ನ್ಯೂಸ್‌ ಚಾನೆಲ್‌ ಗಳ ಸಾಲಿಗೆ ಮಹಿಳಾ ಸಾರಥ್ಯದ “”ಸಂಪೂರ್ಣನ್ಯೂಸ್‌”” ಸೇರ್ಪಡೆ.


ಕನ್ನಡ ಸುದ್ದಿ ಮಾದ್ಯಮ ಕ್ಷೇತ್ರ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕು.ಸುದ್ದಿ ಪ್ರಸಾರದಲ್ಲಿ ಪ್ರಖರತೆ-ತೀಕ್ಷ್ಣತೆ-ಸ್ಪರ್ದಾತ್ಮಕತೆ ಬೆಳೆಯಲು ಸಾಧ್ಯ.ಇದೆಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗವಕಾಶಗಳು ಸೃಷ್ಟಿಯಾಗಲು ಸಾ‍ಧ್ಯ. ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಅದೇ ಸಂಪೂರ್ಣ ನ್ಯೂಸ್..ಸಂಪೂರ್ಣ ಗೌಡ ಅವರ ಮಾಲೀಕತ್ವದಲ್ಲಿ ಇಷ್ಟು ದಿನ ಡಿಜಿಟಲ್‌ ಫ್ಲಾಟ್‌ ಫಾರ್ಮ್‌ ನಲ್ಲಿ ಮೂಡಿಬರುತ್ತಿದ್ದ ಸಂಪೂರ್ಣ ನ್ಯೂಸ್‌ ಈಗ‌ ಪೂರ್ಣ ಪ್ರಮಾಣದಲ್ಲಿ ನ್ಯೂಸ್‌ ಚಾನೆಲ್‌ ಆಗಿ ತನ್ನ ಸುದ್ದಿ ಪ್ರಸಾರ ಶುರುಮಾಡಿದೆ.ಅದಕ್ಕೆ ಮೊದಲು ಸಂಪೂರ್ಣ ಗೌಡ ಹಾಗೂ ಅವರ ತಂಡಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ತಂಡ  ಶುಭಾಷಯಗಳನ್ನು ಕೋರುತ್ತದೆ.ಒಳ್ಳೆಯದಾಗಲಿ ಎನ್ನುವುದು ನಮ್ಮ ಶುಭಹಾರೈಕೆ.

ಈಗಾಗಲೇ ಹತ್ತಾರು ನ್ಯೂಸ್‌ ಚಾನೆಲ್‌ ಗಳು ಕನ್ನಡದಲ್ಲಿವೆ.ಅದರಲ್ಲೇ ಯಾವುದನ್ನು ನೋಡಬೇಕು..ಯಾವುದನ್ನು ಬಿಡಬೇಕು ಎನ್ನುವ ಗೊಂದಲದಲ್ಲಿ ವೀಕ್ಷಕನಿದ್ದಾನೆ.ಇಂಥಾ ಸನ್ನಿವೇಶದಲ್ಲಿ ಸಂಪೂರ್ಣದಂತ ಮತ್ತೊಂದು ಚಾನೆಲ್‌ ನ ಅವಶ್ಯಕತೆ ನಿಜಕ್ಕೂ ಇದೆಯಾ..? ಇದು ಇತರೆ ಚಾನೆಲ್‌ ಗಳಂತೆ ಹತ್ತರಲ್ಲಿ ಹನ್ನೊಂದಾಗಿಬಿಡುತ್ತಾ..? ಯಾವುದೇ ಹೊಸ ಚಾನೆಲ್‌ ಕಾರ್ಯಾರಂಭ ಮಾಡುವ ವೇಳೆಯಲ್ಲೆಲ್ಲಾ ಇಂತದ್ದೊಂದು  ವಿಚಾರ ಚರ್ಚೆಗೆ ಬಂದೇ ಬರುತ್ತೆ. ಇದಕ್ಕೆ ಸಂಪೂರ್ಣ ನ್ಯೂಸ್‌ ಕೂಡ ಹೊರತಲ್ಲ..ಅದರೆ ಅಲ್ಟಿಮೇಟಾದ ಸತ್ಯ ಏನಂದ್ರೆ ಯಾವ ಚಾನೆಲ್‌ ಆರ್ಥಿಕವಾದ ಸದೃಢತೆ ಉಳಿಸಿಕೊಳ್ಳುತ್ತೋ..ಆ ಚಾನೆಲ್‌ ಜನಪ್ರಿಯ ಹಾಗೂ ಜನಪರವಾಗುತ್ತದೆ..ಸಂಪೂರ್ಣ ನ್ಯೂಸ್‌ ವಿಷಯದಲ್ಲಿ ಆರ್ಥಿಕ ಸದೃಢತೆಯ ಸಮಸ್ಯೆ ಇಲ್ಲದಿರುವುದರಿಂದ ಧೀರ್ಘಕಾಲದವರೆಗಿದ್ದು ಒಂದು ಉತ್ತಮ ಚಾನೆಲ್‌ ಆಗಿ ಹೊರಹೊಮ್ಮುವ-ಪ್ರೂವ್‌ ಮಾಡುವ ಸಾಧ್ಯತೆಗಳಂತೂ ಇದ್ದೇ ಇದೆ..ಆ ನಿಟ್ಟಿನಲ್ಲಿ ತಂಡ ಯಶಸ್ವಿಯಾಗಲಿ ಎನ್ನುವುದು ನಮ್ಮ ಆಶಯ.

“ನಾವು ಸದಾ ಕಾರ್ಮಿಕರ ಪರ..ನಮ್ಮ ನಿಲುವೇನಿದ್ದರೂ ಅವರ ಪರವಾಗಿ.. :ಕಳೆದ ತಿಂಗಳು ಸಂಪೂರ್ಣ ಟಿವಿ ಬಗ್‌ಗೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಸುದ್ದಿಯೊಂದನ್ನು ಪ್ರಕಟಿಸಿತ್ತು.ಇದರಲ್ಲಿರುವ ಒಂದಷ್ಟು ಸಂಗತಿಗಳು ಸಂಪೂರ್ಣ ಗೌಡ ಅವರನ್ನು ಕೆಂಡಾಮಂಡಲಗೊಳಿಸಿತ್ತಂತೆ.ಆದರೆ ಈ ಬಗ್ಗೆ ಅವರದೇ ಚಾನೆಲ್‌ ಸಿಬ್ಬಂದಿ ಜತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾಯ್ತು.ಆದರೆ ಮೊದಲಿಂದಲೂ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಮ್ಯಾನೇಜ್ಮೆಂಟ್‌ ಗಳ ಪರ ಬ್ಯಾಟ್‌ ಮಾಡಿದ್ದೇ ಇಲ್ಲ.ಹ್ಞಾ..ಒಳ್ಳೆ ಕೆಲಸ ಮಾಡಿದಾಗ ಹೊಗಳಿದ್ದೇವೆ..ಮಾದ್ಯಮಮಿತ್ರರ ಹಿತಾಸಕ್ತಿಗೆ ವಿರುದ್ಧವಾಗಿ ಏನೇ ನಡೆದರೂ ಅದನ್ನು ಕಟುವಾಗಿ ಟೀಕಿಸುತ್ತಾ ಬಂದಿದ್ದೇವೆ.ನಮ್ಮ ಆ ಬದ್ದತೆಯಲ್ಲಿ ಎಂದೂ ಕಾಂಪ್ರಮೈಸ್‌ ಇಲ್ಲ.ಸಂಪೂರ್ಣ ಚಾನೆಲ್‌ ವಿಷಯದಲ್ಲೂ ಅದೇ ಮುಂದುವರೆಯಲಿದೆ.ಏಕಂದ್ರೆ ಸುದ್ದಿಮನೆಯೊಳಗೆ ಎಲ್ಲಾ ರಾಜಕೀಯಗಳನ್ನು ಪಕ್ಕಕ್ಕಿಟ್ಟು ಕೇವಲ ಹೊಟ್ಟೆಪಾಡಿಗೆ ಕೆಲಸ ಮಾಡುವ ಮಾದ್ಯಮಮಿತ್ರರು ಯಾವತ್ತೂ ನಿಟ್ಟುಸಿರು-ಕೊರಗಬಾರದು..ಎನ್ನೋದಷ್ಟೇ ನಮ್ಮ  ಕಳಕಳಿ”

ದೂರದ ಮಂತ್ರಾಲಯ ಪೀಠದಿಂದ ಆಗಮಿಸಿದ  ಶ್ರೀಗಳಾದ ಶ್ರೀ ಸುಭುದೇಂದ್ರ ತೀರ್ಥರು ಚಾನೆಲ್‌ ನ್ನು ಆಶೀರ್ವದಿಸಿ ಸುವರ್ಣ ಗೌಡ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ,ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.ಹಾಗೆಯೇ ಎಸ್‌ ಆರ್‌ ವಿಶ್ವನಾಥ್.ಮುನಿರತ್ನ, ವಿನಯ್‌ ಗುರೂಜಿ, ಸರವಣ,ಜಿ.ಟಿ ದೇವೇಗೌಡ,  ನೆ.ಲ ನರೇಂದ್ರಬಾಬು,ಗೋಪಾಲಕೃಷ್ಣ ಬೇಳೂರು,ಸಂಖ್ಯಾ ಶಾಸ್ತ್ರಜ್ಞ ಆರ್ಯವರ್ದನ್‌ ಸೇರಿದಂತೆ ಹಲವರು ಆಗಮಿಸಿ ಶುಭಾಷಯ ಕೋರಿದರು.

ಅಂದ್ಹಾಗೆ ಸಂಪೂರ್ಣ ಗೌಡ ಪತ್ರಿಕೋದ್ಯಮಕ್ಕೆ ಹೊಸಬರೆನ್ನುವ ಮಾತಿದೆ.ಆದರೆ ಮಾದ್ಯಮವನ್ನು ಹೇಗೆ ನಡೆಸಿಕೊಂಡು ಹೋಗಬೇಕೆನ್ನುವ ಪ್ರೌಢಿಮೆ-ಚಾಕಚಕ್ಯತೆ ಅವರಲ್ಲಿದೆ ಎನ್ನುವುದನ್ನೂ ಕೇಳಿದ್ದೇವೆ.ಮಾದ್ಯಮ ಕ್ಷೇತ್ರದಲ್ಲಿ ಏನಾದರೊಂದು ಮಾಡಬೇಕೆನ್ನುವ ಉಮೇದಿನಲ್ಲಿರುವ ಸಂಪೂರ್ಣ ಗೌಡ ಅವರ ಆಸೆಗೆ ನೀರೆರೆದು ಪೋಷಿಸಲು ದೊಡ್ಡ ಶಕ್ತಿಯಾಗಿ ಆದಿಚುಂಚನಗಿರಿ ಮಠದ ಪ್ರಕಾಶನಾಥ ಸ್ವಾಮೀಜಿ ಇದ್ದಾರೆನ್ನುವ ಮಾತಿದೆ.ಒಬ್ಬ ಹೆಣ್ಣುಮಗಳು ಈ ಸಮಾಜದಲ್ಲಿ ಸ್ವತಂತ್ರವಾಗಿ ಒಂದು ಸುದ್ದಿ ಚಾನೆಲ್‌ ನ್ನು ಕಟ್ಟಿ ಬೆಳೆಸಿ ಅದರ ಮೂಲಕ ಸಮಾಜಕ್ಕೂ ,ವ್ಯಕ್ತಿಗಳಿಗೂ ಒಳ್ಳೆಯದಾಗಬೇಕೆನ್ನುವ ಆಕಾಂಕ್ಷೆ ಇರುವುದನ್ನು ಗುರುತಿಸಿಯೇ ಪ್ರಕಾಶನಾಥ ಸ್ವಾಮೀಜಿ ಸಂಪೂರ್ಣ ಗೌಡ ಅವರ ಬೆನ್ನಿಗಿದ್ದಾರಂತೆ.ಅಲ್ಲದೇ ತಮ್ಮ ಸಮುದಾಯದ ಹೆಣ್ಣುಮಗಳಾಗಿರುವುದರಿಂದ ಸಹಜವಾಗಿಯೇ ಕಾಳಜಿ-ಕಕ್ಕುಲತೆ ಹೆಚ್ಚಿರುತ್ತೆ.ಇದು ತಪ್ಪೇನಲ್ಲ ಬಿಡಿ.

“ಸಂಸ್ಥೆಗೇ ದ್ರೋಹ ಬಗೆಯುವ ಕೆಲವರ ಬಗ್ಗ ಎಚ್ಚರಿಕೆಯಿಂದಿರಿ.;!?ಸಂಪೂರ್ಣ ನ್ಯೂಸ್‌ ನ್ನು ಹಲವು ಕನಸು-ಆಶಯ ಇಟ್ಟುಕೊಂಡು ಪ್ರಾರಂಭಿಸಿರುವ ಸಂಪೂರ್ಣ ಗೌಡ ಅವರಿಗೆ ಒಂದಷ್ಟು ವಿಷಯ ಗಮನ ತರಲಿಕ್ಕೆ ಇಚ್ಚಿಸುತ್ತೇವೆ.ಅದು ಚಾನೆಲ್‌ ನ ಗೌಪ್ಯತೆಗೆ ಸಂಬಂಧಪಟ್ಟ ವಿಚಾರ. ಸಾಮಾಜಿಕ ಜಾಲತಾಣದ ಕೆಲವು ಸಂಪರ್ಕ ಕೊಂಡಿಗಳೇ ಚಾನೆಲ್‌ ನ ಜೀವಾಳ.ಅದನ್ನು ಕದಿಯುವ,ಬದಲಿಸುವ ಕೆಲವು ಕಿಡಿಗೇಡಿಗಳು ನಮಗೆ ಗೊತ್ತಿಲ್ಲದಂತೆ ನಮ್ಮ ನಡುವೆ ಇರುತ್ತಾರೆ.ಅದು ಗೊತ್ತಾಗುವ ಹೊತ್ತಿಗೆ ಎಲ್ಲವೂ ಮುಗಿದೋಗಿರುತ್ತದೆ.ಅಂಥವರ ಬಗ್ಗೆ ಸದಾ ಎಚ್ಚರದ ಕಣ್ಣಿದ್ದರೆ ಒಳ್ಳೇದು.ಏಕೆಂದರೆ ಅಷ್ಟೊಂದು ಶ್ರಮ ವಹಿಸಿ ಮಾಡಿದ ಚಾನೆಲ್‌ ನ ಕೊಂಡಿಗಳೇ  ಕೈಜಾರಿದರೆ ಮಾಡಿದ ಪ್ರಯತ್ನಗಳೆಲ್ಲಾ ವ್ಯರ್ಥವಲ್ವಾ,.ನಿಮ್ಮಲ್ಲಿ ಕೆಲವರು ಅಂಥವರಿದ್ದಾರೆನ್ನುವ ಮಾಹಿತಿ ಇದೆ.ಸ್ವಲ್ಪ ಕ್ರಾಸ್‌ ಚೆಕ್‌ ಮಾಡಿಕೊಳ್ಳಿ..ನಮಗೆ ಅಲ್ಪಸ್ವಲ್ಪ ಆ ಕಿಡಿಗೇಡಿಗಳ ಬಗ್ಗೆ ಮಾಹಿತಿಯಿದೆ..ಸಂಪೂರ್ಣವಾಗಿ ದೊರೆತರೆ ನಿಮಗೇ ಅದನ್ನು ತಿಳಿಸುತ್ತೇವೆ.ಅಂಥವರ ಮೇಲೆ ನಿಮ್ಮ ಅನುಮಾನದ ಕಣ್ಣು ಸದಾ ಇರಲಿ.”

ಅಂದ್ಹಾಗೆ ಸಂಪೂರ್ಣ ನ್ಯೂಸ್‌ ಚಾನೆಲ್‌ ಮುಂದೆ ಬಹುದೊಡ್ಡ ಸವಾಲುಗಳಿವೆ.ಅದರ ಹಾದಿ ಅಂದುಕೊಂಡಷ್ಟು ಸಲೀಸಾಗಿಯಂತೂ ಇಲ್ಲ.ಏಕೆಂದರೆ ಇರುವ ಚಾನೆಲ್‌ ಗಳ ನಡುವೆ ಅಸ್ಥಿತ್ವಕ್ಕಾಗಿ ಹೋರಾಡುವ ದೊಡ್ಡ ಸವಾಲಿನ ಸರಮಾಲೆಯೇ ಇದೆ.ಎಕ್ಸ್‌ ಕ್ಲ್ಯೂಸಿವ್‌, ಬ್ರೇಕಿಂಗ್‌ ,ಸ್ಪೆಷಲ್‌ ನ್ಯೂಸ್‌ ಗಳ ವಿಷಯದಲ್ಲಿ ಹೊಡೆದಾಡಬೇಕಾಗ್ತದೆ.ಎಲ್ಲರಿಗಿಂತ ಮೊದಲು…ನಮ್ಮಲ್ಲೇ ಮೊದಲು ಎನ್ನುವಂತ ಒಂದಷ್ಟುಸ್ಪೋಟಕ ಸುದ್ದಿಗಳು ಪ್ರಸಾರವಾಗಬೇಕಿದೆ.ಮಾಮೂಲು ಸುದ್ದಿಗಿಂತ ಒಂದ ಕ್ಷಣ ಜನ ಅಲರ್ಟ್‌ ಆಗಬೇಕಾದಂಥ ಸುದ್ದಿಗಳಿಗೆ ಆಧ್ಯತೆ ಕೊಡಬೇಕಿದೆ. ಇದಕ್ಕಾಗಿ ಅಂಥಾ ಸುದ್ದಿಗಳನ್ನು ಹೆಕ್ಕಿ ತೆಗೆಯುವಂಥವರ ಅವಶ್ಯಕತೆ ಇದೆ.ಆದರೆ ಸಂಪೂರ್ಣ ತಂಡದಲ್ಲಿ ಅಂಥ ಚಾಣಾಕ್ಷರು ಯಾರಿದ್ದಾರೆನ್ನುವ ಮಾಹಿತಿ ಖಚಿತವಾಗಿಲ್ಲ.ಆದರೆ ಎಲ್ಲವೂ ಒಂದೇ ದಿನ ಅಥವಾ ರಾತ್ರಿಯಲ್ಲಿ ಸಂಭವಿಸೋಗಿಬಿಡುವಂತದ್ದಲ್ಲ..ಅದಕ್ಕೂ ಒಂದು ಸ್ವಲ್ಪ ಕಾಲಾವಕಾಶ ಬೇಕಾಗ್ತದೆ.ಆದರೆ ಕಾಲಾವಕಾಶ ಬೇಕೆನ್ನುವುದನ್ನೇ ನೆವ ಮಾಡಿಕೊಂಡು ಕೂತರೆ ನಿಮ್ಮನ್ನು ಇದ್ದಲ್ಲಿಯೇ ಬಿಟ್ಟು ಉಳಿದ ಚಾನೆಲ್‌ ಗಳು ಎಷ್ಟೋ ಮೈಲಿ ದೂರ ಹೊರಟೋಗಿಬಿಟ್ಟಿರುತ್ತವೆ.ಸಂಪೂರ್ಣ ಗೌಡ ಬೇರೊಬ್ಬರ ಮೇಲೆ ಜವಾಬ್ದಾರಿ ಬಿಟ್ಟುಕೊಡದೆ ತಾವೇ ಖುದ್ದಾಗಿ ಅದನ್ನು ಮಾನಿಟರ್‌ ಮಾಡುವುದು ಚಾನೆಲ್‌ ಅಸ್ಥಿತ್ವದ ದೃಷ್ಟಿಯಿಂದಲೂ ಒಳ್ಳೇಯದೆನಿಸುತ್ತದೆ.

ALSO READ :  ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

ಮೈಮರೆತರೆ ಎಲ್ಲಾ ಚಾನೆಲ್‌ ಗಳ ಮದ್ಯೆ ಸ್ಪರ್ದಾತ್ಮಕವಾಗಿ ಬೆಳೆಯಬೇಕೆನ್ನುವ  ನಿರೀಕ್ಷೆಗಳು ಸುಳ್ಳಾಗುವ ಆತಂಕವಿದೆ. ಗಟ್ಟಿಗಿತ್ತಿ ಆಗಿರುವುದರಿಂದ ಅಲ್ಲಿದ್ದವರೇ  ಅವರನ್ನ ಯಾಮಾರಿಸುವುದು ಕಷ್ಟವಾಗಬಹುದೇನೋ..? ಅದೇನೇ ಇರಲಿ, ಸಂಪೂರ್ಣ ನ್ಯೂಸ್‌ ಕಟ್ಟಿ ಬೆಳೆಸಲು ಹೊರಟಿರುವ ಸಂಪೂರ್ಣ ಗೌಡ ಅವರಿಗೆ ಬೆಳೆಯಲು ಕರ್ನಾಟಕದ ಹೃದಯವಂತ ವೀಕ್ಷಕರು ಒಂದು ಅವಕಾಶ ಕೊಟ್ಟರೆ ಒಳ್ಳೆಯೆದೆನಿಸುತ್ತದೆ..ಎನಿವೇ ಮತ್ತೊಮ್ಮ ಸಂಪೂರ್ಣ ತಂಡಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಕಡೆಯಿಂದ ಆಲ್‌‌ ದ ಬೆಸ್ಟ್.


Leave a Comment