ಟಿವಿ9 ಕೇಂದ್ರ ಮ್ಯಾನೇಜ್ಮೆಂಟ್ ನಿಗಧಿಪಡಿಸಿದ ಮಾನದಂಡವೇ ನಿರ್ಲಕ್ಷ್ಯ:..! ಬೆಂಗಳೂರು ಕಚೇರಿಯಲ್ಲಿ ದರ್ಬಾರ್ ನಡೆಸ್ತಿರುವವರಿಂದ ನಿಜಕ್ಕೂ ಅರ್ಹರಿಗೆ ಆಗೋಯ್ತಾ ಅನ್ಯಾಯ..?

ಬೆಂಗಳೂರು:ಟಿವಿ9 ಕನ್ನಡ(TV9 KANNADA)ದ ಕಚೇರಿಯ ಇತಿಹಾಸದಲ್ಲೇ ಇಷ್ಟೊಂದು ಭೀತಿ-ಆತಂಕದ ವಾತಾವರಣ ಹಿಂದೆಂದೂ ನಿರ್ಮಾಣವೇ ಆಗಿರಲಿಕ್ಕಿಲ್ಲವೇನೋ..? ಫಾರ್ ದಿ ಫಸ್ಟ್ ಟೈಮ್ ಚಾನೆಲ್ ನ ಕಚೇರಿಯಲ್ಲಿ ಭಯದ ದೊಡ್ಡ ಸುನಾಮಿನೇ ಎದ್ದಿದೆ.ಯೆಸ್..ಈ ಸುನಾಮಿ ಸಾಕಷ್ಟು ಉದ್ಯೋಗಿಗಳ “ತುತ್ತ”ನ್ನೇ ಕಸಿದುಕೊಂಡಿದೆ.ಇದಕ್ಕೆಲ್ಲಾ ಕಾರಣ ಅನಗತ್ಯ ಅಥವಾ ಹೆಚ್ಚು”ವರಿ”ವೆಚ್ಚಗಳ ಕಡಿತ ಎನ್ನಲಾಗಿದೆ.ಈ ಪೈಕಿ ಕೆಲಸ ಕಳೆದುಕೊಂಡಿರುವವರಲ್ಲಿ ಹೆಚ್ಚಿನವರು ಬೆಂಗಳೂರು ಕೇಂದ್ರ ಕಚೇರಿ ಮತ್ತು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುವ ಕ್ಯಾಮೆರಾಮನ್ ಗಳೆನ್ನಲಾಗಿದೆ.ಹಾಗೆಯೇ ಸುದ್ದಿಮನೆಯಲ್ಲಿ ಕೆಲಸ ಮಾಡುವವರಲ್ಲೂ ಕೆಲವರಿಗೆ ಎಕ್ಸಿಟ್ ಚೀಟಿಗಳನ್ನು ನೀಡಲಾಗಿದೆಯಂತೆ.. ಟಿವಿ9 ಕನ್ನಡದಲ್ಲಿ ಸದ್ಯಕ್ಕಂತೂ ಆತಂಕದ ಪರಿಸ್ತಿತಿ ಮನೆ ಮಾಡಿಬಿಟ್ಟಿದೆ..ಏಕೆಂದರೆ ಆರ್ಥಿಕ ವೆಚ್ಚದ ಕಡಿತಕ್ಕೆ ಕನಿಷ್ಟ 40 ರಿಂದ 50 ಅಸಮರ್ಥ-ನಿಷ್ಪ್ರಯೋಜಕ ಸಿಬ್ಬಂದಿಗೆ ಗೇಟ್ ಪಾಸ್ ನೀಡುವಂತೆ ಮ್ಯಾನೇಜ್ಮೆಂಟ್ ಆದೇಶಿಸಿರುವುದರಿಂದ ಈ ಆಪರೇಷನ್ “ಫೈರ್” ಇನ್ನೊಂದಷ್ಟು ದಿನ ಮುಂದುವರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
“ಕಳೆದ 15 ವರ್ಷಗಳಿಂದಲೂ ಟಿವಿ9 ಕನ್ನಡ ನನ್ನ ಸರ್ವಸ್ವ ಎಂದುಕೊಂಡು ಕೆಲಸ ಮಾಡುತ್ತಿದ್ದೆ ಸರ್..ನನ್ನ ಊರು..ನನ್ನ ಹೆಂಡತಿ ಮಕ್ಕಳು ಎಲ್ಲವನ್ನು ಬಿಟ್ಟು ಕೆಲಸ ಮಾಡಿದ್ದೇನೆ. ಇನ್ನುಳಿದವರಂತೆ ಲೈಫ್ ಸೆಟ್ಲ್ ಮಾಡಿಕೊಳ್ಳಲು ಹತ್ತಾರು ಅವಕಾಶಗಳು ಬಂದ್ರೂ ಏನಕ್ಕೂ ಆಸೆ ಪಡಲಿಲ್ಲ.ತಿಂಗಳಿಗೆ ಬರ್ತಿದ್ದ ಕಡಿಮೆ ಸಂಬಳದಲ್ಲೇ ನನ್ನ ಇಲ್ಲಿನ ಬದುಕು ಹಾಗೂ ನನ್ನ ಊರಿನಲ್ಲಿ ವಾಸವಿರುವ ಕುಟುಂಬ ಎರಡನ್ನೂ ಕಷ್ಟಪಟ್ಟು ಸರಿದೂಗಿಸುತ್ತಿದ್ದೆ.ಬದುಕಿಗೆ ಏನೂ ಮಾಡಿಕೊಳ್ಳಲಿಲ್ಲ.ಸಂಬಳದ ಮೇಲೆ ಅವಲಂಭನೆ ಮಾಡಿ ಬದುಕುತ್ತಿದ್ದೆ.ಈಗ ಇದ್ದಕ್ಕಿದ್ದಂತೆ ನಿಮ್ಮ ಸೇವೆ ನಮಗೆ ಬೇಡ ಎಂದ್ರೆ ಹೇಗೆ ಸರ್..ನೀಯತ್ತು-ಪ್ರಾಮಾಣಿಕತೆಗೆ ಬೆಲೆ ಇಲ್ಲ ಎನ್ನುವುದು ಪ್ರೂವ್ ಆಯ್ತು ಬಿಡಿ..ಸರ್..ಯಾರಿಗೆ ಏನಂತ ಉತ್ತರ ಕೊಡಲಿ..ಸಂಸಾರದ ಜತೆ ಸೇರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೆ”.-ನೊಂದ ಜಿಲ್ಲಾ ಕ್ಯಾಮೆರಾಮನ್ ಅಳಲು
ಕಳೆದ ವಾರವಷ್ಟೇ ಅಧೀಕೃತ ಮಾಹಿತಿಗಳನ್ನು ಇಟ್ಟುಕೊಂಡು ಕನ್ನಡ ಫ್ಲ್ಯಾಶ್ ನ್ಯೂಸ್ ಟಿವಿ9 ಸ ಮೂಹಕ್ಕೇ ಆರ್ಥಿಕ ಹಿಂಜರಿತವೇ..? ಅನಗತ್ಯ ವೆಚ್ಚಕ್ಕೂ ಬ್ರೇಕ್ ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿತ್ತು. ಆಗಲೇ ಸಿಬ್ಬಂದಿ ಕಡಿತದ ಮುನ್ಸೂಚನೆ ಸಿಕ್ಕಿತ್ತಾದರೂ ಅಧೀಕೃತವಾಗಿಲ್ಲದ ಕಾರಣ ಅದರ ಬಗ್ಗೆ ಬರೆದಿರಲಿಲ್ಲ..ಆದರೆ ನಾವೇನು ಅಂದುಕೊಂಡಿದ್ದೆವೋ..ಏನಾಗಬಾರದು ಎಂದು ಅಂಥ ಅಂದುಕೊಂಡಿ ದ್ದೆವೋ ಅದೇ ಆಗೋಗಿದೆ.ಟಿವಿ9 ಮುಖ್ಯ ಕಚೇರಿಯ ಆಡಳಿತದ ಅಣತಿ ಹಾಗೂ ಆದೇಶದ ಮೇರೆಗೆ ಸಿಬ್ಬಂದಿ ಕಡಿತಕ್ಕೆ ಬೆಂಗಳೂರಿನ ಆಡಳಿತ ಕೈ ಹಾಕಿದೆ.ಇದರ ಭಾಗವಾಗಿ ಎರಡಂಕಿಯಷ್ಟು ಮಾದ್ಯಮಮಿತ್ರರನ್ನು ಕೆಲಸದಿಂದ ಬಿಡುಗಡೆಗೊಳಿಸಿದೆ.ಎರಡು ತಿಂಗಳ ಸಂಬಳದ ಜತೆಗೆ ಬರಬೇಕಿರುವ ಎಲ್ಲಾ ಬಾಕಿಯನ್ನು ನೀಡುವ ಭರವಸೆ ನೀಡಿ ಕೆಲಸದಿಂದ ತೆಗೆದುಹಾಕಿದೆ.ಜುಲೈ 10ರವರೆಗೆ ಕೆಲಸ ಮಾಡುವ ಅವಕಾಶವನ್ನು ನೀಡಲಾಗಿದೆಯಂತೆ.
“ಯಾವ ಮಾನದಂಡದಲ್ಲಿ ಇವರೆಲ್ಲಾ ಅಸಮರ್ಥರು-ಅನರ್ಹರು..!? : ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಕೆಲಸ ಕಳೆದುಕೊಂಡಿರುವ ಕೆಲವರ ಹೆಸರುಗಳು ಸಿಕ್ಕಿವೆ.ಆ ಪೈಕಿ ಕೆಲವರ ಹೆಸರುಗಳನ್ನು ಬೇಕಂತಲೇ ಉಲ್ಲೇಖಿಸಲಾಗಿದೆ.ಮೂಲತಃ ದಾವಣಗೆರೆ ಜಿಲ್ಲೆಯ ಮಹಾಂತೇಶ್ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಧೀರ್ಘಾವಧಿಯಿಂದ ಕೆಲಸ ಮಾಡು ತ್ತಿರುವ ಸೀನಿಯರ್ ಕ್ಯಾಮೆರಾಮನ್.ಟಿವಿ9 ನ ಜನಪ್ರಿಯ ಕಾರ್ಯಕ್ರಮಗಳ ನೂರಾರು ಎಪಿಸೋಡ್ ಗಳನ್ನು ಸಿಂಗಲ್ ಆಗಿ ಹ್ಯಾಂಡಲ್ ಮಾಡಿದ ಅನುಭವಿ.ಔಟ್ ಡೋರ್ ಆಗಲಿ,ಸ್ಟುಡಿಯೋ ಆಗಲಿ, ಫೀಲ್ಡ್ ಆಗಲಿ ಎಲ್ಲಕ್ಕೂ ಸೈ ಎನಿಸುವಂತ ಕ್ಯಾಮೆರಾಮನ್.ಅವರ ಕೆಲಸದ ಬಗ್ಗೆ ಯಾರಿಗೂ ಆಕ್ಷೇಪವೇ ಇರಲಿಲ್ಲ..ಆದ್ರೆ ಯಾರ ಕೈಗೆ ಸಿಬ್ಬಂದಿ ಕಡಿತದ ಜವಾಬ್ದಾರಿ ಕೊಡಲಾಗಿತ್ತೋ ಆ ಮಹಾನುಭಾವರಿಗೆ ಯಾವ ಆಂಗಲ್ ನಲ್ಲಿ ಈತ ನಿಷ್ಪ್ರಯೋಜಕ ಎನಿಸಿದನೋ ಗೊತ್ತಿಲ್ಲ.ಆತನಿಗೆ ಗೇಟ್ ಪಾಸ್ ಕೊಡಲಾಗಿದೆ. ಹಾಗೆಯೇ ಕನ್ನಡ ನ್ಯೂಸ್ ಚಾನೆಲ್ ಗಳಲ್ಲೇ ಅತ್ಯಂತ ಸೀನಿಯರ್ ಮೋಸ್ಟ್ ಕ್ಯಾಮಾರಮನ್ ಮನ್ಸೂರ್ ಅವರಿಗೂ ಎಕ್ಸಿಟ್ ತೋರಿಸಲಾಗಿದೆ.ಬಾಲಕೃಷ್ಣ ಕಾಕತ್ಕರ್ ಅವರಂಥ ಘಟಾನುಘಟಿಗಳ ಜತೆ ಕೆಲಸ ಮಾಡಿ ಸೈ ಎನಿಸಿಕೊಂಡ ಕ್ಯಾಮೆರಾಮನ್ ಮನ್ಸೂರ್.ಸ್ಟುಡಿಯೋವನ್ನು ಯಾವ್ ಪರಿ ಹ್ಯಾಂಡಲ್ ಮಾಡ್ತಿದ್ದರು ಎಂದ್ರೆ ಅನ್ ಬಿಲೀವಬಲ್. ಇಂಥಾ ಅತ್ಯದ್ಭುತ ಕ್ಯಾಮೆರಾಮನ್ ಯಾಕೆ ಅಸಮರ್ಥ ಎಂದೆನಿಸಿದರೋ ಗೊತ್ತಾಗ್ತಿಲ್ಲ”
ಹಾಗೆಯೇ ಜಿಲ್ಲೆ ಮಟ್ಟದಲ್ಲಿ ಉಡುಪಿಯ ರಾಮು, ಮೈಸೂರಿನ ರಾಘವೇಂದ್ರ, ಬೆಳಗಾಂನ ಪ್ರತಾಪ್ ಅವರಂಥ ಹುಡುಗರು ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದವರು.ಎಲೆಕ್ಷನ್ ಟೈಮ್ನಲ್ಲಿ ಗಡಿಯಾರ ಗಮನಿಸದೆ ದುಡಿದವರು.ಅವರನ್ನೇಕೆ ಟಾರ್ಗೆಟ್ ಮಾಡಲಾಗಿದೆಯೋ ಗೊತ್ತಾಗ್ತಿಲ್ಲ.ಉಳಿದವರಂತೆ ನಾವು ದೊಡ್ಡವರನ್ನು ಸರಿಯಾಗಿ ಗಮನಿಸಿಕೊಳ್ಳುತ್ತಿರಲಿಲ್ಲ ಎನ್ನಿಸುತ್ತೆ ಸರ್..ಹಾಗಾಗಿ ನಾವೆಲ್ಲಾ ಯೂಸ್ ಲೆಸ್ ಅನಿಸಿದೆವು ಅಂಥಾ ಅನ್ನಿಸುತ್ತೆ ಎಂದು ತಮ್ಮ ಅಳಲು ತೋಡಿಕೊಳ್ಳುವಾಗ ಛೇ..ಎಂಥಾ ಅನ್ಯಾಯ ಎನ್ನಿಸಿದ್ದು ಸುಳ್ಳಲ್ಲ.
ಟಿವಿ 9 ಕನ್ನಡ ನ್ಯೂಸ್ ಚಾನೆಲ್ ತನ್ನ ಇಷ್ಟೊಂದು ಸುಧೀರ್ಘ ಇತಿಹಾಸದಲ್ಲಿ ಹಿಂದೆಂದೂ ಇಂತ ದ್ದೊಂದು ಕೆಲಸಕ್ಕೆ ಕೈ ಹಾಕಿರಲಿಲ್ಲವಂತೆ..ಸಿಬ್ಬಂದಿಯನ್ನು ಅವರ ದಕ್ಷತೆ-ಕಾರ್ಯಕ್ಷಮತೆ-ಸಾಮರ್ಥ್ಯ ಗುರುತಿಸಿ ಬೆಳೆಸುವ, ಪ್ರೋತ್ಸಾಹಿಸುವ ಕೆಲಸ ಮಾಡುತ್ತಾ ಬಂದಿತ್ತು.ಕೆಲವೊಂದು ಕೆಟ್ಟ ಹುಳುಗಳನ್ನು ಬಿಟ್ಟರೆ ಅಲ್ಲೊಂದು ಉದ್ಯೋಗಿಸ್ನೇಹಿ ವ್ಯವಸ್ಥೆ ಇತ್ತು.ನಿಮಗೆ ಗೊತ್ತಿರಲಿ ಅಂಥಾ ಹೇಳ್ತೇವೆ ಕೇಳಿ, ಇವತ್ತಿಗೂ ಆರ್ಥಿಕವಾಗಿ ಟಿವಿ9 ಕನ್ನಡದ ಸ್ಥಿತಿ ಅತ್ಯುತ್ತಮವಾಗಿದೆಯಂತೆ.ಹೆಚ್ಚು ಲಾಭದಲ್ಲಿರುವ ಕನ್ನಡದ ಚಾನೆಲ್ ಗಳ ಪಟ್ಟಿಯಲ್ಲಿ ಇವತ್ತಿಗೂ ಅದಕ್ಕೇನೆ ನಂಬರ್ 1 ಸ್ಥಾನ. ಕೇವಲ ಡಿಜಿಟಲ್ ನಲ್ಲಿ ಬರುವ ಲಾಭದಲ್ಲೇ ನೂರಾರು ಸಿಬ್ಬಂದಿಗೆ ಸಂಬಳ ನೀಡಲಾಗ್ತಿತ್ತಂತೆ ಎನ್ನುವ ಮಾತುಗಳಿವೆ.ಇಷ್ಟಿದ್ದರೂ ಟಿವಿ9 ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಒಂದಷ್ಟು ಚಾನೆಲ್ ಗಳು ಲಾಸ್ ನಲ್ಲಿ ನಡೆಯುತ್ತಿರು ವುದನ್ನು ಬ್ಯಾಲೆನ್ಸ್ ಮಾಡಲು ಇಂತದ್ದೊಂದು “ಕಡಿತ”ಕ್ಕೆ ನಿರ್ದರಿಸಲಾಯ್ತೆನ್ನುವುದು ಉನ್ನತ ಮೂಲದ ಮಾಹಿತಿ.
“ಸಿಬ್ಬಂದಿ ಕಡಿತ ಮಾಡಿ..ಆದರೆ ಕೇಂದ್ರ ಮ್ಯಾನೇಜ್ಮೆಂಟ್ ನೀಡಿರುವ ನಿರ್ದೇಶನದ ಅನ್ವಯವೇ ಅಯೋಗ್ಯರನ್ನು ಟಾರ್ಗೆಟ್ ಮಾಡಿ,ಆದರೆ ಪ್ರಾಮಾಣಿಕರನ್ನಲ್ಲ.! ಟಿವಿ 9 ಮ್ಯಾನೇಜ್ಮೆಂಟ್ ಕನ್ನಡ ಚಾನೆಲ್ ನ ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿ ಒಂದಷ್ಟು ಸಿಬ್ಬಂದಿಯನ್ನು ತೆಗೆಯಲು ನಿರ್ದರಿಸಿರುವುದು ತಪ್ಪೇನಿಲ್ಲ.ಅದು ಮ್ಯಾನೇಜ್ಮೆಂಟ್ ನ ವಿವೇಚನಾಯುತ ಅಧಿಕಾರ ಬಿಡಿ. ಕೆಲಸ ಮಾಡದಿರುವ ಅಯೋಗ್ಯರು-ಮುಠ್ಠಾಳರು-ಸೋಮಾರಿಗಳನ್ನು ಮಾತ್ರ ಟಾರ್ಗೆಟ್ ಮಾಡಿ, ಯೋಗ್ಯರನ್ನು ಮುಂದುವರೆಸಿ ಎಂಬ ಸೂಚನೆ ನೀಡಿಯೇ ಇರುತ್ತದೆ. ಮುಖ್ಯಸ್ಥರೆನಿಸಿಕೊಂಡವರು ಅದಕ್ಕೆ ತಲೆ ಅಲ್ಲಾಡಿಸಿ ಬಂದಿರುತ್ತಾರೆ.ಆದರೆ ಹಾಗೆ ಬಂದವರು ಕಂಪೆನಿಯ ಮ್ಯಾನೇಜ್ಮೆಂಟ್ ನಿರ್ದೇಶನದ ಅನ್ವಯವೇ ಕೆಲಸ ಮಾಡಬೇಕಲ್ವಾ..?
ಟಿವಿ 9 ಕನ್ನಡದಲ್ಲಿ ಕೆಲಸ ಕಳೆದುಕೊಂಡಿರುವ ಬಹುತೇಕ ದಕ್ಷರು-ಪ್ರಾಮಾಣಿಕರ ಹೆಸರುಗಳನ್ನು ನೋಡಿದ್ರೆ ಆ ಮಾನದಂಡಗಳ ಪಾಲನೆಯೇ ಆಗಿಲ್ಲವೇನೋ ಅನ್ನಿಸುತ್ತೆ.ಏಕೆಂದ್ರೆ ಕೇಂದ್ರದ ಮ್ಯಾನೇಜ್ಮೆಂಟ್ ಗೆ ಯಾರು ಸಮರ್ಥರು-ಅಯೋಗ್ಯರು ಎನ್ನುವ ನೇರ ಮಾಹಿತಿ ಹೇಗೆ ಸಿಗೊಕ್ಕೆ ಸಾಧ್ಯ..? ಅದನ್ನು ಡಿಸೈಡ್ ಮಾಡೋರು ಮುಖ್ಯಸ್ಥರಲ್ಲವೇ..? ಅವರು ಯಾರು ಬೇಕು..ಯಾರು ಬೇಡ ಎಂದು ಲೀಸ್ಟ್ ರೆಡಿ ಮಾಡಿ ಕಳುಹಿಸಿಕೊಟ್ಟದ್ದನ್ನೇ ಮ್ಯಾನೇಜ್ಮೆಂಟ್ ಅವರ ಮೇಲೆ ವಿಶ್ವಾಸವಿಟ್ಟು ಅನುಮೋದಿಸುತ್ತದೆ.( ಇದೆಲ್ಲ ದರಲ್ಲಿ ಟಿವಿ9 ಮುಖ್ಯ ಕಚೇರಿಯ ಮ್ಯಾನೇಜ್ಮೆಂಟ್ ನ ದೋಷ, ಲೋಪ ಖಂಡಿತಾ ಇಲ್ಲ..) ಆದರೆ ತಮಗೆ ಆಪ್ತರಾದವರನ್ನು-ಬಕೆಟ್ ಹಿಡಿದವರನ್ನು ಬಚಾವ್ ಮಾಡಲಿಕ್ಕಾಗಿ ಸಂಸ್ಥೆಗೆ ರಕ್ತಬೆವರನ್ನು ಬಸಿದು ಕೆಲಸ ಮಾಡಿದವರನ್ನು ಅನಾವಶ್ಯಕವಾಗಿ ಬಲಿ ಪಡೆಯುವುದು ಎಷ್ಟರ ಮಟ್ಟಿಗೆ ಸರಿ..ಅದು ಮಾನವೀಯತೆನಾ..? ಒಬ್ಬ ಪ್ರಾಮಾಣಿಕ ಸಿಬ್ಬಂದಿಯ ಕೆಲಸ ಕಸಿದುಕೊಂಡು ಆತನನ್ನು ಅತಂತ್ರ ಮಾಡುವುದೆಂದರೆ ತಮ್ಮ ಮನಸಾಕ್ಷಿಗೆ ಮೋಸ ಮಾಡಿಕೊಂಡಂತೆ..! ಅದರಾಚೆ ಆತನ ಸಂಸಾರವನ್ನು ಬೀದಿಗೆ ತಂದಂತಲ್ಲವೇ.? ಇದು ಮುಖ್ಯಸ್ಥರೆನಿಸಿಕೊಂಡವರಿಗೇಕೆ ಅರ್ಥ ಆಗುತ್ತಿಲ್ಲವೋ ಗೊತ್ತಿಲ್ಲ”
ಟಿವಿ9 ಸಮೂಹದ ಇತರೆ ಚಾನೆಲ್ ಗಳ ನಷ್ಟವನ್ನು ಸರಿದೂಗಿಸುವ ಜತೆಗೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಮಾಡಲಾಗುತ್ತಿರುವ ಖರ್ಚು ವೆಚ್ಚಗಳಿಗೆ ಬ್ರೇಕ್ ಹಾಕುವ ಕಾರಣಕ್ಕೆ ಆ ಎಲ್ಲಾ ವೆಚ್ಚಗಳ ಕಡಿತಕ್ಕೆ ನಿರ್ದೇಶಿಸಲಾಗಿತ್ತೆನ್ನುವುದು ಸಧ್ಯಕ್ಕಿರುವ ಮಾಹಿತಿ.ಅಗತ್ಯಬಿದ್ದರೆ ಸಿಬ್ಬಂದಿಯನ್ನೂ ತೆಗೆದುಬಿಡಿ ಎಂದು ಕೇಂದ್ರ ಕಚೇರಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿತ್ತಂತೆ.ಆದರೆ ಸಿಬ್ಬಂದಿಯನ್ನು ಅನಗತ್ಯವಾಗಿ ಟಾರ್ಗೆಟ್ ಮಾಡದೆ ಅವರ ದಕ್ಷತೆ-ಪ್ರಾಮಾಣಿಕತೆ ಹಾಗೂ ಕಾರ್ಯವೈಖರಿ ಮಾನದಂಡವನ್ನು ಅನುಸರಿಸುವಂತೆ ಸೂಚಿಸಿತ್ತಂತೆ.ಆದರೆ ಯಾರ ಕೈಗೆ ಸಿಬ್ಬಂದಿ ಕಡಿತದ ಹೊಣೆ ನೀಡಲಾಗಿದೆಯೋ ಆ ಮಹಾನುಭಾವರು ಮಾನದಂಡ ಅನುಸರಿಸುವ ಗೋಜಿಗೇ ಹೋಗಿಲ್ಲವಂತೆ.ಅವರೊಂದಿಗೆ ಆತ್ಮೀಯತೆ “ವಿಶೇಷ” ಸಂಬಂಧ ಇಟ್ಟುಕೊಳ್ಳದವರನ್ನು ಮಾತ್ರ ಟಾರ್ಗೆಟ್ ಮಾಡಿದ್ದಾರೆ ಎನ್ನುವುದು ಅರ್ಹತೆ-ಯೋಗ್ಯತೆ ಇದ್ದಾಗ್ಯೂ ಕೆಲಸ ಕಳೆದುಕೊಂಡಿರುವ ಅನೇಕರ ನೋವು-ಆಕ್ರೋಶದ ಆರೋಪ.
“ಪ್ರಾಮಾಣಿಕರಿಗೆ ಗೇಟ್ ಪಾಸ್-ಬಕೆಟ್ ಸಿಂಟೆಕ್ಸ್ ಗಳೆಲ್ಲಾ ಸೇಫ್..! ಕೆಲಸ ಮಾಡದ,ಬೆಂಚ್ ಬಿಸಿ ಮಾಡುವ,ಕ್ಯಾಂಟೀನ್ ಗಳಲ್ಲಿ ಹರಟೆ ಹೊಡೆದು ದಿನದೂಡಿ ಸಂಬಳ ಎಣಿಸುವ, ಬೆಳಗ್ಗೆ ಬಂದು ಮೂರ್ನಾಲ್ಕು ಸಿನೆಮಾಗಳನ್ನು ಮೊಬೈಲ್ ನಲ್ಲಿ ನೋಡಿಕೊಂಡು ಹೋಗುವ ಒಂದಷ್ಟು ಸೋಮಾರಿ-ಮೈಗಳ್ಳರು ಟಿವಿ9 ನಲ್ಲಿ ಇವತ್ತಿಗೂ ಇದ್ದಾರಂತೆ.ಅವರೆಲ್ಲಾ ಧೀರ್ಘಾವಧಿಯಿಂದಲೂ ಯಾವುದೇ ತೊಂದರೆಯಿಲ್ಲದೆ ಸೇವ್ ಆಗ್ತಾ ಬಂದಿದ್ದಾರೆ.ಅದಕ್ಕೆಲ್ಲಾ ಕಾರಣ ಆಯಕಟ್ಟಿನ ಸ್ಥಳದಲ್ಲಿರುವ ಪ್ರಮುಖರಿಗೆ ಬಕೆಟ್-ಸಿಂಟೆಕ್ಸ್ ಹಿಡಿದಿರುವುದಂತೆ.ಆದರೆ ದುಡಿಮೆಯನ್ನೇ ನಂಬಿಕೊಂಡು ಎಕ್ಸ್ ಟ್ರಾ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿರುವ ಪ್ರಾಮಾಣಿಕ ದಕ್ಷ ಸಿಬ್ಬಂದಿಯನ್ನು ನಿರ್ದಾಕ್ಷಿಣ್ಯವಾಗಿ ಟಾರ್ಗೆಟ್ ಮಾಡಿ ತೆಗೆಯುವ ಕೆಲಸ ಮಾಡಲಾಗಿದೆಯಂತೆ.ಕೆಲಸ ಕಳೆದುಕೊಂಡಿರುವವರೇ ಹೇಳುವಂತೆ ನೋಡಿ ಸರ್..ನಮ್ಮ ಬೆನ್ನಿಂದೆ ಇನ್ನೊಂದಷ್ಟು ಪ್ರಾಮಾಣಿಕ ಕೆಲಸಗಾರರು ಕೆಲಸ ಕಳೆದುಕೊಂಡು ಹೊರಬಹುದು..ಆದ್ರೆ ಆ ಬಕೆಟ್-ಸಿಂಟೆಕ್ಸ್ ಗಳು ಮಾತ್ರ ಬಚಾವಾಗ್ತಾರೆ ಎಂದ್ಹೇಳುವಾಗ ಟಿವಿ9 ಕೇಂದ್ರ ಕಚೇರಿಯ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿರುವ ಕೆಲವರ ಕೈಗೆ ಅಧಿಕಾರ ಕೊಟ್ಟು ತಪ್ಪು ಮಾಡುತ್ತಿದೆಯಾ ಎಂದೆನಿಸಿದ್ದಂತೂ ಸತ್ಯ”
ಕಳೆದೆರಡು ದಿನಗಳಿಂದ ಹತ್ತಿರತ್ತಿರ 25 ಕ್ಕೂ ಹೆಚ್ಚು ಸಿಬ್ಬಂದಿಗೆ, ಅವರು ಕೆಲಸ ಕಳೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಕೊಡಲಾಗಿದೆಯಂತೆ.ಕೆಲಸದಿಂದ ತೆಗೆಯುವ ತಿಂಗಳ ಮುನ್ನ ನೋಟೀಸ್ ನೀಡುವ ಯಾವುದೇ ಕಾರ್ಮಿಕ ಕಾಯ್ದೆ ನಿಯಮಗಳನ್ನೂ ಪಾಲಿಸಲಾಗಿಲ್ಲವಂತೆ.ಬೆಂಗಳೂರಿನಲ್ಲಿರುವವರಿಗೆ ಎಚ್ ಆರ್ ಖುದ್ದು ಕರೆದು ನಿಮ್ಮ ಸೇವೆ ಸಂಸ್ಥೆಗೆ ಇನ್ಮುಂದೆ ಅವಶ್ಯಕತೆಯಿಲ್ಲ ಎಂದು ಶಾಕಿಂಗ್ ನ್ಯೂಸ್ ನೀಡಿದ್ದರೆ, ಜಿಲ್ಲೆಗಳಲ್ಲಿನ ಕ್ಯಾಮೆರಾಮನ್ ಗಳಿಗೆ ಜುಲೈ 10ರವರೆಗೆ ಕೆಲಸ ಮಾಡಿ,ಎರಡು ತಿಂಗಳ ಸಂಬಳ ಕೊಡಲಾಗ್ತದೆ ಎಂದು ಹೇಳಿ ಅವರ ಬದುಕುಗಳ ಮೇಲೆ ಗಧಾಪ್ರಹಾರ ಮಾಡಲಾಗ್ತಿದೆಯಂತೆ.ದಶಕದಿಂದಲೂ ದುಡಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಟಿವಿ9 ನಲ್ಲಿದ್ದಾರೆ.ಕರುಳುಬಳ್ಳಿಯ ಸಂಬಂಧವನ್ನೇ ಕಡಿದುಕೊಳ್ಳುವಂಥ ಆ ಸ್ಥಿತಿ ಯಾರಿಗೂ ಬರಬಾರದು ಸರ್ ಎಂದು ಅನೇಕರು ಕನ್ನಡ ಫ್ಲ್ಯಾಶ್ ನ್ಯೂಸ್ ಜತೆ ನೋವು ಹಂಚಿಕೊಂಡಿದ್ದಾರೆ.
ಟಿವಿ9 ಸಮೂಹ ಸಂಸ್ಥೆಯಲ್ಲಿನ ಆಂತರಿಕ ಬೆಳವಣಿಗೆಗಳ ಹಿನ್ನಲೆಯಲ್ಲಿ ಮ್ಯಾನೇಜ್ಮೆಂಟ್ ಸಿಬ್ಬಂದಿ ಕಡಿತಕ್ಕೆ ಮುಂದಾಗಿರುವುದು ಸಂಸ್ಥೆಯ ವಿವೇಚನಾಯುತ ಅಧಿಕಾರ.ಹಾಗೆ ಕೆಲಸ ಕಳೆದುಕೊಳ್ಳುತ್ತಿ ರುವವರಿಗೆ ಸಲ್ಲಬೇಕಾದ ಪರಿಹಾರವನ್ನು ಕೂಡ ನೀಡುವ ಮಾತನ್ನಾಡಿದೆ.ಈ ವಿಷಯದಲ್ಲಿ ಅದು ತನ್ನ ಬದ್ಧತೆ ಪ್ರದರ್ಶಿಸಿದೆ.ಆದರೆ ಅರ್ಹರು, ಯೋಗ್ಯರು,ಸಮರ್ಥರು ಯಾರು..? ಎಲ್ಲಕ್ಕಿಂತ ಹೆಚ್ಚಾಗಿ ಟಿವಿ9 ಕನ್ನಡಕ್ಕೆ ನಿಜಕ್ಕೂ ಅವಶ್ಯಕತೆ ಇರುವವರನ್ನು ಉಳಿಸಿಕೊಳ್ಳುವ ಕೆಲಸ ಬೆಂಗಳೂರು ಕಚೇರಿಯಲ್ಲಿರುವ ಕೆಲವರಿಂದ ಆಗುತ್ತಿಲ್ಲ ಎನ್ನುವುದಷ್ಟೇ ಕೆಲಸ ಕಳೆದುಕೊಂಡಿರುವ ಸಿಬ್ಬಂದಿಯ ಆರೋಪ.ಮೇಲ್ನೋಟಕ್ಕೆ ಗಮನಿಸಿದಾಗ ಇದು ಸತ್ಯ ಕೂಡ ಅನ್ನಿಸುತ್ತೆ.ಈ ವಿಷಯವನ್ನು ಕೇಂದ್ರ ಮ್ಯಾನೇಜ್ಮೆಂಟ್ ವರೆಗೂ ಕೊಂಡೊಯ್ಯುವ ಪ್ರಯತ್ನವನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಒಂದು ಜವಾಬ್ದಾರಿಯುತ ಮಾದ್ಯಮವಾಗಿ ಮಾಡಲು ಸಿದ್ದವಿದೆ. ಕೆಲವರ ಹಿತಾಸಕ್ತಿಗೆ ಪ್ರಾಮಾಣಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರೆ ಅವರು ಹಾಕುವ ಶಾಪ ನಿಜಕ್ಕೂ ಒಳ್ಳೆಯದಾಗುವುದಿಲ್ಲ…ಅಲ್ವಾ.?!ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಡೆಯಲಿ,ಆದರೆ ಅದಕ್ಕೊಂದು ಮಾನವೀಯ ಚೌಕಟ್ಟಿರಲಿ ಎನ್ನುವುದಷ್ಟೇ ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ ಹಾಗೂ ಕಳಕಳಿ.

“ಸಿಬ್ಬಂದಿ ಕಡಿತ ಮಾಡಿ..ಆದರೆ ಕೇಂದ್ರ ಮ್ಯಾನೇಜ್ಮೆಂಟ್ ನೀಡಿರುವ ನಿರ್ದೇಶನದ ಅನ್ವಯವೇ ಅಯೋಗ್ಯರನ್ನು ಟಾರ್ಗೆಟ್ ಮಾಡಿ,ಆದರೆ ಪ್ರಾಮಾಣಿಕರನ್ನಲ್ಲ.! ಟಿವಿ 9 ಮ್ಯಾನೇಜ್ಮೆಂಟ್ ಕನ್ನಡ ಚಾನೆಲ್ ನ ಸಿಬ್ಬಂದಿಯನ್ನು ಟಾರ್ಗೆಟ್ ಮಾಡಿ ಒಂದಷ್ಟು ಸಿಬ್ಬಂದಿಯನ್ನು ತೆಗೆಯಲು ನಿರ್ದರಿಸಿರುವುದು ತಪ್ಪೇನಿಲ್ಲ.ಅದು ಮ್ಯಾನೇಜ್ಮೆಂಟ್ ನ ವಿವೇಚನಾಯುತ ಅಧಿಕಾರ ಬಿಡಿ. ಕೆಲಸ ಮಾಡದಿರುವ ಅಯೋಗ್ಯರು-ಮುಠ್ಠಾಳರು-ಸೋಮಾರಿಗಳನ್ನು ಮಾತ್ರ ಟಾರ್ಗೆಟ್ ಮಾಡಿ, ಯೋಗ್ಯರನ್ನು ಮುಂದುವರೆಸಿ ಎಂಬ ಸೂಚನೆ ನೀಡಿಯೇ ಇರುತ್ತದೆ. ಮುಖ್ಯಸ್ಥರೆನಿಸಿಕೊಂಡವರು ಅದಕ್ಕೆ ತಲೆ ಅಲ್ಲಾಡಿಸಿ ಬಂದಿರುತ್ತಾರೆ.ಆದರೆ ಹಾಗೆ ಬಂದವರು ಕಂಪೆನಿಯ ಮ್ಯಾನೇಜ್ಮೆಂಟ್ ನಿರ್ದೇಶನದ ಅನ್ವಯವೇ ಕೆಲಸ ಮಾಡಬೇಕಲ್ವಾ..?