EXCLUSIVE: ಶೇಷಾದ್ರಿಪುರಂ ಠಾಣೆಯ “ಆ” ಪೊಲೀಸರು, ವ್ಯಕ್ತಿಯೊಬ್ರನ್ನು ರಾತ್ರಿಯಿಡೀ ಠಾಣೆಯಲ್ಲಿಟ್ಟು ಹಿಂಸಿಸಿದ್ರಾ-ಕಿರುಕುಳ ಕೊಟ್ರಾ.?! ಹಣಕ್ಕೆ ಡಿಮ್ಯಾಂಡ್‌ ಮಾಡಿದ್ರಾ..!?


ದೂರುದಾರ ಉಮೇಶ್
 ದೂರುದಾರ ಉಮೇಶ್

ಬೆಂಗಳೂರು: ರಾಜಧಾನಿ ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯ  ಇಬ್ಬರು ಪೊಲೀಸರ ವಿರುದ್ದ ಹಿಂಸೆ-ಕ್ರೌರ್ಯ ಮೆರೆದು ಹಣಕ್ಕೆ ಡಿಮ್ಯಾಂಡ್‌ ಮಾಡಿದ ಗಂಭೀರ ಆಪಾದನೆ ಕೇಳಿಬಂದಿದೆ.FIR  ದಾಖಲಿಸದೆ ವ್ಯಕ್ತಿಯೋರ್ವನನ್ನು ಠಾಣೆಗೆ ಕರೆತಂದು ರಾತ್ರಿಯೆಲ್ಲಾ ಪೊಲೀಸ್‌ ಲಾಠಿ ಮತ್ತು ಕಬ್ಬಿಣದ ರಾಡ್‌ ನಿಂದ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆರೋಪಕ್ಕೆ ಸಿಲುಕಿದ್ದಾರೆ. ಬಿಡುಗಡೆ ಮಾಡಬೇಕೆಂದರೆ 5 ಲಕ್ಷ ಹಣ ನೀಡುವಂತೆ ಡಿಮ್ಯಾಂಡ್‌ ಮಾಡಿರುವಂತ ಗಂಭೀರ ಸ್ವರೂಪದ ಆರೋಪಕ್ಕೆ ತುತ್ತಾಗಿದ್ದಾರೆ.ಈ ಸಂಬಂಧ ಹಲ್ಲೆಗೊಳಗಾಗಿದ್ದಾರೆನ್ನಲಾಗಿರುವ ಉಮೇಶ್‌ ಎನ್ನುವವರು ಪೊಲೀಸ್‌ ಮಹಾನಿರ್ದೇಶಕರು, ಪೊಲೀಸ್‌ ಆಯುಕ್ತರು, ಡಿಸಿಪಿ ಅವರಿಂದ ಹಿಡಿದ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ.ದೂರಿನ ಪ್ರತಿಗಳು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ ಲಭ್ಯವಾಗಿವೆ.

ಕೆಲವು ಭ್ರಷ್ಟರು ಮಾಡುವ ಹೇಸಿಗೆ ತಿನ್ನುವ ಕೆಲಸಕ್ಕೆ ಇಡೀ ಪೊಲೀಸ್‌ ಇಲಾಖೆ ಮುಜುಗರ ಅನುಭವಿಸಬೇಕಾದ  ಸ್ಥಿತಿ ಪೊಲೀಸ್‌ ಇಲಾಖೆಗೆ ಆಗಾಗ ಎದುರಾಗುತ್ತಲೇ ಇರುತ್ತದೆ.ಈಗ ಅಂತದ್ದೇ ಸನ್ನಿವೇಶ ಶೇಷಾದ್ರಿಪುರಂ ಒಂದಷ್ಟು “ನೀಚ ಮನಸ್ತಿತಿ”ಯ ಪೊಲೀಸರು ಮಾಡಿದ್ದಾರೆನ್ನಲಾಗಿರುವ ಕೃತ್ಯದಿಂದ  ಸೃಷ್ಟಿಯಾಗಿದೆ.ಎಂಜಿಲ ಕಾಸಿನ ಹಣಕ್ಕಾಗಿ ಇಲಾಖೆ ಹೇಳುವ ನಿಯಮಗಳು, ಕೋರ್ಟ್‌ ಗಳು ರೂಪಿಸಿರುವ ಕಾನೂನುಗಳನ್ನೆಲ್ಲಾ ಇಲ್ಲಿನ ಒಂದಷ್ಟು ಪೊಲೀಸರು ಉಲ್ಲಂಘಿ ಸಿರುವ ಗಂಭೀರ ಆಪಾದನೆಗೆ ಗುರಿಯಾಗಿದ್ದಾರೆ.ಸಾಲದ್ದಕ್ಕೆ ಇಲಾಖೆಯ ಘನತೆಯನ್ನೇ ಮೂಲೆಗುಂಪು ಮಾಡಿದ್ದಾರೆ.

ಮೈಸೂರು ಮೂಲದವರೆನ್ನಲಾದ ಉಮೇಶ್‌ ಎನ್ನುವ ವ್ಯಕ್ತಿಯೋರ್ವರೇ ಶೇಷಾದ್ರಿಪುರಂ ಠಾಣೆಯ ಒಂದಿಬ್ಬರು ಕಾನ್ಸ್‌ ಟೇಬಲ್‌ ಗಳ ವಿರುದ್ದ ಇಂತದ್ದೊಂದು ಗಂಭೀರ ಆಪಾದನೆ ಮಾಡಿದವರು. ಅವರೇ ಈ ಬಗ್ಗೆ ದೂರು ನೀಡಿದ್ದಾರೆ.ದೂರಿನಲ್ಲಿ ಅವರು ತಮ್ಮನ್ನು ಅಕ್ರಮವಾಗಿ ಎತ್ತಾಕೊಂಡು( ಯಾವುದೇ ದೂರು-ಅದರ ಮೇಲೆ ಎಫ್‌ ಐ ಆರ್‌ ಆಗಿಲ್ಲ ಎನ್ನುವ ಕಾರಣದಿಂದ ಇದು ಕಿಡ್ನ್ಯಾಪ್‌ ಎಂತಲೂ ಕರೆಸಿಕೊಳ್ಳುತ್ತದಂತೆ) ಬಂದು ಠಾಣೆಯಲ್ಲಿಟ್ಟು ಇಡೀ ರಾತ್ರಿಯಷ್ಟೇ ಅಲ್ಲ ಮಾರನೇ ದಿನವೂ ಹಿಂಸೆ ನೀಡಿ ಬಿಡಬೇಕೆಂದ್ರೆ 5 ಲಕ್ಷ ಹಣವನ್ನು ನೀಡಿ ಎಂದು ಡಿಮ್ಯಾಂಡ್‌ ಮಾಡಿದ್ದಾರೆನ್ನುವ ಆಪಾದನೆ ಮಾಡಿದ್ದಾರೆ. ಆದರೆ ಇದೆಲ್ಲಾ ಆ ಠಾಣೆಯ ಉಸ್ತುವಾರಿಯ ಹೊಣೆ ಹೊತ್ತಿರುವ ಮೇಲಾಧಿಕಾರಿಗಳಿಗೆ ಗೊತ್ತಿಲ್ಲದೆ ನಡೆದೋಯ್ತಾ..!? ಅಥವಾ ಅವರಿಗೆ ಗೊತ್ತಿದ್ದರೂ ಇಂತದ್ದೊಂದು ಕಾನೂನುಬಾಹಿರ  ಕೃತ್ಯವನ್ನು ಅವರು ವಿರೋಧಿಸಲಿಲ್ಲವೇ..? ಎನ್ನುವ ಒಂದಷ್ಟು ಪ್ರಶ್ನೆಗಳು ಕೂಡ ಈಗ ಸುಳಿದಾಡಲಾರಂಭಿಸಿವೆ. ಉಮೇಶ್‌ ಅವರು ಮಾಡಿರುವ ಆಪಾದನೆಗಳೆಲ್ಲಾ ಸತ್ಯ ಎಂದು ಸಾಬೀತಾದ್ರೆ ಆ ಪೊಲೀಸ್ರು ಇಕ್ಕಟ್ಟಿಗೆ ಸಿಲುಕುವುದಂತೂ ಸತ್ಯ ಎನ್ನಲಾಗ್ತಿದೆ.

ಇದೇ ಹೊಟೇಲ್‌ ನಿಂದ ಉಮೇಶ್‌ ಅವರನ್ನು "ಆ" ಪೊಲೀಸರು ಅಕ್ರಮವಾಗಿ ಎತ್ತಾಕಂಡು ಹೋಗಿದ್ದಂತೆ..!
ಇದೇ, ಹೊಟೇಲ್‌ ನಿಂದ ಉಮೇಶ್‌ ಅವರನ್ನು “ಆ” ಪೊಲೀಸರು ಅಕ್ರಮವಾಗಿ ಎತ್ತಾಕಂಡು ಹೋಗಿದ್ದಂತೆ..!

ಅಂದು ನಡೆದಿದ್ದೇನು.?! ಮೂಲತಃ  ಮೈಸೂರಿನ ನಿವಾಸಿಯಾಗಿರುವ  ಉಮೇಶ್.ಆರ್‌ ಎಸ್.‌  ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವಂತೆ 31-10-2026 ರಂದು ಸಂಜೆ ಸುಮಾರು 05:30PM ಗಂಟೆಗೆ ಉಮೇಶ್‌ ಅವರನ್ನು ಪೊಲೀಸ್‌ ಕಾನ್ಸ್‌ ಟೇಬಲ್‌ ನವೀನ ಮತ್ತು ಆತನ ಸಹೋದ್ಯೋಗಿ ಇಬ್ಬರು ಕಾನೂನುಬಾಹಿರವಾಗಿ ಅರೆಸ್ಟ್‌ ಮಾಡಿಕೊಂಡು   ಶೇಷಾದ್ರಿಪುರಂ ಪೊಲೀಸ್‌ ಠಾ ಣೆಗೆ ಕರೆದೊಯ್ದಿದ್ದಾರಂತೆ.ಆ  ರಾತ್ರಿ ಇಡೀ  ಮತ್ತು ಮರುದಿನ ಸುಮಾರು 07:30PM ಗಂಟೆಯವರೆಗೂ ಕಾನೂನುಬಾಹಿರವಾಗಿ ಠಾಣೆಯಲ್ಲಿರಿಸಿಕೊಂಡು  ಪೊಲೀಸ್‌ ಕಾನ್ಸ್‌ ಟೇಬಲ್‌ ನವೀನ್, ಚೆಲುವರಾಜ್, ಇನ್ನಿತರರು ಅವರ ಎಡ ಕೆನ್ನೆಗೆ ಜೋರಾಗಿ ಹೊಡೆದಿ ದ್ದಾರಂತೆ. ನಂತರ, ಪೋಲಿಸ್‌ ಲಾಠಿ ಮತ್ತು ಕಬ್ಬಿಣದ ಪೈಪ್ನಿಂದ ಅವರ ಎರಡು ಅಂಗೈಗೆ ಹಲವುಬಾರಿ ಅಂದ್ರೆ  ಸುಮಾರು 20 ರಿಂದ 25 ಬಾರಿ  ಅಮಾನುಷವಾಗಿ ಕ್ರೂರವಾಗಿ ಹಲ್ಲೆ ಮಾಡಿ ದ್ದಾರಂತೆ.

ಶೇಷಾದ್ರಿಪುರಂ ಠಾಣೆಯ "ಆ" ಪೊಲೀಸ್ರು ಹೀಗೆ ಬಾಸುಂಡೆ ಬರುವ ಹಾಗೆ ಉಮೇಶ್‌ ಅವರನ್ನು ಥಳಿಸಿದ್ರಾ..!?
ಶೇಷಾದ್ರಿಪುರಂ ಠಾಣೆಯ “ಆ” ಪೊಲೀಸ್ರು ಹೀಗೆ ಬಾಸುಂಡೆ ಬರುವ ಹಾಗೆ ಉಮೇಶ್‌ ಅವರನ್ನು ಥಳಿಸಿದ್ರಾ..!?

ಪೊಲೀಸ್‌ ಕಾನ್ಸ್‌ ಟೇಬಲ್‌ ಗಳು ನೀಡಿದ್ದಾರೆನ್ನಲಾಗಿರುವ ಹಿಂಸೆ ತಾಳಲಾರದೆ ಅವರು ಕಿರುಚಿದ್ದಾರೆ.ನನ್ನನ್ನು ಕೆಟ್ಟ ಕೆಟ್ಟ ಶಬ್ದಗಳಿಂದ ಸೂ****ಮಗನೇ ಗಾಂ**** ಬೋ*** ಮಗನೆ ಎಂದು ಅವ್ಯಾಚ್ಯ  ಶಬ್ದಗಳಿಂದ ನಿಂದಿಸಿ ಚಿತ್ರಹಿಂಸೆ ನೀಡಿರುತ್ತಾರೆ. ಅಷ್ಟೇ ಅಲ್ಲದೆ ನನ್ನ ಎರಡು ಪಾದಗಳಿಗೆ ಅದೇ ಲಾಠಿಮತ್ತು ಕಬ್ಬಿಣದ ಪೈಪ್ ನಿಂದ ಅಮಾನುಷವಾಗಿ ಹಲ್ಲೆ ಮಾಡಿರುತ್ತಾರೆ ಎಂದು ವಿವರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೈಸೂರಿನ ಆಸ್ಪತ್ರೆಯಲ್ಲಿ ಎಮ್‌ ಎಲ್‌ ಸಿ ಕೂಡ ಮಾಡಿಸಿರುತ್ತಾರೆ. ಉಮೇಶ್‌ ಅವರೇ ವಿವರಿಸಿರುವಂತೆ ಪೊಲೀಸರು ನೀಡಿದ ಟಾರ್ಚರ್‌ ನಿಂದ ಅವರ  ಕೈ  ಮತ್ತು ಕಾಲುಗಳು ಊದುಕೊಂಡು ಸ್ವಾಧೀನ ಕಳೆದುಕೊಂಡಿವೆಯಂತೆ.ಅಸಹನೀಯವಾದ ನೋವಿನಿಂದ  ಮೊದಲಿನ ಹಾಗೆ ಸ್ವಾಭಾವಿಕವಾಗಿ ನಡೆಯಲು ಸಾಧ್ಯವಾಗುತ್ತಿಲ್ಲವಂತೆ ಎಂದು ಉಮೇಶ್‌ ವಿವರಿಸಿದ್ದಾರೆ.

ಉಮೇಶ್‌ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ನೀಡಿರುವ ದೃಢೀಕರಣ ಪತ್ರ
ಉಮೇಶ್‌ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ನೀಡಿರುವ ದೃಢೀಕರಣ ಪತ್ರ

ಉಮೇಶ್‌ ಅವರ ಆಪಾದನೆ ಏನು..? ಉಮೇಶ್‌ ಅವರ ದೂರಿನಲ್ಲಿ ಉಲ್ಲೇಖವಾಗಿರುವಂತೆ ಸಂದೀಪ್‌ ಎನ್ನುವವರು  ಸುಮಾರು 21 ಲಕ್ಷ ರೂಪಾಯಿ ಹಣವನ್ನು ಕೊಡಬೇಕಿತ್ತಂತೆ.ಆ ಹಣವನ್ನು ಕೊಡುತ್ತೇನೆ  ಬಾ ಎಂದು 31-10-2026 ರಂದು ಸಂಜೆ ಸುಮಾರು 5:30  ಕ್ಕೆ ಗಾಂಧೀನಗರದ ವಿಜಯ ಜ್ಯುವೆಲರ್ಸ್‌  ಮುಂಭಾಗದಲ್ಲಿರುವ  ಶ್ರೀನೈವೇದ್ಯಂ ವೆಜ್‌ ಹೋಟೇಲ್‌ ಗೆ ಬರುವಂತೆ ತಿಳಿಸಿದ್ದ ರಂತೆ.ಮೈಸೂರಿನಲ್ಲಿದ್ದ ಉಮೇಶ್‌ ಅವರು ಹಣಕ್ಕಾಗಿ  ಮೈಸೂರಿನಿಂದ ಮದ್ಯಾಹ್ನ 2:30  ಗೆ ಹೊರಟು ಶತಾಬ್ದಿ ಟ್ರೈನ್‌ ಹಿಡಿದು  ಸಂಜೆ  4:15 ಗಂಟೆಗೆ ಬೆಂಗಳೂರಿಗೆ  ಬಂದಿದ್ದಾರೆ.ಸುಮಾರು 5:00  ಗಂಟೆಗೆ ಸಂದೀಪ್ ಅವರನ್ನು ಹೊಟೇಲ್‌ ನಲ್ಲಿ ಭೇಟಿಯಾಗಿ ಮಾತನಾಡಿಸುತ್ತಿದ್ದಾರಂತೆ.ಆಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ದಿಢೀರ್‌ ಪ್ರತ್ಯಕ್ಷವಾಗಿ ಏನೂ ಮಾತನಾಡದೆ  ಬಲವಂತವಾಗಿ ಹೋಟೆಲಿ ನಿಂದ ಎಳೆದುಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡಿದ್ದಾರಂತೆ.

ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಉಮೇಶ್‌ ಅವರು ನೀಡಿರುವ ದೂರಿನ ಪ್ರತಿ
ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಉಮೇಶ್‌ ಅವರು ನೀಡಿರುವ ದೂರಿನ ಪ್ರತಿ

ಗಾಬರಿಗೊಂಡ ಉಮೇಶ್‌ ನೀವು ಯಾರು..ಯಾಕೆ ಹೀಗೆ ಮಾಡುತ್ತಿದ್ದೀರಿ ಎಂದು ಕೇಳಿದ್ರೆ ಆ  ವ್ಯಕ್ತಿಗಳು ತಮ್ಮನ್ನು ಪೊಲೀಸ್‌ ಎಂದು ಪರಿಚಯಿಸಿಕೊಂಡು ಸುಮ್ಮನೆ ಕುಳಿತಿಕೋ ಎಂದು ಗದರಿಸಿ, ಹೊಟೇಲ್‌ ನಿಂದ ಸುಮಾರು ಎರಡುವರೆ ಕಿಲೋಮೀಟರ್‌  ದೂರದಲ್ಲಿರುವ  ಶೇಷಾದ್ರಿಪುರಂ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿದ್ದಾರಂತೆ.ವಿಚಿತ್ರ ಎಂದರೆ ಯಾವ  ಸಂದೀಪ್‌ ಇವರು ಕರಯಿಸಿ ಕೊಂಡಿದ್ದರೋ ಅದೇ ವ್ಯಕ್ತಿ   ಠಾಣೆಯಲ್ಲಿ ಇವರ  ವಿರುದ್ಧ ಕಂಪ್ಲೇಂಟ್‌ ನೀಡಿದ್ದರಂತೆ.ಹಾಗೆ ಕರೆದುಕೊಂಡು ಬಂದವರೇ ಠಾಣೆಯ ಒಂದು ಕೊಠಡಿಯಲ್ಲಿ ಅವರನ್ನು  ಕೂಡಿಹಾಕಿದ್ರಂತೆ.ಅವರನ್ನು ಕರೆತಂದ ಆ ಎರಡು ವ್ಯಕ್ತಿಗಳಲ್ಲಿ ಒಬ್ಬರ ಹೆಸರು ನವೀನ್ ಎಂದು ಹೇಳಿದ್ದು, ಇನ್ನೊಬ್ಬರ ಹೆಸರು ನೆನಪಿಲ್ಲ ನೋಡಿದರೆ ಗುರುತಿಸುತ್ತೇನೆ ಎಂದು ತಿಳಿಸಿದ್ದಾರೆ.

ಆಮೇಲೆ ಶುರುವಾಗಿದೆಯಂತೆ  ಪೊಲೀಸ್‌ ಕಾನ್ಸ್ ಟೇಬಲ್‌ ನವೀನ್‌ ಟಾರ್ಚರ್.ಉಮೇಶ್‌ ಅವರ ಎಡಕೆನ್ನೆಗೆ ಜೋರಾಗಿ ಹೊಡೆದು,ಎರಡು ಅಂಗೈಗೆ ಸುಮಾರು 20 ರಿಂದ 25 ಬಾರಿ ಪೋಲಿಸ್‌ ಲಾಠಿ ಮತ್ತು ಕಬ್ಬಿಣದ ಪೈಪ್ನಿಂದ ಅಮಾನುಷವಾಗಿ ಹಲ್ಲೆನಡೆಸಿದನಂತೆ.ನೋವು ತಾಳಲಾರದೆ ಕಿರುಚಿದ್ರೆ, ಸೂ****ಮಗನೇ, ಗಾಂ***** ಬೋ***ಮಗನೆ ಎಂದು ಅವ್ಯಾಚ್ಯವಾಗಿ ನಿಂದಿಸಿ ಚಿತ್ರ ಹಿಂಸೆ ನೀಡಿದ್ದಾನಂತೆ.ಎರಡು ಪಾದಗಳಿಗೆ ಲಾಠಿ-ಕಬ್ಬಿಣದ ಪೈಪ್ನಿಂದ ಹೊಡೆದಿದ್ದಾನಂತೆ. ತ್ತಾರೆ. ನವೀನ್‌ ಜೊತೆ ಬಂದಿದ್ದಇನ್ನೊಬ್ಬ ಪೊಲೀಸ್‌ ಕಾನ್ಸ್‌ ಟೃಬಲ್‌  ಕೂಡ  ಅವ್ಯಾಚ್ಯ ಶಬ್ದ ಬ್ದಗಳಿಂದ ನಿಂದಿಸಿ ಚಿತ್ರಹಿಂಸೆ ನೀಡಿದ್ದಾನಂರೆ.ಅಲ್ಲಿಯೇ ಇದ್ದ  ಚೆಲುವರಾಜು ಎನ್ನುವ ಇನ್ನೊಬ್ಬ  ಪೊಲೀಸ್‌ ಕಾನ್ಸ್‌ ಟೇಬಲ್‌ ಕೂಡ ಎರಡು ಅಂಗೈ-ಎರಡು ಪಾದಗಳಿಗೆ ಸುಮಾರು 10 ರಿಂದ 15 ಬಾರಿ ಪೋಲಿಸ್‌ ಲಾಠಿ  ಮತ್ತು ಕಬ್ಬಿಣದ ಪೈಪ್ನಿಂದ ಹೊಡೆದು ಚಿತ್ರಹಿಂಸೆ ನೀಡಿದ್ದಾನಂತೆ. ನೋವಿನಿಂದ ಕಿರುಚಿದ್ರೂ ಬಿಡದೆ ಮತ್ತಷ್ಟು ಹಿಂಸಿಸಿದ್ದಾರಂತೆ.

ಯಾಕೆ ಹಲ್ಲೆ ಎಂದು ಪ್ರಶ್ನಿಸಿದ್ರೆ ಕೊಟ್ಟ ಉತ್ತರ ಇದು.. ತನ್ನ ಮೇಲೆ ಇಷ್ಟೆಲ್ಲಾ ಏಕೆ ಆಗುತ್ತಿದೆ ಎಂದು ಉಮೇಶ್‌  ಕೇಳಿದ್ರಂತೆ.ಆಗ  ಪೊಲೀಸ್‌ ಕಾನ್ಸ್‌ ಟೇಬಲ್‌ ನವೀನ್‌ ,ನಿನ್ನ ಸ್ನೇಹಿತ ಭರಣಿ ಮತ್ತು ರಮೆಶ್‌ ಎನ್ನುವವರು ಸಂದೀಪ್‌   ಬಳಿ 8 ಲಕ್ಷ ರೂಪಾಯಿಯ ಚಿನ್ನದ ಚೈನನ್ನು ಪಡೆದುಕೊಂಡು 3 ಲಕ್ಷರೂಪಾಯಿ ಮಾತ್ರ ನೀಡಿರುತ್ತಾರಂತೆ. ಉಳಿದ 5 ಲಕ್ಷಗಳನ್ನು ಕೊಡದೆ ಮೋಸಮಾಡಿದ್ದಾರಂತೆ. ನೀನು ಅವರ ಜೊತೆ ಸೇರಿ ಮೋಸ ಮಾಡಿದ್ದೀಯಾ ಎಂದು ಹೇಳುತ್ತಿದ್ದಾರೆ. ಹಾಗಾಗಿ ಆ ಐದು ಲಕ್ಷ ರೂಪಾಯಿಗಳನ್ನು ನೀನು ಸಂದೀಪ್ ಅವರಿಗೆ ಈಗಲೇ ಕೊಡಬೇಕು ಎಂದು ಅವರನ್ನು ಹೆದರಿಸಿದ್ದಾರಂತೆ.ಇದೆಲ್ಲಾ ಸಂದೀಪ್‌ ಅವರದೇ ಪ್ಲ್ಯಾನ್..ಹಣ ಕೊಡುವ ಆಸೆ ತೋರಿಸಿ ಇಲ್ಲಿಗೆ ಕರೆಯಿಸಿ ಲಾಕ್‌ ಮಾಡಿಸಿದ್ದಾರೆನ್ನುವುದು ಸ್ಪಷ್ಟವಾಗಿದೆ. 5 ಲಕ್ಷ ರೂಪಾಯಿಗಳನ್ನು ಆನ್‌ ದಿ ಸ್ಪಾಟ್‌ ಸೆಟ್ಲ್‌ ಮಾಡಬೇಕೆಂದು  ಪೊಲೀಸ್‌ ಕಾನ್ಸ್‌ ಟೇಬಲ್‌ ನವೀನ್‌ ಬೇಡಿಕೆ ಇಟ್ಟಿದ್ದರಂತೆ. (ಸದರಿ ಸಂದೀಪ್‌ ಅವರು ಗಾಂಧಿನಗರದಲ್ಲಿರುವ ವಿಜಯ ಜೆಮ್‌ ಅಂಡ್ಸ್‌ ಜುವೆಲ್ಲರಿಸ್‌ ನಲ್ಲಿ ಕೆಲಸ ಮಾಡುತ್ತಿದ್ದಾರಂತೆ) 31-10-2026 ರಾತ್ರಿ ಉಮೇಶ್‌ ಅವರನ್ನು ಠಾಣೆಯ ಕೊಠಡಿಯಲ್ಲಿ ಕೂಡಿ ಹಾಕಿ,5 ಲಕ್ಷ ಹಣವನ್ನು ಸಂದೀಪ್‌ ಅವರಿಗೆ ಕೊಡದೆ ಹೋದರೆ  FIR ಹಾಕಿ ಜೈಲಿಗೆ ಹಾಕುತ್ತೇವೆ ಎಂದು ದಮ್ಕಿಹಾಕಿದ್ದರಂತೆ.

ಹೈಕೋರ್ಟ್‌ ನ   ಖ್ಯಾತ ವಕೀಲ ಶಿವಮೂರ್ತಿ
ಹೈಕೋರ್ಟ್‌ ನ   ಖ್ಯಾತ ವಕೀಲ ಶಿವಮೂರ್ತಿ

ಉಮೇಶ್‌ ಅವರ ಮೇಲಿನ ಪೊಲೀಸ್‌ ದೌರ್ಜನ್ಯದ ಆಪಾದನೆಗೆ ವಕೀಲರ ವಿವರಣೆ-ಸ್ಪಷ್ಟನೆ ಏನು..!? ಹೈಕೋರ್ಟ್‌ ನ   ಖ್ಯಾತ ವಕೀಲ ಶಿವಮೂರ್ತಿ ಅವರು ಇಂತದ್ದೊಂದು ಅಮಾನವೀಯ ಕೃತ್ಯ ನಡೆದಿರುವುದೇ ಸತ್ಯವಾಗಿದ್ರೆ ಅದೊಂದು ದುರಾದೃಷ್ಟಕರ ಎಂದಿದ್ದಾರೆ. ಉಮೇಶ್‌ ಅವರ ದೂರನ್ನು  ಕಾನೂನಿನ ಪರಿಭಾಷೆಯಲ್ಲಿ ಅವಲೋಕಿಸುವುದಾದರೆ ,ಶೇಷಾದ್ರಿಪುರಂ ಠಾಣೆಯ “ಆ” ಪೊಲೀಸರು, ಕೋರ್ಟ್‌ ನ ಎಲ್ಲಾ  ಕಾನೂನನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ಎಫ್‌ ಐ ಆರ್‌ ಆಗದ ಹೊರತು ಯಾರನ್ನೂ ಬಂಧಿಸುವಂತಿಲ್ಲ ಎಂದು ಕೋರ್ಟ್‌ ಹೇಳಿರುವ ಸಣ್ಣ ಪರಿಜ್ಞಾನ ಇಲ್ಲದಂತೆ ಪೊಲೀಸರು ವರ್ತಿಸಿದ್ದಾರೆ.ಯಾವುದೇ ದೂರು-ಎಫ್‌ ಐ ಆರ್‌ ಇಲ್ಲದೆ ಉಮೇಶ್‌ ಅವರನ್ನು ಕರೆದೊಯ್ದಿದ್ದಾರೆನ್ನುವುದು ಕಿಡ್ನ್ಯಾಪ್‌ ಗೆ ಸಮಾನ.ಬಂಧನದ ವೇಳೆ ಉಮೇಶ್‌ ಸಂಬಂಧಿಕರಿಗೆ ವಿಷಯ ತಿಳಿಸಬೇಕಿತ್ತು.ಅದರ ಪಾಲನೆಯೂ ಆಗಿಲ್ಲ.ವ್ಯಕ್ತಿಯನ್ನುಅಕ್ರಮವಾಗಿ ವಶಕ್ಕೆ ಪಡೆಯುವಂತಿಲ್ಲ.  ವಶಕ್ಕೆ ಪಡೆದ ಘಳಿಗೆಯಿಂದ ಹಿಡಿದು ೨೪ ಗಂಟೆಯೊಳಗೆ ಕೋರ್ಟ್‌ ಗೆ ಪ್ರೊಡ್ಯೂಸ್‌ ಮಾಡಬೇಕು,ಅದರ ಪಾಲನೆಯೂ ಆಗಿಲ್ಲ.ಪೊಲೀಸ್‌ ಸುಪರ್ದಿಯಲ್ಲಿದ್ದಾಗ ಯಾರ ಮೇಲೆಯೂ ಹಲ್ಲೆ ನಡೆಸುವಂತಿಲ್ಲ..

ಆದರೆ ಉಮೇಶ್‌ ಅವರು ತಮ್ಮ ಮೇಲೆ  ಕ್ರೌರ್ಯ ನಡೆದಿದೆ ಎಂದು ದೂರು ನೀಡಿದ್ದಾರೆ.ಇದೆಲ್ಲವೂ ತನಿಖೆಯಿಂದ ಸಾಬೀತಾಗಬೇ ಕಾಗುತ್ತದೆ. ಈ ಬಗ್ಗೆ ಹೈಕೋರ್ಟ್‌ ನಲ್ಲಿಇನ್ನೆರೆಡು ದಿನಗಳಲ್ಲಿ ಪ್ರಕರಣ ದಾಖಲಿಸುತ್ತೇವೆ.ಪೊಲೀಸರು ದೌರ್ಜನ್ಯ ನಡೆಸಿರುವುದು ಸಾಕ್ಷ್ಯಗಳ ಮೂಲಕ ಸಾಬೀತಾದಲ್ಲಿ ಕೋರ್ಟ್‌ ನೀಡುವ ಶಿಕ್ಷೆಯನ್ನು ಪೊಲೀಸರು ಅನುಭವಿಸಲೇಬೇಕಾಗುತ್ತದೆ. 

ಪೋಲಿಸ್‌ ಮಹಾನಿರ್ದೇಶಕರು,ಬೆಂಗಳೂರು ಕಮಿಷನರ್‌ ಅಫ್‌ ಪೊಲೀಸ್‌,ಸೆಂಟ್ರಲ್‌ ಡಿವಿಷನ್‌ ನ ಡಿಸಿಪಿ,ಶೇಷಾದ್ರಿಪುರಂ ಪೊಲೀಸ್‌ ಠಾಣೆಯ ಠಾಣಾಧಿಕಾರಿಗಳಿಗೆ ನೀಡಿರುವ ದೂರಿನ ಪ್ರತಿ
ಪೋಲಿಸ್‌ ಮಹಾನಿರ್ದೇಶಕರು,ಬೆಂಗಳೂರು ಕಮಿಷನರ್‌ ಅಫ್‌ ಪೊಲೀಸ್‌,ಸೆಂಟ್ರಲ್‌ ಡಿವಿಷನ್‌ ನ ಡಿಸಿಪಿ,ಶೇಷಾದ್ರಿಪುರಂ ಪೊಲೀಸ್‌ ಠಾಣೆಯ ಠಾಣಾಧಿಕಾರಿಗಳಿಗೆ ನೀಡಿರುವ ದೂರಿನ ಪ್ರತಿ
ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಸೀಮಂತಕುಮಾರ್‌ ಸಿಂಗ್
ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಸೀಮಂತಕುಮಾರ್‌ ಸಿಂಗ್

ಉಮೇಶ್‌ ಅವರ ಪತ್ನಿ ಜತೆಗೂ ಅಮಾನವೀಯವಾಗಿ ವರ್ತನೆ-ಬೆದರಿಕೆ ಆರೋಪ: ಆ  ರಾತ್ರಿ ಉಮೇಶ್‌ ಅವರು  ಪೊಲೀಸ್‌ ಠಾಣೆಯಲ್ಲೇ ಅಕ್ರಮವಾಗಿ  ಬಂದಿತರಾಗಿದ್ದರಂತೆ.ಇದರ ಬಗ್ಗೆ ಅವರ  ಹೆಂಡತಿಗಾಗಲಿ ಕುಟುಂಬದವರಿಗಾಗಲಿ ಮಾಹಿತಿಯೇ ಇರಲಿಲ್ಲವಂತೆ. ಈ ವೇಳೆ   ಕಾಣಿಸದಿರುವುದರಿಂದ ಗಾಬರಿಗೊಂಡ ಅವರ  ಸಂಬಂಧಿ  ಸೆಲ್ವರಾಜ್‌ ಅವರು 31-10-2026 ರಾತ್ರಿ ಸುಮಾರು10:30 ಗಂಟೆಗೆ ಉಮೇಶ್‌  ಮನೆಯ ಹತ್ತಿರದ ಜೆಪಿನಗರದಲ್ಲಿರುವ ವಿದ್ಯಾರಣ್ಯಪುರಂ ಪೊಲೀಸ್‌ ಮಿಸ್ಸಿಂಗ್‌ ಕಂಪ್ಲೆಂಟ್‌ ದಾಖಲಿಸಿದ್ದಾರೆ.ಇದು  ಇಲಾಖೆ ಡೈರಿಯಲ್ಲಿಯೂ   ದಾಖಲಾಗಿದೆಯಂತೆ. 01-11-2026 ರಂದು ಮಧ್ಯಾಹ್ನ ಸುಮಾರು12:30 ಗಂಟೆಗೆ ಪೊಲೀಸ್‌ ಕಾನ್ಸ್‌ ಟೇಬಲ್‌ ನವೀನ್‌ ಅವರು  ಉಮೇಶ್‌ ಅವರ   ಮೊಬೈಲ್ನಿಂದ ಹೆಂಡತಿ ಅಭಿರಾಮಿರವರ ಮೊಬೈಲ್ಗೆ ಕರೆಮಾಡಿದ್ದರಂತೆ. ಮಿಸ್ಡ್‌ ಕಾಲ್‌ ಬಂದಿದ್ದರಿಂದ  ಠಾಣೆಯನಂಬರ್ 8022942586 ರಿಂದ  ಉಮೇಶ್‌ ಪತ್ನಿ ಅವರ ಮೊಬೈಲ್‌ ನಂಬರ್ 8637661308 ಗೆ ಕರೆಮಾಡುತ್ತಾರೆ. ಕರೆ ಸ್ವೀಕರಿಸಿದ ಅವರ ಹೆಂಡತಿಗೆ ” ನೀವು ಉಮೇಶ್‌  ಅವರವರ ಹೆಂಡತಿಯಾ.?  ಎಂದು ಪ್ರಶ್ನಿಸುತ್ತಾರೆ.  ಹೌದು ಎಂದಿದ್ದಕ್ಕೆ,ನಿಮ್ಮ ಗಂಡ ಉಮೇಶ್‌  ನಮ್ಮ ಬಳಿಯೇ ಇದ್ದಾರೆ. ಶೇಷಾದ್ರಿಪುರಂ ಪೊಲೀಸ್‌ ಠಾಣೆಗೆ  ಬನ್ನಿ ಎನ್ಕ್ವೈರಿ ಮಾಡಬೇಕು. ದೊಡ್ಡಇಶ್ಯೂ ಏನುಇಲ್ಲ, ಎಂದು ಕರೆದಿದ್ದಾರಂತೆ. ಗಾಬರಿಯಿಂದ ಓಡೋಡಿ ಬಂದ  ಹೆಂಡತಿ ಮತ್ತು  ಸಂಬಂಧಿಕರಿಗೆ ಕಾನ್ಸ್‌ ಟೇಬಲ್‌  ನವೀನ್‌, ಸಂದೀಪ್‌ ರವರಿಗೆ ಕೊಡಬೇಕಾಗಿರುವ 5 ಲಕ್ಷರೂ ಹಣವನ್ನು ಕೊಟ್ಟರೆ ಉಮೇಶ್ ಅವರನ್ನು ಬಿಟ್ಟು ಕಳಿಸುತ್ತೇವೆ. ಇಲ್ಲವಾದರೆ FIR ಹಾಕಿ ಜೈಲಿಗೆ ಕಳಿಸುತ್ತೇವೆಂದು ದಮ್ಕಿಹಾಕಿದ್ರಂತೆ.ಹೆದರಿದ ಸಂಬಂಧಿಗಳು ನಮಗೆ ಒಂದು ದಿನ ಟೈಮ್‌ ಕೊಡಿ,  ನಾಳೆ 5 ಲಕ್ಷ ಹಣವನ್ನು ಕೊಡುತ್ತೇವೆ ಎಂದು ಬೇಡಿಕೊಂಡಿದ್ದರಂತೆ. ನವೀನ್‌  ಎರಡು ಖಾಲಿ ಹಾಳೆ ಮೇಲೆ ತನ್ನ  ಮತ್ತು ಅವರ  ಹೆಂಡತಿ,ಸಂಬಂಧಿ ಸೆಲ್ವರಾಜ್‌ ಅವರ ಸಹಿಮಾಡಿಸಿಕೊಂಡಿದ್ದರಂತೆ.ಆಮೇಲೆ  ಅವರನ್ನು  ನಿಲ್ಲಿಸಿ ಫೋಟೋ ತೆಗೆದುಕೊಂಡಿದ್ದರೆಂದು ದೂರಿನಲ್ಲಿ ವಿವರಿಸಲಾಗಿದೆ.

ALSO READ :  ಅಂತರರಾಷ್ಟ್ರೀಯ ವ್ಯಾಪಾರದ ಸುಧಾರಣೆಗೆ ಧ್ವಜವಾಹಕ: ಬೆಂಗಳೂರಿನಲ್ಲಿ 19ನೇ ಕಸ್ಟಮ್ಸ್ ಸಮಾಲೋಚನಾ ಗುಂಪು ಸಭೆ ಯಶಸ್ವಿಯಾಗಿ ನಡೆಯಿತು

ಅಷ್ಟೇ ಅಲ್ಲ,  5 ಲಕ್ಷ ಹಣವನ್ನು ಸಂದೀಪ್ ಗೆ ವಾಪಸ್‌ ಕೊಡದಿದ್ರೆ,ನಿನ್ನ ಮೇಲೆ ಎಲ್ಲಾ ರೀತಿಯ ಕೇಸ್‌  ದಾಖಲಿಸಿ, ಮೈಸೂರಿಗೇ ಬಂದು  ಮನೆ ಸರ್ಚ್‌ ಮಾಡಿ ಸಂಬಂಧಿಕರ ಮುಂದೆ ಮಾನಮರ್ಯಾದೆ ಕಳೆಯುತ್ತೇನೆ.ನಿನ್ನ ಹೆಂಡತಿಯನ್ನು ಕರೆದುಕೊಂಡು ಬಂದು ಶೇಷಾದ್ರಿಪುರಂ ಠಾಣೆಯಲ್ಲಿ ಕೂರಿಸಿಕೊಳ್ಳುತ್ತೇನೆ ಎಂದು ನವೀನ್‌ ಅಮಾನವೀಯವಾಗಿ ಹೆದರಿಸಿದ್ದನಂತೆ.  01-11-2026 ರ ಸಂಜೆ 7  ಗಂಟೆಗೆ ಠಾಣೆಯ ಇನ್ಸ್ಪೆಕ್ಟರ್‌ ಅವರ ಚೇಂಬರ್ಗೆ ಕರೆದುಕೊಂಡು ಹೋಗಿ ಅವರ ಮುಂದೆ  ನಿಲ್ಲಿಸಿ ಅವರಿಗೆ ವಿಚಾರವನ್ನು ತಿಳಿಸುತ್ತಾರೆ.ಈ ವೇಳೆ ಠಾಣಾಧಿಕಾರಿ ಎನಿಸಿಕೊಂಡವರು ಪ್ರಕರಣದ ಸತ್ಯಾಸತ್ಯತೆ ಅವಲೋಕಿಸುವ ಕೆಲಸ ಮಾಡಬೇಕಿತ್ತು.ಆದರೆ ಅವರೇ,  ಇಶ್ಯೂ  ಕ್ಲಿಯರ್‌ ಮಾಡಿಕೊಂಡು ಹೋಗಿ ಎಂದು ಹೇಳಿ ಕಳುಹಿಸಿದ್ದಾರಂತೆ. ರಾತ್ರಿ 7:30ಕ್ಕೆ ಅವರನ್ನೆಲ್ಲಾ ಠಾಣೆಯಿಂದ ಹೊರಗೆ ಕಳಿಸಿದ್ದರಂತೆ .ಅಂದೇ ಅಪಮಾನಿತರಾಗಿ ಮೈಸೂರಿಗೆ ತೆರಳಿದ್ದಾರೆ. ಕಾನ್ಸ್‌ ಟೇಬಲ್‌ ಗಳಾದ  ನವೀನ್, ಚೆಲುವರಾಜ್‌ ಮತ್ತು ಇನ್ನಿತರರು ಹಲ್ಲೆಮಾಡಿದ್ದರಿಂದ  ಕೈಗಳು, ಪಾದಗಳು ಊದುಕೊಂಡಿದ್ದವಂತೆ. ಅಸಾಧ್ಯವಾದ ನೋವು ತಾಳಲಾಗದೆ  ಶಿವರಾತ್ರಿಶ್ವರ ಆಸ್ಪತ್ರೆಗೆ (JSS) ತುರ್ತು ಚಿಕಿತ್ಸಾಘಟಕಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದರಂತೆ.ಅಲ್ಲಿಯೇ  ಹಲವು ಪರೀಕ್ಷೆ ಮಾಡಿಸಿದ್ದಾರೆ. ವೈದ್ಯರು  2 ರಿಂದ 3 ಇಂಜೆಕ್ಷನ್‌-ಮಾತ್ರೆಗ ನೀಡಿದ್ದಾರೆ.ಹಲ್ಲೆಯ ಸ್ವರೂಪ ಗಂಭೀರವಾಗಿರುವುದರಿಂದ ಒಂದು ವಾರ ರೆಸ್ಟ್‌ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ರಂತೆ. ಇದಕ್ಕೆ ಸಂಬಂಧಪಟ್ಟ ವೈದ್ಯಕೀಯ ಚಿಕಿತ್ಸೆಯ ಎಲ್ಲಾ ದಾಖಲಾತಿಗಳನ್ನು ಕೂಡ ಉಮೇಶ್‌ ಅವರು ದೂರಿನ ಜೊತೆ  ನೀಡಿರುತ್ತಾರೆ.

ಶೇಷಾದ್ರಿಪುರಂ ಠಾಣೆಯ 8022942586 ನಂಬರ್‌ ನಿಂದ ಉಮೇಶ್‌ ಅವರ ಪತ್ನಿ ಮೊಬೈಲ್‌ 8637661308 ನಂಬರ್‌ ಗೆ ಪೊಲೀಸರು ಕರೆ ಮಾಡಿರುವುದಕ್ಕೆ ಉಮೇಶ್‌ ಸಲ್ಲಿಸಿರುವ ಸಾಕ್ಷ್ಯ
ಶೇಷಾದ್ರಿಪುರಂ ಠಾಣೆಯ 8022942586 ನಂಬರ್‌ ನಿಂದ ಉಮೇಶ್‌ ಅವರ ಪತ್ನಿ ಮೊಬೈಲ್‌ 8637661308 ನಂಬರ್‌ ಗೆ ಪೊಲೀಸರು ಕರೆ ಮಾಡಿರುವುದಕ್ಕೆ ಉಮೇಶ್‌ ಸಲ್ಲಿಸಿರುವ ಸಾಕ್ಷ್ಯ

ಯಾರಿಗೆಲ್ಲಾ ದೂರು::ತಮ್ಮ ಮೇಲಾದ ದೌರ್ಜನ್ಯಕ್ಕೆ ನ್ಯಾಯ ದೊರೆಯಬೇಕು..ಕ್ರೌರ್ಯ ಮೆರೆದ ಪೊಲೀಸರ ವಿರುದ್ದ ಕಠಿಣ ಕ್ರಮ ಜಾರಿಯಾಗಬೇಕೆನ್ನುವ ಬೇಡಿಕೆಯನ್ನು ಇಟ್ಟುಕೊಂಡು ಉಮೇಶ್‌ ಅವರು ಗೃಹಮಂತ್ರಿಗಳಾದ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಪೋಲಿಸ್‌ ಮಹಾನಿರ್ದೇಶಕರಾಗಿರುವ  ಡಾ. ಎಂ. ಎ. ಸಲೀಂ, ಬೆಂಗಳೂರು ನಗರದ ಕಮಿಷನರ್‌ ಅಫ್‌ ಪೊಲೀಸ್‌,ಸೆಂಟ್ರಲ್‌ ಡಿವಿಷನ್‌ ನ ಡೆಪ್ಯುಟಿ ಕಮಿಷನರ್‌ ಆಫ್‌ ಪೊಲೀಸ್‌,ಶೇಷಾದ್ರಿಪುರಂ ಪೊಲೀಸ್‌ ಠಾಣೆಯ ಠಾಣಾಧಿಕಾರಿಗಳು ಹಾಗೂ ಮಾನವ ಹಕ್ಕೂಗಳ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ.

ಉಮೇಶ್‌ ಅವರ ಪ್ರಾರ್ಥನೆ-ಮನವಿ ಏನು..!? ಆಪಾದಿತನನ್ನು ಅರೆಸ್ಟ್‌ ಮಾಡುವ ಅಥವಾ ವಶಕ್ಕೆ ತೆಗೆದುಕೊಳ್ಳುವ ಮುನ್ನ ಯಾವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ..ಅದನ್ನು ಪಾಲಿಸದಿದ್ದರೆ ಏನೆಲ್ಲಾ ಆಗುತ್ತೆ..? ಹಾಗೆ ಮಾಡಿದ್ದಲ್ಲಿ ಕಾನೂನು ಪಾಲನೆ ಮಾಡಬೇಕಾದವರನ್ನೇ ಶಿಕ್ಷಿಸಲು ಏನೆಲ್ಲಾ  ಅವಕಾಶಗಳಿವೆ ಎನ್ನುವ ಬಗ್ಗೆ ಮಾನ್ಯ  ಉಚ್ಚನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದ ಹಲವಾರು ತೀರ್ಪು- ಮಾರ್ಗಸೂಚಿಗಳಿದ್ರೂ ತನ್ನನ್ನು ಬಲವಂತವಾಗಿ ಕಿಡ್ನ್ಯಾಪ್‌ ಮಾಡಿಕೊಂಡು ಹೋಗಿ ಕಾನೂನುಬಾಹಿರವಾಗಿ ಪೊಲೀಸ್‌ ಠಾಣೆಯಲ್ಲಿ ಕೂಡಿಹಾಕಿ, ನನಗೆ ಲಾಠಿ ಮತ್ತು ಕಬ್ಬಿಣದ ಪೈಪ್ನಿಂದ ಅಮಾನುಷವಾಗಿ ಕ್ರೂರವಾಗಿ ಹಲ್ಲೆಮಾಡಿದ ಪೊಲೀಸರಿಗೆ ಶಿಕ್ಷೆ ಆಗಬೇಕು. ಸಂದೀಪ್‌ ಕುಮಕ್ಕಿನಿಂದ ಕಾನೂನುಬಾಹಿರವಾಗಿ ಹಣವನ್ನು ವಸೂಲಿ ಮಾಡಲು ಪ್ರಯತ್ನಿಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಚಿತ್ರಹಿಂಸೆ ನೀಡಿದ ಪೊಲೀಸ್‌ ಕಾನ್ಸ್‌ ಟೇಬಲ್‌ ನವೀನ್, ಚೆಲುವರಾಜ್ ಇನ್ನಿತರ ವಿರುದ್ಧ ಕಾನೂನುರೀತಿ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು  ಉಮೇಶ್‌ ದೂರಿನಲ್ಲಿ ವಿನಂತಿಸಿದ್ದಾರೆ. ತನ್ನ ಮೇಲೆ ನಡೆಸಲಾದ ದೌರ್ಜನ್ಯಕ್ಕೆ ಪೂರಕವಾದ ಎಲ್ಲಾ  ಸಾಕ್ಷ್ಯಗಳು    ಸಿಸಿಟಿವಿಗಳಲ್ಲಿ ದಾಖಲಾಗಿವೆ ಎಂದು ದೂರಿನಲ್ಲಿ ಉಮೇಶ್‌  ವಿವರಿಸಿದ್ದಾರೆ.

 


Leave a Comment