ಬೆಂಗಳೂರಲ್ಲಿ ಹೆಚ್ಚಾಯ್ತು ಕೆಲವು ಮಾರ್ವಾಡಿಗಳ ರೌಡಿಯಿಸಂ- ಆಟಾಟೋಪ: ಅಟ್ಟಹಾಸಕ್ಕೆ ಕಡಿವಾಣ ಬೀಳದಿದ್ರೆ ಕನ್ನಡಿಗರಿಗೇನೆ ಅಪಾಯ..?

ಬೆಂಗಳೂರಲ್ಲಿ ಕೆಲವು ಮಾರ್ವಾಡಿಗಳ ಆಟಾಟೋಪ-ಅಟ್ಟಹಾಸ ಅದೇಕೋ ಹೆಚ್ಚಾದಂತಿದೆ.(ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಕೂಡ ಒಳ್ಳೆಯದಲ್ಲ..ಇವತ್ತು ಅನೇಕರು ಮಹಾವೀರ ಬೋಧಿಸಿದ ತತ್ವಕ್ಕೆ ನಿಷ್ಟರಾಗಿ ಬದುಕುತ್ತಿದ್ದಾರೆ..ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ..) ವಾಸದ ಜತೆಗೆ ವ್ಯಾಪಾರ ಮಾಡಿಕೊಂಡು ಹೋಗ್ಲಿಕ್ಕೆ ಸ್ಥಳಾವಕಾಶ ಕೊಟ್ಟಿದ್ದು ವಿಶಾಲ ಹೃದಯಿಗಳಾದ ನಮ್ಮ ಕನ್ನಡಿಗರ ತಪ್ಪು ಎನ್ನಿಸ್ಲಿಕ್ಕೆ ಶುರುವಾಗಿದೆ.ಈಗಾಗಲೇ ಬೆಂಗಳೂರನ್ನು ಬಹುತೇಕ ಅತಿಕ್ರಮಿಸಿಕೊಂಡಿರುವ ಮಾರ್ವಾಡಿಗಳು ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡೊಕ್ಕೆ ಶುರುಮಾಡಿದ್ದಾರೆ. ಅವರ ಅಟ್ಟಹಾಸದ ಅತಿರೇಕಕ್ಕೆ ನಿನ್ನೆ ನಡೆದ ಘಟನೆ ಸಾಕ್ಷಿಯಂತಿದೆ.ನೋಡಿ…ಈ ದೃಶ್ಯಗಳು ಯಾವುದೋ ದೇಶದಲ್ಲಿ ನಡೆದಂತದ್ದಲ್ಲ..ಅಥವಾ ಹೊರರಾಜ್ಯದಲ್ಲಿಯೂ ಘಟಿಸಿದಂತಲ್ಲ..ಇದು ನಮ್ಮ ಬೆಂಗಳೂರಿನಲ್ಲಿಯೇ ನಡೆದಿರುವ ಘಟನೆ..ನೋಡಿದ ಎಂಥವರಿಗೂ ಒಂದ್ ಕ್ಷಣ ಕರುಳು ಚುರುಕ್ ಎನ್ನಿಸದೆ ಇರೊಲ್ಲ…ಅಷ್ಟಕ್ಕೂ ಅಲ್ಲಿ ಆಗಿದ್ದೇನು..? ಎನ್ನೋದನ್ನು ನೋಡಿದ್ರೆ ಅದೇನು ಕ್ಷಮಿಸಲಾರದಂಥ ಘನಘೋರ ಕೃತ್ಯವೇನೂ ಅಲ್ಲ ಬಿಡಿ..


ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರವೇ 25-09-2025 ರಂದು ಅಂದ್ರೆ ನಿನ್ನೆ ಗುರುವಾರದಂದು ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲೊಂದು ಘಟನೆ ನಡೆದಿದೆ. ಮಾಯಾ ಸಿಲ್ಕ್ ಅಂಡ್ ಸ್ಯಾರಿಸ್ ಎನ್ನುವ ಇಲ್ಲಿನ ಬಟ್ಟೆ ಅಂಗಡಿಯಲ್ಲಿ ಅದರ ಮಾಲಿಕ ಉಮೇದರಾಮ ಎಂಬಾತ ಬ್ಯುಸಿನಸ್ ಮಾಡ್ತಾ ಇದ್ದ.ಆತ ಆಪಾದಿಸುವಂತೆ ಆಂದ್ರಪ್ರದೇಶದ ಗುಂತಕಲ್ ಎನ್ನುವ ಏರಿಯಾಗೆ ಸೇರಿದ ಮಹಿಳೆಯೊಬ್ಬಳು ಅಂಗಡಿಯ ಮುಂದಿಟ್ಟಿದ್ದ ಸೀರೆಯ ಬಂಡಲ್ ನ್ನು ಕದಿಯೊಕ್ಕೆ ಯತ್ನಿಸಿದ್ದಳಂತೆ.ಅಷ್ಟಕ್ಕೆ ಆತ ಮಾಡಿದ್ದೇನು ಗೊತ್ತಾ..ನಾವ್ ಹೇಳೊಲ್ಲ ನೀವೇ ನೋಡ್ಬಿಡಿ.

ಆತ ಹೇಳುವಂತೆಯೇ ಆಕೆ ಸೀರೆಯ ಬಂಡಲ್ ಕದಿಯೊಕ್ಕೆ ಯತ್ನಿಸಿದ್ದಳೆಂದೇ ಅಂದುಕೊಳ್ಳೋಣ, ಮಹಾನ್ ಗಂಡಸು ಎನಿಸಿಕೊಂಡ ಆ ಉಮೇದರಾಮ್ ಏನ್ ಮಾಡ್ಬೇಕಿತ್ತು. ಆಕೆಯನ್ನು ವಿತ್ ಎವಿಡೆನ್ಸ್ ಹಿಡ್ಕೊಂಡು ತಕ್ಷಣಕ್ಕೆ 112 ಗೆ ಕರೆ ಮಾಡ್ಬೇಕಿತ್ತು.ತಾನೇ ದೊಡ್ ಲಾರ್ಡ್ ಲಬಕ್ ದಾಸ್ ಎನ್ನುವಂತೆ ಆಕೆಯನ್ನು ಮನಸೋಇಚ್ಛೇ ಥಳಿಸ್ಲಿಕ್ಕೆ ಶುರುಮಾಡಿದ್ದಾನೆ.ಅಷ್ಟೊತ್ತಿಗೆ ಅಕ್ಕಪಕ್ಕದಲ್ಲಿದ್ದ ಇನ್ನೊಂದಷ್ಟು ಮಾರ್ವಾಡಿಗಳು ತಾವೂ ಏನ್ ಕಮ್ಮಿ ಇಲ್ಲ ಎಂದ್ಕೊಂಡು ಆಕೆಗೆ ಥಳಿಸಲು ಶುರುವಿಟ್ಟುಕೊಂಡಿದ್ದಾರೆ. ಪಾಪ..ಬಿಡ್ರಣ್ಣಾ..ಎಂದು ಅಂಗಲಾಚಿದ್ರೂ ಬಿಡದೆ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ.
ಆಕೆಯನ್ನು ನೆಲಕ್ಕೆ ಹಾಕ್ಕೊಂಡು ದರದರನೇ ಎಳೆದುಕೊಂಡು ಥಳಿಸಿದ ದೃಶ್ಯಗಳು ಎಂಥವ್ರ ಎದೆಯನ್ನು ನಡುಗಿಸುತ್ತೆ.ಆಕೆಯ ಮೇಲೆ ಮನಸಿಗೆ ಬಂದಂತೆ ಹೊಡೆಯುತ್ತಿದ್ರೆ ಅಕ್ಕಪಕ್ಕದವ್ರು ಅದನ್ನು ನೋಡಿ ಮಜಾ ತೆಗೆದುಕೊಳ್ತಿದ್ರೆ ವಿನಃ,ಆಕೆಯನ್ನು ಥಳಿಸ್ತಿರೋದು ಸರಿಯಲ್ಲ ಎಂದು ಯಾರೊಬ್ಬರು ಪ್ರಶ್ನೆಯನ್ನೇ ಮಾಡಿಲ್ಲ,ಆಕೆಯ ಎದೆಗೆ ಕಾಲಿನಿಂದ ಮಾರ್ವಾಡಿ ಒದ್ದ ದೃಶ್ಯಗಳು ಕರುಳು ಚುರುಕ್ ಎನಿಸಿಬಿಡ್ತು,.ಆದ್ರೆ ಅಲ್ಲಿದ್ದ ಯಾರಿಗು ಆಕೆಯ ಮೇಲೆ ಕರುಣೆಯೂ ಬರಲಿಲ್ಲ..ಆಕೆಯ ಮೇಲಿನ ಹಲ್ಲೆ ನಿಲ್ಲಿಸಲಿಲ್ಲ ಎನ್ನುವುದು ಸಮಾಜದಲ್ಲಿ ಮನುಷ್ಯತ್ವ ಬದುಕಿದೆಯಾ ಎನ್ನುವ ಅನುಮಾನ ಮೂಡಿಸ್ತಿತ್ತು.

ನಾವು ಮಾರ್ವಾಡಿಗಳೆಂದ್ರೆ ಕರುಣೆ-ದಾನ-ಶಾಂತಿ-ಪ್ರೀತಿ-ಅಹಿಂಸೆಗೆ ಹೆಸರಾದವ್ರು ಎಂತಲೇ ಪರಿ್ಗಣಿಸ್ತೇವೆ.ಮಹಾವೀರನ ಸಿದ್ದಾಂತ-ತತ್ವ ಬೋಧನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ್ರು ಎಂದು ಭಾವಿಸ್ತೇವೆ.ಆದ್ರೆ ಮಹಿಳೆ ಮೇಲೆ ಉಮೇದರಾಮ್ ಮತ್ತು ಆತನ ಕೆಲವು ಪಟಾಲಂ ಹಲ್ಲೆ ಮಾಡಿದ ರೀತಿ ಗಮನಿಸಿದಾಗ ಮಾರ್ವಾಡಿಗಳು ಈ ಮಟ್ಟಕ್ಕೆ ಇಳಿದುಬಿಡ್ತಾರಾ..ಮನುಷ್ಯತ್ವವನ್ನು ಮರೆತುಬಿಡ್ತಾರಾ ಎಂದೆನಿಸಿದ್ದಂತೂ ಸತ್ಯ..ಹಾಗಾದ್ರೆ ಅವರು ಅಹಿಂಸೆ ಪಾಲಿಸುವುದು..ಅದರ ಬಗ್ಗೆ ಹೇಳೋದು..ಪಶುಪ್ರಾಣಿಗಳಿಗೆ ಆಹಾರ ನೀಡೋದು, ಜಿನಮಂದಿರಗಳಲ್ಲಿ ಪೂಜೆ ಪ್ರಾರ್ಥನೆ ಮಾಡುವುದು. ಕಠಿಣ ಸನ್ಯಾಸ ಪಾಲಿಸುವುದು…ಇದೆಲ್ಲಾ ನಾಟಕೀಯನಾ..? ಎಂಬ ಅನುಮಾನ ಎಂಥವರಿಗು ಮೂಡ್ತಿತ್ತು.ಆದ್ರೆ ಹಾಗೆಂದು ಎಲ್ಲಾ ಮಾರ್ವಾಡಿಗಳು ಇಷ್ಟು ಕಟುಕರಾಗಿರ್ತಾರೆ ಎಂದೂ ಒಪ್ಪಿಕೊಳ್ಳಲಿ ಕ್ಕಾಗೊಲ್ಲ.. ಅವರಲ್ಲೂ ಸಾಕಷ್ಟು ಮಂದಿ ಮಹಾವೀರನ ತತ್ವಸಿದ್ದಾಂತಗಳನ್ನು ಬದುಕು ಹಾಗು ಜೀವನಶೈಲಿಯಲ್ಲಿ ರೂಢಿಸಿಕೊಂಡು ಬದುಕ್ತಿದ್ದಾರೆನ್ನುವುದು ಕೂಡ ಸತ್ಯ.ಆದರೆ ಅವೆನ್ಯೂ ರಸ್ತೆಯ ಆ ಮಾರ್ವಾಡಿಗಳ ಕೃತ್ಯ ಮತ್ತು ನಡುವಳಿಕೆ ಗಮನಿಸಿದಾಗ ಇವರೆಲ್ಲಾ ಜೈನ ಧರ್ಮಕ್ಕೆ ಅದು ಹೇಳುವ ತತ್ವಾದರ್ಶಕ್ಕೆ ಕಳಂಕ ಎಂದೆನಿಸಿಬಿಡ್ತು.
ಜಂತಲಕಲ್ ನ ಮಹಿಳೆ ಸೀರೆ ಕದಿಯೊಕ್ಕೆ ಯತ್ನಿಸಿದಳೆನ್ನೋದೇ ಆ ಉಮೇದರಾಮ್ ನ ಆರೊಪವಾಗಿದ್ದಾದರೆ ಆಕೆಯನ್ನು ಹಿಡಿದು ಪೊಲೀಸರಿಗೆ ಕೊಡಬೇಕಿತ್ತಲ್ವಾ..? ಪೊಲೀಸ್ರು ಬರುವವರೆಗೂ ಸುಮ್ಮನಿರಬೇಕಿತ್ತಲ್ವಾ..? ಅದನ್ನು ಮಾಡದೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಆಕೆ ಒಂದು ಹೆಣ್ಣು ಎಂದು ನೋಡದೆ ಥಳಿಸಿದ್ದು ಯಾವ ನ್ಯಾಯ..? ಶಿಕ್ಷೆ ಕೊಡಲು ಆತನಿಗೇನು ಅಧಿಕಾರವಿದೆ..ಆತನೇನು ಪೊಲೀಸಾ..? ಅಥವಾ ಕೋರ್ಟಾ..? ಕೋರ್ಟ್ ನಲ್ಲಿ ನಿರ್ದಾರವಾಗುವವರೆಗೂ ಯಾರೊಬ್ಬರು ಅಪರಾಧಿಗಳಾಗೊಲ್ಲ ಎನ್ನುವ ಕಾಮನ್ ಸೆನ್ಸು ಆತನಿಗಿಲ್ಲದಾಗಿ ಹೋಯ್ತಾ..? ಆ ಕ್ಷಣಕ್ಕೆ ಆತನಿಗೆ ತಾನೊಬ್ಬ ಹೀರೋ ಎನ್ನುವ ಅಮಲು ನೆತ್ತಿಗೇರಿರಬಹುದು.ಆದ್ರೆ ಪೊಲೀಸ್ರು ಹಿಡಿದು ಎಳೆದಾಕಿಕೊಂಡು ಹೋದ ಮೇಲೆ ತಾನೆಂಥಾ ಯಡವಟ್ಟು ಮಾಡಿಕೊಂಡ್ ಬಿಟ್ನಪ್ಪಾ ಎಂದೆನಿಸಿ ಕೈ ಕೈ ಹಿಸುಕಿಕೊಂಡಿದ್ರೂ ಆಶ್ಚರ್ಯವಿಲ್ಲ. ಏಕೆಂದರೆ ಮಾರ್ವಾಡಿ ಸಮುದಾಯದ ಸಾಕಷ್ಟು ವ್ಯಾಪಾರಸ್ಥರೇ ಆತನ ಕೃತ್ಯವನ್ನು ಕಟುವಾಗಿ ಟೀಕಿಸಿದ್ದಾರೆ.ಖಂಡಿಸಿದ್ದಾರೆ.ಆಕೆಯನ್ನು ಕ್ಷಮಿಸಿ ಬಿಟ್ಟಿದ್ರೆ ನಮ್ಮ ಸಮುದಾಯದಲ್ಲಿ ಹೀರೋ ಆಗಿಬಿಡ್ತಿದ್ದ ಎಂದು ಮಾತನಾಡಿಕೊಂಡವರಿಗೇನು ಕಡಿಮೆಯೇನಿಲ್ಲ.

ಇತ್ತೀಚೆಗೆ ಅದ್ಹೇಕೋ ಮಾರ್ವಾಡಿಗಳ ಮೇಲೆ ಇಂಥಾ ಸಾಕಷ್ಟು ಆಪಾದನೆಗಳು ಕೇಳಿಬರುತ್ತಲೇ ಇವೆ. ಅವರಿಗೆ ಇಲ್ಲಿ ಇರೊಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡಿಗರ ಅತಿಯಾದ ಔದಾರ್ಯವೇ ಇವತ್ತು ನಮಗೆ ಕಂಟಕವಾಗಿದೆ. ಅವೆನ್ಯೂ ರಸ್ತೆ, ಚಿಕ್ಕಪೇಟೆ, ಕಾಟನ್ ಪೇಟೆ ಯಂಥ ಸುತ್ತಮುತ್ತಲ ಏರಿಯಾಗಳನ್ನು ಆವರಿಸಿಕೊಂಡಿರುವ ಈ ಮಾರ್ವಾಡಿಗಳಿಂದ ವ್ಯಾಪಾರ ಮಾಡ್ಲಿಕ್ಕೆ ಜಾಗ ಕೊಟ್ಟ ಕನ್ನಡಿಗರೇ ಅಲ್ಪಸಂಖ್ಯಾತರಾಗುತ್ತಿದ್ದಾರೆ.
ಹೋಗ್ಲಿ, ನೀಯತ್ತಾಗಿಯಾದ್ರು ಬ್ಯುಸಿನೆಸ್ ಮಾಡಿಕೊಂಡಿರ್ತಾರಾ..? ಬಹುತೇಕ ಮಂದಿಯ ಕೆಲಸವೇ ಗ್ರಾಹಕರಿಗೆ ಮೋಸ ಮಾಡುವುದು. ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ಟ್ಯಾಕ್ಸ್ ಕಟ್ಟದೆ, ಬಿಬಿಎಂಪಿಗೆ ತೆರಿಗೆ ಪಾವತಿಸದೆ, ಯಾವುದೇ ಪರವಾನಗಿ ಪಡೆಯದೆ ಬಿಲ್ಡಿಂಗ್ ಕಟ್ಟಿಕೊಂಡು ಮೋಸ ಮಾಡುವ ಮಾರ್ವಾಡಿಗಳು ಹೆಚ್ಚಾಗಿ ಹೋಗಿದ್ದಾರೆ. ಅಕ್ರಮ ಪ್ರಶ್ನಿಸಲು ಬಂದ್ರೆ ಅವರ ಕೈ ಬೆಚ್ಚಗೆ ಮಾಡಿ ಕಳುಹಿಸ್ತಿರೋದ್ರಿಂದಲೇ ಮಾರ್ವಾಡಿಗಳು ತಮ್ಮ ಅಟ್ಟಹಾಸ-ಆಟಾಟೋಪ ಹೆಚ್ಚು ಮಾಡಲು ಕಾರಣವಾಗ್ತಿದೆ.ಇಂಥಾ ವಂಚಕ ಮಾರ್ವಾಡಿಗಳಿಂದ ನೀಯತ್ತಾಗಿ ವ್ಯಾಪಾರ ಮತ್ತು ಜೀವನ ನಡುಸ್ತಿರೋ ಮಾರ್ವಾಡಿಗಳ ಹೆಸರಿಗೂ ಕಳಂಕ ತಟ್ಟಿದೆ.

ಕೆ.ಆರ್ ಮಾರ್ಕೆಟ್ ಠಾಣಾಧಿಕಾರಿ ಸಂದೀಪ್ ಈ ಕೇಸನ್ನು ಅಟೆಂಡ್ ಮಾಡ್ತಿದಾರೆ.ಸಧ್ಯಕ್ಕೆ ಕಟುಕ ಉಮೇದರಾಮ್ ಮತ್ತು ಇನ್ನೊಬ್ಬನನ್ನು ಅಂದರ್ ಮಾಡಿ ಇನ್ವೆಸ್ಟಿಗೇಷನ್ ಶುರುವಿಟ್ಟುಕೊಂಡಿದ್ದಾರೆ.ಆದ್ರೆ ಅವರು ಸರಿಯಾದ ರೀತಿಯಲ್ಲಿ ಇನ್ವೆಸ್ಟಿಗೇಷನ್ ಮಾಡ್ಲಿಕ್ಕೆ ಪೊಲಿಟಿಕಲ್ ಪ್ರೆಷರ್ ಅವಕಾಶ ಮಾಡಿಕೊಡ್ತದಾ ಎನ್ನುವುದೇ ಪ್ರಶ್ನೆ.ಏಕೆಂದರೆ ಅವರ ಠಾಣೆ ಸುತ್ತಮುತ್ತ ಇರೋದೆ ಮಾರ್ವಾಡಿಗಳು.ಫೇರ್ ಅಂಡ್ ಟ್ರಾನ್ಸಪರೆಂಟ್ ಇನ್ವೆಸ್ಟಿಗೇಷನ್ ಮಾಡ್ಲಿಕ್ಕೆ ಯಾರೇ ಹೊರಟರೂ ಅವರನ್ನು ಕಂಟ್ರೋಲ್ ಮಾಡುವ ಹಾಗೆಯೇ ಕರ್ಬ್ ಮಾಡುವ ಸಾಧ್ಯತೆಗಳೇ ಹೆಚ್ಚಂತೆ.ಈ ಠಾಣೆಯಲ್ಲಿ ಈ ಹಿಂದೆ ಕೆಲಸ ಮಾಡಿರುವ ಅಧಿಕಾರಿಗಳೇ ಇಂತದ್ದೊಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು. ಇಂಥದ್ದೊಂದು ಸವಾಲು ಸಂದೀಪ್ ಅವರಿಗೂ ಎದುರಾಗಬಹುದೇನೋ..? ಅವರು ಇದಕ್ಕೆ ಈಲ್ಡ್ ಆಗ್ತಾರೋ..ಅಥವಾ ಖಡಕ್ ಆಗಿಯೇ ಪ್ರಕರಣಕ್ಕೆ ನ್ಯಾಯ ದೊರಕಿಸಿಕೊಡ್ತಾರೋ ಕಾಲವೇ ಉತ್ತರಿಸಲಿದೆ.
ವ್ಯಾಪಾರ ಮಾಡುವ ಮಾರ್ವಾಡಿಗಳ ಸಂಘಟನೆಗಾಗಿಯೇ ಅವರ ಸಂಘಗಳಿವೆ.ಕಟುಕ ಉಮೇದರಾಮ್ ನಡೆಸಿರುವ ಪೈಶಾಚಿಕ ಕೃತ್ಯಕ್ಕಾಗಿ ಆತನನ್ನು ತಮ್ಮ ಸಂಘಟನೆಯಿಂದಲೇ ಬಹಿಷ್ಕರಿಸುವುದು ಒಳ್ಳೇದು.ಅಥವಾ ಬಿಡುಗಡೆ ಆದ್ಮೇಲೆ ಆತನ ಕಿವಿಹಿಂಡಿ ಬುದ್ದಿ ಹೇಳಬೇಕಿದೆ.ಅಲ್ಲದೇ ತಮ್ಮ ಸುತ್ತಲಿರುವ ಇದೇ ಮನಸ್ಥಿತಿಯ ಮಾರ್ವಾಡಿಗಳಿಗೂ ತಿಳಿ ಹೇಳಬೇಕಿದೆ.ಈ ಘಟನೆಯನ್ನು ಎಚ್ಚರಿಕೆ ಪಾಠದಂತೆ ಪರಿಗಣಿಸ್ಬೇಕೆಂದು ತಿಳಿ ಹೇಳಬೇಕಿದೆ. ಇಲ್ಲವಾದಲ್ಲಿ ಮಾರ್ವಾಡಿಗಳ ವಿರುದ್ದ ಕನ್ನಡಿಗರು ಸಿಡಿದೇಳುವ ದಿನಗಳು ದೂರವಿಲ್ಲ.ಅವರನ್ನು ರಸ್ತೆ ಬೀದಿಗಳಲ್ಲಿ ಅಟ್ಟಾಡಿಸಿಕೊಂಡು ಹೊಡೆಯೋ ದಿನಗಳು ದೂರವಿಲ್ಲ.ಏಕೆಂದರೆ ಕನ್ನಡಿಗರು ಮನಸು ಮಾಡಿದ್ರೆ ಏನ್ ಬೇಕಾದ್ರೂ ಆಗಬಹುದು..ನಿಮಗೆ ಜಾಗಕೊಡುವಂಥ ಹೃದಯ ವೈಶಾಲ್ಯ ಇರುವವರಿಗೆ ನಿಮ್ಮನ್ನು ಒದ್ದೋಡಿಸುವಷ್ಟು ಹೃದಯ ಕಾಠಿಣ್ಯವೂ ಇರಬಹುದಲ್ವಾ..? ಕನ್ನಡಿಗರು ತಾಳ್ಮೆ ಕಳೆದುಕೊಳ್ಳೊಕ್ಕೆ ಅವಕಾಶ ಕೊಡಬೇಡಿ..ಮಾಡಿದ ತಪ್ಪನ್ನು ತಿದ್ದುಕೊಂಡು ಮನುಷ್ಯರಾಗಿ…ಈ ಎಚ್ಚರಿಕೆ ಇಟ್ಕೊಂಡು ಮಾರ್ವಾಡಿಗಳು ಮೋಸ-ವಂಚನೆ ಕಡಿಮೆ ಮಾಡಿಕೊಂಡು ತೆಪ್ಪಗೆ ಬ್ಯುಸಿನೆಸ್ ಮಾಡಿಕೊಂಡಿರೋದು ಅವರ ಜೀವ-ಜೀವನ ಎರಡಕ್ಕೂ ಒಳ್ಳೇದು ಎನಿಸುತ್ತದೆ.ಇದು ನಿನ್ನೆಯ ಘಟನೆಯಿಂದ ಕೊತ ಕೊತ ಕುದಿಯುತ್ತಿರುವ ಪ್ರತಿಯೊಬ್ಬ ಕನ್ನಡಿಗನ ಆಕ್ರೋಶದ ಎಚ್ಚರಿಕೆ.