advertise here

Search

ಪಂಚ ಗ್ಯಾರಂಟಿ ಹೆಸರಲ್ಲಿ ಕೋಟಿ ಕೋಟಿ ಪೋಲು: ಇದು ಅನುಷ್ಠಾನವೋ ಅಥವಾ ಲೂಟಿಯೋ?

guarantee implementation committee

ರಾಜ್ಯದಲ್ಲಿ ಒಂದೆಡೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಸ್ವಪಕ್ಷದ ಶಾಸಕರೇ ಬೊಬ್ಬೆ ಹೊಡೆಯುತ್ತಿದ್ದರೆ, ಮತ್ತೊಂದೆಡೆ ‘ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ’ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಅಕ್ಷರಶಃ ಪೋಲಾಗುತ್ತಿದೆ. ಪ್ರಧಾನಿ, ರಾಷ್ಟ್ರಪತಿ ಅಥವಾ ಮುಖ್ಯಮಂತ್ರಿಗಳಿಗೂ ಇರದಷ್ಟು ಭರ್ಜರಿ ವೇತನ ಮತ್ತು ಸೌಲಭ್ಯಗಳನ್ನು ಈ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ನೀಡುತ್ತಿರುವುದು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

ಪಿಎಂ, ಸಿಎಂಗೂ ಇಲ್ಲದ ಸಂಬಳ ಇವರಿಗೆಕೆ?

ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿರುವ ಹೆಚ್.ಎಂ. ರೇವಣ್ಣ ಅವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುತ್ತಿರುವ ವೇತನ ಬರೋಬ್ಬರಿ 6,51,844 ರೂಪಾಯಿ! ಹೌದು, ನೀವು ಓದುತ್ತಿರುವುದು ನಿಜ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರಿಗಿಂತಲೂ ಹೆಚ್ಚಿನ ಸಂಬಳವನ್ನು ಸಮಿತಿಯ ಅಧ್ಯಕ್ಷರಿಗೆ ನೀಡಲಾಗುತ್ತಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ತೀರಾ ಹದಗೆಟ್ಟಿರುವ ಈ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ವೇತನ ನೀಡುವ ಅನಿವಾರ್ಯತೆ ಏನಿತ್ತು ಎಂಬುದು ಸಾರ್ವಜನಿಕರ ನೇರ ಪ್ರಶ್ನೆ.

ಪದಾಧಿಕಾರಿಗಳ ದಂಡು – ಬೊಕ್ಕಸಕ್ಕೆ 18 ಕೋಟಿ ಹೊರೆ

ಈ ಸಮಿತಿಯಲ್ಲಿ ಕೇವಲ ಒಬ್ಬ ಅಧ್ಯಕ್ಷರಲ್ಲ, ಬದಲಿಗೆ ಐವರು ಉಪಾಧ್ಯಕ್ಷರ ದಂಡೇ ಇದೆ:

ಉಪಾಧ್ಯಕ್ಷರು: ಎಸ್.ಆರ್. ಪಾಟೀಲ್, ಸೂರಜ್ ಹೆಗ್ಡೆ, ಪುಷ್ಪ ಅಮರನಾಥ್, ಎಸ್.ಆರ್. ಮೆಹರೋಜ್ ಖಾನ್ ಮತ್ತು ದಿನೇಶ್ ಗೂಳಿಗೌಡ.

ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ತಿಂಗಳ ವೇತನ ಹಾಗೂ ಇತರೆ ಭತ್ಯೆಗಳಿಗೆ ಸರ್ಕಾರ ಪ್ರತಿ ತಿಂಗಳು ಸುಮಾರು 1.50 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಅಂದರೆ ವರ್ಷಕ್ಕೆ 18 ಕೋಟಿ ರೂಪಾಯಿ ಕೇವಲ ಈ ಸಮಿತಿಯ ನಿರ್ವಹಣೆಗೇ ಖರ್ಚಾಗುತ್ತಿದೆ. ನಾಲ್ಕು ವರ್ಷಗಳ ಅವಧಿಗೆ ಅಂದಾಜು 70 ರಿಂದ 75 ಕೋಟಿ ರೂಪಾಯಿ ಕನ್ನಡಿಗರ ತೆರಿಗೆ ಹಣ ಈ ಸಮಿತಿಯ ಪಾಲಾಗಲಿದೆ.

ALSO READ :  "ಸುವರ್ಣ ನ್ಯೂಸ್‌" ನಲ್ಲಿ ಬದಲಾಗ್ತಿದೆಯೇ "ಹೊಣೆಗಾರಿಕೆ"ಯ ಹೆಗಲು..! ಅಜಿತ್‌ ಹನುಮಕ್ಕನವರ್‌ ಸ್ಥಾನಕ್ಕೆ ನೂತನ "ಸಾರಥಿ"...!

ಅಧಿಕಾರಿಗಳ ಕೆಲಸಕ್ಕೆ ಸಮಿತಿ ಯಾಕೆ?

ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಅಧಿಕಾರಿಗಳ ಕರ್ತವ್ಯ. ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಮಾಡಬೇಕಾದ ಕೆಲಸಕ್ಕೆ ಪ್ರತ್ಯೇಕವಾಗಿ ರಾಜಕೀಯ ನಾಯಕರನ್ನು ಒಳಗೊಂಡ ಸಮಿತಿ ರಚಿಸಿರುವುದು ‘ಹಸ್ತ’ ಪಾಳೆಯದ ನಿರುದ್ಯೋಗಿ ನಾಯಕರಿಗೆ ಪುನರ್ವಸತಿ ಕಲ್ಪಿಸುವ ತಂತ್ರವೇ ಎಂಬ ಅನುಮಾನ ಮೂಡಿದೆ. “ನಮಗೆ ಗ್ಯಾರಂಟಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ, ಆದರೆ ಸಮಿತಿ ಹೆಸರಲ್ಲಿ ನಮ್ಮ ಹಣ ಲೂಟಿ ಮಾಡಲಾಗುತ್ತಿದೆ” ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ | ಕನ್ನಡಿಗರ ತೆರಿಗೆ ಕೇರಳ ಪಾಲು? ವಯನಾಡಿಗೆ 10 ಕೋಟಿ ನೀಡಿದ ಸಿದ್ದರಾಮಯ್ಯರಿಗೆ ‘ಕೇರಳ ಸಿಎಂ’ ಪಟ್ಟ ಕಟ್ಟಿದ ಆರ್. ಅಶೋಕ್!

ಒಂದೆಡೆ ರಾಜ್ಯದ ಸಾಲದ ಹೊರೆ ಏರುತ್ತಿದೆ, ಸಾಲದ ಬಡ್ಡಿಗೆ ಸಾವಿರಾರು ಕೋಟಿ ಹೋಗುತ್ತಿದೆ. ಶಾಸಕರು ತಮ್ಮ ಕ್ಷೇತ್ರಗಳ ರಸ್ತೆ, ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನವಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಗ್ಯಾರಂಟಿ ಪ್ರಚಾರದ ಹೆಸರಲ್ಲಿ ಕೋಟಿ ಕೋಟಿ ಹಣ ವ್ಯಯ ಮಾಡುತ್ತಿರುವುದು ಎಷ್ಟು ಸರಿ? ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದು ‘ಸೇವೆಯೋ’ ಅಥವಾ ‘ಹಗಲು ದರೋಡೆಯೋ’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಜನರಿಗೆ ಹತ್ತು ಕೆಜಿ ಅಕ್ಕಿ ಕೊಡಲು ಹಣವಿಲ್ಲದ ಸರ್ಕಾರ, ಸಮಿತಿ ಅಧ್ಯಕ್ಷರಿಗೆ ಆರು ಲಕ್ಷಕ್ಕೂ ಹೆಚ್ಚು ಸಂಬಳ ನೀಡುತ್ತಿರುವುದು ಪ್ರಜಾಪ್ರಭುತ್ವದ ಅಣಕದಂತಿದೆ.


Political News

ಕನ್ನಡಿಗರ ತೆರಿಗೆ ಕೇರಳ ಪಾಲು? ವಯನಾಡಿಗೆ 10 ಕೋಟಿ ನೀಡಿದ ಸಿದ್ದರಾಮಯ್ಯರಿಗೆ ‘ಕೇರಳ ಸಿಎಂ’ ಪಟ್ಟ ಕಟ್ಟಿದ ಆರ್. ಅಶೋಕ್!

ಉಪಸಮರದ ಅಖಾಡ ಸಿದ್ಧ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಮಲ-ಕೈ ಪಡೆಗಳ ಭರ್ಜರಿ ಶಕ್ತಿ ಪ್ರದರ್ಶನ!

ಪಶ್ಚಿಮ ಏಷ್ಯಾ ಯುದ್ಧದ ಭೀತಿ: ಸಂಸತ್‌ನಲ್ಲಿ ಪ್ರಧಾನಿ ಮೋದಿ ‘ಅಭಯ ಹಸ್ತ’; ಭಾರತದ ರಣತಂತ್ರವೇನು?

ಟ್ರಂಪ್ ಡೆಡ್‌ಲೈನ್ ಅಂತ್ಯ: ಇರಾನ್ ಮೇಲೆ ದಾಳಿ ನಡೆಸುವ ಬದಲು 5 ದಿನ ಕದನ ವಿರಾಮ ಘೋಷಿಸಿದ ಅಮೆರಿಕ!

ಕೆಎಸ್‌ಪಿಸಿಬಿ ಲ್ಯಾಪ್‌ಟಾಪ್ ಹಗರಣ: 72 ಸಾವಿರದ ಲ್ಯಾಪ್‌ಟಾಪ್‌ಗೆ 1.17 ಲಕ್ಷ ಪಾವತಿ!

ಬೆಂಗಳೂರಿನ ‘ಪಂಚ ಪಾಲಿಕೆ’ಗಳ ಚೊಚ್ಚಲ ಬಜೆಟ್: 15,000 ಕೋಟಿ ರೂ. ಆಯವ್ಯಯದಲ್ಲಿ ಯಾರಿಗೆ ಏನು ಸಿಗಲಿದೆ?

ಜಮೀರ್ ಅಹಮ್ಮದ್ ರಾಜೀನಾಮೆ ಅಸ್ತ್ರ: ದಾವಣಗೆರೆ ಟಿಕೆಟ್ ಫೈಟ್ ಈಗ ಹೈಕಮಾಂಡ್ ಅಂಗಳಕ್ಕೆ!

ಅಮೆರಿಕಾ–ಇರಾನ್ ಯುದ್ಧದ ಭೀತಿ: ಶಾಂತಿ ಒಪ್ಪಂದಕ್ಕೆ ಟ್ರಂಪ್ ನಕಾರ, ಇರಾನ್ ತೈಲ ಕೇಂದ್ರಗಳೇ ಟಾರ್ಗೆಟ್!

Scroll to Top