂ ಥ್ರಿಲ್ಲರ್‌ ಪಾತ್ರ-ಸನ್ನಿವೇಶಗಳತ್ತಲೇ ಸುತ್ತುವ ಕಾದಂಬರಿ ಕೌತುಕತೆಯಲ್ಲಿ ಓದಿಸಿಕೊಂಡು ಹೋಗುವ ತಾಕತ್ತನ್ನು ಹೊಂದಿದೆ.ಎಲ್ಲಿಯೂ ಬೋರ್‌ ಹೊಡೆಸದೆ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹಿಡಿದಿಟ್ಟುಕೊಂಡು ಹೋಗುವ ಕಪ್ಪುಹುಂಜವನ್ನು ಓದಿ ಮುಗಿಸಿದ ಮೇಲೆ ಯಾವುದೋ ಅತ್ಯದ್ಭುತ  ಕ್ರೈಂ ಥ್ರಿಲ್ಲರ್‌ ಸಿನೆಮಾ ನೋಡಿದ ಸಾರ್ಥಕ ಭಾವ ಮೂಡೋದಂತೂ ಗ್ಯಾರಂಟಿ.ಕಾದಂಬರಿ ಓದಿಮುಗಿಸಿದ ಅನೇಕರ ಅಭಿಪ್ರಾಯಗಳು ಹೀಗೆಯೇ ಇವೆ.( ಈ ಕಪ್ಪು ಹುಂಜ ಕಾದಂಬರಿ ಯಾವ್‌ ಪರಿ ಓದುಗರ ಮನ ಮುಟ್ಟಿದೆ ಎಂದ್ರೆ ಮುದ್ರಣವಾದ ಒಂದೇ ತಿಂಗಳಲ್ಲಿ ಎಲ್ಲಾ ಪುಸ್ತಕಗಳು ಸೋಲ್ಡ್‌ ಔಟ್‌ ಆಗಿ ಎರಡನೇ ಮುದ್ರಣಕ್ಕಾಗಿ ಅಚ್ಚಿಗೆ  ಹೋಗಿದೆಯಂತೆ)

ಕ್ರೈಂ ವರದಿಗಾರಿಕೆಯಲ್ಲಿ ಗೆಳೆಯ ಬಿ.ವಿ.ಮನೋಹರ್‌ ದ್ದು ಅನೇಕ ವರ್ಷಗಳ ಅನುಭವ. ಮೊದಲು ಫೀಲ್ಡ್‌ ಗೆ ಹೋಗಿ ರಿಪೋರ್ಟ್‌ ಮಾಡಿಕೊಂಡು ಬರುತ್ತಿದ್ದ ಆತ ನಂತರ ಇಡೀ ತಂಡವನ್ನು ಲೀಡ್‌ ಮಾಡುವ ಮಟ್ಟಕ್ಕೆ ಬೆಳೆದ.ತನ್ನ ಕಿರಿಯ ವರದಿಗಾರರ ಕ್ರೈಂ ಸ್ಟೋರಿಗಳನ್ನು ನ್ಯೂಸ್‌ ರೂಂನಲ್ಲಿ ಕೂತುಕೊಂಡು ಅದಕ್ಕೊಂದು ರೂಪ-ಸ್ವರೂಪ-ರೋಚಕತೆಯನ್ನು ನೀಡುತ್ತಿದ್ದ.ಬಹುಷಃ ಆತನ ಬರಹಗಾರಿಕೆ ಹೆಚ್ಚು ತೀಕ್ಷ್ಣ, ಸೂಕ್ಷ್ಮ, ಅತ್ಯಾಕರ್ಷಕವಾಗೊಕ್ಕೆ ಕಾರಣವೂ ಇದೇ ಆಗಿರಬೇಕು.ಸ್ಕ್ರೀನ್ ಮೇಲೆ ಆ ಸ್ಟೋರಿ ಅತ್ಯದ್ಭುತವಾಗಿ ಮೂಡಿಬಂದಾಗಲೆಲ್ಲಾ ಅನೇಕರು ನಿಮ್ಮೊಳಗೆ ಒಬ್ಬ ಒಳ್ಳೆಯ ರೈಟರ್‌ ಇದ್ದಾನೆ ಸರ್.ಅವನಿಗೆ ಜೀವವನ್ನೇಕೆ ಕೊಡಬಾರದು ಎನ್ನುತ್ತಿದ್ದರಂತೆ.ಒಂದು ಕ್ಷಣ ಹೌದಲ್ವಾ ಎಂದೆನಿಸಿದ್ರೂ ನಂತರ ಕೆಲಸದ ಒತ್ತಡದಲ್ಲಿ ಅದನ್ನು ಮರೆತೇ ಬಿಡ್ತಿದ್ದರಂತೆ.ಆದರೆ ಆ ಒಂದು ಘಟನೆ ಅವರನ್ನು ಒಂದು ಕಾದಂಬರಿಯನ್ನು ಬರೆಯಲೇಬೇಕೆನ್ನುವ ಇರಾದೆ ಮೂಡಿಸಿತಂತೆ.ಅದನ್ನು ಅವರೇ ಹೇಳಿಕೊಂಡಿದ್ದಾರೆ ಕೇಳಿ..

“ದಿನನಿತ್ಯ ನಮ್ಮ ಕಚೇರಿಗೆ ಕ್ರೈಂ ಸ್ಟೋರಿಗಳಿಗೆ ಸಂಬಂಧಿಸಿದಂತೆ ರಿಯಾಕ್ಷನ್‌ ಪಡೆಯಲು ಹಲವಾರು ವರದಿಗಾರರು ಬರ್ತಾರೆ.ಅವರಲ್ಲಿ ಕೆಲವೇ ಕೆಲವರ ಜತೆ ಕೇಸ್‌ ನೊಳಗಿನ ಸೂಕ್ಷ್ಮಗಳ ಬಗ್ಗೆ ಮಾತನಾಡುವಷ್ಟು ಆತ್ಮೀಯತೆ ಮೂಡಿರುತ್ತೆ.ಅಂಥ ಆತ್ಮೀಯ ರಿಪೋರ್ಟರ್ ಗಳ ಬಳಗದಲ್ಲಿ ಗುರುತಿಸಿಕೊಂಡವರು ನಮ್ಮ ಮನೋಹರ್‌,ನಮ್ಮ ಜತೆ ಹಲವು ಕೇಸ್‌ ಗಳ ಬಗ್ಗೆ ಅವರು ಸುಧೀರ್ಘವಾಗಿ ಚರ್ಚೆ ಮಾಡಿದಾಗ ನಮಗೂ ಅವರಲ್ಲಿನ ನೈಜ ಆಸಕ್ತಿ ಬಗ್ಗೆ ಸಂತೋಷವಾಯಿತು.ಎಷ್ಟೋ ಪ್ರಕರಣಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದೇವೆ.ಈಗ ಅದೆಲ್ಲಾ ಏಕೆ ಎನ್ನುವುದು ಅರ್ಥವಾಗುತ್ತಿದೆ.ಅದೆಲ್ಲಾ ಬರಹದ ರೂಪದಲ್ಲಿ ಮೂಡಿ ಬಂದಿರುವುದು ಸಂತಸದ ವಿಚಾರ.ಕೇವಲ ಸುದ್ದಿಗಳನ್ನು ಕೇಳಿಸಿಕೊಂಡು ರಿಪೋರ್ಟಿಂಗ್‌ ಮಾಡುವುದಕ್ಕೆ ಕ್ರೈಂ ರಿಪೋರ್ಟರ್‌ ಗಳು ಸೀಮಿತವಾಗಬಾರದು.ಮನೋಹರ್‌ ಅವರಂತೆ ಅದಕ್ಕೊಂದು ಜೀವ ನೀಡುವ ಕೆಲಸ ಆಗಬೇಕು.ಮನೋಹರ್‌ ಅವರ ಕೃತಿಯನ್ನು ಓದುತ್ತಿದ್ದೇನೆ..ಓದಿಸಿಕೊಂಡು ಹೋಗುತ್ತಿದೆ.ನಮ್ಮ ನಡುವಿದ್ದ ಮನೋಹರ್‌ ಒಬ್ಬ ಕಾದಂಬರಿಕಾರನಾಗಿ ಹೊರ ಹೊಮ್ಮಿರುವುದು ಸಂತೋಷದ ವಿಷಯ.ಅವರಿಂದ ಇನ್ನೊಂದಷ್ಟು ಕೃತಿಗಳು ಮೂಡಿಬರಲಿ”.- ಹಿರಿಯ ಪೊಲೀಸ್‌ ಅಧಿಕಾರಿ

ಪ್ರತೀ ಸಲ ಪುಸ್ತಕಕೊಳ್ಳಲು ಹೋದಾಗ “ನೀವೇನೂ ಬರೆಯಲ್ವಾ”  ಅನ್ನೋ ಪ್ರಶ್ನೆಯೊಂದಿಗೆ ನಗುಮುಖದಲ್ಲಿ ಬರಮಾಡಿಕೊಳ್ತಿದ್ದ ಸ್ನೇಹ ಬುಕ್‌ ಹೌಸ್‌ ಮಾಲೀಕರಾದ ಶ್ರೀಯುತ, ಕೆ.ಬಿ ಪರಶಿವಪ್ಪನವರ ಕಾಳಜಿಯುತ ಪ್ರಶ್ನೆಗೆ ಉತ್ತರಿಸಲಾಗದೇ ಮುಗುಳ್ನಕ್ಕು ಪುಸ್ತಕ ಕೊಂಡು ಹೊರಬರುತ್ತಿದ್ದ ನನಗೆ, ನನ್ನಲ್ಲೂ ಒಬ್ಬ ಕಥೆಗಾರ ಇರಬಹುದು ಅನ್ನೋ ಸಣ್ಣ ಭರವಸೆ ಮೂಡಿದ್ದು ” ಕಪ್ಪು ಹುಂಜ” ಎಂಬ ಈ ಸಸ್ಪೆನ್ಸ್‌ ಥ್ರಿಲ್ಲರ್‌ ಬರೆಯಲು ಕುಳಿತಾಗ. ಕಳೆದ 17  ವರ್ಷಗಳ ಕಾಲ ನಾಡಿನ ಹಲವು ಹೆಸರಾಂತ ಸುದ್ದಿ ವಾಹಿನಿಗಳ ಬೆಂಗಳೂರು ಬ್ಯೂರೋದಲ್ಲಿ ಅಪರಾಧ ವರದಿಗಾರಿಕೆ ಮತ್ತು ಸ್ಕ್ರಿಪ್ಟ್‌ ರೈಟರ್‌ ಆಗಿ ಕೆಲಸಮಾಡಿದ ಅನುಭವ ಹೊಂದಿದ್ದ ನಾನು, ಕೊಲೆ, ಸುಲಿಗೆ, ಅತ್ಯಾಚಾರ, ಅನಾಚಾರಗಳಿಗೆ ಸಂಬಂಧಿಸಿದ ಕನಿಷ್ಠವೆಂದರೂ ಸಾವಿರಾರು ಕ್ರೈಂ ಸೀನ್‌ಗಳಿಗೆ (ಅಪರಾಧ ಸನ್ನಿವೇಶಗಳಿಗೆ) ಪ್ರತ್ಯಕ್ಷ ಸಾಕ್ಷಿ ಆಗಿದ್ದೇನೆ. ಹಲವು ನುರಿತ ಪೊಲೀಸ್‌ ತನಿಖಾಧಿಕಾರಿಗಳ ಜೊತೆಗೆ ಮುಖಾಮುಖಿಯಾಗಿ ಕುಳಿತು ಅವುಗಳ ಕುರಿತ ಮಾಹಿತಿ ಸಂಗ್ರಹಿಸಿದ್ದೇನೆ. ಅಪರಾಧ ತನಿಖೆಯ ರೋಚಕತೆಗಳನ್ನು ಕಣ್ಣಾರೆ ಕಂಡು ವರದಿಮಾಡಿದ್ದೇನೆ.

“ಮನೋಹರ್‌ ನಮ್ಮ ಓರಗೆಯ ಸ್ನೇಹಿತ.ನಮ್ಮ ನಡುವಿದ್ದರೂ ನಮಗಿಂತ ಮೀರಿ ಬೆಳೆದಿದ್ದಾನೆ ಎನ್ನುವದರ ಬಗ್ಗೆ ಹೆಮ್ಮೆ-ಅಭಿಮಾನವಿದೆ. ನಾವೆಲ್ಲಾ ಕೇವಲ ಸುದ್ದಿಯನ್ನು ವರದಿಗಾರಿಕೆ ದೃಷ್ಟಿಯಿಂದಷ್ಟೇ ನೋಡುತ್ತಿದ್ದೆವು.ಆದರೆ ಮನೋಹರ್‌ ಅದನ್ನು ಕೇಸ್‌ ಸ್ಟಡಿಯನ್ನಾಗಿ ಭಾವಿಸುತ್ತಿದ್ದ.ಅದರ ಬಗ್ಗೆ ಸ್ಟಡಿ ಮಾಡ್ತಿದ್ದ.ಹಿರಿಯ ಅಧಿಕಾರಿಗಳ ಜತೆ ಡಿಸ್ಕಸ್‌ ಮಾಡ್ತಿದ್ದ.ನಮಗೆ ಸ್ವಲ್ಪ ಅತಿಯಾಯ್ತು ಎನಿಸುತ್ತಿತ್ತು.ಆದರೆ ಅದು ಸ್ಕ್ರೀನ್ ಮೇಲೆ ಬಂದಾಗ ಮಾಡುತ್ತಿದ್ದ ಇಂಪ್ಯಾಕ್ಟ್‌ ಗಮನಿಸಿ ಹೆಮ್ಮೆ ಆಗುತ್ತಿತ್ತು.ಅವನ ಬರವಣಿಗೆ ಅತ್ಯದ್ಭುತ.ಅವನ ಕೃತಿಯಲ್ಲಿ ನಮ್ಮ ಜತೆಗಿನ ಸಾಕಷ್ಟು ವರದಿಗಾರಿಕೆಯ ಹೆಜ್ಜೆ ಗುರುತುಗಳಿವೆ.ಅದನ್ನು ಓದುವಾಗ ತಾಜಾ ಮಾಡಿಕೊ‍ಳ್ಳುತ್ತೇವೆ.ಗೆಳೆಯನಿಂದ ಇನ್ನೊಂದಷ್ಟು ಕೃತಿ ಹೊರಹೊಮ್ಮಲಿ”-  ಹಿರಿಯ ಕ್ರೈಂ ವರದಿಗಾರರು

ಆ ಅನುಭವಗಳೆಲ್ಲವೂ ನನಗೆ ಈ ಕಾದಂಬರಿ ಹೆಣೆಯಲು ಮೂಲ ದ್ರವ್ಯವಾಗಿ ಸಹಾಯಮಾಡಿದೆ.  ಹೀಗಾಗಿ ಈ ಪತ್ತೇದಾರಿ ಕಾದಂಬರಿಯಲ್ಲಿ ಬರುವ ಬಹುತೇಕ ಸನ್ನಿವೇಶಗಳು ಹಾಗೂ ಪಾತ್ರಗಳು ನಾನು ಕಣ್ಣಾರೆ ಕಂಡು, ಕೇಳಿ, ವರದಿಮಾಡಿದ ಅಂತಹ ಸನ್ನಿವೇಶಗಳಿಂದ ಸ್ಪೂರ್ತಿಪಡೆದಿದ್ದಾಗಿದೆ. ಓದುವ ಹವ್ಯಾಸ ವಿದ್ಯಾರ್ಥಿ ದೆಸೆಯಿಂದಲೇ ನನ್ನ ಆಸಕ್ತಿಗಳಲ್ಲೊಂದು. ಪೂರ್ಣಚಂದ್ರ ತೇಜಸ್ವಿ, ಕುಂವೀ, ರವಿ ಬೆಳೆಗರೆ,  ನಾಗತಿಹಳ್ಳಿ ಚಂದ್ರಶೇಖರ್‌, ಜೋಗಿ ನನ್ನ ನೆಚ್ಚಿನ ಲೇಖಕರು.

ALSO READ :  ನ್ಯೂಯಾರ್ಕ್ ಗೆ ಹೊರಟ್ಟಿದ್ದ 239 ಪ್ರಯಾಣಿಕರಿದ್ದ ವಿಮಾನ ದೆಹಲಿಗೆ ಮಾರ್ಗ ಬದಲಾವಣೆ!

ವಿದ್ಯಾರ್ಥಿಯಾಗಿದ್ದಾಗ ಪತ್ರಿಕೆಗಳಿಗೆ, ಕೆಲಸಕ್ಕೆ ಸೇರಿದ ಮೇಲೆ ದೈನಂದಿನ ವರದಿಗಾರಿಕೆ ಮತ್ತು ಕ್ರೈಂ ಕಾರ್ಯಕ್ರಮಗಳಿಗಷ್ಟೇ ಸ್ಕ್ರಿಪ್ಟ್‌ ಬರೆಯುತ್ತಿದ್ದ ನಾನು, ಇದೇ ಮೊದಲ ಬಾರಿಗೆ “ಕಪ್ಪು ಹುಂಜ”ದ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಈ ನನ್ನ ಮೊದಲ ಪ್ರಯತ್ನಕ್ಕೆ ನಾಡಿನ ಪ್ರತಿಷ್ಠಿತ ಪ್ರಕಾಶಕ ಸಂಸ್ಥೆಗಳಲ್ಲಿ ಒಂದಾದ “ಸ್ನೇಹ ಬುಕ್‌ಹೌಸ್‌” ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ತಿಳಿಸಿದ್ದಾರೆ.

ಬಿ.ವಿ ಮನೋಹರ್‌ ನ ಕಪ್ಪು ಹುಂಜ ಕಾದಂಬರಿ ಓದಿದೆ.ಅದು ಯಾವ್‌ ಮಟ್ಟದಲ್ಲಿ ನನ್ನನ್ನು ಪ್ರಭಾವಿಸಿತು ಎಂದರೆ ಆ ವಿಚಾರಗಳು ಕೇವಲ ನನ್ನಲ್ಲಷ್ಟೇ ಉಳಿಯಬಾರದು.ಅದು ಸಾಕಷ್ಟು ಜನರಿಗೂ ವ್ಯಾಪಿಸಬೇಕು ಎನ್ನುವ ಉದ್ದೇಶದಿಂದ ನಾನೇ ಅನೇಕರಿಗೆ ಪುಸ್ತಕವನ್ನು ರೆಫರ್‌ ಮಾಡುತ್ತಿದ್ದೇನೆ.ಕಾದಂಬರಿಯನ್ನು ತರಿಸಿಕೊಂಡು ಅನೇಕರಿಗೆ ನೀಡಿದ್ದೇನೆ. ಪೊಲೀಸ್‌ ಆಯುಕ್ತರಾದ ಶರಣಪ್ಪ ಸೇರಿದಂತೆ ಅನೇಕರು ಪುಸ್ತಕವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸ್ನೇಹಿತನ ಶ್ರಮ ಪುಸ್ತಕದ ರೂಪದಲ್ಲಿ ಫಲ ಕೊಟ್ಟಿದೆ.ಯಾರೂ ಮಿಸ್‌ ಮಾಡದೆ ಪುಸ್ತಕ ಓದಿ ಎನ್ನುವುದು ನನ್ನ ಅಭಿಪ್ರಾಯ.-ಓಂಪ್ರಕಾಶ್‌ ಮುನ್ನೂರು, ರಿಪಬ್ಲಿಕ್‌ ಕನ್ನಡ ಕಲ್ಬುರ್ಗಿ ವರದಿಗಾರ, ಮನೋಹರ್‌ ಆತ್ಮೀಯ ಸ್ನೇಹಿತ

ಪುಸ್ತಕವನ್ನು ತಮ್ಮ ನೂರು ಕಷ್ಟಗಳ ನಡುವೆಯೂ ಜಗತ್ತಿನ ಸುಖವನ್ನೆಲ್ಲಾ ಸುರಿದು ಸಾಕಿ ಬೆಳೆಸಿ, ಮಗನ ಏಳಿಗೆ ನೋಡುವ ಮೊದಲೇ ಕಣ್ಮರೆಯಾದ,ಅಣ್ಣ (ಅಪ್ಪ) ಮತ್ತು ಅಮ್ಮನಿಗೆ ಮನೋಹರ್‌ ಸಮರ್ಪಿಸಿದ್ದಾರೆ. ಈ ಪುಸ್ತಕ ಹೊರತಲು ಕಾರಣರಾದ “ಸ್ನೇಹಾ ಬುಕ್‌ ಹೌಸ್‌” ಮಾಲೀಕರಾದ ಶ್ರೀ ಕೆ.ಬಿ ಪರಶಿವಪ್ಪನವರಿಗೂ, ಸುಂದರವಾಗಿ ಮುಖಪುಟ ವಿನ್ಯಾಸಮಾಡಿಕೊಟ್ಟ ಶ್ರೀ. ಸಂತೋಷ್‌ ಸಸಿಹಿತ್ಲು ಅವರಿಗೂ ಅಚ್ಚುಕಟ್ಟಾಗಿ ಪುಟವಿನ್ಯಾಸ ಮಾಡಿಕೊಟ್ಟ ಶ್ರೀ. ಹರೀಶ್‌ ಕೆ.ಆರ್‌ ಅವರಿಗೂ ನನ್ನ ಅನಂತ ನಮನಗಳು. ಹಾಗೆಯೇ ಬರವಣಿಗೆಯ ಪ್ರತಿ ಹಂತದಲ್ಲೂ  ಅಗತ್ಯ ಸಹಕಾರ ನೀಡಿ ನನ್ನ ಈ ಹೊಸ ಪ್ರಯತ್ನವನ್ನ ಹೃತ್ಪೂರಕವಾಗಿ ಪ್ರೋತ್ಸಾಹಿಸಿದ ನನ್ನ ಪತ್ನಿ ಶ್ರೀಮತಿ. ಮಹಾಲಕ್ಷ್ಮಿಗೆ ನನ್ನ ಕೃತಜ್ಙತೆಗಳು ಎಂದು ವಿವರಿಸಿದ್ದಾರೆ.

ಹಲವರ ಮೆಚ್ಚುಗೆ:ಬಿ.ವಿ ಮನೋಹರ್‌ ಅವರ ಕಪ್ಪುಹುಂಜ ಕೃತಿಯ ಬಗ್ಗೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಾದಬ್ರಹ್ಮ ಹಂಸಲೇಖ,ಹಿರಿಯ ಪೊಲೀಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರಲ್ಲದೇ,ಸಾಹಿತ್ಯ ಕೃಷಿ ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದ್ದಾರೆ.ನೀವೂ ಕೊಂಡು ಪುಸ್ತಕ ಓದಿ ಗೆಳೆಯನಿಗೆ ಶುಭ ಹಾರೈಸಿ ಎನ್ನುವುದು ನಮ್ಮ ಕಳಕಳಿಯ ಮನವಿ

ಗೆಳೆಯ ಮನೋಹರ್‌ ತಮ್ಮ ಕಾರ್ಯ ಒತ್ತಡದ ನಡುವೆಯೂ ಕ್ರೈಂ ವರದಿಗಾರಿಕೆಯ 17 ವರ್ಷಗಳ ನಿರಂತರ ಅನುಭವವನ್ನು ಕಾದಂಬರಿಯಾಗಿ ದಾಖಲಿಸಿದ್ದಾರೆ.ಕ್ರೈಂ ವರದಿಗಾರಿಕೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡವರಿಗಂಥೂ ಇದು ಅಧ್ಯಯನಾತ್ಮಕ ವಸ್ತುವಾಗಬಲ್ಲದು.ಹಾಗೆಯೇ ಕ್ರೈಂ ವರದಿಗಾರಿಕೆಯಲ್ಲಿ ಆಸಕ್ತಿ ಉಳ್ಳವರಿಗೂ ಮಾರ್ಗದರ್ಶಕ ಕೈಪಿಡಿ ಆಗಬಲ್ಲದು ಎನ್ನುವುದು ಮುಕ್ತವಾದ ಅಭಿಪ್ರಾಯ. ಕ್ರೈಂ ವರದಿಗಾರಿಕೆ ಮಾಡಿರುವ. ಮಾಡುತ್ತಿರುವ ಹಿರಿಯ ವರದಿಗಾರರು ಲೇಖಕರಾಗಿದ್ದು ಕಡಿಮೆ.ಅಂಥವರ ಸಾಲಿಗೆ ಮನೋಹರ್‌ ನಿಲ್ಲುತ್ತಾರೆ.ಇವರ ಕೃತಿ ಇನ್ನಷ್ಟು ವರದಿಗಾರರಿಗೆ ಪ್ರೇರಣೆಯಾಗಲಿ.ಇನ್ನಷ್ಟು ವರದಿಗಾರರು ಲೇಖಕರಾಗಲಿ..ಆತ್ಮೀಯ ಗೆಳೆಯ ಮನೋಹರ್‌ ಅವರ ಲೇಖನಿಯಿಂದ ಇನ್ನೊಂದಷ್ಟು ಕೃತಿಗಳು ಹೊರಬರಲಿ ಎನ್ನುವುದು ಪ್ರಾಮಾಣಿಕವಾದ ಹಾರೈಕೆ.ಇನ್ನೊಂದು ವಿಷಯ..ಕಪ್ಪುಹುಂಜ ಕೃತಿಯ ಪ್ರತಿಗಳು ಈಗಾಗಲೇ ಭರದಿಂದ ಮಾರಾಟವಾಗುತ್ತಿವೆ.ಪ್ರತಿಗಳು ಬೇಕಾದಲ್ಲಿ ಬಿ.ವಿ ಮನೋಹರ್‌ ಅವರನ್ನು ಅವರ ಮೊಬೈಲ್‌ 9916366452 ಗೆ ಸಂಪರ್ಕಿಸಿ ಪಡೆಯಬಹುದಾಗಿದೆ.

 

 

 

 

 

 

 

 

 


Leave a Comment